ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಮಾಡಿ ತೀರುವೆ ಸದ್ಗುರುನಾಥಗೆ ಏನಮಾಡಿ ತೀರುವೆನೀನೆಯು ಬ್ರಹ್ಮವೆಂದು ಯನ್ನಕೈಯಲಿ ಹಿಡಿದು ಕೊಟ್ಟ ಪ ವೇದಕ್ಕೆ ನಿಲುಕದಿಹ ಷಣ್ಮತಗಳ ವಾದಕ್ಕೆ ತೋರದಿಹನಾದಕ್ಕೆ ಬೇರಿಹ ನಾಮರೂಪವಳಿದಿಹಆದಿಯು ನೀನೆಯೆಂದು ಯನ್ನಕೈಯಲಿ ಪಿಡಿದು ಕೊಟ್ಟ 1 ಬುದ್ಧಿ ಮನಕೆ ಹೊರತಾ ತತ್ವಂಗಳಲಿದ್ದ ಗುಣಕೆ ಅತೀತಶುದ್ಧ ಬ್ರಹ್ಮವು ನೀನು ಸಿದ್ಧಾ ಸಿದ್ಧಾಂತೆಂದುಮುದ್ದಿಸಿ ನಿನ್ನನು ಎನ್ನ ಕೈಯಲಿ ಹಿಡಿಕೊಟ್ಟ2 ಕಾರ್ಯ ತನುವ ಧರಿಸಿ ಜನ್ಮ ಜನ್ಮಾದಿ ತೋರುವ ಜೀವವೆನಿಸಿಕಾರ್ಯ ಕಾರಣಾತೀತನಾದ ಚಿದಾನಂದನು ಬೇರಿಲ್ಲನೀನೇ ಎಂದು ಎನ್ನ ಕೈಯಲಿ ಹಿಡಿದು ಕೊಟ್ಟ 3
--------------
ಚಿದಾನಂದ ಅವಧೂತರು
ಅರಿವಿನ ಅರಿವಾ ತಿಳಿ ಜೀವಾ ಆನಂದರೂಪದ ಸಿರಿಯಾ ಅದೇ ನೀನು ಜೀವಾ ಜೀವಾ ಅದೇ ನೀನು ಜೀವಾ ಪ ಅನಿಸಿಕೆಯಡಗಲು ಉಳಿಯುವ ಸತ್ಯವೆ ನೀನಿಹೆ ನೀನಿಹೆ ಮನಸಿನ ತೋರಿಕೆಅಡಗುವಿಕೆಗಳಿಂ ಬೇರಿಹೆ ಬೇರಿಹೆ ಈ ನಾನೆಂಬುದು ಮನಸಿನದು ಆನಾನೆ ನೀನಾಗಿರುವಿ ಅದೇ ನಿಜವು ಜೀವಾ 1 ಪರಿ ನೋಡು ನೀ ನೋಡು ನೀ ನಾನಾವಿಧಗಳು ಪುಸಿಯಾಗಿಹವೈ ದೂಡು ನೀ ದೂಡು ನೀ ಆನಂದಾತ್ಮನೆ ನೀನಿರುವೀ ಆನಂದದಿಂದಲಿ ತಿಳಿಯೈಶಂಕರಾನಂದಬೋಧಾ ತಿಳೀನೀನೆ ನಿನ್ನೋಳ್ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಭೋಗ ಬೇರಿಹುದಣ್ಣ ಭವ ಭೋಗಗಳೆಲ್ಲವು ರೋಗಗಳಣ್ಣ ಭೋಗವ ಪೊಂದುವ ಯೋಗವ ಮರೆಸುವ ರೋಗಗಳಿಗೆ ಗುರಿಯಾಗದಿರಣ್ಣ 1 ಬಗೆ ಬಗೆ ಭಕ್ಷಗಳ ಭೋಗವು ಸೊಗಸೆಂದರಿಯದಿರು ಹಗರಣದಲಿ ತನು ದುಗುಡಕೆ ಸಿಲುಕಲು ಸೊಗಸುಗಳೆಲ್ಲವು ಹಗೆಯಾಗುವುವು 2 ಅಂಗನೆಯರ ಸರಸ ಎಳೆಯ ಭು ಜಂಗನ ಸಹವಾಸ ಅಂಗಗಳಲಿ ಬಲ ಸಡಲಲು ನಿನ್ನಯ ಹಂಗಿಲ್ಲದೆ ಮಾನಭಂಗ ಮಾಡುವರು 3 ಉಡಿಗೆ ತೊಡುಗೆ ಯೋಗ ಜಗದಲಿ ಹುಡುಗುತನದ ಭೋಗ ಗಿಡಗ ಗಿಳಿಮರಿಯನೊಯ್ಯುವ ತೆರದಲಿ ಪಿಡಿಯಲು ದೂತರು ತಡೆ ಮಾಡುವರೇ 4 ಪ್ರಕೃತಿಯೊಳ್ ಸಿಲುಕಿರಲು ಭೋಗಕೆ ಶಕುತಿ ಸಾಲದಣ್ಣ ಭಕುತ ಪ್ರಸನ್ನನು ಭಕುತಿಯೆಂಬೊ ನಿನ್ನ ಯುಕುತಿಗೆ ನೀಡುವ ಮುಕುತಿಯೆಂಬ ದಿವ್ಯ 5
--------------
ವಿದ್ಯಾಪ್ರಸನ್ನತೀರ್ಥರು
ಹಗಲು ಸಮಯದಲಿ ಇರುಳು ನೋಡಿದ ಬಾವಿ ಗುರುಳಬಹುದೇ ನರರು ಈ ಜಗದೊಳು ಪ ಮರುಳು ಮಾಡುವ ಭವದುರುಳು ಬಂಧನದೊಳು ಸಿಗಲು ಬಯಸಬಹುದೇ ಅವಿವೇಕದಿ ಅ.ಪ ಅಡಿ ಐದು ಉದ್ದದ ಒಡಕು ಒಂಭತ್ತಿನ ಕಡು ದುಃಖ ದೇಹಕೆ ಸಿಡಿವುದು ತರವೆ ಪೊಡವೀಶನಾದರೂ ಮಡಿಯಲು ನಿನ್ನಯ ಸಡಗರವೆಲ್ಲವು ಹಿಡಿಯೊಳಗಲ್ಲವೇ 1 ಅನುದಿನದಲಿ ನೀನು ಹಣ ಹಣವೆನ್ನುತ ಕುಣಿಯುವುದನು ನೋಡಿ ಅಣಕಿಸುವರು ನಿನ್ನ ತನುಮನ ಕ್ಲೇಶವನನುಭವಿಸುತ ಸದಾ ಹಣವಗಳಿಸಲದನುಣುವರು ಬೇರಿಹರು 2 ಗೃಹಿಣಿ ಗೃಹಿಗಳೆಲ್ಲ ಕುಹಕವೆಂದರಿಯದೆ ಗೃಹವು ಎನ್ನದು ಎಂದು ಗೃಹಿಣಿ ಎನ್ನವಳೆಂದು ಬಹುವಿಧ ವೈಭವವೆನಗಿಹುದೆನ್ನುವ ಮಹದಾಗ್ರವನ್ನು ಸಹಿಸುವನೇ ಹರಿ 3 ಸಿರಿ ಸಂತತ ಗಳಿಸಲು ಅಂತಕ ತನುವನು ಸೆಳೆಯಲು ಗಳಿಸಿದ ಕಂತೆಗಳೆಲ್ಲವೂ ಎಂತು ನಿಲ್ಲಿಸುವುವು ಚಿಂತಿಸಿ ಮನದೊಳು ಹರಿಯನು ನಿಲಿಸೊ 4 ಊಹಿಸುತೆಲ್ಲವ ಈ ಮಹಿಯೊಳಗಿನ ಮೋಹವ ಜರಿಯುತ ಪಾಹಿ ಎಂದು ಆ ಮಹಾಮಹಿಮ ಪ್ರಸನ್ನ ಹರಿಯ ದಿವ್ಯ ಸ್ನೇಹಸುಜಲದ ಪ್ರವಾಹದೊಳಗೆ ನಲಿಯೊ 5
--------------
ವಿದ್ಯಾಪ್ರಸನ್ನತೀರ್ಥರು
ಆವ ಕುಲವಾದರೇನು ಪ.ಭಾವದ ಎಲ್ಲಾನ ತಿಳದವನಿಗೆ ಮತ್ತೇ ಅಪಅಸುಡೊಂಕು ಕಬ್ದು ಇರಲು - ಅದರೊಳಗಿದ್ದರಸ ತಾನು ಡೊಂಕೇನಲೊ - ಮರುಳೆವಿಷಯಭಾವನೆ ಬಿಟ್ಟು ನೀ ಹೋಗಿ ಗುರುಗಳಹಸನಾಗಿ ಕೇಳು ಕಾಣೋ - ಮನುಜಾ 1ನಾನಾವರ್ಣದ ಆಕಳ - ಕ್ಷೀರದಲಿನಾನಾವರ್ಣಗಳಹುದೆ - ಮನುಜಾಹೀನ ಭಾವನೆಗಳನಿಂದಿಟ್ಟು ನೀ ಪೋಗಿಜ್ಞಾನಿಗಳ ಕೇಳು ಕಾಣೋ - ಮನುಜಾ 2ಶರಧಿಯೊಳ ತೆರೆನೊರೆಗಳಾ - ಪರಿಯಂತೆಶರೀರವಲ್ಲದೆ ಬೇರಿಹುದೇ ?ವರಪುರಂದರವಿಠಲನ ಸ್ಮರಿಸುತಿರಲು ನಿನಗೆಸಿರಿಯನು ಮುಕುತಿಯಹುದು - ಮನುಜಾ 3
--------------
ಪುರಂದರದಾಸರು