ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆ ಸದಾ ಚಿಂತಿಸುವೆ ವನಜನಾಭನ ನಂಬದೆ ಪ ಕೊನೆಗಾಣುವದೇನೊ ಫಲವೇನೊ ಅ.ಪ ಮದಮತ್ಸರ ಕಾಮಕ್ರೋಧ ಲೋ- ಭದಿ ಮಮತಾಸ್ಪದವಾಗಿ ಮರತೋಗಿ 1 ಗುರುಹಿರಿಯರು ನೋಡಿ ವಂದಿಸದೆ ನೀ ಮರುಳಾಟಗಳಾಡಿ ಪರರನಪಹಾಸಿಸಿ ಪಾಪಿ ಇವನೆನಿಸಿ ನರಕಕ್ಕೆ ಗುರಿಯಾಗುವೆ ವೋ ಚಪಲ ಮನವೇ 2 ವೇದಮಾರ್ಗವ ಬಿಟ್ಟು ಯಾವಾಗಲು ದು- ರ್ವಾದಗಳನು ಕೊಟ್ಟು ಆದಿಯನುತಲಿ ಅನಾದಿಯನುತಲಿ ಮುದಗೂಡಿ ಅತಿಭಾಷೆಗಳಾಡಿ 3 ತತ್ವ ತಿಳಿಯಬೇಕು ಜ್ಞಾನವೆಂಬೋ ಸಂ- ಪತ್ತಿನೊಳಿರು ಸಾಕು ನಿತ್ಯಾನಿತ್ಯವಿವೇಕ ಶ್ಯೂನವಾಗಿ ನಿತ್ಯ ಕೆಡಬೇಡೆಲವೋ ಚಪಲಾ 4 ತ್ರಿವಿಧ ಜೀ- ವರೊಳಿರುವನು ಮುಕುಂದ ಗುರುರಾಮವಿಠಲ ನಿಜ ಶರಣರಿಗೆಲ್ಲ ಪರಮಪದವಿ ಈವಾ ದೇವದೇವ 5
--------------
ಗುರುರಾಮವಿಠಲ
ಮಾಡಬಾರದೆ ಹರಿಪಾದ ಪೂಜೆ ಪ ಮಾಡಬಾರದೇನೋ ಕೂಡುತಾ ಸನಾದಿಬೇಡಿದೊರವನೀವ ಗಾಡಿಕಾರನ ಪೂಜೆ ಅ.ಪ. ನರಜನ್ಮವು ಬರಿದೆ ಪೋಗುತಿದೆ ಗರುವತನದಿ ನೀಮೆರೆಯ ಬೇಡೆಲವೋ ಮಾರಜನಕ ಕೃಷ್ಣನನ್ನರಿತು ಪೂಜೆಯನು 1 ಪಾದ 2ಕರುಣಾಸಾಗರ ಕರಿವರದಾ ಕೃಷ್ಣ ದುರಿತಗಳನೆ ಕಳೆದುಪರಮಪದವನೀವ ಗರುಡಗಮನ ತಂದೆ ವರದ ವಿಠಲನ ಪೂಜೆ 3
--------------
ಸಿರಿಗುರುತಂದೆವರದವಿಠಲರು
ಮಾನವಜನುಮ ಖೂನವರಿಯದೇನು ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ ಹಾನಿಯಾಗಿ ಪೋಗುವಿಯೋ ಅ.ಪ ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು ಸವೆಯದಾಡಿ ಭುವನಸುಖವ ಸವಿಯದೆ ಜವನ ಭವನ ಕಾಣುವಿ 1 ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ ಗೋಳಿನೊಳು ಬೀಳುವಿಯೊ 2 ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ ಪ್ರೇಮ ಮೋಹಗಳನು ತುಳಿದು ಕಾಮಜನಕ ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ ಆ ಮಹಾ ಮುಕ್ತಿ ಪಡೆದು ಬಾಳೊ 3
--------------
ರಾಮದಾಸರು