ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಬೇಡುವೆನೊಂದ ಚಿದಾನಂದಕೊಡು ಬೇಡುವೆನೊಂದಕೊಡು ಬೇಡುವೆನೊಂದಕಡೆ ಹಾಯ್ದು ಹೋಗಿ ಮೆಲ್ಲಡಿಯಾದ ನಿಮ್ಮ ಪಾದದಡಿಯೊಳಡಗುವುದಾ ಪ ನಿತ್ಯ ನಿರಂಜನ ಕರ್ಮ ನಿರ್ಮಾಯವಾದ ಷ-ಡೂರ್ಮೆ ವಿರಹಿತೆಂಬ ಪೆರ್ಮೆಯೊಳಡಗುವುದ 1 ವಿಶ್ವಾತ್ಮ ವಿಶ್ವಾಧಾರ ವಿಶ್ವಹರ ವಿಶ್ವವಿಶ್ವದಾಕಾರ ಸ್ವಸ್ವ ನಿಸ್ವನದ ಸ್ವಸ್ವಪೂರಿತ ಮ-ಹಾಸ್ವಯಂ ಜ್ಯೋತಿಯೆ ಭಾಸ್ವ ಮೂರುತಿ ಈಗ 2 ಶತಕೊಟಿ ಸೂರ್ಯರಾಕಾರ ಶತಾಶತ ಶತವಿಂದು ಪ್ರಭಾವಕಾರಸ್ತುತಿಗೆ ಮೀರಿದ ದೊರೆಯೋಗಿ ಚಿದಾನಂದಪತಿಯ ಪಾದಪದ್ಮನುತಿಸಿ ಕೊಡುವುದೀಗ 3
--------------
ಚಿದಾನಂದ ಅವಧೂತರು
ಬೇಡುವೆನೊಂದು ಬೇಡತಕ್ಕುದು ಎಂದು ಬೇಡ ವರಗಳೆನಗೆ ನೀಡು ಅದನೊಂದ ಪ ಬೇಡ ಸುಖವು ಕೃಷ್ಣ ಬೇಡ ಫಲವಿಫಲ ಬೇಡ ಮಾನಾಪಮಾನ ಬೇಡ ಜಯಾಪಜಯ ಅ.ಪ ನಿದ್ರೆಸುಖವು ಬೇಡ ಭದ್ರಭೋಜನ ಬೇಡ ತಿದ್ದಿದ ವಾಸ್ತುವುಬೇಡ ಮಧುರವು ಬೇಡ ಸದನ ವಿತ್ತವು ಬೇಡ ಹೃದಯದಿ ರಾಮನಾಮ ಪರಿಹರಿಸಲು ಬೇಡ 1 ನರಕ ಬಾಧೆಯ ಪರಿಹರಿಸಲು ಬೇಡ ದುರಿತ ಸಂತತಿಗಳ ತೊರೆಯಿಸ ಬೇಡ ಸುರಲೋಕ ಸಾಮ್ರಾಜ್ಯ ವರವನೀಯಲು ಬೇಡ ನಿರುತ ನಿನ್ನಯ ಪದ್ಮ | ಚರಣವ ತೋರೆಂದು2 ಮಾವಿನಕೆರೆರಂಗ ಶ್ರೀವನಿತಾ ಸಂಗ ಭಾವಜಪಿತರಂಗ ಗರುಡ ತುರಂಗ ಭಾವನೆಗೈದು ಯೆನ್ನ ಸರ್ವಜನ್ಮದೆ ನಿನ್ನ ದಿವ್ಯನಾಮವ ಭಜನೆಗೈವ ಬುದ್ಧಿಯು ಮಾತ್ರ 3 ನೀ ಮರೆಯದಿರಯ್ಯ ನಾಮರೆಯುವನಯ್ಯ ಕಾಮಿತವೊಂದಿದ ನೀಡೊ ಮುಕುಂದ ಸೋಮಧರ ವಂದಿತ ರಾಮದಾಸಾರ್ಚಿತ ಭೀಮವಿಕ್ರಮರೂಪ ಅಮಿತಕಲಾಪಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೂರ್ತಿ ಪ ಲೋಕದ ಜನರಘವನು ತೊಳೆಯಲಿಕೆ ತ್ರೈ ಲೋಕ ದೊಡೆಯ ಚದಂಬರನಾಗಿ ಭೂಕಾಂತೆಯೊಳಗೆ ಮೂರ್ತಿ ದಯಾಪರ ಮೂರುತಿ 1 ಮಾಡಿಕೊಂಡ ಪಾಪದ ರಾಶಿಯು ದಿನ ದಿನ ಉರಿಗೊಂಡು ಸುಟ್ಟುದು ಮರೆಹೊಕ್ಕೆನೀಗಳು ಪಾದ ಪುಂಡರೀಕವನು ಚಿದಂಬರಮೂರ್ತಿ 2 ಹೊನ್ನು ಹಣವ ಚಿನ್ನ ಚಿಗುರು ಬೇಡುವನಲ್ಲ ಪಾದ ಪದ್ಮದ ಸ್ಮರಣೆಯನು ಸಂಪೂರ್ಣವಾಗಿರುವ ನಿತ್ಯ ಸುಖಾರ್ಣವಾನಂದ ಚಿದಂಬರಮೂರ್ತಿ 3 ಬೇಡುವೆನೊಂದು ವರವ ಕೊಡುವರೆ ಈ ಗೂಡಿರುವತನಕ ಕೃಪೆಮಾಡಿ ಸಲಹೋ ಎನ್ನ ನೋಡಿ ಬಡವನ ಚಿದಂಬರಮೂರ್ತಿ 4 ಪ್ರಾಕುನುಡಿದ ಪುಣ್ಯದಿಂದ ನಿಮ್ಮಯಪಾದ ಸೇರೆ ನಾ ಕೃತ ಕೃತ್ಯನಾದೆ ನಿಂದಿನ ಜನ್ಮ ಸಾರ್ಥಕ ವಾಯ್ತು ಪರಾಕೆ ಚಿದಂಬರ ನೀ ಕರುಣಿಸೋ ಎನಗಭಯವಿತ್ತು 5
--------------
ಕವಿ ಪರಮದೇವದಾಸರು