ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟೇಕೆ ನಿರ್ದಯ ಶ್ರೀಹರಿಯೇ ಸೃಷ್ಟೀಪತಿಯೆ ಪ. ಮುಟ್ಟಿ ಭಜಿಪರ ನಿಟ್ಟಿಸಿ ನೋಡದೆ ನಿಷ್ಠುರವಾಗಿಹುದಿಷ್ಟವೆ ನಿನಗಿದು ಅ.ಪ. ಸಣ್ಣ ಮಾತುಗಳಾಡಿದೆನೇನೊ ದೆನ್ನ ತಲೆಯ ಮೇಲಿನ್ನೊಗೆಯದಿರು 1 ಕೋರೆಯ ತೋರುತ ಕೊಸರುವುದೇಕೋ ಶ್ರೀಹರಿ ನೀ ನೀರೀತಿ ಮಾಡುವ ಬಗೆಯಿನ್ನೇಕೋ ನೀರಜಭವಪಿತ ನೀನೇನಗೈದರು ಸೇರಿದೆ ನಿನ್ನನು ಸಾರೆನದಾರನು 2 ಸಿಂಗನ್ನ ಪೋಲುವ ಮುಖ ಧರಿಸಿ ಕಂಗೆಡೆ ಭಯದಿ ಜಗಂಗಳ ನಡುಗಿಪ ನುಂಗಲು ಬರುವಾಸಿಂಗನ ಬಗೆ ಸಾಕೋ 3 ಮುನ್ನಾ ಶುಕ್ರನ ಕಣ್ಣನು ತಿವಿದಾ ಪುಲ್ಲಿನತುದಿಯಿಂ ಎನ್ನೀ ಕಣ್ಣನ್ನು ತಿವಿಯದಿರಣ್ಣಾ ನಿನ್ನೀಕರದೊಳಿಹ ಘನ ಕೊಡಲಿಗೆ ನೀ ನಿನ್ನಾರನು ಗುರಿಗೈಯದಿರೆಂಬೆನು 4 ಶಿಲೆಯಾಗಿದ್ದವಳ ಕಲುಷವ ಕಳೆದು ಪಾವನೆಯೆನಿ ಕಾಳಿಂಗನ ಫಣೆಯೊಳು ಕುಣಿಕುಣಿದೇ ಭಳಿರೆನೆ ಬಾಲ ಗೋಕುಲ ಬಾಲೆಯರೆಲ್ಲರ ಜಾಲವಿದ್ಯೆಯಿಂ ಮರುಳುಗೊಳಿಸಿದೆ 5 ತುರುಗವನೇರುತ ತರುಬಲು ಬೇಡೈ ಧರೆಯೊಳು ನೀನೆತ್ತಿದ ಪರಿಪರಿ ರೂಪವ ಸ್ಮರಿಸಿ ಸ್ಮರಿಸಿ ಮನಬೆರಗಾಗಿದೆ ಹರಿ6 ಶರಣಾಭರಣನೇ ನೀನೆಂದು ಮನದೆಂದು ಮರೆಬೇಡುವೆನೈ ಬಳಿಸಂದು ವರಶೇಷಗಿರಿ ದೊರೆನೀನಿಂದು 7
--------------
ನಂಜನಗೂಡು ತಿರುಮಲಾಂಬಾ
ನನಗಾವ ಬಲವಿಲ್ಲ ನಿರುಪಮನೆ ಹೇಳೈಯ ವನಜ ಸಂಭವ ಜನಕ ತವ ಚರಣ ವಲ್ಲದಲೆ ಪ ಮಣಿದು ಬೇಡುವೆನೈಯ ಪ್ರಣತಾರ್ಥಿ ಹರಕೃಷ್ಣ ಜನುಮಗಳ ಹರಿಸುತಲಿ ಭವಬಂಧ ಬಿಡಿಸೈಯಅ.ಪ ನರರ ನಂಬಿದೆ ನೈಯ ಸಿರಿಯುರಿಗೆ ಬಾಯ್ಬಿಟ್ಟೆ ಅರಿಯದೆಲೆ ತವ ಮಹಿಮೆ ಬರಿದೆ ಬಳಲಿದೆಭವದಿ ಧೊರೆ ತನವು ಸವಿಯಹುದೆ ತವ ಸವಿಯ ಕಂಡವಗೆ ಜರಿಯ ದಲೆ ಬಡವನನು ಕರೆದು ಪಾಲಿಸು ತಂದೆ 1 ಹಣ ವನಿತೆ ಭೂ ವಿಷಯ ಉಂಡುಂಡು ಬೆಂಡಾದೆ ತನುಜ ಕರಣಗಳಿನ್ನು ಶತ್ರುಗಳ ಸಮವಿಹವು ಗುಣ, ಪೂರ್ಣ ಬಿಂಬನನು ನೆನೆಯ ಗೊಡದಲೆ ನಿತ್ಯ ಇನಸುತನ ಪುರದೆಡೆಗೆ ಸೆಳೆಯುತಿಹವೋ ಸ್ವಾಮಿ 2 ಸುರರು ಸುರರಿಗಾಶ್ರಯ ನೀರ ಮರುತಗಾಶ್ರಯ ಸಿರಿಯು ಸಿರಿರಮಣನೀನಿರಲು ಚರಣ ಸೇವಕ ನೆನ್ನ ನರರಿಗೊಡ್ಡುವರೇನೊ ಸರ್ವೇಶ ಅಕ್ಷರನೆ ಮೊರೆ ಹೊಕ್ಕೆ ಸಲಹೈಯ 3 ದೇವ ದೇವರ ದೇವ ದೇವತ್ವ ನೀಡುವನೆ ಕಾವ ಜೀವರ ನಿಚಯ ಸಾರ್ವಭೌಮನು ನೀನು ನೀವಲಿದು ಪೊರೆಯದಿರೆ ಆಗುವುದೆ ಸುಖಮುಕ್ತಿ ನಾವಿಕನು ನೀನೆಂದು ನಂಬಿದೆನು ಕೈಪಿಡಿಯೊ 4 ಅಗಲಿ ಬದುಕಿರಲಾರೆ ಗೋಪ ಪುರುಷನೆ ನಿನ್ನ ಸುಗಮ ಮಾಡಿಸು ಪಥವ ಸರ್ವಜ್ಞ ತವಪುರಕೆ ನಗವೈರಿ ಜಯತೀರ್ಥ ವಾಯು ವಂತರದಿರ್ಪನಗೆ ಮೊಗದ ಶ್ರೀಕಾಂತ ಕೃಷ್ಣವಿಠಲನೆ ಬೇಗ 5
--------------
ಕೃಷ್ಣವಿಠಲದಾಸರು
ಪಾಲಿಸೆನ್ನನೂ ರಾಮ ಪಂಥವ್ಯಾತಕೋ ಪ ಕಾಲವೈರಿ ಕಪಟನಾಟಕ | ಆಲಿಸೆನ್ನ ಬಿನ್ನಪವಂ ಚಾಲನೆ ಶ್ರೀಲೋಲನೇ ನೀಂ ಅ.ಪ ರಕ್ಷಕಾಮಣಿ ಸಾಧುಜನ ರಕ್ಷಾಮಣಿ ಅಕ್ಷಯ ಸುಜನರಾಶ್ರಿತÀ ನಿನ್ನ ಭಿಕ್ಷವನಾಂಬೇಡುವೆನೈ ಪಕ್ಷಿವಾಹನ ಜಗದಧ್ಯಕ್ಷನೇ ಸೀತಾರಾಮ 1 ಪಂಡಿತಾಮಣಿ ಜ್ಞಾನಕುಂಡಲಿನಗರೀಶ ನೀ ನಂಡಜ ವಾಹನನಹುದೊ ಪಂಡರಿಪುರನಾಯಕ ಚಾ ಮುಂಡಿ ವರದಾಯಕ ನೀಂ [ಶ್ರೀರಾಮ] 2 ಶಾಶ್ವತ ಜನಭಾಷಾ ಭಾಸ್ಕರಕೋಟಿ ತೇಜಾ ಈಶ್ವರ ಮತ್‍ಗುರು ತುಲಶೀರಾಮಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಬೇಡಿಕೊಂಬೆಗೋಪಾಲ ಬೇಡುವೆನೈ ದಯ ಪ ಮಾಡಿ ಎನ್ನೊಳು ಬೇಗ ಗಾಢ ಮಹಿಮ ವರ ನೀಡೋ ಕೃಪಾಂಬುಧೇ ಅ.ಪ ಮರುಳನಾಗಿ ನಾನು ತಿರುಗುವೆ ಧರೆಯೊಳು ಸಿರಿವರ ನಿಮ್ಮಯ ಚರಣವ ಸ್ಮರಿಸದೆ ಪರಿ ನರಕಕ್ಕೆ ಗುರಿಯಾದೆ ಮುರಹರ ಕರುಣದಿಂ ಮನ್ನಿಸಿ ಪೊರೆ ಸುರವರ 1 ದೀನದಯಾಪರ ಜಾನಕೀ ಮನೋಹರ ನೀನೆ ಗತಿಯೆಂದು ಧ್ಯಾನಿಸಿ ಬೇಡುವೆ ಹೀನನ ಮಾಡದೆ ಧ್ಯಾನಿಪ ಭಕ್ತನಂ ಮಾನದಿಂ ರಕ್ಷಿಸು ವೇಣುಧರಹರಿ2 ಸುರುಪರೀಶ ಹರಿ ಚರಣದಾಸರ ಮೊರೆ ಕರುಣದಿ ಆಲಿಸಿ ಕರಪಿಡಿದು ಪೊರೆ ನೆರೆನಂಬಿದೆ ನಿಮ್ಮ ಚರಣವ ಪರಿಪರಿ ಪರಮಪಾವನ ಮಾಡು ಸಿರಿವರ ಶ್ರೀರಾಮ 3
--------------
ರಾಮದಾಸರು