ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಳಸಮ್ಮ ಎನಗೊಲಿಯಮ್ಮ ವಿಲಸಿತವಿಮಲೆ ನೀ ಕಲ್ಯಾಣಮಾಡೆನಗೆ ಪ ನಿಲಯನಿಲಯದಲಿ ನಿಂದು ಭಕ್ತ ಕುಲವನುದ್ಧರಿಸಿದಿ ಇಂದುಮುಖಿ ಮಲಿನಹರಣೆ ದಯಸಿಂಧು ಅಹ ಕುಲವನುದ್ಧರಿಸೆನ್ನ ಹೊಲೆಯ ಬವಣೆಯಲಿ ಕಳವಳಪಡಿಸದೆ ಸಲಹು ಬೇಗೆನ್ನಮ್ಮ 1 ಭಯದೂರೆ ಜಯಕಾರೆ ಜಗಕೆ ಲೋಕ ತ್ರಯದ ಜನನಿ ಎನ್ನ ಮನಕೆ ಬೇಗ ಜಯವ ನೀಡಿ ಮಾಡು ಜೋಕೆ ಅಹ ರಮೆ ದಯಯುತೆ ನಿನ್ನ ದಯದಿ ಬೇಡುವೆನವ್ವ ಭವಭವದಲಿ ಎನ್ನ ಜಯವ ಪೊಂದಿಸಿ ತಾಯಿ 2 ಜಲಜನಾಭನ ಮೋಹಮಾಲೆ ನೀನು ಬಲು ದಯಾನ್ವಿತಭಕ್ತ ಶೀಲೆ ಎನ್ನ ಗಳವೆ ಪೊಗಳಲು ನಿನ್ನ ಲೀಲೆ ಆಹ ಚೆಲುವ ಶ್ರೀರಾಮನ ಕೂಡಿಕೊಂಡೆನ್ನೊಳು ನೆಲೆಗೊಳ್ಳು ಬಿಡದೆ ವರ ಫಲ ಪ್ರದಾಯಿನಿ 3
--------------
ರಾಮದಾಸರು
ವರಲಕುಮಿ ಕರುಣಿಸೌ ಕರುಣಾಕರಳೆ ಎನ್ನೊಳು ಪ ಮರೆಹೊಕ್ಕ ದಾಸರ ದಾರಿದ್ರ್ಯ ಖಂಡಿಸು ಪರಮಪಾವನೆ ನಿನ್ನನರಸಿ ಬೇಡುವೆನವ್ವ 1 ಗರುವಕ್ಕೆ ಬಾರದ ಸಿರಿಯ ಕರುಣಿಸಿ ಮತ್ತೆ ಹರಿಸ್ಮರಣೆ ಸೌಭಾಗ್ಯ ವರ ಪಾಲಿಸೆನ್ನವ್ವ 2 ಕ್ಷೇಮ ಪಾಲಿಸು ತಾಯಿ ಕಾಮಿತ ಜನ ಮಹ ಪ್ರೇಮಮಂದಿರೆ ಶ್ರೀರಾಮನರ್ಧಾಂಗಿಯೆ 3
--------------
ರಾಮದಾಸರು