ಒಟ್ಟು 11 ಕಡೆಗಳಲ್ಲಿ , 9 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ ಬದಲು ನಾನೊಲ್ಲೆನೊ ವಿದಿತ ವೇದ್ಯ ಪ ಕ್ಷಣ ನಿನ್ನ ಬಿಡಲಾರೆ ನಿನ್ನವರನು ಬಿಡೆ ಕುಣಿ ಕುಣಿವೆನು ನಿನ್ನ ಜನರೆಂದರೆ ಗುಣತ್ರಯ ವಾರಣ ನಿನ್ನ ವಾರುತಿಯಿರೆ ಒಣ ಹರಟೆಗಳ ನಾ ಕೇಳಲೊಲ್ಲೆ 1 ನೀಚ ಜನರಂಗಳ ಸಂಗವ ಕೊಡದಿರು ವಾಚದಿಗನ್ಯರಿಗಾಲ್ಪರಿಸಬೇಡ ಸೂಚಿಸು ನಿನ್ನಯ ಗುಣಗಣಂಗಳೆನೆ ನಾ ಯಾಚಿಪೆ ಇದನೆ ಇದನೆ ಮುರಾರೆ 2 ಶ್ರೀಶ ನಿನ್ನಯ ಕಥೆ ಕೇಳದೆ ಬಹಳಾಯು ಕಾಸು ಬಾಳದು ಕೇಳು ಕರುಣಾಬ್ಧಿಯೆ ತಾಸು ಒಂದಾದರು ಅವನೆ ಸುಜೀವಿಯೊ ವಾಸುದೇವವಿಠಲ ನಿನ್ನವರವನೊ 3
--------------
ವ್ಯಾಸತತ್ವಜ್ಞದಾಸರು
ಎಲೊ ರಂಗ ಎಲೋ ರಂಗನೇ ಸಲಹೊ ಶುಭಾಂಗನೆ ಪ ಜಯಕರ ಶ್ರೀಹರಿಯೆ ದಯವಂತನಾಗಯ್ಯ ಭಯ ಭಕ್ತಿಯಲಿ ನಿಮ್ಮ ದಯವ ಬೇಡುವೆನಯ್ಯ 1 ನಿನ್ನ ಭಕ್ತನು ನಾನು ಬನ್ನಬಡಿಸುವಿ ಯಾಕೋ ಮುನ್ನಿನ ಭಕ್ತರಂತೆನ್ನನು ಸ್ಮರಿಸಯ್ಯ 2 ಶರಣೆಂದು ವಿಭೀಷಣಗೆ ಕರುಣಿಸಿ ಲಂಕೆಯ ಸ್ಥಿರಪಟ್ಟ ಕೊಟ್ಟಂಥ ಕರುಣಾಳು ಮೊರೆ ಕೇಳೊ 3 ಯತಿವರನ ಯಾಗವ ಹಿತದಿ ರಕ್ಷಿಸಿದಂಥ ಪತಿತಪಾವನ ಎನ್ನ ಹಿತದಿಂದ ಕಾಯೆಲೊ 4 ಸತತ ನಿಮ್ಮಯ ಪಾದಸ್ತುತಿಯೊಳಿರಿಸಿ ಎನ್ನ ಮೃತ್ಯುಬಾಧ್ಹರಿಸಯ್ಯ ಕ್ಷಿತಿವರ ಶ್ರೀರಾಮ 5
--------------
ರಾಮದಾಸರು
ಕೊಡಿಸೊ ಅಂಕಿತವಾ ಗುರುರಾಯಾ ನಿನ್ನ ಅಡಿಗಡಿಗೆರಗಿ ನಾ ಬೇಡುವೆನಯ್ಯಾ ಪ ನಾ ಶರಣೆಂಬೆ ತಂದೆ ದರುಶನ ನುಡಿಯ ಪಾಲಿಸೋದಯದಿಂದ 1 ಎಂದು ಬಿಡದಲೇ ಕಾಡಿ ನೀ ದಯ ಮಾಡಿ 2 ಬೇಡ್ವೆ ಈ ಭಾಗ್ಯ ಯೋಗಿ 3 ಇಷ್ಟಾ ಪೂರೈಸೋ ನೀನು ನೋಡೊ ಸುರ ಕಾಮಧೇನು 4 ಅಂತರ್ಯಾಮಿ ಬಲ್ಲ ಇತ್ತರೆ ನಿನ್ನ ಕೇಳ್ವರಿಲ್ಲಾ 5
--------------
ಹನುಮೇಶವಿಠಲ
ಗಣಪತಿ ಪ್ರಾರ್ಥನೆ ಅಜ್ಞಾನ ಪರಿಹರಿಸು ಅಂಬರಾಧೀಶಸುಜ್ಞಾನ ಭಕ್ತಿ ಶ್ರೀ ಹರಿಯಲ್ಲಿ ನೀಡೋ ಪ ವಿಘ್ನರಾಜನೆ ನಿನ್ನ ನುತಿಸಿ ಬೇಡುವೆನಯ್ಯಭಗ್ನಗೈಸೆನ್ನ ಮನ ಸಂದೇಹವನ್ನೂ |ತಜ್ಞರೊಡನಾಡಲು ನಿರ್ವಿಘ್ನ ನೀಡಯ್ಯಾಲಗ್ನಗೈಸೆನ್ನ ಮನ ದೋಷಘ್ನನಲ್ಲೀ 1 ಜಲಧಿ ಮೀನನೆನಿಸಯ್ಯಾ 2 ಚಾರುದೇಷ್ಣನು ಎನಿಸಿ ದ್ವಾಪರದಲವತರಿಸಿಶೌರಿಯಾಜ್ಞದಿ ತರಿದೆ ಬಹು ರಕ್ಕಸರನೂ |ಸರ್ವೇಶ ಶ್ರೀ ಗುರು ಗೋವಿಂದ ವಿಠ್ಠಲನಚರಣ ಸರಸಿಜಕಾಂಬ ಮಾರ್ಗವನೆ ತೋರೋ 3
--------------
ಗುರುಗೋವಿಂದವಿಠಲರು
ನೀನೆ ಗತಿಯೆನಗೆ ಮಾಂಗಿರಿಯ ರಂಗ ಪ ನಾನಾ ಜನುಮವ ನಾನೇ ಪಡೆದವ ಮಾನವ ಜನ್ಮವ ನೀನೆನಗಿತ್ತವ ಅ.ಪ ಹಿಂದಿನ ಜನ್ಮದ ಅಂದವ ಮರೆಸಿದು ದೊಂದುಪಕಾರವೋ ಇಂದಿರೆಯರಸ ಇಂದೆನ್ನ ಬಳಿಗೆ ನೀ ಬಂದು ಪಾಲಿಸಬೇಕು ಭವ ಬೇಡೆಂದು ಬೇಡುವೆನಯ್ಯ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದ ಭಜಿಸಿ ಬೇಡುವೆನಯ್ಯ ಭುಜಗಭೂಷಣಸುತನೆ ಸುಜನಜನವಿನುತ ತ್ರಿಜಗಾದಿ ಪೂಜ್ಯನೆ ನಿಜಪದದಾತನೆ ನಿಜಮತಿಯ ಕರುಣಿಸು ಸುಜನೇಶ ಶ್ರೀರಾಮಕೃಪಾಪಾತ್ರನೆ
--------------
ರಾಮದಾಸರು
ಮಾಧವ ಕಮಲ ಪಾ ದವ ತೋರಿಪಾಲಿಸೋ ಬಾಲಗೋಪಾಲ ಪ ದಿವಿಜೇಶ ವನಜಸಂಭವ ನಿತ್ಯನೇಮ ರಾ ಧೆವಲ್ಲಭ ಸಂಗೀತ ಲೋಲಾ ಅ.ಪ ನೆಂಬುದು ನಿಜವೆಂಬುದ ತೋರೋ ಅಂಬುದ ಶ್ಯಾಮರೋಲಂಬನಂದದೆ ಪಾ ದಾಂಬುಜಯುಗಳವ ನಂಬಿದೆನಯ್ಯ 1 ತಂದೆ ಕರೆಯಲೈತಂದೆ ಕರಿಯು ಕೂಗೆ ಒಂದು ನಿಮಿಷಾರ್ಧದಿ ಬಂದೆ ಕೃಪಾಳು ಇಂದಿರೆಯರಸ ಗೋವಿಂದ ಮಾಂಗಿರಿರಂಗ ಮಂದರಧರ ಬಾರೆಂದು ಬೇಡುವೆನಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಂಜೀವ ಬಾ ಈಗ ನಿನ್ನ ಲಾಹ ಭಾವವ ತೋರಿ ನೀಡೆನಗೆ ಭೋಗ ಪ. ಜಾನಕಿವರ ರಾಮ ರಾಜೇಂದ್ರನಡಿಯ ಸೇ- ವಾನು ಸಂಧಾನದಿ ಪಯೋನಿಧಿಯ ದಾಟಿ ದು- ರ್ಮಾನಿ ದಶಕಂಧರನ ಧಿಕ್ಕರಿಸಿ ವನಸಹಿತ ದಾನವರನೆಲ್ಲ ನುಗ್ಗಿಸಿ ಮುದ್ರಿಕೆಯ ಮಾನನಿಧಿಗಿತ್ತು ವಂದಿಸಿದೆ ಮಣಿವರವ ಶ್ರೀನಿವಾಸನ ಪಾದಕರ್ಪಿಸುತ ನಲಿದೆ 1 ಕಟ್ಟಾಜ್ಞೆಯಿಂದ ಕಂಗೆಟ್ಟ ನೃಪವರನು ದಯಾ- ದೃಷ್ಟಿಯಿಂದಲಿ ನೋಡಿ ದುಷ್ಟ ಬಾರ್ಹದ್ರಥನ ಮೆಟ್ಟಿ ಕಿಮ್ಮೀರ ಬಕ ಧಾರ್ತರಾಷ್ಟ್ರಾದಿಗಳ ಕುಟ್ಟಿ ಗದೆಯಿಂದ ಪುಡಿಗೈದೆ ಕ್ರೋಧವಶ ರಟ್ಟುಳಿಯ ನಡುಗಿಸುತ ಹ್ಯೊದೆ ವಾ- ಶಿಷ್ಟ ಕೃಷ್ಣಾನಂದನನೆ ತಾತ್ಸರವ್ಯಾಕೆ ಬರಿದೆ2 ಭಾಗೀರಥೀ ಜನಕ ಭಕ್ತಜನ ಭಯಮೋಕ ನಾಗಗಿರಿನಾಥನನು ನೆಲೆದೋರು ಗತಶೋಕ ಶ್ರೀಗುರುವರಾನಂದತೀರ್ಥಾರ್ಯನೀ ಪರಿಯ ನಿಖಿಳ ಪುರುಷಾರ್ಥ ನಿನ್ನಡಿಗೆ ಬಾಗಿ ಬೇಡುವೆನಯ್ಯ ಭಾರತಕೃತಾರ್ಥ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿಂದಕರಿರಬೇಕಿರಬೇಕುಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಗೇ ಪ.ಅಂದಂದು ಮಾಡಿದ ಪಾಪವೆಂಬ ಮಲತಿಂದು ಹೋಗುವರಯ್ಯ ನಿಂದಕರುವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮಪೊಂದಿಗ ಪುಣ್ಯವನ್ನೆಯ್ಯುವರಯ್ಯ 1ದುಷ್ಠ ಜನರು ಈ ಸೃಷ್ಟಿಯೊಳಿದ್ದರೆಶಿಷ್ಟ ಜನರಿಗೆಲ್ಲ ಕೀರ್ತಿಗಳೂಇಷ್ಟಪ್ರದ ಶ್ರೀ ಕೃಷ್ಣನೆ ನಿನ್ನೊಳುಇಷ್ಟೇ ವರವನು ಬೇಡುವೆನಯ್ಯ 2ದುರುಳ ಜನಂಗಳು ಚಿರಕಾಲ ಇರುವಂತೆಕರವ ಮುಗಿದುವರ ಬೇಡುವೆನುಪರಿಪರಿ ತಮಾಸಿಗೆ ಗುರಿಯಿಲ್ಲದೆಪರಮದಯಾನಿಧಿ ಪುರಂದರವಿಠಲ3
--------------
ಪುರಂದರದಾಸರು
ಮುಖ್ಯ ಪ್ರಾಣನೆ ಕೈಯ ಮುಗಿದು ಬೇಡುವೆನಯ್ಯಭಕ್ತಿಪಾಲಿಸು ಹರಿಯ ಪಾದಬಳಿಯನಿನ್ನ ಮತ ಪೊಂದಿಸು ನಿನ್ನ ಚಿಹ್ನೆಯ ಧರಿಸುನೀನು ಪಿಡಿಯಲು ಹರಿಯು ತಾನು ಪಿಡಿವನುನವವಿಧ ನೀನು ಮುಖ್ಯಾಭಿಮಾನಿ
--------------
ಗೋಪಾಲದಾಸರು