ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ದೇವದೇವ ಸೆರಗೊಡ್ಡಿ ಬೇಡುವೆನಭವ ಪರಿಹರಿಸು ಎನ್ನ ಕರುಣಾಳು ಲಕ್ಷ್ಮಿಯ ಜೀವ ಪ ಅಂಬುಧಿಶಾಯಿಯೆ ನಿನ್ನ ಭಜಿಪೆ ಪಾವನ್ನ ಅಂಬುಜಸಂಭವಪಿತನೆ ಕಂಬುಕಂಧರಪ್ರಿಯಸಖನೆ ಅಂಬುಧಿಯಸಂಜಾತೆರಮಣ ಬೆಂಬಲಿಸಿ ಕಾಯೊ ಬಡವನ್ನ 1 ಸುಂದರಕಾಯ ಇಂದಿರೆಯ ಪ್ರಾಣಪ್ರಿಯ ಬಂಧನದ ಬಡತನ ಕಳಿಯೊ ವಂದಿಸಿ ಮರೆಹೊಕ್ಕೆ ಜೀಯ 2 ಈಸೀಸಿ ಸಂಸಾರನಿಧಿಯ ಬೇಸತ್ತು ಬಿಡುವೆನೊ ಬಾಯ ಘಾಸಿ ಮಾಡದೆ ಸಲಹಯ್ಯ 3
--------------
ರಾಮದಾಸರು
ಗೌರೀಶ ಮೃತ್ಯುಂಜಯನುತ ಪಾಲಯ ಗೌರೀಶ ಮೃತ್ಯುಂಜಯ ಪ ಸುಮಶರನಾಶ ಸುಮನರಪೋಷ ಶಮೆಶಾಂತಿದಯಭೂತೇಶ 1 ಶಂಕರ ಶಶಿಧರ ಕಿಂಕರ ಪ್ರಿಯಕರ ಶಂಕರಿಮನೋಹರ 2 ಉಮೆ ಪ್ರಿಯನಾಥ ಅಮಿತವರದಾತ ಅಮರಾದಿಸುರಾರ್ಚಿತ 3 ವರಮಹಲಿಂಗ ಪರಿಭವಭಂಗ ಪರತರ ಪಾವನಾಂಗ 4 ಗಜಚರ್ಮಾಂಬರ ಭುಜಗಾಲಂಕಾರ ಸುಜನಾತ್ಮ ಸುಖಂಕರ 5 ಪುರತ್ರಯ ಸಂಹರ ಪರಿಪಕ್ವರಾಧಾರ ನಿರಂಜನ ನಿರಾಕಾರ 6 ಕೆಂಡನಯನ ರುಂಡಮಾಲನೆ ಹರಣ 7 ಬೇಡುವೆನಭವ ಕಾಡದೆ ಪರಶಿವ ನೀಡು ಎನ್ನಗೆ ವರವ 8 ಭೂಮಿತ್ರಯಕೆ ಘನಸ್ವಾಮಿ ಶ್ರೀರಾಮನ ನಾಮ ಪಾಲಿಸು ಪಾವನ 9
--------------
ರಾಮದಾಸರು
ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು