ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡುವರೊ ಸುಖ ಬೇಡರೊ ದುಃಖವ | ಮಾಡಾರೋ ಅವರ ಉಪಾಯವ | ಜನ | ಬೇಡುವರೋ ಪ ಇಟ್ಟಿಕಲ್ಲನು ತಂದು ಕಿಟ್ಟಿ ಬೀಸುವರೊ | ಕುಟ್ಯಾರೋ ರಂಗವಲ್ಲಿಯಾ | ಜನ 1 ಸಾಲು ಸಾಲೆಮ್ಮೆಯ | ಸೋಲದೆ ತೊಳೆವರು | ಸಾಲಿಗ್ರಾಮಕ್ಕ ಹಾಲೆರೆಯರೊ | ಜನ | 2 ತ್ರಿಜಗವಂದಿತ ನಮ್ಮ ವಿಜಯವಿಠ್ಠಲನ | ಭಜನೆಯಾ ಮಾಡದೆ ಸೋಲ್ವರೋ | ಜನ | 3
--------------
ವಿಜಯದಾಸ
ಬೇಡುವರೋ ಬೇಡುಣುತಿಹ್ಯರೋ ಬೇಡಿ ಬೇಡದಂತೆ ನಾಡೊಳ್ಹರಿದಾಸರು ಪ ಕೊಟ್ಟರೆ ಶ್ಲಾಘನೆ ಮಾಡರೊ ಕೊಡದಿದ್ದರೆ ಸಿಟ್ಟಿಗೆ ಬಾರರೊ ಕೊಟ್ಟಕೊಡವದರೆಲ್ಲ ಅಷ್ಟೆಯೆಂದೆನ್ನುತ ಸೃಷ್ಟಿಗೀಶನ ಘಟ್ಟ ತಿಳಿದಿಹ್ಯರೂ 1 ಸಂಚಿತದಿಂ ಜನ್ಮ ತಾಳಿಹ್ಯರೂ ವಿ ರಂಚಿಪಿತಗೆ ಭಾರಹೊರಿಸಿಹ್ಯರೊ ಹಂಚಿಕಿಯಿಂದ ನಿರ್ವಂಚಿತರಾಗಿ ಬಂದ ಸಂಚಿತಾದಡಾಗಮ ಗೆಲಿಯುವರೊ 2 ಕಾಮಿತಗಳೆಲ್ಲ ಕಡೆದಿಹ್ಯರು ಈ ಭೂಮಿಸುಖಕೆ ಮನಮೋಹಿಸರೊ ನೇಮದಿಂದ ಮಹ ಕ್ಷೇಮವಾರಿಧಿ ಸ್ವಾಮಿ ಶ್ರೀರಾಮ ಪಾದಕ್ಹೊಂದಿಹ್ಯರೊ 3
--------------
ರಾಮದಾಸರು