ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ಪ ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ 1 ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ2 ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ | ಮತಿಹೀನ ಜನರ ಶಾಸ್ತ್ರವ ಖಂಡಿಸಿ || ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ- ನಿತ್ಯ ಪರಮ 3
--------------
ವಿಜಯದಾಸ
ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ ಪಾತ್ರ ನೀನಹುದೋ ಸರ್ವತ್ರದಿ ನೀನೆ ಪ ದೇವಾ ನೀನಿಲ್ಲದಿರೆ ಜಗವೆಲ್ಲವು ತಾ ನಿರ್ಜೀವ ಜೀವ ಕೋಟಿಗಳೆಲ್ಲ ಕಾವ ಪಾವನಾತ್ಮಕ ಸಂಜೀವ ಲವಕಾಲ ಬಿಡದೆ ಎಮ್ಮೊಳಿರುವ ಭೋ ದೇವ ಅ.ಪ ಸಾಟಿ ಯಾರೆಲೆ ತ್ರಿಕೊಟಿರೂಪನೆ ನಿಶಾಚರ ಕುಲಕೆ ಕುಠಾರಿ ಅಜಾಂಡ ಖರ್ಪರದಿ ಸೃಷ್ಟಿಯೊಳು ಸಂಚಾರಿ ಪಟುತರ ತ್ರಿವಿಕ್ರಮ ಚಟುಲ ಮೂರುತಿ ಮನತಟದಲಿ ಭಜಿಸಿದ ಶ್ರೇಷ್ಠನೆ ನಿಜಪರಮೇಷ್ಠಿಪದವನು ತೊಟ್ಟು ಪಾಲಿಪೆ ನಿಂದು ಬ್ರಹ್ಮಾಂಡ ಪೊತ್ತು ಅಂದು ಜಗಭಾರ ವಹಿಸಿದೆಯೊ ದಯಾಸಿಂಧು ಎಂದೆಂದೂ 1 ಸರುವ ತತುವೇಶರ ವ್ಯಾಪಾರ ಧೀರ ನೀ ನಡೆಸೆ ಜಗಸಂಸಾರ ಕಾರಣನು ಜಗಕಾರ್ಯ ಕಾ ವೈರಾಗ್ಯ ಐಶ್ವರ್ಯ ನಿನ್ನಯ ಗುಣ ಸ್ವರೂಪತನುಕರಣೇಂದ್ರಿಯ ಕರ್ಮಫಲವನು ಜೀ ವರುಗಳಿಗುಣಿಪ ಅನಿಲರೂಪನೆ ತನುಗೋಳಕದಲಿ ನೀ ನೆಲ ಅಂದು ಸೃಷ್ಟಿಯೊಳು ಬಂದೂ ಪೊಂದಿ ಸರ್ವರೊಳು ನಿಂದು ಹಿಂದೂ ಇಂದೂ ಇನ್ನು ಮುಂದೂ ಕರುಣಾಸಿಂಧು ಎಂದೆಂದೂ 2 ಪ್ರಾಣಪ್ರಾತರ ಸಾಯಂಬೀತೆರ ಅಭಿಧಾನ ಗುಣಸ್ತವನ ಮಾಳ್ಪರೆಲ್ಲ ಸುರ ಗಣಾ ಮಣಿದು ಬೇಡುವರೆಲ್ಲ ಅನುದಿನಾ ಎಣೆಯುಂಟೆ ನೀನಮಿತ ಗುಣಗಣಾ ಶ್ರೀ ಮುಖ್ಯ ಪ್ರಾಣಾ ಜಗಬಂಧಕೆ ಮಹಾರಜ್ಜು ರೂಪ ನೀ ಚಿತ್ಸುಖಮಯ ವಪುಷ ಖಗಪ ಶೇಷ ಶಿವ ಶಕ್ರಾದೀ ಜಗ ಬದ್ಧವು ಕೇಶ ನಖಾಗ್ರ ಪರ್ಯಂತ ಚಿತ್ಸುಖ ಗಭೇದ ನೀ ಛಂದ ಶಾಸ್ತ್ರದಿ ತನು ತ್ವಗ್ರೋಮ ಉಷ್ಣಿಕ್ ಗಾಯತ್ರಿ ನರ ಮಾಂಸನುಷ್ಟುಪ್ ಅನುಷ್ಟಪು ಅಸ್ತಿಮಜ್ಜಾ ಜಗತೀ ಪಂಕ್ತಿ ಬೃಹತಿನಾಮಕ ಘನ್ನಾ ಉರಗಾದ್ರಿವಾಸ ವಿಠಲನ್ನ 3
--------------
ಉರಗಾದ್ರಿವಾಸವಿಠಲದಾಸರು