ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲವಂತನೇ ನೀನು ಎಲೋ ಪರಮಾನಂದ ಕುಲಹೀನನೇ ನಾನು ಪೇಳೆಲವೊ ಸ್ವಾಮಿ ಪ ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ ಕುಲದಿ ಮಾದಿಗರ್ಹರಳಯ್ಯನ ಮನೆಲುಂಡಿ ಚೆಲುವ ಕೂಸಿನ ಕೊರತೆ ಸಲಿಸಿದಿ ಬಲುಹಿತದಿ ಮಲಿನಸೀರೆಯ ನಿನ್ನ ತಲೆಗೆ ಸುತ್ತಿಕೊಂಡಿ 1 ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ ಶಂಭೋ ಕುಣಿದೆಲೋ ಕುಂಬಾರಗೊಲಿದು ಸಾಂಬ ನೀ ನಡ ಪೊತ್ತು ಇಂಬು ಸುಡುಗಾಡು ನಿನಗಂಬುಧಿಧರನೆ 2 ಪುಲಿಚರ್ಮ ಹಾಸಿಕೊಂಡ್ಹೊಲಸು ಚರ್ಮುಟ್ಟಿರುವಿ ತಲೆ ಬುರುಡೆ ಕೊರಲಿಗೆ ಮಾಲೆ ಧರಿಸಿರುವಿ ಎಲೊ ದೇವ ಇನಿತಿರ್ದು ಕುಲವನೆಣಿಸುವಿ ನಿನ್ನ ಒಲವು ಬೇಡುವರಿಗೆ ಶ್ರೀರಾಮಸಖನೆ 3
--------------
ರಾಮದಾಸರು
ಸಕಲ ಕಲ್ಯಾಣ ಗುಣಾಢ್ಯಗೆ ಮಂಗಳಂ ನಿಖಿಲ ದೋಷದೂರಗೆ ಮಂಗಳಂ ಭಕುತರ ಸಂತತ ಪೊರೆಯುತಿರುವ ನಮ್ಮ ರುಕುಮಿಣಿ ಭಾಮಾರಮಣಗೆ ಮಂಗಳಂ 1 ಯಾದವ ಕುಲಭೂಷಣನಿಗೆ ಮಂಗಳಂ ಸಾಧು ಸುಧಾಮ ಸಖಗೆ ಮಂಗಳಂ ಪಾದ ಸೇವಕರಿಗೆ ಮೋದವ ನೀಡುವ ಮಾಧವನಿಗೆ ಸಂತತ ಶುಭಮಂಗಳಂ 2 ವಿವಿಧ ಸೌಭಾಗ್ಯ ಸಂಪನ್ನಗೆ ಮಂಗಳಂ ರವಿಶತ ಸಮತೇಜಗೆ ಮಂಗಳಂ ಸುವಿನಯದಲಿ ಬೇಡುವರಿಗೆ ಶುಭಗಳ ಜವದಲಿ ಕೊಡುವ ಪ್ರಸನ್ನಗೆ ಮಂಗಳಂ 3
--------------
ವಿದ್ಯಾಪ್ರಸನ್ನತೀರ್ಥರು
ಧರಣಿಗೆ ದೊರೆಯೆಂದು ನಂಬಿದೆ - ಇಂಥ - |ಪರಮಲೋಭಿಯೆಂದು ಅರಿಯೆ ಶ್ರೀ ಹರಿಯೆ ಪಕಾಡಿಬೇಡುವರಿಗೆ ಕೊಡಲಾರದೆ ಅಂಜಿ |ಓಡಿ ನೀರೊಳು ಸೇರಿಕೊಂಡೆ ಬೇಗ ||ಹೇಡಿಯ ತೆರದಲಿ ಮೋರೆಯ ತೋರದೆ |ಓಡಿ ಅರಣ್ಯದಿ ಮೃಗಗಳ ಸೇರಿದೆ 1ಬಡವರಬಿನ್ನಪ ಲಾಲಿಸದಲೆ ಹಲ್ಲ |ಕಡುಕೋಪದಲಿ ತೆರೆದಂಜಿಸಿದೆ ||ತಡೆಯದೆ ಭಿಕ್ಷುಕನಾದರು ಬಿಡರೆಂದು |ಕೊಡಲಿಯ ಪಿಡಿದುಕೋಡಗ ಹಿಂಡ ಕಾಯ್ದೆಯೊ2ಉತ್ತಮನೆಂದರೆ ಮತ್ತೆ ಚೋರನಾದೆ |ಬತ್ತಲೆ ನಿಂತು ತೇಜಿಯನೇರಿದೆ |ಎತ್ತಪೋದರು ಬಿಡೆ ಬಿಡೆ ನಿನ್ನ ಪಾದವ |ಚಿತ್ತಜ ಜನಕ ಶ್ರೀ ಪುರಂದರವಿಠಲನೆ3
--------------
ಪುರಂದರದಾಸರು