ಒಟ್ಟು 16 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸ್ತುತಿ ಪ್ರೇಮದಿಂದೊಂದಿಸುವೆ ಗುರುವೃಂದಕೇ ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು ಪ ಸತಿಯ ಬೇಡುವನಲ್ಲ ಸುತರ ಬೇಡುವನಲ್ಲ ಅತಿಶಯದ ಭಾಗ್ಯವನು ಕೇಳ್ವನಲ್ಲ ರತಿಪತಿ ಆಟವನು ಖಂಡಿಸಿ ಬೇಗದಲಿ ಮತಿ ತಪ್ಪಲೆನಗೆ ದುರ್ವಿಷಯದೊಳಗೆಂದು 1 ಶಕ್ತಿ ಬೇಡುವನಲ್ಲ ಯುಕ್ತಿ ಬೇಡುವನಲ್ಲ ಭುಕ್ತಿ ಎನಗಿಲ್ಲೆಂದು ಕೇಳ್ವನಲ್ಲ ಮುಕ್ತಿದಾಯಕ ನಮ್ಮ ವಿಟ್ಠಲನ ಚರಣದಲಿ ಭಕ್ತಿ ದೃಢವಾಗೆನಗಿತ್ತು ರಕ್ಷಿಸಲೆಂದು 2 ಮಾನ ಬೇಡುವನಲ್ಲ ದಾನ ಬೇಡುವನಲ್ಲ ಹೀನತನ ಬ್ಯಾಡೆಂದು ಕೇಳ್ವನಲ್ಲ ಮಾನನಿಧೀಶ ನಮ್ಮ ಶ್ರೀ ನರಹರಿಯ ಚರಣವನು ಕಾಣಿಸುವ ಜ್ಞಾನವನು ದಾನಮಾಡಲಿ ಎಂದು3
--------------
ಪ್ರದ್ಯುಮ್ನತೀರ್ಥರು
ಪ್ರೇಮದಿಂದೊಂದಿಸುವೆ ಗುರುವೃಂದಕೆ ಪ ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು ಅ.ಪ. ಸತಿಯ ಬೇಡುವನಲ್ಲಾ ಸುತರ ಬೇಡುವನಲ್ಲಾಅತಿಶಯದ ಭಾಗ್ಯವನು ಕೇಳ್ವನಲ್ಲಾರತಿಪತಿ ಆಟವನು ಖಂಡಿದಿ ಬೇಗದಲಿಮತಿ ತಪ್ಪಲೆನಗೆ ದುರ್ವಿಷಯದೊಳಗೆಂದ 1 ಶಕ್ತಿ ಬೇಡುವನಲ್ಲ ಯುಕ್ತಿಬೇಡುವನಲ್ಲಾಭಕ್ತಿವಿನಲ್ಲೆಂದು ಕೇಳ್ವನಲ್ಲಮುಕ್ತಿದಾಯಕ ನಮ್ಮ ವಿಠಲನ ಚರಣದಲಿಭಕ್ತಿ ದೃಢವಾಗೆಮಗೆ ಇತ್ತು ರಕ್ಷಿಸಲೆಂದು 2 ಮಾನ ಬೇಡುವನಲ್ಲ ದಾನ ಬೇಡುವನಲ್ಲಾಹೀನತನ ಬ್ಯಾಡೆಂದು ಕೇಳ್ವನಲ್ಲಾಮಾನನಿಧಿ ನಮ್ಮ ಶ್ರೀ ನರಹರಿಯ ಚರಣವನುಕಾಣಿಸುವ ಜ್ಞಾನವನು ದಾನ ಮಾಡೆಮಗೆಂದು 3
--------------
ತಂದೆ ಶ್ರೀನರಹರಿ
ಮೂರ್ತಿ ಪ ಲೋಕದ ಜನರಘವನು ತೊಳೆಯಲಿಕೆ ತ್ರೈ ಲೋಕ ದೊಡೆಯ ಚದಂಬರನಾಗಿ ಭೂಕಾಂತೆಯೊಳಗೆ ಮೂರ್ತಿ ದಯಾಪರ ಮೂರುತಿ 1 ಮಾಡಿಕೊಂಡ ಪಾಪದ ರಾಶಿಯು ದಿನ ದಿನ ಉರಿಗೊಂಡು ಸುಟ್ಟುದು ಮರೆಹೊಕ್ಕೆನೀಗಳು ಪಾದ ಪುಂಡರೀಕವನು ಚಿದಂಬರಮೂರ್ತಿ 2 ಹೊನ್ನು ಹಣವ ಚಿನ್ನ ಚಿಗುರು ಬೇಡುವನಲ್ಲ ಪಾದ ಪದ್ಮದ ಸ್ಮರಣೆಯನು ಸಂಪೂರ್ಣವಾಗಿರುವ ನಿತ್ಯ ಸುಖಾರ್ಣವಾನಂದ ಚಿದಂಬರಮೂರ್ತಿ 3 ಬೇಡುವೆನೊಂದು ವರವ ಕೊಡುವರೆ ಈ ಗೂಡಿರುವತನಕ ಕೃಪೆಮಾಡಿ ಸಲಹೋ ಎನ್ನ ನೋಡಿ ಬಡವನ ಚಿದಂಬರಮೂರ್ತಿ 4 ಪ್ರಾಕುನುಡಿದ ಪುಣ್ಯದಿಂದ ನಿಮ್ಮಯಪಾದ ಸೇರೆ ನಾ ಕೃತ ಕೃತ್ಯನಾದೆ ನಿಂದಿನ ಜನ್ಮ ಸಾರ್ಥಕ ವಾಯ್ತು ಪರಾಕೆ ಚಿದಂಬರ ನೀ ಕರುಣಿಸೋ ಎನಗಭಯವಿತ್ತು 5
--------------
ಕವಿ ಪರಮದೇವದಾಸರು
ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ. ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು ಸುಸ್ವಭಾವದ ಸರಳ ಹೃದಯಾನ್ವಿತಳು ನೀನು ಕಪಟ ಕಿರಾತನವನು 1 ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು ಕಪಟ ವೇಷದೊಳು ಬಂದ ವಿಷಕಂಠನವನು ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು 2 ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು ಮೂಜಗವು ಮೋಹಿಸುವ ಕೋಮಲಾಂಗಿಯು ನೀನು ಈ ಜಗವರಿಯೆ ಸರ್ವದ ಭಸ್ಮಾಂಗನವನು 3 ಕನಕ ಮಣಿಮಯದಂತಃಪುರವಾಸಿಯು ನೀನು ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು 4 ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು ಕೋರಿ ಗಜಚರ್ಮಧರಿಸುವ ಭಿಕಾರಿಯವನು ಭೂರಿ ಸುಖಭೋಗಂಗಳನನುಭವಿಸುವೆ ನೀನು ನಾರಸಿಂಹ ಮಂತ್ರ ಜಪಿಪ ವಿರಾಗಿಯವನು5 ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು ಕರುಣವಿಲ್ಲದೆ ಮೂಜಗವನುರುಹುವನವನು ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು ನರನಾದ ಭಕ್ತನೊಳು ಹೋರಾಡಿದವನು 6 ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ ಗಂಗಾಜನಕನ ಪ್ರಿಯತಮ ಸೋದರಿಯು ನೀನು ರಂಗೇಶವಿಠಲನ ಚರಣ ಸೇವಕನವನು 7
--------------
ರಂಗೇಶವಿಠಲದಾಸರು
ಸುರೇಶ ಪದವಿಯ ಬೇಡುವನಲ್ಲ ನರೇಶ ಭಾಗ್ಯವ ಕೋರುವನಲ್ಲ ಪ ಗುರೂಪದೇಶವ ಮರೆಯುವನಲ್ಲ ಪರೇಶ ಸ್ಮರಣೆಯ ಬಿಡುವವನಲ್ಲ ಅ.ಪ ಜನನ ಮರಣಕೇ ಹೆದರುವನಲ್ಲ ಜನುಮಗಳು ಬೇಡ ಎನ್ನುವನಲ್ಲ ಮನದಿ ವ್ಯಾಮೋಹವ ಪಡೆಯುವನಲ್ಲ ವನಜನಾಭನ ನಾಮ ಮರೆಯುವನಲ್ಲ1 ನಿನ್ನ ಚರಿತಗಳ ಕೇಳದೆ ಬಿಡೆನು ನಿನ್ನ ಮೂರ್ತಿಯ ನೋಡದೆ ಬಿಡೆನು ನಿನ್ನ ಪಾದಾರ್ಚನೆ ಮಾಡದೆ ಬಿಡೆನು [ನಿನ್ನ ನಾಮಂಗಳ ನುತಿಸದೆ ಬಿಡೆನು] 2 ಮಾಂಗಿರಿಪತಿ ನಿನ್ನ ಒಲಿಸದೆ ಬಿಡೆನು ಕಂಗಳಿಂದಾನಂದ ಪಡೆಯದೆ ಬಿಡೆನು ಅಂಗಾಂಗದ ಸೇವೆ ಮಾಡದೆ ಬಿಡೆನು ರಂಗ ಸಮರ್ಪಣ ಎನ್ನದೆ ಬಿಡೆನು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏಕೆ ದಯಮಾಡಲೊಲ್ಲೆ - ಎಲೊ ಹರಿಯೆ |ಮೂಕನಾಗುವರೆ ಹೀಗೆ ಪಲೋಕವನು ರಕ್ಷಿಪ ಲಕ್ಷ್ಮೀಕಾಂತನು ನೀನೇ |ವಾಕುಮೊರೆಗಳಕೇಳಿಒಲಿದು ದಯಮಾಡಯ್ಯಅ.ಪಅರ್ಥವಿಲ್ಲದ ಬಾಳ್ವೆಯು - ಇರುವುದಿದು|ವ್ಯರ್ಥವಾಗಿದೆ ಶ್ರೀಪತಿ ||ಕರ್ತುನಿನ್ನೊಳು ನಾನು ಕಾಡಿ ಬೇಡುವನಲ್ಲ|ಸತ್ವರದಿ ದಯಮಾಡೊ ತುಳಸೀದಳಪ್ರಿಯ 1ಮನದೊಳಗಿನ ಬಯಕೆ - ಎಲೈಸ್ವಾಮಿ |ನಿನಗೆ ಪೇಳುವೆನು ನಾನು ||ಬಿನುಗುದೇವತೆಗಳಿಗೆ ಪೇಳಲಾರೆವೊ ಹರಿಯೆ|ತನುಮನ ನಿನ್ನ ಕೂಡ ಇಹವು ದಯಮಾಡೊ 2ಮೂರು ಲೋಕವ ಪಾಲಿಪ - ಎನ್ನಯ ಸ್ವಾಮಿ |ಭಾರವೆ ನಿನಗೆ ನಾನು ||ಕಾರುಣ್ಯನಿಧಿ ನಮ್ಮ ಪುರಂದರವಿಠಲ ಶ್ರೀ - |ದಾರಾಮನೋಹರ ಸಾಕಾರ ದಯವಾಗೊ3
--------------
ಪುರಂದರದಾಸರು