ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಪತಿ ಶ್ರೀನಿವಾಸ ವಿಠಲ ಪೊರೆ ಇವಳ ಪ ಆನತೇಷ್ಟ ಪ್ರದನು | ನೀನೆಂದು ಬಿನ್ನವಿಪೆಜ್ಞಾನ ಗಮ್ಯನೆ ದೇವ | ನೀನಾಗಿ ಪೊರೆಯೋ ಅ.ಪ. ಮಾನ್ಯ ಮಾನದ ಹರಿಯೆ | ಕನ್ಯೆಗಭಯದನಾಗಿಪುಣ್ಯ ಜೀವಿಯ ಸಲಹೆ | ಬಿನ್ನೈಪೆ ನಿನಗೇ |ನಿನ್ಹೊರತು ಜಗದೊಳಗೆ | ಅನ್ಯರನು ಕಾಣೆ ಕಾರುಣ್ಯ ನಿಧಿ ದಾನವಾ | ರಣ್ಯ ದಾವನಲಾ 1 ಭಾವಿಭಾರತಿ ಪತಿಯ | ಸೇವೆಯನೆ ಕೊಂಬಹಯಗ್ರೀವನೆ ನಿನ್ನ ಪದ | ತಾವರೆಯ ದಾಸ್ಯಾ |ಓದಿ ಬೇಡುತ್ತಿಹಳ | ತೀವರದಿ ಕೈ ಪಿಡಿಯೆದೇವ ನಿನ್ನಡಿಗಾನು | ಧಾವಿಸುತ ಬೇಡ್ವೇ 2 ಮಾರುತಾಂತರ್ಗತನೆ | ತಾರತಮ್ಯ ಜ್ಞಾನಮೂರೆರಡು ಭೇದಗಳ | ದಾರಿಯನೆ ತೋರೀ |ಸಾರತಮ ನೀನು ನಿ | ಸ್ಸಾರ ಜಗವೆಂತೆಂಬ ಚಾರುಮತಿಯನೆ ಇತ್ತು | ಪಾರು ಮಾಡಿವಳಾ 3 ವಿಷಯಗಳ ಅನುಭವದಿ | ಎಸೆವ ನಿನ್ನಯ ಸ್ಮರಣೆಹಸನಾಗಿ ನೀನಿತ್ತು | ಕೆಸರ ಕಳೆಯೋ |ಕುಶಲ ಕ್ಲೇಶಾದಿ ನಿ | ನ್ನೊಶವೆಂಬ ಧೃಡವಿರಲಿಬಿಸಜಾಕ್ಷ ಶ್ರೀರಾಮ | ಪ್ರಸರಿಸೋ ಜ್ಞಾನ 4 ದೇವ ದೇವೇಶ ಗುರು | ಸಾರ್ವಬೌಮರ ಪಾಲಶ್ರೀವರನೆ ಸರ್ವಜ್ಞ | ದುರ್ವಿಬಾವ್ಯಾ |ನೀವೊಲಿಯುತಿವಳಿನ್ನು | ಸಾರ್ವ ಕಾಲದಿ ಪೊರೆಯೊಗೋವಳರ ಪಾಲ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ವೈಕುಂಠನಾಯಕನೂ ಈ ಮಹಾತ್ಮನು ವೈಕುಂಠನಾಯಕನು ಪ. ಪಾಕಶಾಸನತ, ನಾಕಪಾಲಕ ಸರ್ವಲೋಕನಾಯಕ ಭಕ್ತರಕ್ಷಕ ಶ್ರೀಕಳತ್ರ ಸುಪವಿತ್ರನೀತನು ಅ.ಪ. ವೆಂಕಟಗಿರಿಯಿಂದ ಅಂಕನಶೆಟ್ಟಿಪುರಕೆ ಬಿಂಕದಿಂದೈತಂದ ಕಾಂಕ್ಷಿತಾರ್ಥವನೀವನು ಭಕ್ತರಮನಶಂಕೆಯ ಕಳೆಯುವನು ಕಂಕಣಕರ ಬದ್ಧನಾಗಿಹ ಪಂಕಜಾಸನ ಜನಕ ಲಕ್ಷ್ಮೀಕಾಂತ ಸರ್ವಾಂತರ್ಯಾಮಿಯಾಗಿಹ 1 ಬಂದವರೆಲ್ಲ ತಾವು ಬಂದಂತೆ ಮನನೊಂದು ಹಿಂದಿರುಗಿ ಪೋಗುವರೆಂಬ ಮಾತಿಲ್ಲ ಬಂದು ಬಂದವರಿಗೆಲ್ಲ ಬೇಡಿದುದಿತ್ತಾನಂದ ದಿಂದವರೀಯುವ ಕಾಣಿಕೆಗಳ ಚೆಂದದಿಂ ಸುರೇಂದ್ರ ವಂದ್ಯ ಕರೀಂದ್ರಪೂಜಿತ ನಂದ ಕಂದ ಮುಚುಕುಂದ ವರದನು 2 ಅಂಗವಿಹೀನರಿಗಂಗವ ಸರಿಗೈದು ಇಂಗದ ಭೋಗಭಾಗ್ಯಂಗಳ ನೀವನು ಕಂಗೆಟ್ಟಿಹರಕಾಯ್ವನು - ಬೇಡುತ್ತಿಹ ಬಂಜೆಗೆ ಮಕ್ಕಳನು ನೀಡುವನು ತನ್ನ ನಂಬಿದವರ ಕೈಬಿಡನು ಸತ್ಯಾತ್ಮನು ಮಂಗಳಾಂಗ ಯದುಪುಂಗವ ಸದಯಾಪಾಂಗ ಶ್ರೀ ರಂಗ ತುಂಗವಿಕ್ರಮ ಶೇಷಗಿರಿವರ 3
--------------
ನಂಜನಗೂಡು ತಿರುಮಲಾಂಬಾ