ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಪ್ರಾರ್ಥನೆ ವಂದಿಸುವೆ ನಾನಿಮ್ಮ ನನುದಿನ ವಂದಿಸುವೆ ಗಣನಾಥನೆ ವಂದೆ ಮಾನಸದಿಂದಲಿ ಪ ಭುಜಗಭೂಷಣ ಪಾರ್ವತೀಶನ ಪುತ್ರನೆನಿಸಿದ ದೇವನೆ ಆದಿಪೂಜೆಯ ಗೊಂಬನೆ 1 ಮೇಲ್ ಮಾಡಿದನೆ ಕೋಮಲಾಂಗನೇ 2 ಬೇಡುತಿಹ ಭಕ್ತರಿಗೆ ವಿದ್ಯಾವೃಷ್ಟಿಯನು ಕೊಡುತಿರುವನೆ ಪಾಲಿಸೆನಗೆ ಮತಿಯನು 3 ಅಂಗಭೇದ ವಿನೋದನಾದನೆ ಆರುಮುಖದವನಣ್ಣನೆ ಮಾನದಲಿ ಕಡೆ ಹಾಯಿಸು 4 ಗುಳಗಿ ಗಡುಬಿನಪ್ರಿಯನೆ ನಲಿಯುವವನೆ
--------------
ಹೆನ್ನೆರಂಗದಾಸರು
ಆಡುವ ಬಾರೋ ಕೃಷ್ಣ ಓಡಿಬಾರೋ ಪ ನಾಡೆ ನಿನ್ನ ನೋಡಬಯಸಿ ಹಾಡುವೆನ್ನ ಕಣ್ಣಮುಂದೆ ಅ.ಪ ಓಡಿಬರುವೆ ನೀನು ಎಂದು ನೋಡಿ ಹಸುಗಳತ್ತ ಇತ್ತ ಬೇಡುತಿಹವು ನಿನ್ನ ಬರವ ಮೋಡಿಯೇಕೆ ಕೊಳಲನೂದಿ 1 ಕರವ ನೀಡಿ ಮಣ್ಣಮೆದ್ದನೆಂದು ತಾಯ ಕಣ್ಗೆ ತೋರ್ದೆ ಜಗವನೆಲ್ಲ 2 ಪೊಂಗಲೀವೆ ಬಾ ಮುಕುಂದ ಹೊಂಗೊಳಲಾನಂದದಿಂದ ತಂಗುವೆ ನಾ ನಿನ್ನ ಪಾದದಿ ಮಾಂಗಿರೀಶ ಮುದ್ದುರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದುಸನ್ನಿಭವದನೆ ಕುಂದಕುಟ್ಮಲರದನೆ ಸಿಂಧೂರಸಮಗಮನೆ ಚತುರವಚನೆ ಸಿಟ್ಟೇಕೆ ಪೇಳೆ ತರುಣಿ ದಿಟ್ಟಿಸೆನ್ನನು ರಮಣಿ ದಿಟ್ಟೆ ನೀನೆಲೆ ರಾಣಿ ಕೃಷ್ಣವೇಣಿ ಕಾವಗೀಯದೆಯೆನ್ನ ಭಾವೆಪಾಲಿಸು ಮುನ್ನ ಭುವಿಜಾತೆ ಮತಿವಂತೆ, ಪ್ರಾಣಕಾಂತೆ ಚಪಲೆನೀನಹುದಲ್ಲೆ ಕೃಪಣೆಯೆಂಬುದ ಬಲ್ಲೆ ವಿಪರೀತಂಮೆಲುನಲ್ಲೆ ಸೊಲ್ಲಿಸಿಲ್ಲೆ ಕ್ಷೀರಸಾಗರತನಯೆ ಸದಯೆ ಜಾಯೆ ಸಾರೆ ವೀಳ್ಯವನು ಕೈಗೊಂಡು ನೀನು ಬೀರು ಸಂತಸವನ್ನು ಬೇಡುತಿಹೆನು ನೀರೆ ಶೇಷಾದ್ರೀಶನಿವನೆತಾನು
--------------
ನಂಜನಗೂಡು ತಿರುಮಲಾಂಬಾ
ಕಂಡು ಧನ್ಯನಾದೆ ಭೂಮಂಡಲದೋಳ್ ಪ ಶ್ರೀ ಗುರುಸಾರ್ವಭೌಮ ರಾಘವೇಂದ್ರರಾ 1 ಕಲಿಯುಗದೋಳ್ ಭಕ್ತಜನರಾ ಉದ್ಧರಿಸಬೇಕು ಎಂಬ ಮನದಿ ವರಮಂತ್ರಾಲಯದೊಳ್ ಬಂದು ನಿಂದಿಹ ಯತಿವರರಾ 2 ಮಂಗಳಮೂರುತಿ ರಾಘವೇಂದ್ರರ ಬೃಂದಾವನ ಮನದಣೆಯೆ 3 ವಿಶಿಷ್ಟ ಜನರ ಕಷ್ಟಗಳನು ನಿಮಿಷಮಾತ್ರದಿ ಕಳೆದು ಸಲಹುವ ಶ್ರೇಷ್ಟ ಗುರುಗಳ ದಿವ್ಯವಾದ ದರ್ಶನ ಭಾಗ್ಯಾ ದೊರೆಕಿತಿಂದು 4 ಆದಿವ್ಯಾಧಿಗಳೆಲ್ಲ ಹರಿಸಿ ಅಂಧ ಬಧಿರ ಮೂಕತ್ವ ತೊಲಗಿಸಿ ಬಂದ ದುರಿತಗಳೆಲ್ಲ ಓಡಿಸಿ ಕಂದನಂದದಿ ಸಲಹುವ ಗುರುಗಳಾ5 ದಿನದಿನದೊಳ್ ಇವರ ಮಹಿಮೆ ಅಧಿಕವಾಗುತಿರಲು ಕಂಡು ಹಿಂಡು ಹಿಂಡಾಗಿ ಬರುತಲಿಹರೂ 6 ಹೆಜ್ಜೆ ಹೆಜ್ಜೆಗೆ ವಂದಿಸುತಲೀ ದಂಡೆ ಮುಡಿ ಉರುಳುತಲೀ ಮಂಡೆಬಾಗಿ ನಮಿಸತಲಿ ಬಿಡದೆ ರಾಯರ ಕೊಂಡಾಡುತಲೀ 7 ಜನರೆನರವ ಕೊಡುತಾ ಕೊಡುವ ದಾತಾ 8 ನಿತ್ಯ ನಿತ್ಯದಿ ಬ್ರಾಹ್ಮಣರ ವೇದ ಪುರಾಣ ನಡೆಯುತಿರುವುದು ಕೇಳಿ ಭಕ್ತಿಯಿಂದ ಜನರಾನಂದ ಭರಿತರಾಗುತಿಹರು 9 ಕೇಳುತಿಹುದು ಮಂತ್ರಘೋಷ ಪೇಳುತಿಹ ಪುರಾಣ ರಹಸ್ಯ ನೀಡುತಿಹರು ಗುರೂಪದೇಶ ಎಮಗಾಯಿತಿಂದು ಬಹುಸಂತೋಷ10 ಗುರುಗಳ ಮನಸಾರಾ11 ಬಂದ ಭಕ್ತಬೃಂದಕೆಲ್ಲ ಬೇಡಿ ದೊರಗಳ ನೀಡುತ ಸಲಹಿ ಉಣಿಸಿದಣಿಸಿ ಹರಸಿ ಅವರ ಆನಂದದಿಂದ ಕಳುಹುತಿಹರು 12 ಭಕ್ತರಸವ ಪಾನಮಾಡಿಸಿ ಮುಕ್ತಿ ಮಾರ್ಗಕೆ ದಾರಿ ತೋರಿಸಿ ಕರ್ತೃ ಶ್ರೀಹರಿ ಹೊರತುಯಿಲ್ಲೆಂದು ಸತ್ಯವಾಕ್ಯ ವ್ಯಾಕ್ತಪಡಿಸುತಿಹರು13 ಭಕ್ತಜನರ ಪೊರೆಯಲಿವರ ಸರಿಗಾಣೆನೀಧರೆಯೊಳಗೆ ತಂದೆಯಂದದಿ ಬಿಡದೆ ಕಾಯ್ವರು ಸಾರ್ವಭೌಮ ಶ್ರೀ ರಾಘವೇಂದ್ರರು 14 ಎಷ್ಟು ಜನ್ಮದ ಸುಕೃತದ ಫಲವೋ ಶ್ರೇಷ್ಟಗುರುಗಳ ದರ್ಶನವಾಯಿತು ಕಂಗಳಿಂದಲಿ ಕಂಡು ಮನದ ಕ್ಲೇಶವೆಲ್ಲ ಪರಿಹಾರವಾಯಿತು 15 ಹಿಂದೆ ಪ್ರಹ್ಲಾದರಾಜರೆನಿಸಿ ಬಂದು ಮಂಚಾಲೆಯಾಂಬಿಕೆ ದರ್ಶನ ಕೊಂಡು ಗುರುಗಳ ದರ್ಶನ ಮಾಡಿಸೆಂದು ಭಕ್ತಿಲಿಜನ ಬೇಡುತಿಹರು 16 ದೇಶ ದೇಶದ ಜನರಿಗೆಲ್ಲ ವಿಸ್ತಾರದಿಂದ ಎಲೆಗಳ್ಹಾಕಿ ಭಕ್ಷ್ಯ ಪಾಯಸಾನ್ನಗಳನು ತೃಪ್ತಿಯಿಂದ ಉಣಿಸುತಿಹರು 17 ಶ್ರೀ ರಾಘವೇಂದ್ರಾಯ ನಮಃ ಎಂದರೆ ದುರಿತಗಳೆಲ್ಲವದೂರಮಾಳ್ವರು ಸ್ಮರಣ ಮಾತ್ರದಿ ಸಕಲಪಾಪಗಳೆಲ್ಲ ನಾಶಗೊಳಿಸೋರು18 ಗುರುವಾರ ಪೂಜಾ ಸಂಭ್ರಮದಿಂದ ನಮಗಾಯಿತು ಇಂದು ಮುಂದೆ ನಮಿಸಲು ಭಕ್ತವೃಂದಾ 19 ಜಯ ಜಯತು ಗುರುರಾಜ ಜಯ ಜಯತು ಸುರಭೂಜ ಜಯತು ಶ್ರೀ ರಾಘವೇಂದ್ರಾ ಜಯ ಜಯತು ಜಯ ಜಯತು ಜಯ ಜಯಾ 20
--------------
ರಾಧಾಬಾಯಿ
ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ಪ ಸಾಲದಾಯ್ತೆ ಭಕ್ತರಿತ್ತ ಕಾಲೋಚಿತ ಶಾಲ್ಯನ್ನವುಹಾಲೋಗರ ಭಕ್ಷ್ಯಗಳು ಅ.ಪ. ಆಲದೆಲೆಯ ಮೇಲೆ ಮಲಗಿರೆ ಚೆಲುವ ನಿನ್ನಕಾಲುಚಾಚಲನುವೆ ಇಲ್ಲವೆಬಾಲನಿನ್ನ ನಾಭಿಕಮಲ ಕಾಲಿವಾಲಿದಲ್ಲಿ ಗಂಗೆಜಲವ ಬಿಡುತಲಿರುವೆಯೇನು 1 ಹಸಿವೆ ಬಹಳವಾಗಿರುವದೆ ನಿನ್ನಮ್ಮ ಆಯಶೋದೆ ನಿನಗೆ ಮೊಲೆಯನುಣಿಸಳೆನಿಶಾಚರಿ ಪೂತನಿಯ ಮೊಲೆಯವಿಷವನುಂಡ ಕಾರಣದಲಿ ನೀರಡಿಸುತಲಿರುವೆಯೇನು 2 ಪದದಿಂದಲಿ ಬರುವ ಗಂಗೆಯ ಉದಕದಿಂದಉದರದೊಳಿಹ ಜೀವರಾಶಿಯಮುದದಿಂದುದ್ಧರಿಸಲೆಂದುಪದುಮಾಕ್ಷನೆ ಜುರುಜುರು ನೀ ಚೀಪಲಿರುವೆಯೇನು ಹೇಳು 3 ಹಸುಳ ನಿನ್ನ ಪದದೊಳಿಡುತಿಹ ಭಕ್ತರ ಭಕ್ತಿರಸವ ಸವಿದು ನೋಡುತಿರುವೆಯಾಪೆಸರನೆತ್ತ ಗದುಗಿನ ಶ್ರೀ ವೀರನಾರಾಯಣನೆದಯವ ತೋರಿ ಹೇಳು ಬೇಡುತಿಹೆನು 4
--------------
ವೀರನಾರಾಯಣ
ಬಾರಮ್ಮ ಇಂದಿರಮ್ಮ ಪ ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ ಭಾವಶುದ್ಧಿಯಲಿ ಪೂಜೆಗೈವೆನಮ್ಮ ಓವರಿಗೆ ದಯಮಾಡು ದೇವಗಂಗಾ ಜಲದಿ ಪಾವನ ಪಾದಾಂಬುಜವ ತೊಳೆವೆನಮ್ಮಾ 1 ತವದಿವ್ಯ ಭೂಷಣವ ನವರತ್ನ ಹಾರಗಳ ಸುವಿಲಾಸದಿಂದಿತ್ತು ಮಣಿವೆನಮ್ಮ ಪವಳಪದುಮಾಸನ ವಿಶ್ರಾಂತಳಾಗಮ್ಮ ನವಪುಷ್ಪ ಕುಂಜಗಳ ಧರಿಪೆನಮ್ಮ 2 ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ ಬಗೆಬಗೆಯ ದೀಪಗಳ ನೀಡುವೆನಮ್ಮಾ ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ ನಗುನಗುತ ಸ್ವೀಕರಿಸಿ ಪಾಲಿಸಮ್ಮ3 ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ ದೇವಿ ತವಕರುಣೆಯನು ಬೇಡುತಿಹರು ಶ್ರೀವನಿತೆ ನಾನೀವ ತಾಂಬೂಲವನು ಸವಿದು ಜೀವಕೋಟಿಗೆ ಸುಖವನೀವುದಮ್ಮಾ 4 ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು ಎಡೆಬಿಡದೆ ಹರಿಪಾದ ಸೇವೆಗೈದು ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ | ಇಂದು ಬಿನ್ನೈಸುವೆವು ನಿನ್ನಡಿಗೆ ಪ ಇಂದು ದಿನವಂಭತ್ತು ವದ್ಯದಿ | ವೆಂದು ತೋರುವ ಸುದಿನವೆಮಗೆಅ.ಪ ಕಾಲವನು ಬಣ್ಣಿಸಲು ಭಯವಹುದು | ಏನೆಂದು ಪೇಳಲಿ | ನಾಲಿಗೆಯು ಒಣಗುತ್ತಲಿಹುದು | ಮೇಲೆನಿಪ ಶಾಲ್ಯಾನ್ನವೀದಿನ | ಸಾಲದಾಯಿತು ಹಸಿವುತಾಳದೆ | ಕಾಲಪುರಕೈದುವೆವು ಗುರುವೇ 1 ಹಿಂದೆ ತಂಜಾಊರಿನಲಿ ಕ್ಷಾಮ | ವಂಜಿಸಲು ನಿನಬಳಿ | ಬಂದ ರಾಜನ ಮೊರೆಯ ಕೇಳುತಲಿ | “ಶ್ರೀ” ಬೀಜಮಂತ್ರವ ರಚಿಸಿ ಭಕುತರ | ದನ್ನ ವುಣಿಸಿದೆ ಜನಕೆ ಗುರುವೇ 2 ಧರ್ಮಮಾರ್ಗವೆ ಕಾಣದಂತಾಯ್ತು | ಎಲ್ಲೆಲ್ಲಿ ನೋಡಲ | ಧರ್ಮಕೃತಿಗಳೆ ಕಂಡುಬರುತಿಹವು | ಇಂದು ನಿರ್ಮಲಾತ್ಮಕ ನಿನ್ನ ಬಳಿಯಲಿ ಧರ್ಮಭಿಕ್ಷವ ಬೇಡುತಿಹರೈ3 ಅಖಿಲ ಸಜ್ಜನ ನಿಚಯ ಸಹಿತಾಗಿ ನೀನಿಲ್ಲೆ ನೆಲೆಸು | ಭಕುತರಿಷ್ಟಾರ್ಥವನು ನೀಡುತಲಿ | ಲಕುಮಿಯರಸನ ದಯದಿ ಶರಣರ | ಮುಕುತರಾಗುವ ತೆರದಿ ಹರಸೈ4 ದೇಶದೊಳು ಮಳೆಬೆಳೆಯು ಹುಲುಸಾಗಿ ಸೂಸಿಸಲಿನ್ನು | ದೇಶದೊಳು ಸುಖಶಾಂತಿ ಸ್ಥಾಪಿಸಲಿ | ಶ್ರೀಶಕೇಶವನಲ್ಲಿ ಭಕುತಿಯ | ಲೇಸೆನಿಪ ಧರ್ಮಾರ್ಥ ಮಾರ್ಗದಿ | ದಾಶೆಯಲಿ ಬಿನ್ನಹ ಗುರುವೇ 5
--------------
ಶ್ರೀಶ ಕೇಶವದಾಸರು
ಶ್ರೀದೇವಿ ಪ್ರಿಯ ವಿಠಲ | ಮೋದವಿತ್ತಿವನೀಗೆ ||ಕಾದುಕೋ ನೀ ದಯದಿ | ವೇದಾಂತ ವೇದ್ಯಾ ಪ ಮಾಧವನೆ ಬೇಡುತಿಹ | ಆದರದಿ ತವದಾಸ್ಯಸಾಧಿಸೋ ಇವನಲ್ಲಿ | ತದ್ಧರ್ಮ ಬಿಡದೇ ಅ.ಪ. ದುರಿತ ಗಜ ಸಿಂಹಾ 1 ಪ್ರಾಚೀನ ಕರ್ಮಾಳಿ | ಯೋಚಿಸಲು ಅಳವಲ್ಲವಾಚಾಮ ಗೋಚರನೆ | ಮೋಚ ಕೇಚ್ಛೆಯನೂಯಾಚಿಸುವೆ ಇವಗಾಗಿ | ಖೇಚರೋತ್ತಮ ಸವ್ಯಸಾಚಿ ಸಖನೇ ಹರಿಯೇ | ಸಚ್ಛಿದಾನಂದಾ 2 ಮೃಡ ಕರಿ | ಎಡರ ಪರಿಹರ್ತಾ 3 ನಿತ್ಯ ನಿತ್ಯ ನಿಗಮಾತೀತಭೃತ್ಯರೊಳು ವಾತ್ಸಲ್ಯ | ಪೊತ್ತ ನಗಧೀಶ4 ಬೋವ ನೀನಾಗುತಲಿಭಾವ ಮೈದುನಗೊಲಿದೆ | ದೇವ ದೇವೇಶಾ |ಭಾವುಕರ ಪಾಲಗುರು | ಗೋವಿಂದ ವಿಠ್ಠಲನೆತಾವಕನ ಪೊರೆಯೆಂಬ | ಭಾವ ಸಲಿಸುವುದೋ 5
--------------
ಗುರುಗೋವಿಂದವಿಠಲರು