ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರೇ ಬ್ರಹ್ಮದಾಟವ ಕಂಡಿರೆ ಬ್ರಹ್ಮದಾಟ ಅ-ಖಂಡರಾದ ಮಹಾತ್ಮರಿರಾ ಪ ಬುದ್ಧಿಯನ್ನು ಹೇಳುತಿದೆ ಬುದ್ಧಿಯನ್ನು ಕೇಳುತಿದೆಬುದ್ಧಿಹೀನನೆಂದು ತಾನೆ ಬದ್ಧನಾಗಿ ಕುದಿಯುತಿದೆ 1 ಒಮ್ಮೆ ಸುಖಪಡುತಲಿದೆ ಒಮ್ಮೆ ದುಃಖ ಮಾಡುತಿದೆಒಮ್ಮೆ ಹಾಡಿಪಾಡಿ ನಕ್ಕು ಒಮ್ಮೆ ಕೆಲೆದು ಕೆನೆಯುತಿದೆ 2 ದುಡುಕು ತಾನು ಮಾಡುತಿದೆ ದುಡುಕು ಅವನದೆನ್ನುತಿದೆದುಡುಕು ದುಡುಕು ಎಂದು ತಾನೆ ಬಿಡಿಸಿ ನ್ಯಾಯ ಹೇಳುತಿದೆ3 ಗಂಡ ಹೆಂಡಿರಾಗಿ ಇದೆ ಗಂಡು ಮಗನ ಬೇಡುತಿದೆಗಂಡು ಗಂಡು ಎಂದು ತಾನು ಗಂಡ ದೀಪ ಹೊರುತಲಿದೆ 4 ಬಹಳ ವೇಷ ಹಾಕಿ ಇದೆ ಬಹಳ ಹೆಸರ ಕರೆಸುತಿದೆಬಹಳ ಚೇಷ್ಟೆಯಿಂದ ತಾನು ಬಹಳ ಭೇದವಾಗಿ ಇದೆ 5 ಇಂತು ಬಹಳ ರೂಪವಿದೆ ಇಂತು ತಿಳಿಯಲೊಂದೆ ಇದೆಇಂತು ಚಿದಾನಂದ ಬ್ರಹ್ಮ ಇಂತು ಹೊತ್ತು ಕಳೆಯುತಿದೆ 6
--------------
ಚಿದಾನಂದ ಅವಧೂತರು
ಮಗುವ ತಡೆಯಬಾರದೆ ಮಾನಿನಿಯರುಸುಗುಣ ಚೆನ್ನಿಗನೆಂಬ ಸೊಬಗುಳ್ಳ ಮಗುವ ಪ ನೀರೊಳಗೆ ಪೊಕ್ಕು ತಾ ಬೀರುತಿದೆ ಮಾತುಗಳಧರಣಿಧರ ತಳಕಿಳಿದು ಬಾರದಿದೆಕೊಘೋರ ಪಾತಕವೆಂಬ ಬೇರ ಮೆಲ್ಲುತಲಿದೆಕೊಬಾರಯ್ಯ ಎನೆ ಕೋಪವೇರುತಿಹ ಮಗುವ 1 ಬೇಡುತಿದೆ ದಾನವನು ನೀಡುತಿದೆ ಪಾದವನುರೂಢಿಪಾಲರ ಕಂಡು ಕೊಲ್ಲುತಿದೆಕೊಓಡುತಿದೆ ಮೃಗದೊಡನೆ ಆಡುತಿದೆ ಕಪಿಗಳೊಳುನೋಡಲ್ಕರಿನಾಗರ ಹಾವ ತುಳಿಯುತಿದೆಕೊ 2 ಇತ್ತ ಬಾರೆಂದೆನಲು ಬತ್ತಲೆ ನಿಲ್ಲುತಿದೆಕೊಮತ್ತೆ ತೇಜಿಯನೇರಿ ನಲಿಯುತಿದೆಕೊಹತ್ತೆ ಬಂದವರಿಗೆ ಅರ್ತಿಯನು ನೀಡುತಿಹನಿತ್ಯ ವೈಕುಂಠದಲಿ ನಲಿವ ಮಗುವ 3
--------------
ಕನಕದಾಸ