ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ನಿತ್ಯ ಸಜ್ಜನರ ಒಡಗೂಡು1 ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು 2 ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ ಇರಲಿ | ಬಂಧುಗಳ ಕೂಡಾ | ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು | ಘನಜ್ಞಾನದಲಿ ನಡೆದು ಗುಣವಂತನಾಗು 3 ಧರ್ಮೋಪದೇಶವನೆ ಮಾಡುತಲಿರು ನೀನು | ಪೇರ್ಮೆಯುಳ್ಳವನಾಗು ಪೃಥವಿಯೊಳಗೆ | ನಿರ್ಮತ್ಸರನಾಗು ವೈಷ್ಣವ ಜನರ ಕೂಡ | ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ 4 ಕರ್ಣ ತುಲಸೀ ದಳ | ಬೆರಳಲ್ಲಿ ಪವಿತ್ರದುಂಗರವನಿಟ್ಟು | ಪರಮ ವಿರಕುತಿಯಲಿ ದೇಹವನು ದಂಡಿಸುವ | ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ 5 ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ | ಉದರಕ್ಕೆ ಪೋಗಿ ಚಾಲ್ವಯದಿರು ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ 6 ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು | ಅರ್ಥವನೆ ಬಯಸದಿರು ಬಾಕಿ ಬಸಿದು ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ | ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ 7 ಪರಿಯಂತ | ಮಿತ ಆಹಾರ ಮಿತ ನಿದ್ರಿ ಮಿತ ಮಾತನು | ಸತತ ಮೀರದಲಿರು ಶೋಕಕ್ಕೊಳಗಾಗದಿರು | ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು 8 ಜಾಗರ ಗಾಯನ | ಮರಳೆ ಮರಳೆ ಮಂತ್ರ ಪಠನೆಯಿಂದ | ಧರೆಯೊಳಗೆ ಪುಣ್ಯವಂತನಾಗಿ ಸರ್ವದ | ಇರಬೇಕು ಇಹಪರಕೆ ಲೇಸು ಎನಿಸಿಕೊಂಡು9 ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ | ನಖಶಿಖವಾಗಿ ಆನಂದ ವಿಡಿದೂ | ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ | ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು10 ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ | ಕರ ಮುಗಿದು ತಿಳಿದು | ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ | ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ11
--------------
ವಿಜಯದಾಸ
ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ನಿಂದಾಸ್ತುತಿಗಳು ಎನ್ನ ಕೈಬಿಡುವೆಯೇನೋ ಪ ನಿನ್ನ ನಂಬಿದೆನಯ್ಯ ಭಕ್ತವತ್ಸಲನೆಂದು ಭಾರ ನಿನಗಿರೆ ಅ.ಪ ತಾಪಸಿಯಂತೆ ನಿನ್ನ ವಕ್ಷವನೊದ್ದು ತಾಪವನು ತೋರ್ಪಿದೆನೇನೋ ಗೋಪಿಯಂದದೆ ನಿನ್ನ ಒರಳಿಗೆ ಬಿಗಿದೆನೇ ಭೂಪ ಶಿಶುಪಾಲನಂದದೆ ಬೈದೆನೇ [ಚಾಪವಿಟ್ಟು] ಭೀಷ್ಮನಂದದೆ ಕಾದಿಪೆನೇನೋ ಶ್ರೀಪತಿ ನೀನೆನ್ನ ದೂರ ಮಾಡುವೆಯಲ್ಲ 1 ಜಾರಚೋರನು ನೀನೆಂದು ಯಶೋದಗೆ ದೂರು ಹೇಳದೆನೇ ಕೌರವನಂತೆ ಕಂಬಕೆ ಕಟ್ಟಿರೆಂದೆನೆ ಸಾರಿದೆನೇನೋ ಸತ್ರಾಜಿತನಂತೆ ಚಾರುರತ್ನವ ಕದ್ದ ಅಪರಾಧಿ ನೀನೆಂದು ಆ ರುಕ್ಮನಂತೆ ನಾರಿಚೋರನೆಂದೆನೆ 2 ಪುರುಹೂತನಂತೆ ನಾನು ಮಳೆಯಕರೆದು ಗಿರಿಯನ್ನು ಹೊರಿಸಿದೆನೇ ಧರಣಿಯ ಬಲಿ[ಯಿಂದ ಬೇಡುತಲಿರುವಾಗ ವರಮುನಿಯಂತೆ ಕಿಂಡಿಯ ಮುಚ್ಚಿದೆನೆ] ನರನಂತೆ ರಥವ ನಡಸೆಂದು ಹೇಳಿದೆನೇನೋ ಉರಗನಂತೆ ಕಟ್ಟಿದೆನೇ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ ಬೇಡುತಿರ್ಪೆವು ಪಸಾರಸಾಕ್ಷಿಯೆ ಸರ್ಪವೇಣಿಯೆನಾರಿಯೆ ವೈಯ್ಯಾರಿಯೆ ಶ್ರೀಹರಿ ಸಹಿತದಿ ಅ.ಪಯಜÕನಾಮಕ ಹರಿಯ ರಾಣಿಯಜÕ ಇಂದಿರಾಹಿರಣ್ಯಹರಿಣಿಸುಜÕರಾದ ಜನರ ಪೊರೆವೆಸತ್ಯಾಶ್ರಿ ನಿತ್ಯಾಶ್ರೀ ಸುಗಂಧಿ ಸುಂದರಿ 1ಪ್ರಾಜÕಸುಖಾ ಸುಗಂಧಿ ಸುಂದರಿವಿದ್ಯಾ ಶ್ರೀ ಸುಶೀಲದೇವಿಸುಜÕರಾದ ಜನರೊಳಿರಿಸುತಕ್ಷಣ ಈಕ್ಷಿಸು ಸುಲಕ್ಷಣ ದೇವಿಯೆ 2ಶಾಂತಿಮಾಯೆಕೃತಿಯೆಇಂದಿರೆಶಾಂತಚಿತ್ತದಿ ಧ್ಯಾನಿಸುವರಾ ನಿ-ರಂತರದಿ ಪೊರೆವೆ ಜಯಮಂಗಳೆ ಉತ್ತುಂಗಳೆ ಶೃಂಗಾರ ರೂಪಳೆ 3ನಗುತ ನಗುತ ಬಾರೆ ಬೇಗನಗಧರನ ಸನ್ನಿಧಿಗೆ ಈಗಖಗವಾಹನನ ಮಡದಿ ನಿನ್ನಅಡಿಗಳ ಪೂಜಿಪೆ ಸಡಗರದಿಂದಲಿ 4ಪರಿಮಳೋದಕದಿಂದ ನಿನ್ನಚರಣಗಳನು ತೊಳೆದು ದಿವ್ಯವರಮಣಿಯ ಪೀಠದಲಿ ಕೂಡಿಸಿಪರಿಪರಿ ಪುಷ್ಪದಿ ಪೂಜಿಸಿ ನಲಿಯುವೆ 5ಹರಿಯರಾಣಿ ನಿನಗೆ ದಿವ್ಯಹರಿದ್ರಾಕುಂಕುಮಾಕ್ಷತೆಗಳಿಂದವರಕಲ್ಹಾರಪೂವ್ಗಳಿಂದಲಿಸುರಗಿ ಶಾವಂತಿಗಿ ತುರುಬಿಗೆ ಮುಡಿಸುವೆ 6ಎಣ್ಣೂರಿಗೆ ಹೋಳಿಗೆಯು ಕಡಬುಸಣ್ಣನಕ್ಕಿ ಶಾಲ್ಯನ್ನಗಳುಇನ್ನು ಬಗೆ ಬಗೆಯ ಭಕ್ಷಂಗಳನೂಸ್ವರ್ಣ ಪಾತ್ರೆಗಳಲ್ಲಿ ಇರಿಸುತ ನಲಿವರು 7ಕ್ಷೀರಘೃತದಧ್ಯಾನ್ನ ಮಂಡಿಗೆಶಾವಿಗೆ ಪರಮಾನ್ನಗಳನುಶ್ರೀರಮೇಶನಿಗರ್ಪಿಸೆನುತಬೇಡುವೆ ಪಾಡುವೆ ಕೊಂಡಾಡುತ ನಲಿಯುವೆ 8ಮುದ್ದು ಮಹಾಲಕ್ಷ್ಮಿ ನಿನಗೆಇಡಲಿ ದೋಸೆಗಳ ಸಹಿತಪದ್ಮನಾಭನಿಗರ್ಪಿಸೆನುತಶ್ರದ್ಧೆಯಿಂ ನಮಿಸುತ್ತಾ ಬೇಡುತಲಿರುವರು 9ಗಂಗಾಜನಕನರಸಿ ನಿನಗೆಮಂಗಳಾರುತಿಗಳ ಮಾಡಿಹಿಂಗಿಸುವೆ ಪಾಪಗಳೆನುತಾವಂದಿಸಿ ಸಾಷ್ಟಾಂಗದಿಂ ಚಂದದಿ ಪ್ರಾರ್ಥಿಪೆ 10ಕರ್ಪೂರದ ಅಡಿಕೆ ವೀಳ್ಯಅರ್ಪಿಸುತಲಿ ನಿನ್ನ ಪೂಜಿಸಿಮುಪ್ಪುರಾಂತಕ ಕಮಲನಾಭವಿಠ್ಠಲ ವಿಠ್ಠಲ ವಿಠ್ಠಲನರಸಿಯೆ 11
--------------
ನಿಡಗುರುಕಿ ಜೀವೂಬಾಯಿ