ಒಟ್ಟು 8 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯರ ತೂಗೋ ಬಾಗೋ ಪರಿಪರಿಯ ರತ್ನಗಳ ಪೆಚ್ಚೇಮುತ್ತುಗಳ ಹಚ್ಚೆ ತೊಟ್ಟಿಲು ಕಟ್ಟೇವ | ಮೆಟ್ಟಲು ಮಾಡೇದ ಮಟ್ಟಲು ಮಾಡೇದ ತರತರದ ಹೂಗಳು ಸುತ್ತ | ತರ ತರದ ಹೂಗಳು ಸುತ್ತ ಸುವಾಸನೆ ಮತ್ತ | ತುಂಬ ಇಡಗಿತ್ತ ಪರಿಮಳಾರ್ಯರ ಬಳಿ ಸಾಗೇದ 1 ವರಮಧ್ವಶಾಸ್ತ್ರ ವಿಸ್ತರಿಸಿ | ವರಮಧ್ವಶಾಸ್ತ್ರ ವಿಸ್ತರಿಸಿ ಜರಿದ ಮಾಯ್ಗಳಾಗ ಮೆರೆದ ಭೂಮಿಯೊಳಗ ಮೆರದ ಭೂಮಿಯೊಳಗ | ತರತಮ ಸ್ಥಾಪಿಸುತ್ತ | ತರತಮ ಸ್ಥಾಪಿಸುತ್ತ ಮರುತ ನಿದ್ಧಾಂತ ತ್ವರಿತ ಗುಣವಂತ ಭರದಿ ಗುರು ಚರಣಕೆ ಬಾಗೋ2 ನಮಿಸುತಲಿ ಸಾಗೋನೀ ಬೇಗ | ನಮಿಸುತಲಿ ಸಾಗೋನೀ ಬೇಗ | ವರವ ಬೇಡೀಗ ವರವ ಬೇಡೀಗ ನಾಮಾಮೃತವ ಸವಿಯುತ್ತ | ನಾಮಾಮೃತವ ಸವಿಯುತ್ತ ಕುಣಿಯೋ ಮತ್ತೆ | ಮಣಿಯ ಬಾಗುತ್ತ ಬಾಗುತ್ತ | ಮೆಣಿಯೆ ಬಾಗುತ್ತ ಶಾಮಸುಂದರನ ಪ್ರಿಯಗೀಗ 3
--------------
ಶಾಮಸುಂದರ ವಿಠಲ
ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ಪ. ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು 1 ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು. ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು 2 ರುಧಿರ ಪಾನವ ಮಾಡಿತು ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು 3 ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು ತರಳನೊಬ್ಬನ ಕೂಡೆ ತಾನೂ ಆಟವನಾಡಿತು ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು 4 ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು 5
--------------
ಅಂಬಾಬಾಯಿ
ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ ಪ ನೀರೊಳಗೆ ಮನೆಯು ಮಾಡಿಓಡ್ಯಾಡೀ | ಕೋರೆಯನೆ ಮಸೆದು ಭೂಮಿಗೆ ಕಡೆದಾಡೀ ಮೋರೆಯನು ಮುಚ್ಚಿಕೈಕಾಲು ತೂಗ್ಯಾಡೀ ಘೋರ ರೂಪವ ಧರಿಸಿ ಬಲಿದಾನವನೆ ಬೇಡೀ 1 ಕೊಡಲಿಯನು ಪಿಡಿದು ಮಾತೆಯ ಶಿರವನೇ ಒಡೆದೂ ಮಡದಿಗೋಸ್ಕರ ದಶಶಿರನ ಶಿರವತರಿದೂ ತುಡುಗ ತನದಿ ಮೊಸರು ಗಡಿಗೆಗಳ ಒಡೆದೂ ಮಡದಿಯರ ವ್ರತಭಂಗ ಮಾಡಿದೆಯೊ ಪಿಡಿದೂ 2 ಹಯವನೇರಿದ ಹರಿಯು ಬಹುಜನರ ಪೊರೆಯೇ ಚೆಲುವ ಮೂರುತಿ ತೊಟ್ಟಿಲೊಳು ಮುದ್ದು ಸುರಿಯೇ ಪರಮ ಪುರುಷ ಸದ್ಭಕ್ತರ ಸಿರಿಯೇ ಪವಡಿಸೋ ನರಸಿಂಹ ವಿಠಲಾ ಧೊರಿಯೇ ಲಾಲೀ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಶ್ರೀ ಮುದ್ದುಮೋಹನದಾಸರು ಮುದದಿ ಪಾಲಿಸೊ | ಮುದ್ದು ಮೋಹನರಾಯಾ | ಮದ್ಗುರುವರ ಪ್ರೀಯಾ ಪ ಮಧ್ವೇಶನ ಪದ ಪದುಮ ಪೂಜಿಪ ಮಧುಪಾ ಪರಿಹರಿಸೆಲೊ ತಾಪಾ ಅ.ಪ. ಜನುಮ ಪೊತ್ತೆ ನೀ ದೊಡ್ಡ ಬಳ್ಳಾಪುರದೀ | ಅನುನಯದಲಿ ಓದೀ |ಗುಣವಂತೆಯು ಕನ್ಯೆಯ ತಾ ಸ್ವೀಕರಿಸೀ | ಕನ್ಯಾಸೆರೆ ಬಿಡಿಸೀ |ವನಜನಾಭನನು ಕಾಣಲು ಮನಮಾಡೀ | ಶ್ರೀ ವರರನು ಬೇಡೀ |ಗಾನ ಲೋಲ ಮುದ್ದು ಮೋಹನ ವಿಠ್ಠಲನಾ ಘನನಾಮ ಪೊತ್ತೆ ನಿನ್ನಾ 1 ಅಂಗಜಗಳು ಕದಲರ್ಧಾಂಗಿಯನಾಳೀ | ಯಾತ್ರೆಗೆ ಮನತಾಳೀ |ಗಂಗೆಯಾತ್ರೆ ಮೂರೊಂದು ಬಾರಿ ಮಾಡೀ | ಉಡುಪಿಗೆ ಬಲುಬಾರೀ | ತುಂಗ ಮಹಿಮ ನಮ್ಮ ವೆಂಕಟ ನಿಲಯನ್ನಾ | ತುಂಗೆ ತೀರಗನನ್ನಾ |ಭಂಗವಿಲ್ಲದಾನೇಕ ಬಾರಿ ನೋಡೀ | ಮಂಗಳಾಂಗನ ಪಾಡೀ 2 ಸಿರಿ ವಿಜಯ ವಿಟ್ಠಲನ ನಿಜಪುರದಲ್ಲೀ | ಸಂಸ್ಥಾಪಿಸುತಲ್ಲೀ |ಪರಮ ಶಿಷ್ಯರಿಗುಪದೇಶಗಳನ್ನಾ | ವಿರಚಿಸಿದಿಯೊ ಘನ್ನಾ |ಪರಿಸರ ಮತ ಸರ್ವೋತ್ತಮವೆಂದೂ | ಸಾರಿದೆ ದಯಾಸಿಂಧೂ 3 ಸಿರಿ ತಂದೆ ಮುದ್ದು ಮೋಹನರಾ | ಉದ್ಧರಿಸಿದ ಧೀರಾ |ಮಧ್ವ ಮತಾಗಮ ಸದ್ವನದಿ ವಿಹಾರ | ಬುಧಜನರಘ ಹರಾ |ವಿದ್ವದಾರ್ಯ ಮುದ್ದು ಮೋಹನ ರಾಯ | ಮುದ ಬೇಡುವೆ ಜೀಯ 4 ಕೃತನಿತ್ಯಾಹ್ನಿಕನಾಗಿ ತೆವಳಿ ಬಂದೂ | ಚಕ್ರದಿ ಕುಳಿತಂದೂ |ವತ್ಸರ ವಿಳಂಬಿ ವದ್ಯ ಕಾರ್ತೀಕದೀ | ಚತುರ್ದಶಿ ನಡುದಿನದಿ|ಅತುಳ ಮಹಿಮ ಗುರುಗೋವಿಂದ ವಿಠಲನ್ನ | ಹೃದಯಾಬ್ಜದಿ ಪವನಾ | ಆತುಮಾಂತರದಿ ಕಾಣುತಲವನಾ | ಕಿತ್ತೊಗೆದೆಯೊ ತನುವಾ 5
--------------
ಗುರುಗೋವಿಂದವಿಠಲರು
ಶ್ರೀಗುರುವಿಟ್ಟಂತಿರಿರೋ ವ್ಯರ್ಥಸ್ಯ ಭ್ರಮೆಗೊಳ್ಳಬೇಡೀ ಪ ಕೊಟ್ಟರೂಟವ ಮಾಡಿ ಕೊಡದಿದ್ದರವನ ಪಾಡಿ ಸಿಟ್ಟಾಗಿ ಶಿವನ ಬೈಬೇಡೀ 1 ಸಂತೆಯ ಕೂಟವಿದು ಸಟೆಯ ಸಂಸಾರವಿದು ಅಂತರಾತ್ಮನ ಧ್ಯಾನಿಸುವನೇ ಸಾಧು 2 ಯಾರಿಗೆ ಯಾರಿಲ್ಲಾ ನರದೇಹ ಸ್ಥಿರವಲ್ಲಾ ವಸ್ತು ಮೀರಿದ ಬಳಿಕ ಇರಲಿಲ್ಲಾ 3 ಒಂದೇ ಜನ್ಮದ ನಂಟು ಸುಖದುಃಖಕ್ಕೋಂದೇ ಗಂಟು ಸಂದೇಹವಿಲ್ಲ ಕೊಟ್ಟ ಋಣ ಉಂಟು 4 ವರಮಂಗೀಶಾತ್ಮಾರಾಮಾ ಇರಿಸಿದಂತಿರುವ ನೇಮಾ ಗುರು ವಿಮಲಾನಂದ ಸುಖಧಾಮಾ 5
--------------
ಭಟಕಳ ಅಪ್ಪಯ್ಯ
ಸಂಸಾರವನು ಮಾಡಿ ಸಕಲ ಜನರೂ ಪ ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ. ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ 1 ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ 2 ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ 3 ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ 4 ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ 5
--------------
ವ್ಯಾಸವಿಠ್ಠಲರು