ಬಂದು ನಿಲ್ಲೋ ರಮಾಪತೆ ಬಂದು ನಿಲ್ಲೋ ||
ಬಂದು ನಿಲ್ಲೊ ನಿನಗೊಂದಿಸುವೆ ಗೋ |
ವಿಂದ ಗೋವಳ ರಾಯ ಸಂದೇಹ ಮಾಡದೆ ಪ
ಸದೋಷಿಗ ನಾನು ಸದಾ ನಿರ್ಮಲ ನೀನು ||
ಪಾದೋಪಾದಿಗೆ ಬೇಡಿಸುವದುಚಿತವಲ್ಲ 1
ಮನದೊಳು ಪೊಳದು ಚಿಂತನೆ ನೆಲೆಯಾಗಿ ||
ಘನಮಹಿಮನೆ ಮಧ್ವಮುನಿ ಮನಮಂದಿರ 2
ಕಡಗೋಲ ನೇಣ ಪಿಡಿದ ಪರಮಾನಂತ ||ಉಡುಪಿನ ಶ್ರೀಕೃಷ್ಣ ವಿಜಯವಿಠ್ಠಲರೇಯಾ 3