ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘಟನೆಯನು ಮಾಡಿಸೈ ಘಟೋತ್ಕಚ ಜನಕಾ ಪ ಘಟದೊಳಗೆ ಸುಧೆಯಿಟ್ಟು ಮದ್ಯವೆಂತೆಂದು ಪೇಳಿದರೆ ಮಧ್ವದೂತರು ಒಡಂಬಡುವರೇ ಮಧ್ಯಮಾಧಮರಿಗಿದುಅಲ್ಲದೇ 1 ಪರಮ ಪುರುಷನೆ ಕೇಳು ಪರಮತದ ಮತಿಯ ಕೆಡಿಸು ನಿನ್ನ ಪ್ರೇಮಾಖ್ಯ ಕರುಣಕವಚ ತೊಡಿಸು ಜನುಮ ಜನುಮಕ್ಕೆ ಇದೇ ಬೇಡಿಸು 2 ಕಾಯನೇ ನಾನೆಂಬಂಥ ಅಜ್ಞಾನ ಪಟು ಬಿಡಿಸೊಸುಜ್ಞಾನವಿತ್ತು ಸಲಹೊ ತಂದೆವರದಗೋಪಾಲವಿಠ್ಠಲನಪ್ರೀಯಾ 3
--------------
ತಂದೆವರದಗೋಪಾಲವಿಠಲರು
ಬಂದು ನಿಲ್ಲೋ ರಮಾಪತೆ ಬಂದು ನಿಲ್ಲೋ || ಬಂದು ನಿಲ್ಲೊ ನಿನಗೊಂದಿಸುವೆ ಗೋ | ವಿಂದ ಗೋವಳ ರಾಯ ಸಂದೇಹ ಮಾಡದೆ ಪ ಸದೋಷಿಗ ನಾನು ಸದಾ ನಿರ್ಮಲ ನೀನು || ಪಾದೋಪಾದಿಗೆ ಬೇಡಿಸುವದುಚಿತವಲ್ಲ 1 ಮನದೊಳು ಪೊಳದು ಚಿಂತನೆ ನೆಲೆಯಾಗಿ || ಘನಮಹಿಮನೆ ಮಧ್ವಮುನಿ ಮನಮಂದಿರ 2 ಕಡಗೋಲ ನೇಣ ಪಿಡಿದ ಪರಮಾನಂತ ||ಉಡುಪಿನ ಶ್ರೀಕೃಷ್ಣ ವಿಜಯವಿಠ್ಠಲರೇಯಾ 3
--------------
ವಿಜಯದಾಸ
ರಾಮನ ನೋಡ ಬನ್ನಿರೆ ಭಾಮೆಯರೆಲ್ಲ ಪ ರಾಮನ ನೀವು ನೋಡ ಬನ್ನಿರೆ ಕಾಮಿತಾರ್ಥವಬೇಡಿಸುಖಿಸಿರೆ ಸ್ವಾಮಿ ನೀನೆ ಗತಿ ಎಂದರೆ ಕಾಮಿತಾರ್ಥವನೀವ ದೊರೆಯನ ಅ.ಪ ಧೂರ್ತ ರಾವಣನ Wಟ್ಟಿಸಿ ಖ್ಯಾತಿಯಿಂದಲಿ ರಥವನೇರಿ ಸೀತೆಸಹಿತ ಬರುವನಂತೆ 1 ಅಯೋಧಾü್ಯಪುರದಿ ನಿಂದು ಮರೆವ ಸಿಂಹಾಸನವನೇರುತ ಹರುಷದಲಿ ತಾ ಕೂಡುವನಂತೆ 2 ಮಾನನಿಧಿ ಪ್ರಾಣನಾಥವಿಠಲ ಸಾನುರಾಗದಿ ಭಜಿಸುವರಸುರ ಧೇನುವಂದದಿ ಸಲಹುವನು ಮಾನಿನಿಯರು ಮನ್ನಿಸುತ ಬೇಗ 3
--------------
ಬಾಗೇಪಲ್ಲಿ ಶೇಷದಾಸರು
ಶ್ರೀಹರಿ ಸಂಕೀರ್ತನೆ ಪತಿತ ಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ ಪ ಸತಿಪತಿ ನುತ ಸಾರ್ವಭೌಮ ಸು ವೃತಾ ಚರಣ ಘನ ರಾಜಿತ ಸುಂದರ ಅ.ಪ ಧೀರನಮೋ ಸುವಿಚಾರ ನಮೋ ಯದುವೀರ ನಮೋ ರಜದೂರ ನಮೊ ಮಾರನಮೋ ಗಂಭೀರ ನಮೊ ಭವಹಾರ ನಮೋ ದಧಿ ಚೋರ ನಮೊ 1 ಜನನ ಮರಣ ಜರ ರಹಿತ ನಮೋ ಪಾವನ ಪದ ಪಂಕೇರುಹ ನಯನ ನಮೋ ಮನ ವಚನಕೆ ಸಿಗದ ನಿಮಿಷ ಪತಿ ನಿನ್ನನೆ ಬೇಡುವೆ ಪೊರೆಯೆನುತ ಕರಮುಗಿದು 2 ಶೌರಿ ಶುಭ ನಾಮ ಭಕ್ತ ಜನ ಹಿತಕಾರಿ ಸುತ್ರಾಮ ಅನುಜ ನಿ ಸ್ಸೀಮ ಮಹಿಮ ಶಿರಿಧಾಮ ಅನಘ ನಮೊ 3 ಅನ್ಯನೆ ನಾ ನಿನ್ನಗೆ ದೇವ ಸಾಮಾನ್ಯನೆ ಅಭಿಮನ್ಯುನ ಮಾವಾ ಇನ್ನೆನೆನ್ನದೆ ನಿನ್ನಿಂ ಲಭಿಸಿದ ನುಣ್ಣುವ ಯನ್ನನು ಮನ್ನಿಸದಿರುವರೆ 4 ಹಿರಿಯರ ದಯವಿರುವುದು ಸರೆ ನೀ ಪೊರೆವಿ ಬಿಡದೆ ಯಂಬೋದು ಖರೆ ಸ್ವರಸ್ವರ ಘಸಿದಾಲ್ಪರಿದ ಮೇಲೆ ಸುಧೆ ಗರಿವರ ತೆರ ಚರಿಪುದು ಧರವೆ 5 ದಾಸರ ಪೊರೆಯಲು ದಾಶರಥೇ ಅಮಿತ ಮತೆ ಶ್ರೀಶಾನಿಮಿತ್ಯ ಬಂಧುಯೆನಿಸಿ ಉದಾಸಿಸೆ ಆಗಮ ರಾಶಿಗೆ ಶೋಭವೆ 6 ಘಾಸಿಗೊಳಿಸುವರೆ ಸೈಸೈಸೈ ನೀ ನೀಶನಾದದಕೆ ಫಲವೇನೈ ಪೋಷಕ ನೀನೆಂದಾಸಿಸಿದವರನು ನೀ ಸಲಹದೆ ಬರೆ ಸೋಸಿಲಿ ಮೆರೆವರೆ 7 ಧೃವನ ಪೊರೆದ ಬಲುವೇನಾಯ್ತೈ ಉದ್ಧವಗೆ ವಲಿದ ದಯ ಏಲ್ಹೊಯತೈ ಬವರದೊಳಗೆ ಪಾಂಡವರ ಕಾಯ್ದ ಮತಿ ಸವಿಯುತೆ ಪವನಪಸವಿದ ಸತತ ಸುಖ 8 ಘನ್ನ ಕರುಣಿ ನೀ ನಹುದೇನೊ ಆಪನ್ನ ರಾಪ್ತ ನೀ ನಿಜವೇನೋ ಸೊನ್ನೊಡಲಾಂಡಗ ನೀನಾದರೆ ಗತ ಮನ್ಯುನಾಗಿ ಜವ ನಿನ್ನನೆ ತೋರಿಸು 9 ತಂದಿನ ಪಾಲಿಸಿ ಮಗನನ್ನು ಬೇಕೆಂದು ಕೊಂದ ಕೃಷ್ಣನೆ ನೀನು ತಂದು ತೋರೊತವ ಸುಂದರ ಪದಯುಗ10 ಕಂದುಗೊರಳನುತ ಪೊರೆಯೆಂದು ಬಲು ವಂದಿಸಿದರು ತ್ವರ ನೀ ಬಂದು ಕಂದನ ಕರದ್ಯಾಕೆಂದು ಕೇಳ್ದದಕೆ ನೊಂದು ಬಿಡಿ ನುಡಿ ಗಳೆಂದೆನು ಕ್ಷಮಿಸೈ 11 ಬಲು ಮಂದಿನ ಸಲಹಿದಿ ನೀನು ಅವರೊಳಗೆ ಓರ್ವನಾನಲ್ಲೇನೊ ನೆಲೆಗಾಣದೆ ತವ ಜಲಜ ಪಾದ ಹಂಬಲಿಸುವರರ್ಥವ ಸಲಿಸದೆ ಬಿಡುವರೆ 12 ಬೇಡಿಕೊಂಬುವದೊಂದೆ ಬಲ್ಲೆ ಅದುಕೂಡಾ ತಿಳಿದು ನೋಡಲು ಸುಳ್ಳೆ ಬೇಡಿ ಬೇಡಿಸುವಿ ಮಾಡಿ ಮಾಡಿಸುವಿ ರೂಢಿಪತಿ ನೀನಾಡಿದ ನಾಡುವೆ 13 ನಾಗಶಯನ ನೀ ಬದುಕಿರಲು ಎನಗಾಗ ಬೇಕೆ ಕಲಬಾಧೆಗಳು ಸಾಗರಾಂಬರಪ ಸುತನಿಗೆ ಪುರ ಜನ ಬಾಗದೆ ಅಣಕಿಸಿಧಾಂಗಲ್ಲವೆ ಇದು 14 ಕರೆದರೆ ಬರುವೆನು ನಿನ್ನಡಿಗೆ ಧಿ ಕ್ಕರಿಸಲು ಮರುಗುವೆ ಮನದಾಗೆ ನಿರ್ವಿಣ್ಯನು ಪರತಂತ್ರನು ನಾನಿ ನ್ನೆರಳಲ್ಲವೆ ಮದ್ಗುರುವರ ವರದಾ 15 ಕಲ್ಲಿನ ರೂಪದಿ ಪೂಜಿಯನು ಗೊಳ್ಳುವ ಬಗೆ ನಾನೊಲ್ಲೆ ನಿನ್ನ ಶಿರಿ ನಲ್ಲೆ ಸಹಿತ ಬಂದು ನಿಲ್ಲೊ ಅರ್ಚಿಸುವೆ 16 ಕಣ್ಣಲಿ ತವದರ್ಶನ ಅಮೃತ ಭವ ತ್ರಾತಾ ಘನ ಕರುಣಿ ಬಾರೆನೆ ಬರುವೆನು ಎಂದೆನ್ನುವ ಬುಧ ನುಡಿ ನನ್ನಿಯೆನ್ನುವೆನು 17 ಭಿಡೆಯ ಬಾರದೆ ಬಲು ಘನ್ನಾ ನಾನುಡಿಯು ವಡ್ಡಿ ಬೇಡಿದರನ್ನ ಕೊಡಗೈಯವನಿಗೆ ಲೋಭವು ಎಲ್ಲಂದಡರಿತು ನುಡಿ ನುಡಿ ಕಡಲಜಳೊಡೆಯನೆ18 ನ್ಯಾಯಕೆ ಅಧಿಪ ನೀನೆ ಜೀಯಾ ಅನ್ಯಾಯಕೆ ಪೇಳುವರಾರೈಯ್ಯ ಮಾಯವೆಂಬೊ ಘನ ಘಾಯವುಎನ್ನನು ನೋಯಿಸುತಿದೆ ಜವಮಾಯಿ ಸುಭೀಷಿಜನೆ 19 ವರುಣಗೆ ವಾರಿಯು ನೀನಯ್ಯ ದಿನ ಕರನಿಗೆ ಮಿತ್ರನು ನೀನಯ್ಯ ಸುರಪಗೆ ಇಂದ್ರನು ಉರಗಕೆ ಶೇಷನು ಸರ್ವವು ನೀನೆಂದರಿತೆನು ಕರುಣಿಸು 20 ಹನುಮಗೆ ಪ್ರಾಣ ಮೂರೊಂದು ಆನನನಿಗೆ ವೇಧನು ನೀನಂದು ಮನಸಿಗೆ ನೀ ಮನ ಜೀವಕೆ ಜೀವನ ಎನುತ ಅರಿದು ನಮೊ ಎನ್ನುವೆ ಕರಮುಗಿದು 21 ಮೂಗಣ್ಣಗೆ ರುದ್ರನು ನೀನೆಧರೆ ಆಗಸ ಸಾಗರ ಧಾರಕನೆ ಶ್ರೀ ಗುರು ರಘುಪತಿ ರಾಗ ಪಾತ್ರ ಭವ ನೀಗದೆ ಬಿಡುವರೆ 22 ಪದುಮನಾಭ ನಿನ್ನನು ಕುರಿತು ನಾ ನೊದರುವ ನುಡಿಗಳು ಚಿತ್ರವತು ವಿಧಿಪತ್ರವನಾಂತು ನಿನ್ನ ಪಾದ ವದಗಿಸದಲೆ ಬರೆ ಪದವೆನಿಸಿದವೆ 23 ಸ್ತವನಕೆ ವಲಿಯದೆ ಇರೆ ನಮನ ಗೈಯುವೆ ಇಕೊ ನೋಡೆ ದಾಸ್ಯತನಾ ಅವನಿಪ ಸರ್ವಕೆ ವಲಿಯದೆ ಇರೆ ಬೈಯುವೆ ಬಡಿಯುವೆ ಸಿಕ್ಕರೆ ಸೆರೆ ಪಿಡಿಯುವೆ 24 ಚೋರನೆ ನೀ ನಡಗಿದೆಯಾಕೆ ಸ್ಮøತಿ ದೂರನೆ ಎನ್ನನು ಮರಿವದೇಕೆ ಆರು ನಿನಗೆ ವೈಯಾರವು ಈ ಪರಿ ಕಾರುಣ್ಯದಿ ಕಲಿಸಿದರೋ ಕರಿವರದಾ 25 ಮರೆದಿಯ ನೀ ಕನಿಕರ ಬಡುವ ಸ್ಥಿತಿ ನೀ ಜರದರೆ ನಮಗಿನ್ನೇನು ಗತಿ ಪರಿಪರಿ ವರಲು ವರಲಿ ದಯಮಾಡದೆ ಇರವದು ನಿನ್ನಗೆ ಮರಿಯಾದಿಯೆ ಹರಿ 26 ರೂಪ ತೋರಲೆನ್ನುವಿಯಾ ಆಹದೆ ಪೇಳಲೊ ಹೇ ವಿಗತಾಗಭಯ ಪಾಪಬಾರದೆ ಈ ಪರಿಯನ್ನನು ನೀ ಪಿಡಿಸೆ ಗತತಾಪ ಶ್ರೀಪ ಹರಿ 27 ಸುರತನು ಸಾಕದೆ ಬಿಟ್ಟವಗೆ ತನ್ನ ಸತಿಯಳ ಖತಿಯೊಳಗಿಟ್ಟವಗೆ ಕ್ಷಿತಿಯರು ಏನೆನ್ನುವರು ಮನದೊಳಗೆ ಪತಿ ಯೋಚಿಸಿ ಹಿತಗೈಯನ್ನೊಳು 28 ಶಿರಿಗೋವಿಂದ ವಿಠಲ ಪಾಹಿ ಗುರುವರ ರಘುಪತಿನುತ ಪದ ಪಾಹಿ ಬರೆ ಮಾತಲ್ಲವೊ ತ್ವರ ತವ ಪಾದ ಸಿರಿ ಸುರರಾಣೆ 29
--------------
ಅಸ್ಕಿಹಾಳ ಗೋವಿಂದ
ಸುಳಾದಿ ತಾಳ-ಝಂಪೆ ನೋಡುವರೆ ನೀರದಶ್ಯಾಮಸುಂದರ ಮೂರ್ತಿ ಪಾಡುವರ ಪರಮಪಾವನ್ನ ಕೀರ್ತಿ ಕೂಡುವರೆ ಕೇವಲಾನಂದ ಚಿನ್ಮಯಗಾತ್ರ ನೀಡುವರೆ ನಿಖಿಳಲೋಕೈಕಪಾತ್ರ ನೋಡಿ ನಮಿಸುವರುಂಟು ಪಾಡಿಹಿಗ್ಗುವರೂಟ ಕೂಡಿ ಸುಖಿಸುವರುಂಟು ನೀಡಿ ನಲಿವವರುಂಟು ನೋಡಿಸುತ ಪಾಡಿಸುತ ಕೂಡಿಸುತ ಬೇಡಿಸುತ ನಾಡದೈವಂಗಳ ಕೊಂಡಾಡಿಸದಲೆ ಬೇಡಿದಿಷ್ಟವ ಕೊಡುತ ಶ್ರೀದವಿಠಲ ದಯ - ಮಾಡಿ ನಮ್ಮನು ಪೊರೆವ ರೂಢಿಗೊಡೆಯ ನಾಡದೈವಂಗಳ ಕೊಂಡಾಡಿಸದಲೆ 1 ತಾಳ-ಮಟ್ಟ ಸಕಲ ಶ್ರುತಿನಿಕರಸಾರಹೋ ಶುಕಮಹಾಮುನೀಂದ್ರ ಸನ್ನುತ ಪ್ರಕಟ ಮಾಡಲ್ಯಾಕೆ ನಿನ್ನನು ಪರಮಪುರುಷ ಪ್ರಕಟಮಾಡಲ್ಯಾಕೆ ನಿನ್ನನು ಭಕ್ತವತ್ಸಲನೆಂಬೆನಲ್ಲದೆ ಮುಕುತವಂದ್ಯ ಶ್ರೀದವಿಠಲ ಯುಕುತಾಯುಕುತವೊಂದನರಿಯದೆ ಪ್ರಕಟಮಾಡಲ್ಯಾಕೆ ನಿನ್ನನು 2 ತಾಳ-ತ್ರಿವಿಡಿ ಆಯನುಭವ ಭಯ ಲಯವರ್ಜಿತ ನಯನೋತ್ಸಹಕಾರಕ ತಾರಕ ಜಯಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾÀಟ ಸಯವೇ ಸೈ ಶ್ರೀದವಿಠಲ ನಿ ನ್ನಯ ಚರಣಕೆ ನಮಿಸುವೆ ನಮಿಸುವೆ ಜಯ ಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾಟ 3 ತಾಳ-ಅಟ ಬಾರೋ ಬಾರೋ ಭವದೂರ ದೀನಜನ ಭಾರ ನಿನ್ನದಯ್ಯಾ ಅಯ್ಯಯ್ಯಾ ಸಾರಿದೆನೊ ನಾ ನಿನ್ನ ಸಾರಿದೆನೊ ನಿನ್ನ 4 ತಾಳ-ಆದಿ ಶ್ರೀರಮಣ ಶ್ರೀದವಿಠಲ ಸಂ - ಚಾರು ಚರಣಗಳ ಸಾರಿದೆನೊ ನಿನ್ನ ಶಿರಿಗುರವಿತ್ತೆ ಪರಮನ ಪೆತ್ತೆ ಗಿರಿಜೇಶಗೆ ನಿನ್ನ ಮೈ ಇತ್ತೆ ಶರಣಾಗತವತ್ಸಲ ಕರುಣಾಕರ ಶ್ರೀದವಿಠಲ ಸರಿಬಂದರೆ ಸಾಕುವದೆಮ್ಮನು ಶರಣಾಗತವತ್ಸಲ 5 ಜತೆ ಸೋಲು ಶ್ರೀದವಿಠಲ ಸೋಲು ಗೆಲುವು ನಿನ್ನ
--------------
ಶ್ರೀದವಿಠಲರು
ಸ್ಮರಿಸು ಸಂತತ ಹರಿಯನು ಮನವೇ ಪ ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ ಸರಸಿಯೊಳಗಂದು ಕರಿಯ ನರನ ಸಂಗರದೊಳಗೆ ಕಾಯ್ದು ದೊರೆಯ ಜಗದೀಶ ಅ.ಪ. ಪರ ಸೌಖ್ಯ ದಾನಿಗಳರಸನೆಂದು ಸಾನುರಾಗದಿ ನಂಬಿದ ಜನಕೆ ಸುರ ಮೋದ ಸಲಿಸುವ ಶ್ರೀಮ ಪತಿ ಸಾಮ ಗಾನ ಲೋಲನ ಪ್ರಸಾದಾ ಪಾದಾ 1 ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲಿ ನೆಲೆಸಿಹನು ಬಲ್ಲಿದನು ಭಾಗ್ಯವಂತ ನಂಬಿದವರಿ ಗಲ್ಲದೆ ಒಲಿಯ ಭ್ರಾಂತಾ ದುಷ್ಟ ಜನ ರೊಲ್ಲ ನಿಶ್ಚಯ ಮಹಂತಾರೊಡೆಯ ಕೈ ವಲ್ಯದಾಯಕನ ಇಂಥಾ ಪಂಥಾ 2 ಅಣುವಿನೊಳಗಣುವಹನು ಘನಕೆ ಘನತರನಹನು ಅಣು ಮಹದ್ವಿಲಕ್ಷಣಾ ಕಲ್ಯಾಣ ಗುಣಜ್ಞಾನ ಘನಲಕ್ಷಣಾ ಸಂಪೂರ್ಣ ಮನ ಮುಟ್ಟಿ ಕರೆದಾಕ್ಷಣಾ ಬಂದೊದಗಿ ಕುಣಿವ ಲಕ್ಷ್ಮೀ ವಕ್ಷನಾ ಅನಪೇಕ್ಷನಾ 3 ಚೆಲುವರೊಳಗತಿ ಚೆಲುವ ಸುಲಭರೊಳಗತಿ ಸುಲಭ ಒಲಿವ ಸರಿ ಬಂದ ತೆರದಿ ಗುಣಕರ್ಮ ಕುಲಶೀಲಗಳನೆಣಿಸನರಿದೀ - ಭಕುತಿ ಫಲವ ಕೊಡೆ ತಾ ತವಕದಿ ಶಬರಿ ಎಂ ಶರಧಿ ಭರದೀ 4 ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು ನೀಡಿ ನೀಡಿಸುವ ಪಿಡಿವಾ ಪಿಡಿಸುವನು ಬೇಡಿ ಬೇಡಿಸುವ ಬಡವರೊಡೆಯ ಕೊಂ ಡಾಡುವರ ಒಡನಾಡುವಾ ಈ ಮಹಿಮೆ ಗೀಡೆಂದು ಆವ ನುಡಿವಾ ಕೆಡುವಾ 5 ಕೋದರಾದ್ಯಮರ ವ್ರಾತಾ ಸಹಿತ ಮಹ ದಾದಿ ಪೃಥ್ವಂತ ಭೂತಾದೊಳು ನಿಲಿಸಿ ಕಾದುಕೊಂಡಿಹ ವಿಧಾತಾ ಅಂಡತ್ರಿದ ಶಾಧಿಪನ ಸೂತ ಸಚ್ಚರಿತಾ 6 ನಿಗಮ ಸಂಚಾರ ಶ್ರೀ ಜಗನ್ನಾಥವಿಠಲರೇಯಾ ತನ್ನ ಪಾ ದಗಳ ಧ್ಯಾನಿಪರ ನೋಯಾಗೊಡದಂತೆ ಮಾಯಾ ರಮಣ ನಮ್ಮ ನಗಲಿ ಸೈರಿಸನು ಪ್ರಿಯಾ ಧ್ಯೇಯಾ 7
--------------
ಜಗನ್ನಾಥದಾಸರು
ನೂತನಕೆ ನೂತನ ಬಲು ನೂತನಶೇಷಗಿರಿವಾಸ ನಿನ್ನ ಮಹಿಮೆ ನೂತನವು ಪಮಾಡದನೆ ಮಾಡಿಸುವಿ ನೋಡದನೆ ನೋಡಿಸುವಿಬೇಡದಿದ್ದುದನೆಲ್ಲ ಕಾಡಿ ಬೇಡಿಸುವಿನಾಡೊಳಗೆ ನಿನ್ನ ಪೋಲುವರುಂಟೆ ಸರ್ವೇಶಮೂಡಲಗಿರಿವಾಸ ನಿನ್ನ ಮಹಿಮೆ ನೂತನವು 1ಅಣುಮೇರು ಮಾಡಿಸುವಿ ಘನತೃಣವ ಮಾಡಿಸುವಿಘನಕೃಪಾಂಬುಧಿ ನಿನ್ನ ಮಹಿಮೆ ನೂತನವೊಅಣಕವಾಡುವರಲ್ಲಿ ಕುಣಿಸಿ ಮರೆಸುತಲಿರುವಿಫಣಿಶಾಯಿ ನಿನ್ನ ಮಹಿಮೆ ಪ್ರತಿಕ್ಷಣಕೆ ನೂತನವು 2ಕಮಲಸಂಭವ ಪಿತನೆ ಕಮಲಜಾತೆಯ ರಮಣವಿಮಲ ಮುನಿಗಳ ಹೃದಯಕಮಲಶೋಭಿತನೆಕಮಲದಳನೇತ್ರನೆ ಕಮಲನಾಭ ವಿಠ್ಠಲಕಮನೀಯರೂಪನಿನ್ನ ಮಹಿಮೆ ನೂತನವೊ3
--------------
ನಿಡಗುರುಕಿ ಜೀವೂಬಾಯಿ
ಸ್ವಾಮಿತ್ವದವರಿಗೆ ಅಯುಕ್ತವೇ ಯುಕ್ತ |ಶ್ರೀಮನೋರಮನೆ ಪೇಳುವೆ ಕೇಳು ಶಕ್ತ ಪಮಾವನಿಗೇ ಮಾವನಾದೆಯಲೊ ಜನ್ಮಾರಭ್ಯ |ನೀವೊಡಲ ಹೊರದೆ ಚೋರತನ ಮಾಡಿ ||ಕೋವಿದಂಗತಿ ಮೆಚ್ಚು ಜಾರತನ ಮಾಡಿದುದು |ಆ ವನಿತೆ ಮೆದ್ದ ಫಲ ಮೆದ್ದಿ ನಿರ್ದೋಷಿ 1ನರಸೇವೆಯ ಮಾಡಿ ಪೆಸರಾದಿ ಮಾತೆಯ ಕೊಂದೆ |ಧರೆಯೊಳಗೆ ಮಾತುಲನ ಕೊಲ್ಲಬಹುದೇ ||ತಿರುಕಿ ಬೇಡಿಸುವಳರಸರನ ನಿನ್ನಯ ರಾಣಿ |ಪರಿಮಿತಿಯಿಲ್ಲದ ದುರಾಚಾರಿ ನಿನ್ನಯ ಮಗನು 2ಮೈದುನನು ಗುರುದ್ರೋಹಿ ಮೊಮ್ಮಗನು ಬಹು ಚಾಡಿ |ಮೇದಿನಿಯೊಳಗೆ ಹೇಳುತಲೆ ತಿರುಗುವ ||ಶ್ರೀದ ಪ್ರಾಣೇಶ ವಿಠ್ಠಲನೇ ನೀನೇ ದೊರೆ |ಯಾದ ಕಾರಣ ದಕ್ಕಿತಿದು ಇಲ್ಲದರೆ ಸಲ್ಲ 3
--------------
ಪ್ರಾಣೇಶದಾಸರು