ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಪರಮಾರ್ಥ ಪ್ರಾಪ್ತಿಗೆ ಸೋಪಾನ ತಿಳಿ ಇದರಲ್ಲಿ ಬೇಡಿನ್ನು ಅನುಮಾನ ಇದೇ ಬಕುತಿಮಾರ್ಗವೇ ಸುಲಭ ಸೋಪಾನ ತಿಳಿ ವೈರಾಗ್ಯಜ್ಞಾನಾದಿಗಳ ತಾಣಾ ಪ ಸಂಸಾರದೊಳಗಿರ್ದ ಜೀವಂಗೆ ಸುಖದುಃಖದಿ ಬಳಲುವ ಮನುಜಂಗೆ ಕಂಸಾರಿ ಶ್ರೀ ಕೃಷ್ಣನಾಮವೊಂದೇ ಪಾಪ ಸಂಹಾರಿ ಪರಶಿವನಾಮವೊಂದೇ ಈ ಸಂಸಾರ ದಾಂಟುವಾ ನಿಜತಾಣಾ1 ನಿಷ್ಕಾಮ ಮನದಿಂದ ಭಜಿಸಲ್ಕೆ ಬಹು ದುಷ್ಕರ್ಮ ಫಲವೆಲ್ಲ ತೊಲಗಲ್ಕೆ ಶ್ರೇಷ್ಠ ವೈರಾಗ್ಯವು ನೆಲೆಸಲ್ಕೆ ಬಲು ಜಿಜ್ಞಾಸೆ ಮನದಲ್ಲಿ ಜನಿಸಲ್ಕೆ ಈ ಪರಮಾತ್ಮಧ್ಯಾನ ಮಹಾಸಾಧನಾ 2 ಆತ್ಮಜ್ಞಾನದ ಬೋಧನೆಗೊಂಡು ಪರಮಾತ್ಮನ ರೂಪವೆ ತಾನೆಂದೂ ಬರಿ ತೋರ್ಕೆ ಜಗವೆಲ್ಲ ಪುಸಿ ಎಂದೂ ಪರಮಾತ್ಮನೆ ನಿತ್ಯನು ನಿಜವೆಂದೂ ಪರಜ್ಞಾನವ ನೀಡಲ್ಕೆ ಈ ಸಾಧನ 3 ಪರಮಾರ್ಥನುಭವಿಗಳ ಸಂಗ ನೆರೆದೊರಕುತಲಿರುತಿರೆ ಭವಭಂಗ ವರ ಭಕ್ತಿ ಮಾರ್ಗದಿ ದೊರಕುವದೆಂದ ಇದೆ ಪರಮಾರ್ಥ ಪ್ರಾಪ್ತಿಗೆ ಮೂಲವೆಂದ ಇದೆ ಗುರುಶಂಕರಾನಂದಕೃಪೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ
ತೊಲಗು ನೀ ತೊಲಗಿನ್ನು ಅಭಿಮಾನವೆಅಲೆಬಡಿಸದಿರೆನ್ನನೂ ಹಲವು ಜನರಕಾಲಕೆಳಗೆ ನಿಲ್ಲಿಸಿಯನ್ನ ಹೊಲೆಗೆಲಸವ ಮಾಡಲೆಳಸಿ ನೆಗ್ಗಿದೆಯಲ್ಲ ಪಸತಿಸುತ ಪೋಷಣೆಯು ಮುಖ್ಯವು ಮಾತಾಪಿತೃಗಳಾರಾಧನೆಯು ಬಳಗ ಬಂಧು ತತಿಗಳ ಮನ್ನಣೆಯು ಕುಲ ಜಾತಿ ದೇವತೆಯ ಪೂಜಿಪ ಹಬ್ಬವು ಬಿಡಕೂಡದುವ್ರತ ಉಪವಾಸವಾರತಿಯಕ್ಷತೆಯು ಮುಂಜಿಯುಸುತೆಗೆ ಮದುವೆಯೆಂದು ಮತಿಗೆಡಿಸಿದೆಯಲ್ಲ 1 ಅರೆಘಳಿಗೆಯು ನಿಲ್ಲಲು ವೇಳೆಯ ಕೊಡದೆರಗಿಸಿ 'ಷಯದೊಳು ನಾನಾ ಬಗೆಹರುಬಿಗೆ ಹರುಸಲು ಮನವನೀಕೊರಗಿಸಿ ಕುಣಿಸುತಲು ಒಂದೇ ಕ್ಷಣಹರಿನಾಮ ಸ್ಮರಣೆಗೆ ತೆರಹುದೋರಿಸದಾಯುಹರಿದು ಪೋಗುವ ಹಾಗೆ ಕರಗಿಸಿದುದೆ ಸಾಕು 2ಶ್ರವಣಕೆ ಮನ'ತ್ತೆಯಾ ನಾಮ ಸ್ಮøತಿ ಸ'ಯ ಸೇ'ಸಬಿಟ್ಟೆಯ ಸಜ್ಜನರೊಳೊಂದುವ ದಾರಿಯ [ತೋರಿ]ದೆಯ ಎಂದಾದರು ಶಿವಸೇವೆಗಳ ತಂದೆಯ 'ೀಗಾಗುವ ಹವಣನರಿಯದೆ ಸಂಗವ ಮಾಡಿ ನಿನ್ನೊಳಗ'ವೇಕವನು ಪಡೆದವನಾದೆನಯ್ಯಯ್ಯೊ 3ಕಂಡವರೊಡವೆಯನು ತಂದು ಕರೆದು'ಂಡು ಬಳಗವನ್ನು ಮನ್ನಿಸಿಯವರ್ಕೊಂಡಾಡೆ ಹರುಷವನು ತೋರಿಸಿ ಬಹಭಂಡಾಟನಡತೆಯನು ಕರೆಸಿಯನ್ನಗುಂಡಿಗೆ ನೂಕಿಸೆ ಕಂಡೆ ನಿನ್ನಾಟವಮೊಂಡಮುಂಡೇದೆನ್ನೀ ಕೂಗಕೇಳಿ ಬೇಗ 4ಶ್ರೌತ ಸ್ಮಾರ್ತದ ಬಟ್ಟೆಯ ಹೊಂದುವರೆ ನೀನೋತು ಮಾರ್ಗವ ತೊಟ್ಟೆಯ ಅನ್ಯಾಯದ ರೀತಿಯ ನೀ ಬಿಟ್ಟೆಯ ನರಕಬಪ್ಪ ಭೀತಿಯ ನೀತೊಟ್ಟೆಯ ಯೇನೆನ್ನದೆಲೆಕಾತರಿಸುತ ಕಾಮಕಾತು ಕ್ರೋಧವ ಮಾಡಿಮಾತಿಗಾದರು ಒಮ್ಮೆ ಸೋತವನಾದೆಯ 5ಕಲಹವ ಜನರೊಳಗೆ ಗಂಟಿಕ್ಕಿತುತೊಲಗಿಸಿ ಬಯಲೊಳಗೆ ನಿಲ್ಲಿಸಿಯೆನ್ನಹಲವು ಬಗೆಯ ಮಾತಿಗೆ ಗುರಿಯ ಮಾಡಿಬಳಲಿ ಬಾಡುವ ರೀತಿಗೆ ಕಂಗೆಡಿಸಿದೆಕಾಲದೊಳು ಧನದೊಳು ಬಲದೊಳು ಛಲದೊಳುನೆಲೆಗೊಂಡು ನೀಯೆನ್ನ ಥಳಿಸಿದುದೇ ಸಾಕು 6ಅರಿಯದಾದೆನು ನಿನ್ನನು ಅದರಿನಿಂದಹುರಿದೆ ನೀನೆನ್ನುವನು ಚಿಕ್ಕನಾಗಪುರದೊಳಗಜ್ಞರನು ರಕ್ಷಿಸಲಾಗಿಗುರುವಾಸುದೇವಾರ್ಯನು ನೆಲಸಿಹನುಮರೆಯೊಕ್ಕೆರಗಿ ನಿನ್ನ ಪರಿಯ ಪೇಳಲು ಜ್ಞಾನದುರಿಯೊಳು ದ'ಪನೆಚ್ಚರ ನಿಲಬೇಡಿನ್ನು 7
--------------
ವೆಂಕಟದಾಸರು
ಪಥ ಕೇಳಿನ್ನು ಪ ಅಂತರಂಗದಲಿ ಶಾಂತಿಯ ತಾಳಿ | ಅಂತರಾತ್ಮನು ನೀನೆನ್ನು | ಸತಿಸುತರಿಗೆ ಗತಿಯೇ ನಂಬಿದೆ | ಗತಿಯಿದ್ದದ್ದಾಗುವದೆನ್ನು | ಅತಿಶಯ ದುಷ್ಕರ್ಮಿಗಳು ನಿಂದಿಸೆ | ಕೃತ ಪೂರ್ವದ ಫಲವೆನ್ನು || ಸತತ ದ್ರವ್ಯವ ಬಯಸಿ ಗಳಿಸಿದೆ | ಗತಿಯಾಗುವದದು ಏನು ? | ಪತಿತ ಪಾವನ ರಘೂನಾಥನ | ನಾಮವ ಗುಪಿತದಿ ಜಪಿಸೊ ನೀನು 1 ಅಣ್ಣ ತಮ್ಮ ತಾಯಿ ತಂದೆ ಬಳಗದ | ಕಣ್ಣು ಮುಂದಿರಬೇಡಿನ್ನು | ಬಣ್ಣ ಬಣ್ಣ ಮಾತುಗಳಾಡಲು | ಪುಣ್ಯವು ಅದರಲಿ ಏನು ? || ಹೆಣ್ಣು ನೋಡಿ ಮನದಲಿ ಹಿಗ್ಗುವಿ | ಮಣ್ಣು ಕೂಡಿತದು ಏನು ? | ಹಣ್ಣು ಹಾಲು ಮೃಷ್ಟಾನ್ನಕಿಂತ ನೀ | ಉಣ್ಣು ಬ್ರಹ್ಮಾನಂದಾಮೃತವನ್ನು 2 ಅಂಶವುಳಿಯಬೇಕೆಂದರೆ ಈ ಜಗ- | ದಂಶವು ನನ್ನದು ಎನ್ನು | ಮಾಂಸಪಿಂಡ ಮುಖಾಂಡ ದಹನವು ಹುತಾಶನಗಾಹುತಿ ಎನ್ನು | ಕಂಸನ ತಂಗಿಯ ಮಗ ಪಾರ್ಥಗೆ ಹೇಳಿದ | ಸಂಶಯವ್ಯಾತಕೆ ಇನ್ನು | ಹಂಸ ಪರಮರ ಐಕ್ಯವ ತಿಳಿಯದೆ | ಹಂಸೋಹಂ ಎಂದರದೇನು ? 3 ನೋಡಿದುದೆಲ್ಲಾ ಪುಸಿಯೆಂದು | ಮಾಡೋ ನಿಶ್ಚಯವಿನ್ನು | ಆಡಬೇಡ ಅನೃತ ವಚನವನು | ಆಡುತಲಿರು ಸತ್ಯವನು | ಕೂಡಬೇಡ ಕಾಮಂದಿಯ ಸಂಗ | ಕೇಡು ತಪ್ಪದದಿನ್ನು | ರೂಢಿಯೊಳಗೆ ನರನಾಗಿ ಪುಟ್ಟಿ | ಮಾಡುತ ನಡಿ ಧರ್ಮವನು 4 ಮೂರ್ತಿ ಪಡಿ | ನಾದವನಾಲಿಸು ನೀನು 5
--------------
ಭಾವತರಕರು
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ ನಿಷ್ಠರುದೋರದಂತಾದರು ಮಾ ಧ್ರುವ ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು ನಿಷ್ಠರಿಗಾಟ್ಲಿ ತಂದರು ಮಾ ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ ಬಟ್ಟೆಗ್ಯಳದಿನ್ನು ತಾಹರು ಮಾ ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು ನೆಟ್ಟ ನೇರಿಷ್ಟ ನೇಮಿಸುರು ಮಾ ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ ದಿಟ್ಟತನದಿ ಪ್ರಾಣಕೊಂಬರು ಮಾ 1 ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು ಕುಟ್ಟಿ ಅವನಬಾಯಿ ಹಾರರು ಮಾ ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು ನೆಟ್ಟನೆ ಘಾಸಿಮಾಡರು ಮಾ ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು ನಷ್ಟತನದಿ ಹೊಟ್ಟೆ ಹೊರುವರು ಮಾ ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು ಹೆಟ್ಟಿ ಅವನ ಮುಂದೆ ನಡೆಸುರು ಮಾ 2 ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು ಇದ್ದು ಇಲ್ಲದಂತಾದರು ಮಾ ಮಂದಮತಿಗಳು ಅಂದಣವೇರಿನ್ನು ಬುದ್ಧಿವಂತರೀಗ್ಹೀನತಂದರು ಮಾ ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ ಕ್ಷುದ್ರತನದಿ ಕೆಡುತಿಹರು ಮಾ ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು ಇದ್ದರೆ ಬುದ್ಧಿಹೀನರು ಮಾ 3 ಉಳಿಯಮುಟ್ಟಿದ ದೈವ ಉಳಿಯದೇ ಹೋದವು ಉಳಿಗಾಲ ವಿಲ್ಲದಂತಾಯಿತು ಮಾ ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು ಕಳ್ಳರೆ ಸಾಜರು ಆದರು ಮಾ ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ ಸುಳ್ಳರು ನಿಜನುಡಿವೆಂಬುರು ಮಾ ಉಳ್ಳವರು ಖಳಬುದ್ಧಿ ಕೈಕೊಂಡು ಇಳೆಯೊಳು ಧರ್ಮವ ಜರೆದರು ಮಾ 4 ಸಾಧುಸಜ್ಜನರೆಲ್ಲ ಭೇದವ ಅಡಗಿಸಿ ಮೇಧಿನಿಯಲು ಗುಪ್ತರಾದರು ಮಾ ಇದ್ದರ ಘನಸುಖ ಸಿದ್ಧರ ನೆರೆಯಲಿ ಬುದ್ಧಿಹೀನರು ತಾವು ಅರಿಯರು ಮಾ ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ ಸತ್ ಶಿಷ್ಯಮಹಿಪತಿ ತಿಳಿದನು ಮಾ ಎಂದಿಗೆ ಬೇಡಿನ್ನು ದುರ್ಜನರ ಸಂಗವು ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು