ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೇನು ಬೇಡಿದೆನೋ ರಂಗಯ್ಯ ನೀನೆನ್ನ ನೋಡವಲ್ಲ್ಯಾಕೋ ಪ ಹಾನಿ ಮಾಡೆ ಮಹಹೀನಭವಸಾಗರ ಮಾನದಿಂ ಗೆಲಿಸೆಂದು ನಾನಿಷ್ಟೇ ಬೇಡುವೆ ಅ.ಪ ನಿಗ್ರಹಿಸಿ ಸ್ಥಿರಪದನುಗ್ರಹಿಸಿ ಪೊರೆಯೆಂದೆನೆ ಸುಗ್ರೀವನಂತೆನ್ನ ಆಗ್ರಜನ ಕೊಂದು ಕಪಿ ದುರ್ಗಕ್ಕಧಿಪತಿಯೆನಿಸೆಂದಾಗ್ರಬಟ್ಟೆನೊ ನಿನಗೆ 1 ಕುಲವ ನಿರ್ಮೂಲ ಮಾಡಿ ಇಳೆ ಪಟ್ಟಕ್ಕೆ ಸ್ಥಿರವಾಗಿ ನಿಲಿಸು ಎನಗೆಯೆಂದು ಸುಲಭದಿಂ ಬೇಡಿದೆನೆ ಒಲಿದು ಸಾರಥಿಯಾಗಿ ಕುಲದವರ ಸವರೆಂದು ನಳಿನಾಕ್ಷ ತವಪಾದದೊಳು ಬೇಡಿದೆನೇನೋ 2 ಚಿತ್ತಜಪಿತ ನಿನ್ನ ಸತ್ಯ ಬಿರುದುಗಳು ನಿತ್ಯ ನಿತ್ಯದಿ ಬಿಡದೆ ಶಕ್ತಿಯಿಂ ಪೊಗಳುವೆ ಭಕ್ತಿದಾಯಕ ನಿನ್ನ ಯುಕ್ತ್ಯಾರುಬಲ್ಲರು ಮುಕ್ತಿ ದಯಮಾಡೆಂದು ಪ್ರಾರ್ಥಿಪೆ ಶ್ರೀರಾಮ 3
--------------
ರಾಮದಾಸರು
ಪಾದ ಮಾಡಿದೆನೆ ಸಾಷ್ಟಾಂಗ ಬೇಡಿದೆನೆ ಮನದಭೀಷ್ಟ ಪ. ನೀಡು ಕೊಲ್ಲಾಪುರದ ನಾಡಿಗೊಡೆಯಳೆ ಲಕುಮಿ ಮಾಡಮ್ಮ ಕೃಪೆಯ ಬೇಗಾ ಈಗಾ ಅ.ಪ. ಬಂದೆನೇ ಬಹುದೂರ ನಿಂದೆನೇ ತವಪದ ದ್ವಂದ್ವ ಸನ್ನಿಧಿಯಲೀಗ ವಂದನರಿಯೆನೆ ನಿನ್ನ ಚಂದದಿ ಸ್ತುತಿಪೊದಕೆ ಮಂದಮತಿಯಾಗಿಪ್ಪೆನÉೀ ತಂದೆ ಮುದ್ದುಮೊಹನ್ನ ಗುರು ಕರುಣ ಬಲದಿಂದ ಇಂದು ನಿನ್ನನು ಕಂಡೆನೇ ಮುಂದೆನ್ನ ಮಾನಾಭಿಮಾನ ನಿನಗೊಪ್ಪಿಸಿದೆ ಸಿಂಧುಸುತೆ ಪಾಲಿಸಮ್ಮಾ ದಯದೀ 1 ಉತ್ತರಾಯಣ ಪುಣ್ಯ ದಿನದಿ ನಿನ್ನನು ಕಂಡೆ ಮುಕ್ತರಾಧೀಶೆ ಕಾಯೆ ಉತ್ತಮಾಭರಣ ನವರತ್ನ ಪದಕವು ದಿವ್ಯ ನತ್ತು ಧರಿಸಿದ ಚಲ್ವಳೇ ಮುತ್ತೈದೆಯರು ಮತ್ತೆ ಭಕ್ತ ಸಂದಣಿ ಇಲ್ಲಿ ಎತ್ತನೋಡಲು ಕಂಡೆನೇ ಸತ್ಯ ಸಂಕಲ್ಪ ಶ್ರೀ ಹರಿಯ ಪಟ್ಟದ ರಾಣಿ ಚಿತ್ತಕ್ಕೆ ತಂದು ಕಾಯೆ ಮಾಯೆ 2 ರೂಪತ್ರಯಳೆ ನಿನ್ನ ವ್ಯಾಪಾರ ತಿಳಿಯಲು ಆ ಪದ್ಮಭವಗಸದಳಾ ಶ್ರೀಪತಿಯ ಕೃಪೆ ಯಿಂದ ಸೃಷ್ಟಿಸ್ಥಿತಿಲಯಗಳನು ವ್ಯಾಪಾರ ಮಾಳ್ಪ ಧೀರೆ ಕೃಪೆಯ ನೀ ಮಾಡದಲೆ ಉಭಯ ಸುಖವೆತ್ತಣದು ಭೋಪರೀ ನಂಬಿದರಿಗೆ ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ನೀ ಪಾರುಗೊಳಿಸೆ ಭವದೀ ದಯದೀ 3
--------------
ಅಂಬಾಬಾಯಿ