ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಶಾವತಾರ ನೀರೊಳಗೆ ನಿಂತು ನಡುಗಿ ನಾರುವಂಗೆ ಗಂಬೂರಿಕಸ್ತೂರಿ ಲೇಪನದ ಮದುವೆಭಾರ ನಿನ್ನಲಿ ಪೊಳಲು ಕಲ್ಲು ಕೈ ಮುಸುಡಿದಂಗೆಧೀರ ಶೇಷನ ಶಯನದ ಮದವೋಮೋರೆಯಲ್ಲಿ ಯಲ್ಲಾ ಕೆದರಿ ಬೇರು ಮೆಲುವನಿಗೆಸಾರಷಡ್ರಸನ್ನ ಭೋಜನದ ಮದವೋಕರುಳ ವನಮಾಲೆ ಹಾಕಿದವಂಗೆ ಹಾರಪದಕ ಹಾಕಿದ ಮದವೋಮೂರಡಿಯ ಭೂದಾನ ಬೇಡಿದವನಿಗೆ ಸಾರಿದವಂಗಭೀಷ್ಟಗಳ ಪೂರೈಪ ಮದವೋಧರಣಿ ವಿಪ್ರರಿಗಿತ್ತು ಕುಳಿಪುದಕೆ ಸ್ಥಳವಿಲ್ಲವಗೆ ಭುವನಕೀಳುವ ಮದವೋಊರ ಬಿಟ್ಟು ವನ ಚರಿಸುವಂಗೆ ಮೂರು ಧಾಮದಮನೆಯ ಭೋಗದ ಮದವೋಪುರನಾರಿಯ ಬಯಸಿ ಕೊಂಬುವಂಗೆ ವಾರಿಜಭವ ಸುರರವಂದ್ಯಾನೆ ಮದವೋಘೋರ ತುರಗವನೇರಿ ಹಾರಿಸ್ಯಾಡುವಂಗೆ ವೀರಸಿಂಹಾಸನದಲ್ಲಿಕುಳಿತ ಮದವೋಮೂರು ದಿನ ಅರಸುತನ ಸ್ಥಿರವೆಂದು ನೆಚ್ಚಿ ಸಾರಿದವನ್ನಮರೆವದುಚಿತವೆಬಾರದೆ ತಪ್ಪದು ಹಿಂದಿನ ಭವಣೆ ನಿನಗೆ ದೂರ ವಿಚಾರಿಸಿನೋಡೊ ಕರುಣಾ ನಿಧಿಶ್ರೀರಂಗ ರಾಜಗೋಪಾಲ ವಿಠಲ ನಿನ್ನ ಪಾರಿದವರ ಪೊರೆದು ಕೀರ್ತಿಪಡಿಯೊ
--------------
ರಾಜಗೋಪಾಲದಾಸರು
ನೀರಜಾಕ್ಷೇರೆಲ್ಲ ಬಂದು ಮಾರಜನಕಗೆ ಆರತಿ ಎತ್ತಿರೇ ನಾರಿಮಣಿ ಶ್ರೀ ರುಕ್ಮಿಣಿಮಣಿಗೆ ಪ ವೇದವನು ಕದ್ದ ಖಳನ ಬೇಧಿಸಿದವಗೆ ಆದರದಿಂದ ಮಂದರವೆಂಬೋ ಭೂಧರ ತಂದವಗೆ 1 ಕುಂಭಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆ ಕಂಭದಿ ಬಂದು ದನುಜ ಡಿಂಭನ ಕಾಯ್ದ ನೃಹರಿಗೆ 2 ಭೂಮಿ ಬೇಡಿದವನಿಗೆ ದುಷ್ಟ ಭೂಮಿಪ ಹರನಿಗೆ ಕಾಮಿನಿಚೋರನ ಶಿರವ ತರಿದ ಸ್ವಾಮಿ ರಾಮಗೆ 3 ಪಾಂಡುಸುತರ ಸಲಹಿ ಖಳರ ದಂಡಿಸಿದವಗೆ ಚಂಡತ್ರಿಪುರರ ಹೆಂಡರ ವ್ರತವ ಖಂಡನೆ ಮಾಳ್ಪಗೆ 4 ದುರುಳ ನೃಪರ ತರಿದ ಕಲ್ಕಿಗೆ ವರದ ನಾಮಗಿರಿ ಶ್ರೀಹರಿಯ ಚರಣಕಮಲಕೆ 5
--------------
ವಿದ್ಯಾರತ್ನಾಕರತೀರ್ಥರು