ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಲಾಂಬುಧಿ ಚಂದ್ರ ಶ್ರೀ ರಾಮಚಂದ್ರ ಪ ಒಂದೇ ಭಾಷಣ ನಿನಗೊಂದೇ ಮಾರ್ಗ ಸಾಕು ಒಂದೇ ಸ್ಥಾನದೊಳಾಶ್ರಿತರನೇ ನಿಲ್ಲಿಸುವಿ ಒಂದೇ ಬಾರಿಯೆ ಕೊಟ್ಟುದ್ಧರಿಸುವೆÉ ಭೃತ್ಯರ ಒಂದೇ ಪತ್ನಿಯು ನಿನಗೆಂಬುದು ಬಿರುದು 1 ನಿನ್ನ ತಮ್ಮನು ನಿನ್ನ ರಾಣಿಯ ಭೃತ್ಯನು ನಿನ್ನಂಥ ಭಾಗ್ಯ ಮತ್ತೆಲ್ಲಿ ತೋರುವುದು ಘನ್ನ ಮಹಿಮ ನೀನು ಮಲತಾಯಿ ನುಡಿಯಲು ತನ್ನ ರಾಜ್ಯಗಳನ್ನು ತಮ್ಮನಿಗೊಪ್ಪಿಸಿದೆ 2 ಭರತನು ನಿನ್ನಡಿಗಾಗಿ ಬೇಡಿದರೂ ನೀ ಹರುಷದಿಂದಲಿ ಕಾಲಾಂತರವ ಪೇಳಿರುವಿ ಮರಳಿ ರಾಜ್ಯದಿ ಬಂದು ರಾಜೇಶ ಹಯಮುಖ ಕರುಣಿಸಿ ಪಟ್ಟಾಭಿಷಿಕ್ತನಾಗಿರುವಿ 3
--------------
ವಿಶ್ವೇಂದ್ರತೀರ್ಥ
ಸುಮ್ಮನಿಹುದು ನ್ಯಾಯವೇ ಪ ದಮ್ಮಯ್ಯ ಪೊರೆಯೆನಲು ಒಮ್ಮೆಯಾದರೂ ಎನ್ನ ದುಮ್ಮಾನವೇನೆಂದು ನಮ್ಮಯ್ಯ ಕೇಳಲಿಲ್ಲ ಅ.ಪ ಸಣ್ಣ ಬಾಲಕನೊಬ್ಬ ಕಣ್ಣೀರ ಸುರಿಸಲು ಪುಣ್ಯ ಲೋಕವನಿತ್ತಮ್ಮಾ ಕಣ್ಣುಕಾಣದೆ ಗೊಂಡಾರಣ್ಯಮಧ್ಯದಿ ನಾನು ಬಣ್ಣಿಸಿ ಕರೆದರೂ ಕಣ್ಣೆತ್ತಿ ನೋಡಲಿಲ್ಲವಮ್ಮಾ 1 ಪರಿದೋಡಿದನಮ್ಮ ನಮ್ಮಯ್ಶ ದುರಿತವಾರಿಧಿಯಲಿ ಕೊರಗುತಲಿಹ ಎನ್ನ ಅರಿತು ಅರಿಯದಂತೆ ಇರುವನಲ್ಲ ಇಂದಿರಮ್ಮ 2 ಮೃತಿಯ ವೇಳೆಯೊಳೊಬ್ಬ ಸುತನಕರೆಯಲಾಗ ಹಿತದಿ ಸೌಖ್ಯವನಿತ್ತನು [ಕೇಳಮ್ಮಾ] ಮಾಂಗಿರಿರಂಗ ಪತಿತಪಾವನಾಯೆಂದು ನುತಿಸಿ ಬೇಡಿದರೂ ಸಂಗತಿಯೇನೊ ಎನಲಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹೊರ ಹೋಗಿ ಆಡದಿರೊ ಹರಿಯೆ-|ಎನ್ನ ದೊರೆಯೆ ಪಮನೆಯೊಳಗಾಡುವುದೆ ಚೆಂದ - ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ||ವನಿತೆಯರು ಮೋಹದಿಂದ - ನಿನ್ನ |ಮನವಸಹರಿಸಿಕೊಂಬುವರೋ ಗೋವಿಂದ 1ಏನು ಬೇಡಿದರೂ ನಾ ಕೊಡುವೆ-ಕೆನೆ-|ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||ನಿನ್ನ ಗುಣಗಳನು ಕೊಂಡಾಡುವೆ - ನಿನಗೆ |ಚಿನ್ನ ರನ್ನದ ಅಲಂಕಾರಗಳಿಡುವೆ 2ಹೊಲಸು ಮೈಯವನೆನ್ನುವರೊ-ದೊಡ್ಡ |ಕುಲಗಿರಿಯನ್ನು ಪೊತ್ತವನೆನ್ನುವರೊ ||ಬಲುಕೇಶದವನೆನ್ನುವರೊ-ಆ |ಎಳೆಯನನೆತ್ತಿದ ಕುರೂಪಿಯೆಂಬುವರೊ 3ಭಿಕ್ಷೆಬೇಡಿದೆ ಎಂಬುವರೊ-ಭೂಮಿ |ರಕ್ಷಿಪ ರಾಯರ ಕದಡಿದೆಯೆಂಬುವರೊ ||ಲಕ್ಷ್ಮಿಯ ಕಳೆದೆಯೆಂಬುವರೊ-------ವೈ-|ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ 4ಮಾನಬಿಟ್ಟವನೆನ್ನುವರೊ-ಮಹಾ |ಹೀನರ ಬೆನ್ನಟ್ಟಿ ಹೋದನೆಂಬುವರೊ ||ದಾನವವೈರಿಯೆಂಬುವರೊ-ಸುರ-|ರಾನತ ಪುರಂದರವಿಠಲನೆಂಬುವರೊ 5
--------------
ಪುರಂದರದಾಸರು