ಒಟ್ಟು 7 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಎನಗಾಗಿದೆ ಪ ನಾನಿನ್ನನನುದಿನ ಧ್ಯಾನಿಸುತಿರುವಾಗ ಜೇನುಸಕ್ಕರೆ ಸವಿ ಇರುವಾಗ ಅ.ಪ ಖಗ ಮುಕ್ತಿ ಬೇಕೆಂದನೆ ಆ ಧೃವರಾಯ ಜಗವೊಂದ ನೀಡೆಂದನೆ ನಗವ ಕೈಯಿಂದೆತ್ತಿ ಸೊಗವ ನೀಡೆಂದರಾರು ಜಗದೊಡೆಯಾ ನಿನ್ನ ಭಜನೆಯೆ ಸಾಕು 1 ಅವಲಕ್ಕಿಯನು ತಂದಾಕುಚೇಲನು ನವನಿಧಿ [ಯನೇನು] ಬೇಡಿದನೆ ಪವನಜ ಬ್ರಹ್ಮಪಟ್ಟವನು ಬೇಡಿದನೆ ಕುವಲಯಶ್ಯಾಮ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಅದ್ಭುತ ಅದ್ಭುತ ಪರಮಾದ್ಭುತನೆ ಪ ಮಧ್ವರ ಚರಣದಿ ಬಿದ್ದ ಜನರಪರಿ ಶುದ್ಧಗೈದು ಸುಖ ಸಿದ್ಧಿಗೊಳಿಪ ಹರಿ ಅ.ಪ ಅನವದ್ಯ ಪರಾತ್ಪರ ಶುದ್ಧ ಸುಖಾತ್ಮಕ ಕದ್ದನೆ ಬೆಣ್ಣೆಯನು ಮಧ್ವರ ದೇವನು ಪದ್ಮಾಲಯ ಪತಿ ಸಿದ್ಧಿ ಸುವಂದಿತ ಕದ್ದನೆ ಕನ್ಯೆಯನು 1 ಮೇದಿನಿ ತಂದವ ಮೇದಿನಿ ಅಳಿಯನೆ ವೇದವ ತಂದವ ವೇದಸು ಬÉೂೀಧಕ ಬುದ್ಧನು ಆಗುತ ವೇದವ ನುಳುಹಿದನೆ 2 ಸತ್ಯವತೀ ಸುತ ಸತ್ಯನ ಸತ್ಯನು ಬತ್ತಲೆ ನಿಲ್ಲುತ ಸತಿಯರ ಕೆಡಸಿದನೆ ಕತ್ತಲೆ ಕಾಣದ ಉತ್ತುಮ ದೇವನು ಮಿಥ್ಯಾಜ್ಞಾನವ ಬಿತ್ತಿದನೆ 3 ಅನ್ನಾದನ್ನನು ಅನ್ನದ ಬೃಹತೀ ಅನ್ನನು ಸತಿಯರ ಅನ್ನವ ಬೇಡಿದನೆ ಉಣ್ಣದೆ ರಾಜನ ಅನ್ನವ ವಿದುರನ ಅನ್ನವ ನುಂಡನು ಸಣ್ಣವನೆನ್ನದಲೆ 4 ನಿಂದೆಯ ಸುರಿಸಿರೆ ನಂದವ ನೀಡಿದ ವಂದಿಸಿ ರಾಜ್ಯವ ಮುಂದಿಡೆ ಜರಿದವನೆ 5 ಅಣ್ಣನ ಕೊಂದು ತಮ್ಮನ ಸಲಹಿದ ಸಣ್ಣನು ತಮ್ಮನ ಅಣ್ಣನ ಮಾಡಿದ ಅಣ್ಣ ತಮ್ಮಂದಿರ ನುಣ್ಣಗೆ ಸವರಿದ ಅಗಣ್ಯ ಮಹಿಮ ಮೈಗಣ್ಣಗೆ ವಲಿದಿಹನೆ 6 ಭಾರೀ ಗಿರಿಧರ ನಾರಿಯು ಆದನು ಮಾರನ ಪಡೆದವ ನಾರೇರಿ ಗೊಲಿದನೆ ನಾರಿಯು ಮೊರೆಯಿಡೆ ಸೀರೆಯ ಕರೆದವ ಜಾರನು ಎನಿಸುತ ಶೀರೆಯ ಚೋರನೆ 7 ಇಲ್ಲಿಹೆ ಅಲ್ಲಿಹೆ ಎಲ್ಲಾಕಡೆಯಿಹ ಎಲ್ಲರ ಒಳಗಿಹ ಎಲ್ಲರ ಹೊರಗಿಹ ಎಲ್ಲವ ಬಲ್ಲನು ಬಲ್ಲ ವರಿಲ್ಲವೆ 8 ಅಣುಕಿವÀ ಅಣುತಮ ಘನಕಿವ ಘನತಮ ಅಣು ಘನ ಮಾಡುವ ಘನ ಅಣುಮಾಡುವ ಅಣುವಲಿ ಅಡಗಿಪ ಘನವನು ಬಲ ಬಲ ತೃಣ ಸಹ ಚಲಿಸದು ಚಿನುಮಯ ನಿಲ್ಲದೆ 9 ಜಾಗರ ಸ್ವಪ್ನ ಸುಷುಪ್ತಿಗಳೆಲ್ಲವ ಆಗಿಸಿ ಕಾಯುವ ಯೋಗಸು ಭೋಕ್ತನು ಬೀಗರ ಮನೆಯಲಿ ಸಾಗಿಸಿ ಯಂಜಲ ತೇಗಿದ ತಿನ್ನುತ ಶಾಖವ ನಿಜಕರುಣಿ 10 ಲೋಕವ ಸೃಜಿಸುವ ಲೋಕವ ನಳಿಸುವ ಲೋಕನು ಪಾಲಕ ಲೋಕ ವಿಲಕ್ಷಣನೆ ನಾಕರ ನಾಯಕ ನಾಕಗತಿ ಪ್ರದ ಶೋಕವಿದೂರಗೆ ತಾಕಿತು ಕೊಡಲಿ ಬತ 11 ಎಲ್ಲಾ ನಾಮವು ಇವನದೆ ಸರಿಸರಿ ಎಲ್ಲಾ ರೂಪವು ಕೂಡ್ರವ ದಿವನಿಗೆ ಎಲ್ಲಾ ಚೇತನ ಜಡದಿಂ ಭಿನ್ನನು ಎಲ್ಲಾ ಕಾಲದಿ ಒಂದೇ ಸಮನಿಹ 12 ಎಲ್ಲಾ ರೂಪಗಳೊಂದೇ ಸಮ ಬತ ಎಲ್ಲಾ ರೂಪದನಂತ ಗುಣಂಗಳು ಎಲ್ಲಾ ರೂಪವು ನಿತ್ಯಸು ಪೂರ್ಣವು ಎಲ್ಲಾ ಮಹಿಮೆಯ ಯಾರು ಕಾಣರು 13 ಜೀವರ ಬಿಂಬನು ಜೀವನ ಸಹವಿಹ ಜೀವರಿ ಗುಣಿಸುವ ಸುಖ ದುಃಖಂಗಳ ಸಾರ ಸುಭೋಕ್ತನು ಜೀವರಿ ಗಲ್ಲವೆ ಕರ್ಮದ ಲೇಪವು 14 ಅಗಣಿತ ಮಹಿಮನು ನಗೆಮೊಗ ಶ್ರೀ ಕೃಷ್ಣವಿಠಲ ಪರಾತ್ಪರ ಸಿಗುವನು ಭಕ್ತಿಗೆ ಸರಿಮಿಗಿಲಿಲ್ಲವೆ ಬಗೆಯನೆ ದೋಷವ ಶರಣೆಂದವರ15
--------------
ಕೃಷ್ಣವಿಠಲದಾಸರು
ಗೋವಿಂದ ಹರಿ ಗೋವಿಂದ ಪ ಗೋವಿಂದ ಪರಮಾನಂದ ಮುಕುಂದಅ ಮಚ್ಛ್ಯಾವತಾರದೊಳಾಳಿದನೆ - ಮಂದರಾಚಲ ಬೆನ್ನೊಳು ತಾಳಿದನೆಅಚ್ಛ ಸೂಕರನಾಗಿ ಬಾಳಿದನೆ - ಮದಹೆಚ್ಚೆ ಹಿರಣ್ಯಕನ ಸೀಳಿದನೆ1 ಕುಂಭಿನಿ ದಾನವ ಬೇಡಿದನೆ - ಕ್ಷಾತ್ರ-ರೆಂಬುವರನು ಹತ ಮಾಡಿದನೆಅಂಬುಧಿಗೆ ಶರ ಹೂಡಿದನೆ - ಕಮ-ಲಾಂಬಕ ಗೊಲ್ಲರೊಳಾಡಿದನೆ 2 ವಸುದೇವನುದರದಿ ಪುಟ್ಟಿದನೆ - ಪಲ್‍ಮಸೆವ ದನುಜರೊಡೆಗುಟ್ಟಿದನೆಎಸೆವ ಕಾಳಿಂಗನ ಮೆಟ್ಟಿದನೆ - ಬಾ-ಧಿಸುವರ ಯಮಪುರಕಟ್ಟಿದನೆ 3 ಪೂತನಿಯ ಮೈ ಸೋಕಿದನೆ - ಬಲುಘಾತದ ಮೊಲೆಯುಂಡು ತೇಕಿದನೆಘಾತಕಿಯನತ್ತ ನೂಕಿದನೆ - ಗೋಪವ್ರಾತ ಗೋಗಳನೆಲ್ಲ ಸಾಕಿದನೆ4 ಸಾಧಿಸಿ ತ್ರಿಪುರರ ಗೆಲಿದವನೆ - ಮ್ಲೇಚ್ಛರಛೇದಿಸೆ ಹಯವೇರಿ ಕೆಲೆದವನೆಸಾಧುಸಂತರೊಡನೆ ನಲಿದವನೆ - ಬಾಡದಾದಿಕೇಶವ ಕನಕಗೊಲಿದವನೆ 5
--------------
ಕನಕದಾಸ
ಕಾಳಿಯಮರ್ದನ ರಂಗಗೆ- ಹೇಳೆ ಗೋಪಮ್ಮ ಬುದ್ಧಿ |ಕೇಳಲೊಲ್ಲನು ಎನ್ನ ಮಾತನು ಪದಿಟ್ಟ ನೀರೊಳು ಕಣ್ಣ ಮುಚ್ಚನೆ-ಹೋಗಿ |ಬೆಟ್ಟಕೆ ಬೆನ್ನಾತು ನಿಂತನೆ ||ಸಿಟ್ಟಿಲಿ ಕೋರೆದಾಡೆ ತಿಂದನೆ-ಅಹ |ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ 1ಮೂರಡಿ ಭೂಮಿಯ ಬೇಡಿದನೆ-ನೃಪರ |ಬೇರನಳಿಯೆ ಕೊಡಲಿ ಪಿಡಿದನೆ ||ನಾರಮಡಿಯನುಟ್ಟು ಬಂದನೆ-ಅಹ |ಚೋರತನದಿ ಪಾಲ್ಬೆಣ್ಣೆಯ ತಿಂದನೆ 2ಬತ್ತಲೆ ನಾರಿಯರನಪ್ಪಿದ-ಹೋಗಿ ||ಉತ್ತಮಾಶ್ವವನು ಹತ್ತಿದ ||ಹತ್ತವತಾರವ ತಾಳಿದ-ನಮ್ಮ |ಭಕ್ತವತ್ಸಲ ಸ್ವಾಮಿ ಪುರಂದರವಿಠಲನು 3
--------------
ಪುರಂದರದಾಸರು
ಕೇಳಲೊಲ್ಲನೆ ಎನ್ನ ಮಾತನು-ರಂಗ -|ಕಾಳಿಮರ್ದನನಿಗೆ ಪೇಳೇ ಗೋಪಮ್ಮ ಬುದ್ಧಿ ಪಬಿಟ್ಟ ಕಂಗಳ ಮುಚ್ಚಲೊಲ್ಲನೆ-ಬೇಗ- |ಬೆಟ್ಟಕೆ ಬೆನ್ನೊಡ್ಡಿ ನಿಂತನೆ ||ಸಿಟ್ಟಿಂದೆ ಕೋರೆಯ ತೋರ್ಪನೆ-ಬೇಗ-|ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ ರಂಗ 1ಮೂರಡಿ ಭೂಮಿಯ ಬೇಡಿದನೆ-ನೃಪರ-|ಬೇರ ಕಡಿಯಲು ಕೊಡಲಿ ತಂದನೆ |ನಾರಸೀರೆಯನುಟ್ಟುಕೊಂಡನೆ-ಬೇಗ-|ಚೋರತನದಿ ಹರವಿ ಹಾಲ ಕುಡಿದನಮ್ಮ 2ಬತ್ತಲೆ ನಾರಿಯರನಪ್ಪಿದ-ಬೇಗ-|ಉತ್ತಮ ಅಶ್ವವ ಹತ್ತಿದ ||ಹತ್ತವತಾರವನೆತ್ತಿದ-ನಮ್ಮ-|ಸತ್ಯಮೂರುತಿ ಪುರಂದರವಿಠಲರಾಯನು 3
--------------
ಪುರಂದರದಾಸರು
ರಾಮ ಗೋವಿಂದ ಹರೇ ಕೃಷ್ಣ ಗೋವಿಂದದಾಮೋದರಹರಿವಿಷ್ಣು ಮುಕುಂದಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಮಚ್ಛವತಾರದೊಳಾಡಿದನೆ -ಮಂದರಾಚಲ ಬೆನ್ನೊಳಾಂತವನೆಅಚ್ಛ ಸೂಕರನಾಗಿ ಬಾಳಿದನೆ - ಮದಹೆಚ್ಚಿ ಹಿರಣ್ಯಕನ ಸೀಳಿದನೆ1ಬಲಿಯೊಳು ದಾನವ ಬೇಡಿದನೆ - ಕ್ಷಾತ್ರಕುಲವ ಬಿಡದೆ ಕ್ಷಯ ಮಾಡಿದನೆಜಲನಿಧಿಗೆ ಬಿಲ್ಲ ಹೂಡಿದನೆ - ಕಾಮ-ಗೊಲಿದು ಗೊಲ್ಲತಿಯೊಳಾಡಿದನೆ2ಸಾಧಿಸಿ ತ್ರಿಪುರರ ಗೆಲಿದವನೆ - ಪ್ರತಿ-ವಾದಿಸಿ ಹಯವೇರಿ ನಲಿದವನೆಭೇದಿಸಿ ವಿಶ್ವವ ಗೆಲಿದವನೆ - ಬಾಡದಾದಿಕೇಶವರಾಯ ನಮಗೊಲಿದವನೆ3
--------------
ಕನಕದಾಸ