ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೀಳುಯೋಚನೆ ಬಿಡು ಖೋಡಿಮನವೇ ಪಡಿ ಮಾಧವನಿಂ ಬೇಡಿಪ ಹಾಳುಯೋಚನೆ ಮಾಡಿ ಮಾಡಿ ನೀನು ಬೀಳುಗಳೆಯ ಬೇಡ ತಿಳಿ ಹುಚ್ಚ ಖೋಡಿ ತಾಳದೆ ಜಡಿತಾರ ಒದೆದು ಎಳೆದಾಡಿ 1 ನಾಶನ ಈ ಜಗಸುಖ ಒಂದೇ ತಾಸಿನ ಮೋಜಿದು ಇರದು ಕಡೆತನಕ ಮೋಸದಿ ಸಿಲ್ಕಬೇಡಿದಕೆ ಇದ ರ್ವಾಸನಳಿದು ಬೇಗ ಕಡಕೋ ಭವತೊಡಕ 2 ದಾಸರು ಪೇಳಿದ ಸೊಲ್ಲುಕೇಳಿ ಧ್ಯಾಸಿಟ್ಟು ದೋಷದಿಂ ಕಡೆಗ್ಹಾರಿ ನಿಲ್ಲು ದಾಸನಾಗಿ ಭವಗೆಲ್ಲು ತಂದೆ ಶ್ರೀರಾಮನ ಪಾದಕೆ ಸಲ್ಲು 3
--------------
ರಾಮದಾಸರು
ಪಾಷಾಣವಲ್ಲವದು ಭೂಷಣವು ಕರಕೆ ದೋಷವಾ ದೂರಿಪುದು ತೋಷ ಜನಿಪುದು ಮನಕೆ ಪ ದಾಸಳುದಕದಿ ಜನಿಸಿ ಶ್ರೀಶನಂಕಿತ ವಹಿಸಿ ವಾಸುದೇವನ ಭಜಕರೆದೆ ಪಿರಿದು ಎನಿಸಿ ದಾಸಜನರಿದನು ನಿತ್ಯದಿ ಪಾಡಿ ಪೂಜಿಸಲು ಘಾಸಿಯಕ್ಷಯ ಲೋಕಪಥವ ಸಲೆ ಕರುಣಿಪುದು 1 ಶ್ರೀದೇವಿ ವಲ್ಲಭನು ಭೂದೇವಿ ರಮಣನು ಸಾಧುಗಳ ಪ್ರಿಯ ಶ್ರೀಗಿರಿನಿಲಯನು ಮೋದದಲಿ ಶಕ್ತ ಮೌಕ್ತಿಕ ಸ್ವರ್ಣಸರಿಯಲ್ಲ ಭೇದ ತೋರಲು ದೃಶನ್ಮಾಯಯಂತಿಹ ಸ್ವಾಮಿ 2 ಭಕ್ತರೊಳು ನಿಜದಾಸ ಯುಕ್ತ ಚಂದ್ರಹಾಸ ವಕ್ತøದೊಳ್ಗೊಳಸಿಹನು ನರಸಿಂಹದಾಸ ಮುಕ್ತಿಪಂಥ ಕಂಡನವ ಸಂದೇಹ ಬೇಡಿದಕೆ ಶಕ್ತ ನರಸಿಂಹವಿಠ್ಠಲ ಸಾಲಿಗ್ರಾಮವು 3
--------------
ನರಸಿಂಹವಿಠಲರು