ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ಪ ಕೃಪಣ ವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ಅ.ಪ ಹುಡುಗರು ಮಾಡುವ ತಪ್ಪಿಗೆ ಜನನಿ ತಾ ಬಿಡುವಳೇ ಅದರಿಂದ ದಯವ ಮಾಡದಲೆ ನಡೆವ ಕುದರಿ ತಾನು ಮಲಗಿದಡೆ ಇನ್ನು ಕಡೆಗೆ ಕಟ್ಟುವರೇನೊ ತಿರಗಿ ನೋಡದಲೆ 1 ಮಾಡುಯೆಂದದರನು ಬಿಟ್ಟರೆ ಅಪರಾಧ ಬ್ಯಾಡವೆಂದರಾನು ಮಾಡುವುದಪರಾಧ ಈಡಿಲ್ಲ ನಿನ್ನ ದಯೆಯೆತೆಂದು ನಾ ನಿಂದು ಮಾಡುವೆ ಬಿನ್ನಪ ನಾಚಿಕಿಲ್ಲದೆಲೆ 2 ಬೇಡಿಕೊಂಬೆನೊ ವಾಸುದೇವವಿಠಲ ನೀನು ನೋಡದಿದ್ದರೆ ಭಕ್ತ ಜನರು ತಮ್ಮಾ ಬೀಡು ಸೇರಲೀಸರೊ ಕೇಡೇನೊ ಇದಕಿಂತ ಕೃಪಣ ವತ್ಸಲ ಕೃಷ್ಣ 3
--------------
ವ್ಯಾಸತತ್ವಜ್ಞದಾಸರು
ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ ಘನವಲ್ಲ ನಿನಗಿದು ತೆರೆದ ಬೀಗ ಜೋಡಿಸುವುದು ಪ ವದನದಿಂದಲಿ ನಿನ್ನ ಮಹಿಮೆ ಪೊಗಳಲರಿಯದೆ ಸದನದಿ ಅನ್ಯರ ಪಾಡುತ್ತಿದ್ದೆನೇನೋ 1 ಪಾಡದಿದ್ದರೆ ನಾನೊಬ್ಬ ನೋಡಿ ಬಂದದ್ದೇನೊ ನಿನಗೆ ಬೇಡಿಕೊಂಬೆನೊ ಬಾಯ ಬೀಗ ತÉಗೆಸೊ ಹರಿಯೆ 2 ವೇದ ಪೊಗಳಲರಿಯದ ವಿಜಯ ರಾಮಚಂದ್ರವಿಠಲನ್ನ ಮೋದಮಯ ದೇವ 3
--------------
ವಿಜಯ ರಾಮಚಂದ್ರವಿಠಲ
ಕಾಡುವ ದುರಿತಗಳನು ಬಿಡಿಸೆಂದುಬೇಡಿಕೊಂಬೆನೊ ದೇವ ನಾ ನಿನ್ನ ಪ ಅಡಿದಾಸನೆಂಬೋ ಎನಗೊಂದು ದೃಢ ಬುದ್ಧಿಯು ಇಲ್ಲದೆಮಡದಿ ಮಕ್ಕಳೆಂಬೊ ಕಡಲೊಳು ಮುಳುಗಿದೆಕಡೆ ಹಾಯಿಸೊ ಎನ್ನೊಡೆಯ ನೀನಾದಡೆ 1 ಆಸೆಗಳ ಆಧಿಕ್ಯದಿಂದೀ ಪರಿಯ ಯಮಪಾಶಕ್ಕೆ ಒಳಗಾದೆನೋಮೀಸಲೂಳಿಗವ ಮಾಡದೆಯೆ ಪರಿಪರಿಯಕ್ಲೇಶದಿಂದಲಿ ಗಾಸಿಗೊಂಡೆನಯ್ಯ 2 ಪಾಡುವೆನು ನಿನ್ನ ನಾಮ ಸೀತಾರಾಮಆಡುವೆನು ಮನದಣಿವ ತನಕಬೇಡಿಕೊಂಬೆನೊ ನಿನ್ನ ಭಕ್ತರ ಸೇವೆಯನುಬಾಡದಾದಿಕೇಶವ ಭಕ್ತವತ್ಸಲನೆ3
--------------
ಕನಕದಾಸ
ಕೃತಿ 5 ಇಂದು ಎನಗೆ ಗೋವಿಂದ ನಿನ್ನ ಪಾದಾರ ವಿಂದವ ತೋರೊ ಮುಕುಂದ ಪ ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧರ ಆನಂದ ಇಂದಿರಾ ರಮಣ ಅ.ಪ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನು ಎಂದೆನ್ನ ಕುಂದುಗಳೆಣಿಸದೆ ಕಂದರ್ಪ ಜನಕನೆ 1 ಮೂಢತನದಿ ಬಹು ಹೇಡಿ ಜೀವ ನಾನಾಗಿ ದೃಢಭಕುತಿಯನು ಮಾಡಲಿಲ್ಲವೊ ಹರಿಯೆ ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ 2 ಧಾರುಣಿಯೊಳು ಭೂಭಾರ ಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ ಧೀರ ವೇಣುಗೋಪಾಲ ಪಾರಗಾಣಿಸೊ ಹರಿಯೆ 3
--------------
ವಿಜಯೀಂದ್ರತೀರ್ಥರು
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ಪ ಭವ ಘೋರ ನಾಶನವಾರಿಜಾಸನ ವಂದ್ಯ ನೀರಜಸಾರ ಸದ್ಗುಣ ಹೇ ರÀಮಾಪತೆ ಅ.ಪ. ನೋಡೋ ದಯದಿಂದೆನ್ನ-ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿಬೇಡಿಕೊಂಬೆನೊ ನಿನ್ನ-ಆನಂದ ಘನ್ನಮಾಡದಿರು ಅನುಮಾನವನು ಕೊಂ -ಡಾಡುವೆನು ತವ ಪಾದಮಹಿಮೆಗಳನುಜೋಡಿಸುವೆ ಕರಗಳನು ಚರಣಕೆಕೂಡಿಸೊ ತವ ದಾಸಜನರೊಳು 1 ಹೇಸಿ ವಿಷಯಗಳಲ್ಲಿ-ತೊಳಲ್ಯಾಡಿ ನಾ ಬಲುಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿಏಸು ಜನುಮದ ದೋಷದಿಂದಲಿಈಸುವೆನು ಇದರೊಳಗೆ-ಇಂದಿಗೆಮೋಸವಾಯಿತು ಆದುದಾಗಲಿಶ್ರೀಶ ನೀ ಕೈಪಿಡಿದು ರಕ್ಷಿಸು 2 ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆದೀನ ಜನರಿಗೆ ಬಂಧು-ನಾ ನಿನ್ನ ಸೇವಕಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧುಪ್ರಾಣಪತಿ ಹೃದಯಾಬ್ಜಮಂಟಪ-ಸ್ಥಾನದೊಳಗಭಿವ್ಯಾಪ್ತ ಚಿನುಮಯಧ್ಯಾನಗೋಚರನಾಗಿ ಕಣ್ಣಿಗೆಕಾಣಿಸುವೆ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ಬೇಡಿಕೊಂಬೆನೊ ಗೋಪಾಲ ನಿನ್ನ ಬೇಡಿಕೊಂಬೆ ಕರಗಳೆರೆಡ ಪ ಜೋಡಿಸಿ ನಿನ್ನೊಳು ಸುದೃಢ ಭಕುತಿ ಮಾಡಿ ಸತತ ಭಜಿಸುವಂಥ ರೂಢಿ ಎನಗೆ ಕೊಡು ನೀನೆಂದು ಅ.ಪ ಕ್ಲೇಶಪಡಿಸದೆ ಸಲಹೆನ್ನ ಜಗಂಗಧೀಶ ಮರೆಯದೆ ಬಾರದ್ಯಾಕೊ ಕರುಣ ಲೇಶಗುಣನಿಧೆ ಆಶಾಪಾಶ ಬದ್ಧನಾಗಿ ದೇಶ ದೇಶ ತಿರುಗಿ ಕರುಣ ದುರುಳ ವಸುಮತೀಶರೊಳ್ ಬೇಡಿಸದಂತೆ 1 ಇಂದುವzನÀನೆ ಮುನಿವರ್ಯಹೃದರ ವಿಂದಸದನೆ ವರಗೋಪಯುವತಿ ಬೃಂದಮದನನೆ ಇಂದಿರೇಶ ನಿನ್ನ ಪಾದಾರವೃಂದಗಳನು ಹೃದಯವೆಂಬೊ ಮಂದಿರದೊಳಗೆ ನಿಲ್ಲಿಸಿ ಚಿದಾ- ನಂದಮೂರ್ತಿಯ ಪೂಜಿಪೆನೆಂದು 2 ಧೀರ ಚರಣನೆ ಮುರಾರಿ ಧರಣಿ ಭಾರಹರಣನೆ ಭುಜಗೇಶಫಣಿ ವಿದಾರಿ ಚರಣನೆ ಮಾರಜನಕ ನೀರಜಾಕ್ಷ ನಾರಸಿಹ್ಮ ನಾಮಗಿರೀಶ ಸಾರ ಎನಗೆ ತಿಳಿಬೇಕೆಂದು 3
--------------
ವಿದ್ಯಾರತ್ನಾಕರತೀರ್ಥರು
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ ಅಡಿಯ ಮರೆಯೆನೊ ಪ ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ ನಾಥ ಪ್ರೀತ ಮುಕ್ತಿದಾಯಕ ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1 ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ ರಮಾ ಸತ್ಯಭಾಮಾ ಮನೋಹರ ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2 ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ ವಿಧದಿ ಬೇಡ್ವೆ ಸುದಯವಂತನೆ ಸುದತಿ ಮಾಡಿದಂಥ ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3
--------------
ರಾಮದಾಸರು