ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಿಕೊಂಬೆನೆ ವರವ ನಾ ನಿನ್ನ ಮಾಲಕ್ಷ್ಮಿತಾಯಿ ಮಾಡಿ ದಯವನು ನೋಡೆ ನೀ ಎನ್ನ ಪಾಡಿ ಕೊಂಡಾಡುವೆನು ಪಂಚಗಂಗಾ ತೀರದಲಿ ಕರವೀರ ವಾಸಿಯೆ ಪ ಒದೆಯುತಿರಲು ಆ ಪಾದದಿ ಬಂದು ಪದುಮಾಕ್ಷ ಮುನಿಯ ಮುದದಿ ಮನ್ನಿಸಿ ಕಳುಹುತಿರೆ ಕಂಡು ಒದಗಿ ಬಂದ ಕೋಪದಿಂದ ಯದುನಾಥನ ಎದೆಯಿಳಿದು ಬೇಗನೆ ಕದನ ಮಾಡುತ ಕೊಲ್ಲಾಪುರವನು ಸದನ ಮಾಡಿದೆ ಸುಂದರಾಂಗಿಯೆ 1 ಬಿಟ್ಟು ನಿನ್ನ ವೈಕುಂಠದಿ ಹರಿಯು ಇಳಿದು ಅಂಜನಾ ಬೆಟ್ಟದಲಿ ನಿಂತಿದ್ದನೆ ಬಂದು ಪಟ್ಟದರಸಿಯು ನೀನು ಜನಕನ ಪುತ್ರಿಯಾದ ಕಾಲದಲಿ ಕೊಟ್ಟ ವಚನವ ನಡೆಸಿ ಪತಿಗೆ ನೀ ಪತ್ನಿಮಾಡಿದೆ ಪದ್ಮಾವತಿಯ 2 ರಮ್ಯವಾದ ರಜತ ಹೇಮಗಳು ಗುಡಿಗೋಪುರಗಳು ನಿನ್ನಶಿರ ಶೃಂಗಾರಾಭರಣಗಳು ಅಮ್ಮ ತ್ರಿಜಗದಂಬಾ ನಿನ್ನ ಮುಖ ಒಮ್ಮೆ ನೋಡಲು ಧನ್ಯರಾಗೋರು ಬ್ರಹ್ಮನಪಿತನರಸಿ ಎನಗೆ ನೀ ರಮ್ಮೆಪತಿಪಾದಾಂಘ್ರಿ ತೋರಿಸೆ 3 ಪಕ್ಷಿವಾಹನನ್ವಕ್ಷಸ್ಥಳದಲ್ಲಿ ಆವಾಸವಾಗಿ ಲಕ್ಷ್ಮಿ ನೀ ಅಧ್ಯಕ್ಷಳಾಗಿದ್ದು ಇಕ್ಷುಚಾಪನ ಜನನಿ ಕರವೀರ ಕ್ಷೇತ್ರದಲಿ ಪ್ರತ್ಯಕ್ಷಳಾಗಿ ಮೋಕ್ಷಾಪೇಕ್ಷಿಗಳಾದ ಜನರಿಗೆ ರಕ್ಷಿಸಿ ವರಗಳ ಕೊಡುವ ಮಾತೆಯೆ4 ನೇಮದಿಂದಲಿ ನಮಿಸುವೆನು ನಿನಗೆ ಮಾಲಕ್ಷ್ಮಿತಾಯಿ ಪ್ರೇಮದಿಂದಲಿ ಪಾಲಿಸಿ ನೀನು ಶ್ಯಾಮವರ್ಣನ ದಿವ್ಯ ಸಾಸಿರ ನಾಮ ನಾಲಿಗೆಲಿರಲು ನಿಲಿಸಿ ಭೂಮಿಗೊಡೆಯ ಭೀಮೇಶಕೃಷ್ಣನ ಧಾಮದ ದಾರಿಗಳ ತೋರಿಸೆ 5
--------------
ಹರಪನಹಳ್ಳಿಭೀಮವ್ವ
ಆರೋಗಣೆ ಮಾಡಮ್ಮ ಮಂಗಳಗೌರಿ ಬೇಡಿಕೊಂಬೆನೆ ನಿನಗೆ ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆ ಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ಪ ನಂದಿವಾಹನನರ್ಧಾಂಗಿಯ ಪೂಜಿಸಿ ಗಂಧಕುಂಕುಮದಿಂದ ತಂದು ಕಸ್ತೂರಿ ಕಮಲದ ಪುಷ್ಪಗಳುಡಿ ತುಂಬಿ ನೈವೇದ್ಯವ ತಂದಿರಿಸುವೆ ತಾಯೆ 1 ಅಚ್ಚ ಮುತ್ತಿನ ಹರಿವಾಣದಿ ಮಾಲತಿ ಬಟ್ಟ್ಟಿವಿ ಗೌಲಿಗಳು ಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸ ಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಪ್ಪ 2 ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ ದುಂಡುಗುಳ್ಳೋರಿಗೆಯು ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯ್ಗಳು ಅಂದವಾದ ಕಾಯಿರಸ ಶಾಖ ಪಾಕವು 3 ಸಣ್ಣ ಅಕ್ಕಿಯ ಶಾಲ್ಯಾನ್ನಕೊಪ್ಪುವ ತವ್ವೆ ಇನ್ನು ದಧ್ಯನ್ನಗಳು ಸನ್ಮತವಾಗಿದ್ದ ಶಾವಿಗೆಫೇಣಿ ಸಕ್ಕರೆ ರುಬ್ಬಿದ ಆಂಬೊಡೆ ರುಚಿಯಾದ ಕಲಸನ್ನ 4 ಘೃತ ಸೀಕರ್ಣೆ ಕಾಯ್ಹಾಲು ಹೊಯ್ಗಡುವನಿಟ್ಟು ಸಾರು ಸಾಂಬಾರ ಚಟ್ಟಣಿ ಕೋಸಂಬರಿ ನೀರೆ ನಿನಗೆ ಪನ್ನೀರು ತಂದಿರಿಸುವೆ 5 ದೇವಿ ನಿನ್ನ ಮನೋಭಾವ ತಿಳಿದು ನಾ ಭೀಮೇಶಕೃಷ್ಣನಿಗೆ ಬ್ಯಾಗ ಸಮರ್ಪಣೆ ಮಾಡಲು ಮಹಾದೇವ ಸ್ವಾದ ಸವಿದಾಸುಖದಿಂದಡ್ವಿಳ್ಯವ ಕೊಳ್ಳೆ 6
--------------
ಹರಪನಹಳ್ಳಿಭೀಮವ್ವ
ನೋಡೆಲೆ ಸುಮತಿ ಪೆಣ್ಮಣಿಗೊಲಿದ ಗಾಡಿಗಾರ ಚೋರ ರೂಢಿಗೆ ರಂಗ ಪ. ಈಡುಂಟೇ ಶತ ಜೋಡಿಶೆ ಶಿಶುಗಳ ಬೇಡ ಪಂಥ ನಿನ್ನ ಬೇಡಿಕೊಂಬೆನೆ ಕುಮತಿಅ.ಪ. ಅಪ್ರಾಮೇಯನ ಗುಡಿಯೊಳಗಿದನೆ ಸುಪ್ರಕಾಶ ಎನ್ನಪ್ಪಾ ಮುಂಗುರುಳುಗಳೊ ಳೊಪ್ಪುತಲಿಹನೆ ಬೆಡಗಿಂದೊಡನೆ ಅಪ್ಪನ ಬ್ರಹ್ಮಗಂಟುಡಿದಾರ ಉಡುಗೆಜ್ಜೆ ಬೊಮ್ಮ ನಪ್ಪ ಅಂಬೆಗಾಲಿಕ್ಕಿ ನೆಲಸಿಹನೆ ಕಂ ದರ್ಪ ಕೋಟಿ ತೇಜದಿ ಮೆರೆವನ 1 ಅರವಿಂದದಳ ವೆಂಕಟನಿರುವಲ್ಲೆ ತಿರುಮಲ ನಾರಾಯಣ ಚರಿತಾಪ್ರಮೇಯ ಚೆÉನ್ನಪಟ್ಟಣ ತೀರ ಮುಳೂರಲ್ಲೆ ಸರಸ ಸಂಚರಿಸುವ ವರ ಚೈತ್ರದ ರಥ ಅರಿವಿಲ್ಲವೆ ಕಣ್ತೆರೆದು ನೋಳ್ಪರಿಗೆ ದುರಿತ ದೂರ ಕಣಿ ವರಪ್ರದ ದೇವ ಅರಿದವರಿಗೆ ಕಣ್ ತೆರೆವನು ದೇವ ನೋಡೆ 2 ಅಪ್ಪ ಕೃಷ್ಣಗೆ ಬೆಣ್ಣೆ ಹಣ್ಣನುಗೊಡಲು ಇಪ್ಪನೆ ತನಯರನು ಸುತ್ತೇಳು ಲೋಕದಿ ನೋಡಲು ಇಲ್ಲೆಲ್ಲೆಲ್ಲೂ ಶಿಶು ಇಹನಲ್ಲೇ ಅಪ್ಪ ಶ್ರೀ ಶ್ರೀನಿವಾಸ ಒಪ್ಪನೋ ತಪ್ಪನೆಲ್ಲವಪ್ಪಿಪ್ಪನೊ ಕರುಣವ ಸರ್ಪಶಯನ ತಿಮ್ಮಪ್ಪನ ಕರುಣ ಒಪ್ಪ ತೆರದಿ ಸ್ತುತಿ ಮಾಡುವ ಬಾರೆ 3
--------------
ಸರಸ್ವತಿ ಬಾಯಿ
ಭಾರತೀ ದೇವೀ ನಿನ್ನನು ದಿನಾ | ಸಾರುವರ ಕಾಯ್ವೀ ||ಮಾರಮಣನಪಾದವಾರಿಜಯುಗದಲೀ |ಚಾರುಭಕುತಿ ಕೊಡು ನಾರೀ ಶಿರೋಮಣಿ ಪಇಂದ್ರಸೇನಳೆವಿಪ್ರಕನ್ನಿಕೆ | ಚಂದ್ರೇ ಶ್ರೀಕಾಳೆ |ನೊಂದೆನೆ ಬಹಭವ| ಬಂಧನದೊಳು ವೇಗಾ |ದಿಂದ ಕಾಯೆ ಕರುಣಾಸಿಂಧುದ್ರೌಪದಿ ದೇವಿ 1ಮಾತೆ ಕೇಳೆಲೆ ಭವಟವಗೆ | ವೀತಿಹೋತ್ರಳೆ ||ಮಾತು ಮಾತಿಗೆ ಜಲಜಾತನಾಭನ ಸ್ತುತೀ |ಆತುಕೊಂಡಿರಲೆ ಶ್ರೀ | ಮಾತರಿಶ್ವನಾ ರಾಣೀ 2ಪತಿತ ಪಾವನೆ | ಶಿವ ಕನ್ಯಾ ಜಗದ್ವಿತತೆ ಜೀವನೆ ||ನುತಿಸಿಬೇಡಿಕೊಂಬೆನೆ | ಕ್ಷಿತಿಯೊಳೆಲ್ಲರೂ ಸನು |ಮತವನೈದಿ ಈ ಕೃತಿಗೆ ಮಂಗಳವೀಯೆ 3ದೋಷ ದೂರಳೇ | ಹರಿಭಕ್ತಿಯಲ್ಲಿ ಮೋಸ ತೋರಳೆ ||ಕಾಶಿ ನಂದನೆಯನ್ನಾ | ಯಾಸ ಬಡಿಸದಲೀ |ಶ್ರೀಶನ ಕಥಿಗೆ ವಿಶೇಷ ಬುದ್ಧಿಯನೀಯೆ 4ಮಾನನಿನ್ನದೆ | ಸತತ ಪೇಳ್ವದೇನು ಮಾಣದೇ ||ಪ್ರಾಣೇಶ ವಿಠಲನ ಧ್ಯಾನದೊಳಿರುವಂತೆ |ಪೋಣಿಸುವದು ಮತಿ ಬಾಣ ವರದ ನುತೆ5
--------------
ಪ್ರಾಣೇಶದಾಸರು