ಬೇಡಿಕೊಂಬೆಗೋಪಾಲ ಬೇಡುವೆನೈ ದಯ ಪ
ಮಾಡಿ ಎನ್ನೊಳು ಬೇಗ ಗಾಢ ಮಹಿಮ ವರ
ನೀಡೋ ಕೃಪಾಂಬುಧೇ ಅ.ಪ
ಮರುಳನಾಗಿ ನಾನು ತಿರುಗುವೆ ಧರೆಯೊಳು
ಸಿರಿವರ ನಿಮ್ಮಯ ಚರಣವ ಸ್ಮರಿಸದೆ
ಪರಿ ನರಕಕ್ಕೆ ಗುರಿಯಾದೆ
ಮುರಹರ ಕರುಣದಿಂ ಮನ್ನಿಸಿ ಪೊರೆ ಸುರವರ 1
ದೀನದಯಾಪರ ಜಾನಕೀ ಮನೋಹರ
ನೀನೆ ಗತಿಯೆಂದು ಧ್ಯಾನಿಸಿ ಬೇಡುವೆ
ಹೀನನ ಮಾಡದೆ ಧ್ಯಾನಿಪ ಭಕ್ತನಂ
ಮಾನದಿಂ ರಕ್ಷಿಸು ವೇಣುಧರಹರಿ2
ಸುರುಪರೀಶ ಹರಿ ಚರಣದಾಸರ ಮೊರೆ
ಕರುಣದಿ ಆಲಿಸಿ ಕರಪಿಡಿದು ಪೊರೆ
ನೆರೆನಂಬಿದೆ ನಿಮ್ಮ ಚರಣವ ಪರಿಪರಿ
ಪರಮಪಾವನ ಮಾಡು ಸಿರಿವರ ಶ್ರೀರಾಮ 3