ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆರೆನಂಬಿದೆನು ನಾನಿನ್ನ ಪಾದಾಂಬುಜವನು ಕರುಣದಿ ಸಲಹೋ ಎನ್ನಾ ಪ ಹರನದೊಡೆಯ ಗೌರಿ ವರನಾಗಿ ಮೆರೆದಿಹ ಸ್ಮರಹರ ಕರ್ಪೂರ ಧವಳಾಂಗಾ ರಿಪುಭಂಗಾ ದೇವತುಂಗಾ ಮೃಢೇಶ್ವರಲಿಂಗಾ ದೇವರದೇವ ನೀನೆಂದು ರಾವಣ ಬಂದು ದೇವಾ ನೀ ಸಲಹೋ ಇಂದು ಭಾವಕಿ ಬೇಡಿಕೊಂಡರೆ ಭಾವಜೆಯವಗೆ ನೀ ಪಾರ್ವತೀಶ್ವರನೇ ನೆರೆ ಹರಿಧರಹರನೀನೆಂದು ಹರಿಯುತಾ ಬಂದು ಹರನೆ ರಕ್ಷಿಸೋ ನೀ ಎಂದು ಕರದು ಹರಿಮಿತ್ರನ ಕರುಣದಿ ವರವಿತ್ತ ಕರಿಗೊರಳನೆ ಅಮಿತಸರ್ವೇಶಾ ನೆರೆ ಪಡುಗಡಲೊಡೆಯನೆಂದು ಪಾಡುತಬಂದು ಪೊಡವಿಯೊಳ್ ಸ್ತುತಿಪನೆಂದೂ ಒಡೆಯ ಲಕ್ಷ್ಮಣನಿಗೆ ಒಡನೆ ಅಭಯವಿತ್ತ ರಿಪುಭಂಗಾ ಹರನೆ ಭಸಿತಾಂಗಾ
--------------
ಭಟಕಳ ಅಪ್ಪಯ್ಯ
ಯಾಕೆ ಬಾರನಕ್ಕಯ್ಯ ಎನ್ನಯ ಪ್ರಾಣನಾಥನ ಕರೆತಾರೆ ಸೈರಿಸಲಾರೆ ಪ. ಸೋಗೆಗಂಗಳ ಸನ್ನೆ ಮಾಡಿ ಪೊಳೆದು ಪೋದ ಮೇಘದ ಮಿಂಚಿನಂತೆ ಮಂದರೋದ್ಧಾರ ಬಾಗಿದ ಮುಖವೆತ್ತಿ ಎನ್ನ ನೋಡದೆ ಪೋದ ಹ್ಯಾಂಗ ಮಾಡಲಿ ಸಖಿಯೆ ಹೇಳಲಿ ಪ್ರಿಯೆ 1 ಕರವೊಡ್ಡಿ ಬೇಡಿಕೊಂಡರೆ ಒಲ್ಲದೆ ಪೋದ ಕರೆದರೆ ಪಿತನಾಜ್ಞೆ ತೋರುತಾನೆ ನಿರುತದಿ ಏಕಪತ್ನಿಯ ವ್ರತನೆನುತ ಸರಿಬಂದ ಸತಿಯರ ಒಡನಾಡುತೈದಾನೆ ಗರುವತನವ ಬಿಡನೆ ಗೋವ ಕಾಯ್ವವನೆ 2 ಸುಮ್ಮನೆ ಲಜ್ಜೆಭಂಗವ ಮಾಡಿ ಪೋದನೆ ಒಮ್ಮೆ ಮನೆಗೆ ಬಾರನೆ ವಾಜಿವಾಹನನೆ ತಮ್ಮ ಧ್ಯಾನದೊಳೆನ್ನ ಮನಸು ನಿಲ್ಲಿಸಿ ಪರ- ಬೊಮ್ಮ ಮೂರುತಿ ಹೆಳವನಕಟ್ಟೆರಂಗನ ಘಮ್ಮನೆ ಕರೆದುತಾರೆ ಸೈರಿಸಲಾರೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಯಾರಿಗೆ ದೂರುವೆನು ಗಿರಿಯ ರಾಯ ಯಾರೆನ್ನ ಸಲಹುವರು ಪ ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ ವಾರಿಜವನು ತೋರಿ ಕಾರುಣ್ಯವೆನಗೀಯೊ ಅ.ಪ ಕಷ್ಟ ಜನ್ಮದಿ ಬಂದೆನು ಧಾರುಣಿಯೊಳು ದುಷ್ಟರಿಂದಲೆ ನೊಂದೆನು ನಿಷ್ಟುರ ಬೇಡವೊ ನಿನ್ನ ನಂಬಿದ ಮೇಲೆ ಸೃಷ್ಟಿಪಾಲಕ ಎನ್ನ ಬಿಟ್ಟು ಕಳೆಯಬೇಡ 1 ಹಿಂದೆ ಮಾಡಿದ ಕರ್ಮವು ಈ ಭವದೊಳು ಮುಂದಾಗಿ ತೋರುತಿದೆ ಇಂದಿಲ್ಲ ಗತಿಯದರಿಂದ ನೊಂದೆನು ನಾನು ಮಂದರಧರ ಗೋವಿಂದ ನೀನಲ್ಲದೆ 2 ಹಗಲುಗತ್ತಲೆ ಸುತ್ತಿಯೆ ಕಂಗೆಡಿಸುತ್ತ ಹಗೆಯೊಳು ನಗಿಸುತಿದೆ ಉಗುರಿನಸಿಗಿಗೆ ಮಚ್ಚುಗಳೀಗ ನಾಟ್ಯವು ಸೊಗಸು ಹಾರಿಸಿ ಎದೆ ದಿಗಿಲುಗೊಳಿಸುತಿದೆ 3 ಬಾಡಿದ ಅರಳಿಯನು ಕಲ್ಲೀನ ಮೇಲೆ ಈಡಾಗಿ ನಟ್ಟಿದರೆ ಬೇಡಿಕೊಂಡರೆ ತಳಿರ್ಮೂಡಿ ಬರುವುದುಂಟೆ ರೂಢಿಗೊಡೆಯ ನೀನು ನೋಡದಿದ್ದರೆ ಮೇಲೆ 4 ಹಲವು ಪರಿಯ ಕಷ್ಟವ ನಿನ್ನಯ ಪದ ಜಲಜದ ಕರುಣದಲಿ ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ ಒಲವಾಗೆನ್ನೊಳು (ವರಾಹತಿಮ್ಮಪ್ಪ)15
--------------
ವರಹತಿಮ್ಮಪ್ಪ
ಯಾರು ಇಕ್ಕುವರೆಂದು ಹಾರೈಸುವೈ ಆತ್ಮ ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು ಕಲಹ ಮಾಳ್ಪಳು ತನ್ನ ಕುಲವನಿತೆಯು ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ ಫಲವುಳ್ಳ ಮನೆಗಳನು ಸೇರೆಲವೊ ಆತ್ಮ 1 ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು ಕೂಗುವುದು ಹುಲಿ ಕರಡಿ ಇದಿರಿನೊಳಗೆ ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು ನಾಗಶಯನನ ಗುಡಿಯ ಸೇರೆಲವೊ ಆತ್ಮ 2 ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ 3 ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು ಬೀಳುವುದು ಮೇಲೆ ಹದಿನಾರು ಭಿತ್ತಿಗಳು ಏಳು ಇಲ್ಲಿರಬೇಡ ಕಾಳಸರ್ಪನು ಬಂದು ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ 4 ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ ಆರು ಪಥದಲಿ ನೀನು ಮೀರಿ ನಡೆದೆ ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ ಆರ ವ್ಯಾಪಾರವನು ಕೇಳಿದೈ ಆತ್ಮ 5 ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು ಬತ್ತುವುದು ಕೈಕಾಲು ಬಳಲಿಕೆಯೊಳು ಮತ್ತೇಳು ಮಂದಿ ತಾವತ್ತತ್ತ ಸಾರುವರು ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ 6 ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು ಗಂಟ ಕಟ್ಟಿಯೆ ಮನದಿ ಮರುಗುತಿರಲು ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ ನಂಟರನು ನಾ ಕಾಣೆ ಆಲಿಸೈ ಆತ್ಮ 7 ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ ದಾಯವಿಲ್ಲದ ಊರು ಕರಕಷ್ಟವು ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ- ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ 8 ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ ನೀಡುವನು ಧರ್ಮವನು ಧೈರ್ಯನಾಗಿ ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ 9
--------------
ವರಹತಿಮ್ಮಪ್ಪ
ನನಗೆ ಮನಕೆ ಬಡಿದಾಟೆಳೆದಾಟ ಶ್ರೀಸನಕಾದಿವಂದ್ಯ ಬಿಡಿಸಿ ಕಾಯೊದಾತಪ.ಸಲಿಲಸ್ನಾನವ ಮಾಡಿ ಊಧ್ರ್ವ ತಿಲಕವನಿಟ್ಟುನಳಿನಾಕ್ಷ ನಿನ್ನಂಘ್ರಿ ಜಪಿಸೆಂದರೆಛಲದಿಂದ ವಿಹಿತವಲ್ಲದ ದಾರಿಗೊಯ್ದೆನ್ನತೊಳಲಿಸಿ ನೆಲೆಗಾಣಿಸದೆ ಛಲವಿಡಿದಿದೆ 1ಬೇಡಿಕೊಂಡರೆ ಕೇಳದಾಡಿಕೊಂಡರೆ ಕೇಳದೀಡಾಡಿ `ಬಿಸುಟೆನ್ನ ದಣಿಸುತಿದೆನೋಡುನಾನಾಕ್ರೋಶ ಮಾಡಿದರಂಜದುಬಾಡಿ ಬಳಲಿದೆನೆನ್ನ ಕರುಣಿಲ್ಲವಿದಕೆ 2ಮನಪಶುಕಟ್ಟಲು ಜ್ಞಾನಧಂಗಡವಿಲ್ಲಘನವೈರಾಗ್ಯದ ಕಟ್ಟು ದೃಢವಿಲ್ಲವುಮಿನುಗುವ ಭಕುತ್ಯೆಂಬ ಎಳೆಹುಲ್ಲಿನಾಸಿಲ್ಲನೀನೆ ವಶಮಾಡಿಕೊ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ನೋಡುನೋಡು ನೋಡು ಕೃಷ್ಣಾ |ಹೇಗೆ ಮಾಡುತಾನೆ |ಬೇಡಿಕೊಂಡರೆ ಬಾರ ಕೃಷ್ಣ |ಓಡಿ ಹೋಗುತಾನೆ ಪಕಂಡಕಂಡವರ ಮೇಲೆ ಕಣ್ಣು ಹಾಕುತಾನೆ |ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ ||ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ |ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ 1ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ |ಶರಣು ಹೊಕ್ಕರೆಯು ತಾನು ಕೊಡಲಿ ಮಸೆಯುತಾನೆ ||ಹರಿಯುವ ವಾನರರ ಕೊಡ ಹಾರಾಡುತಾನೆ |ಸಿರಿಕೃಷ್ಣ ಹಾಲು - ತುಪ್ಪ ಸೂರೆಮಾಡುತಾನೆ 2ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ |ನೀಲಗುದುರೆಯನೇರಿ ಹಾರಿಸಾಡುತಾನೆ ||ಬಾಲಕರ ಕೂಡಿಕೊಂಡು ಕುಣಿದಾಡುತಾನೆ |ಲೋಲಪುರಂದರ ವಿಠಲ ತಾನು ಕುಣಿಯುತಾನೆ3
--------------
ಪುರಂದರದಾಸರು
ಪ್ರಸನ್ನ ಶ್ರೀ ರಾಜರಾಜೇಶ್ವರ ಸ್ತೋತ್ರ ಹಾಗೂ ಶ್ರೀ ಕಪಿಲ43ರಾಜರಾಜೇಶ್ವರನೇ ರಾಜೀವವದನ ಶ್ರೀರಾಜರಾಜೇಶ್ವರಿ ಪತೇ ಶರಣು ಮಾಂಪಾಹಿರಾಜೀವಪಿತ ನೀನು ಕನ್ಯೆಯರಿಗೆವರಪ್ರಜಾಸಂಪತ್ ಉದ್ಯೋಗ ಈವಿ ಭಜಕರಿಗೆ ಪವೇಧಕಾಯಜಸ್ವಾಯಂಭುವ ಮನು ಶತರೂಪಾಈ ದಂಪತಿಗೆರಡು ಗಂಡುಗಳು ಪ್ರಿಯವ್ರತಉತ್ಥಾನಪಾದ ಮೂರು ಹೆಣ್ಣು ಮಕ್ಕಳುಅಕೂತಿ ದೇವಹೂತಿ ಪ್ರಸೂತಿ ಎಂಬುವರು 1ಶ್ರೀಪತಿಯೇ ನಿನ್ನ ಕಾರುಣ್ಯ ಬಲದಿಂದಸುಪುಣ್ಯ ಶ್ಲೋಕ ಆದಿಮನು ತನ್ನರೂಪಗುಣಶ್ರೇಷ್ಠ ಕನ್ಯೆಯರಿಗೆ ತಕ್ಕಾನು-ರೂಪವರರುಗಳಿಗೆ ಮದುವೆ ಮಾಡಿಸಿದನು2ಪುತ್ರಿಕಾ ನಿಯಮದಿ ಆಕೂತಿ ದೇವಿಯನುಸುತಪೋಧನ ಪ್ರಜೇಶ್ವರ ರುಚಿಗೆ ಕೊಟ್ಟನಿರ್ದೋಷ ಕಲ್ಯಾಣ ಗುಣಗಣಾರ್ಣವ ನೀನುಪ್ರಾದುರ್ಭವಿಸಿದಿ ಯಜÕಶ್ರೀಯು ದಕ್ಷಿಣಾದೇವಿಯು 3ಕರ್ದಮ ಪ್ರಜೇಶ್ವರರ ಭಕ್ತಿ ತಪಸ್ ಏನೆಂಬೆಶ್ರೀದ ನಿನ್ನಯ ಭಕ್ತ ವಾತ್ಸಲ್ಯಕ್ಕೆಣೆಯುಂಟೆಪದ್ಮಜನು ಕರ್ದಮಗೆ ಪ್ರಜಾಃಸ್ರುಜ ಎನ್ನಲುಭಕ್ತಿಯಿಂ ತಪಗೈಯೇ ಪ್ರತ್ಯಕ್ಷನಾದಿ 4ಸುಪುಷ್ಕರಾಕ್ಷ ನೀಸೂರ್ಯತೇಜಃಪುಂಜಪ್ರಪನ್ನರ್ಗೆ ಬೀರುವ ಕಾರುಣ್ಯನೋಟವಿಪುಲಾಬ್ಜವದನಸುಂದರಸುಳಿಗೊರಳುಸುಭ್ರಾಜಕುಂಡಲಕಿರೀಟದಹೊಳಪು5ಉರುಕಾಂತಿಯಿಂ ಜ್ವಲಿಪಅರಿಶಂಖ ಗದೆಯಶುಭ್ರೋತ್ಪಲ ಪುಷ್ಪ ಕರಗಳ ಹಿಡಿದಿಹಿವಿರಾಜಿಸುವ ಕೌಸ್ತುಭಶಿತ ಪದ್ಮೋತ್ಪಲಸ್ರಜಶ್ರೀರಮಣ ನಿನ್ನ ಶ್ರೀವತ್ಸ ಸೌಂದರ್ಯ ಏನೆಂಬೆ 6ದ್ವಿಷÉೂೀಡಶ ಶುಭಲಕ್ಷಣ ಸುಲಕ್ಷಿತಪುಷ್ಪಭವ ವರವಾಯು ಸಂಸೇವ್ಯ ಶ್ರೀಶಶೇಷಾಹಿ ಭೂಷಣಾದ್ಯಮರಸನ್ನುತನೀನುಪಕ್ಷಿಸೋಪರಿ ಅಂಬರದಿ ನಿಂತಿ 7ಉತ್ತಮಶ್ಲೋಕ ನಿನ್ನ ಕರ್ದಮ ಹರುಷದಿನೋಡಿಕ್ಷಿತಿಯಲ್ಲಿ ಬಿದ್ದು ಸನ್ನಮಿಸಿ ಸ್ತುತಿಸೇಮಾಧವನೇ ನೀನು ಹೇಳಿದಿ ಸ್ವಾಯಂಭುವನುಶತರೂಪಾ ದೇವಹೂತಿ ಸಹ ಬರುವನೆಂದು 8ಆ ಮನು ದಂಪತಿಯು ಮತ್ತು ದೇವಹೂತಿಯುಧರ್ಮನಿಷ್ಠರೂ ಸದ್ಗುಣಾದಿ ಶ್ರೇಷ್ಠರೆಂದಿರಮಣೀಯ ಆಕೆಯ ಕರ್ದಮರು ಪರಸ್ಪರ ಅರ್ಹರೆಂದಿಹೆಣ್ಣುಮಕ್ಕಳೊಂಬತ್ತು ಸ್ವಯಂ ನೀ ಅವತರಿಪಿ ಎಂದಿ 9ಸತಿಸುತಾ ಸಹ ಸ್ವಾಯಂಭುವ ಬರಲು ಮುನಿಯುಆದರದಿ ಸ್ವಾಗತ ನೀಡಿ ರಾಜನಲಿ ಯುಕ್ತಸದ್ಭೋಧ ರೂಪದಲಿ ಮಾತನಾಡೆ ಮನವುಬಂದ ಕಾರ್ಯ ಹೇಳಿದನು ವಿನಯ ಗಾಂಭೀರ್ಯದಿ 10ದುಹಿತ್ರು ಸ್ನೇಹ ಪರಿಕ್ಲಿಷ್ಟ ಮನದಿಂದ ದೀನನಾ ಹೇಳುವುದು ಕೃಪೆಯಿಂದ ಕೇಳಿರಿ ತಮ್ಮಬಹುಶೀಲಗುಣವಯಸ್ ರೂಪಾದಿಗಳಮಹರ್ಷಿ ನಾರದರು ಹೇಳಿ ಕೇಳಿಹಳು ದೇವಹೂತಿ 11ಸರ್ವಾತ್ಮನಾ ತಮಗೆಅನುರೂಪಗೃಹಿಣಿ ಅಗುವಳುಅವಳನ್ನ ದಯದಿಂದ ವಧುವಾಗಿ ಸ್ವೀಕರಿಸಿವಿವಾಹ ವಿಧಿಪೂರ್ವಕ ಮಾಡಿಕೊಳ್ಳಿರಿ ಎಂದುಈ ವಿಧದಿ ರಾಜ ಕೋರಲು ಮುನಿಯು ಒಪ್ಪಿದನು 12ಸಾಧು ಮಾತುಗಳಾಡಿ ಹಸನ್ಮುಖವ ತೋರಿಸಿಕರ್ದಮರು ಅರವಿಂದನಾಭನ್ನ ಸ್ಮರಿಸುತ್ತಶಾಂತವಾಗಿ ಸುಮ್ಮನೇ ಕುಳಿತರು ಆಗ ಮನುವಿಧಿಪೂರ್ವಬ್ರಾಹ್ಮಿವಿವಾಹಕ್ಕೆ ಏರ್ಪಾಡು ಮಾಡಿದನು 13ಶ್ರೀವರನೇ ನಿನ್ನಾನುಗ್ರಹ ಬಲದಿಂದಲೇದಿವ್ಯಾಭರಣ ಉಡುಗೊರೆ ವೈಭವದಿಂದದೇವಹೂತಿ ಕರ್ದಮರ ವಿವಾಹ ಮಾಡಿ ಕೃತಕೃತ್ಯಸ್ವಾಯಂಭುವ ಬರ್ಹಿಷ್ಮತಿ ಸೇರಿದನು 14ಕರ್ದಮರು ದೇವಹೂತಿಯು ಗೃಹಸ್ಥತನ ಚರಿಸಿದನುಪತಿಇಂಗಿತವರಿತು ಪಾರ್ವತಿ ಶಿವನಿಗೆಎಂತಹ ಸೇವೆ ಮಾಳ್ಪಳೋ ಅದರಂತೆ ಪ್ರೀತಿಯಿಂದಪತಿಸೇವೆ ಮಾಡುತ್ತಿಹಳು ದೇವಹೂತಿ ಸಾಧ್ವಿ 15ಯೋಗಾತಿಶಯ ಸಾಮಥ್ರ್ಯದಿ ಕರ್ದಮರುಕಾಮಗ ವಿಮಾನ ನಿರ್ಮಿಸಿ ದಾಂಪತ್ಯಸುಖ ವಿಹಾರವ ಮಾಡಿ ಹೇ ಸ್ವಾಮಿ ನಿನ್ನ ಕೃಪದಿಮಕ್ಕಳು ಸ್ತ್ರೀ ಪ್ರಜಾ ಒಂಭತ್ತು ಹುಟ್ಟಿದವು 16ಶ್ರೀಕರ ನಾರಾಯಣ ನೀ ಕಪಿಲಾವತಾರಆ ಕರ್ದಮರು ದೇವಹೂತಿ ಮಗನೆನಿಸಿಉತ್ಕøಷ್ಟ ಸಾಧು ಸಾಂಖ್ಯ ತತ್ವೋಪದೇಶವಅ ಕುಟಿಲ ಮಾತೆಗೆ ಬೋಧಿಸಿದ್ದು ಪ್ರಸಿದ್ಧ 17ಕರ್ದಮರ ಒಂಭತ್ತು ಕನ್ಯೆಯರು ಕಲಾ, ಅನಸೂಯ,ಶ್ರಧ್ಧಾ, ಹರ್ವಿಭೂ, ಗತಿ, ಕ್ರಿಯಾ, ಊರ್ಜಾ,ಶಾಂತಿಖ್ಯಾತಿಸಾಧ್ವಿಗಳಿವರು ಮರೀಚತ್ರಿ, ಅಂಗೀರ, ಪುಲಸ್ತ್ಯ ಪುಲಹಕ್ರತುವಶಿಷ್ಟಾ ಭೃಗುಗಳಿಗೆ ಮದುವೆ- ಆದರೀ ಕ್ರಮದಿ18ಐಶ್ವರ್ಯವಂತ ಸ್ವಾಯಂಭುವ ಮನು ತನ್ನ ಮಗಳುಪ್ರಸೂತಿಯನು ಬ್ರಹ್ಮಪತ್ರ ದಕ್ಷನಿಗೆ ಕೊಟ್ಟು ಆಕೆಪ್ರಸವಿಸಿದಳು ಷೋಡಶಾಮಲಲೋಚನೆ ಪುತ್ರಿಯರಸುಶೀಲ ಸಾಧ್ವಿಯರು ಮದುವೆ ಅದರು ಸುಲಭದಿ 19ಶ್ರಧ್ಧಾ, ಮೈತ್ರಿ, ದಯಾ, ಶಾಂತಿ, ತುಷ್ಟಿ, ಪುಷ್ಟಿ, ಕ್ರಿಯಾಉನ್ನತಿ, ಬುದ್ಧಿ, ಮೇಧಾ, ತಿತಿಕ್ಷಾ, ಹ್ರೀಮೂರ್ತಿಹದಿಮೂರು ಈ ಕನ್ಯೆಯರು ಮದುವೆ ಆದರು ಧರ್ಮಗೆಸಾಧ್ವಿ ಸ್ವಾಹಾಪತಿ ಅಗ್ನಿಪಿತೃಗಳ ಪತ್ನಿ ಅದಳು ಸ್ವಧಾ 20ಶ್ರೀ ರಮಾಪತಿ ನಿನ್ನ ಕಾರುಣ್ಯ ಏನೆಂಬೆಪಿತೃದೇವರೊಳ್ ಅಂತರ್ಗತನಾಗಿ ನೀನೇಪಿತೃದೇವರ್ಗಳನ್ನ ಪುತ್ರ ಸಂತಾನ ಬೇಕೆಂದುನರರು ಬೇಡಿಕೊಂಡರೆ ಭಕ್ತಿ ಮೆಚ್ಚಿ ಫಲವೀವಿ 21ಸತಿದೇವಿ ಭವನ ಪತ್ನಿಯಾದಳು ವಿಹಿತದಿಪತಿಭಕ್ತಿ ಪತಿಸೇವಾ ಸದಾರತಳು ಭವಾನಿಹದಿನಾರು ಕನ್ಯೇಯರ ದಕ್ಷನುಹರಿನಿನ್ನದಯದಿಮದುವೆ ಮಾಡಿ ಕೊಟ್ಟನು ಹಾಗೂ ಪುನರವತಾರದಲ್ಲೂ 22ಧನಹೀನರಿಗೂ ನೀನು ಉದಾರ ಕಾರುಣ್ಯದಿಧನಒದಗಿಸಿ ಮದುವೆ ಮಾಡಿಸುವಿಯೋಮುನಿವರ್ಯ ರುಚಿಕರಿಗೆ ವರುಣನ ದ್ವಾರ ನೀಕನ್ಯಾಶುಲ್ಕ ಒದಗಿಸಿ ವಿವಾಹ ಮಾಡಿಸಿದಿ 23ಪಶುಪತ್ನಿ ಸಂತಾನ ಯಜÕ, ಧನ ವಿವಾಹೋತ್ಸವಯಶಸ್ ತೇಜೋಬಲ ವೀರ್ಯ ಪ್ರಜಾಸೃಷ್ಟಿ ಅಧಿಕಾರಐಶ್ವರ್ಯ ಇಂತಹುದು ದಕ್ಷಗೆ ಬಹು ಕೊಟ್ಟು --ಅವನೋಳ್ ಇದ್ದುಯಶ ಎಂದು ಕರೆಸಿಕೊಂಬ ಶ್ರೀರಮಣ ಶ್ರೀಕರ --ನಮೋ ನಮೋ ನಿನಗೆ 24ನಂದಿನೀಧರ ಶಿವನೊಳ್ ಅಂತರ್ಯಾಮಿಯಾಗಿರುತಪುಂಸ್ತ್ರೀ ಪ್ರಜಾಸೃಷ್ಟಿ ಮುಂಜಿ ಮದುವೆ ಮಕ್ಕಳು ಮೊಮ್ಮಕ್ಕಳುಇಂಥಾ ಸಂತಾನ ಮತ್ತು ಆಯುಷ್ಯ ಸುಖವೀವಿ ಪ್ರಜಾತಿಹಿಅಮೃತಂ ಆನಂದ ಎಂದು ಕರೆಸಿಕÉೂಂಬ ನಿನಗೆ ಶರಣು 25ಮನು ಸ್ವಾಯಂಭುವ ದಕ್ಷ ಮರುತ ದೇವತೆಗಳೊಳ್ಶ್ರೀನಿಧಿಯೇ ನೀನಿದ್ದು ಪ್ರಜೋತ್ಪತ್ಯಾದಿಗಳನ್ನು ಈವಿಈ ನುಡಿಗಳ ಪಠಣ ಫಲ ಮೋಕ್ಷಹೇತು- ಸಜ್ಞಾನ ಲಾಭವುಇನ್ನೂ ಅವಾಂತರ ಫಲ ವಿವಾಹ ಸಂತಾನಆಯುರಾರೋಗ್ಯ ಉದ್ಯೋಗಪ್ರಾಪ್ತಿ26ಮಂದಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸಒಂದು ಪುತ್ರ ಬೇಕೆನ್ನೆ ಮೂವರನ್ನು ನೀ ಕೊಟ್ಟೆಅಂದು ನೀನೇ ತೋರ್ದಿ ಮಗನಾಗಿ ಮನುವಿಗೆಒಂದೇಮನದಿ ಇದು ಪಠಿಸೆ ನೀ ಒಲಿವೆ 27-ಇತಿ ಶ್ರೀ ರಾಜೇಶ್ವರ ಸ್ತೋತ್ರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಯಾರಲಿ ದೂರುವೆನೋ ಗಿರಿಯ ರಾಯಾಯಾರೆನ್ನ ಸಲಹುವರೋ ಪಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
--------------
ಪುರಂದರದಾಸರು