ಒಟ್ಟು 8 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಟ್ಟ ಭಾಗ್ಯವೆ ಸಾಕೋ ಶ್ರೀ ಪ ಕೃಷ್ಣನ ದಯಬೇಕೋ ದೇವ ಅ.ಪ ಸಾಸಿರ ಬಂದರೆ ಶಾಂತಿಯೆಂದರಿತೆನೊ ಸಾಸಿರ ಬಂದಿತು ಶಾಂತಿ ಕಾಣಲಿಲ್ಲ ಸಾಸಿರ ಸಾಸಿರವೇಸು ಬಂದವೋ ಕ್ಲೇಶವು ಏರಿತು ಮೋಸಹೋದೆನೊ 1 ಗಾಳಿಯ ಗುದ್ದಿ ಕೈ ಕೀಲು ಮರಿಯಿತೊ ಕೇಳುವುದಿಲ್ಲವೊ ನಾಳಿನ ಕೂಳನು ಕಾಲಕಾಲಕೆ ಹುಲಿ ಹಾಲನು ತರುತಿಹ ಬಾಲಗೋಪಾಲನ ಕೇಳಿ ಮೋಸಹೋದೆ 2 ಬೇಡವೆನ್ನುವರಿಗೆ ನೀಡುವ ದೊರೆ ನೀ ರೂಢಿಯ ಬಲ್ಲೆನೋ ಕಾಡುವುದಿಲ್ಲವೊ ನೀಡಿದ ಭಾಗ್ಯವು ಕೇಡುತರದೆ ಕಾ ಪಾಡಬೇಕೆಲೊ ಪ್ರೌಢÀ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು 1 ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ 2 ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ3
--------------
ವ್ಯಾಸರಾಯರು
ಮಟ್ಟುದೊರಿತು-ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ವೊಂದಿಷ್ಟುಕೊರತೆ ಕೃಷ್ಣನೆಂಬ 1 ಹೇಯ ಗುಣವಿಲ್ಲ ಮುನಿ-ಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ ||ಮಟ್ಟು|| 2 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ದತ್ಯಧಿಕ-ಕೊರತೆಯೆಂಬ ||ಮಟ್ಟು|| 3 ಜ್ಞಾನವಂತನೆಂದು ಬಹುಮಾನವಂತನಾದರೂ ಅ ಜ್ಞಾನ ಶೂನ್ಯನೆಂಬ ದೊಡ್ಡ ಹಾನಿಯೊಂದಿರುವದೆಂಬ4 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ5 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳ ನಪಹರಿಪ ದೀಪನಾ ಬಿಡದು ಎಂಬ ||ಮಟ್ಟು||6 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರುವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ ||ಮಟ್ಟು||7 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ ||ಮಟ್ಟು||8 ನಿತ್ಯ ತೃಪ್ತನಾದರೂ ನಿಜ-ಭೃತ್ಯರನ್ನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನು ನೀನಲ್ಲವೆಂಬ 9 ಕಷ್ಟಪಡಬೇಡವೆನ್ನೊ-ಳೆಷ್ಟು ದುರ್ಗುಣಂಗಳಿಹ ವಷ್ಟನು ವೊಪ್ಪಿಸಿ ನಿನಗಿಷ್ಟನಾಗಬೇಕೆಂಬ ||ಮಟ್ಟು|| 10 ಕ್ಷೀರದಧಿನವನೀತ-ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ ||ಮಟ್ಟು||11 ಕೊರತೆಯೆಂಬಾಜನರಿಗೆಲ್ಲ-ವರವನಿತ್ತು ಪೊರೆವೆನೆಂಬ ವರದವಿಠಲನೆಂಬ ||ಮಟ್ಟು|| 12
--------------
ಸರಗೂರು ವೆಂಕಟವರದಾರ್ಯರು
ಮುಟ್ಟು ದೋರಿತು ನಿನ್ನ ಗುಟ್ಟು ಹಾರಿತು ಪ ಸಿಟ್ಟುಗೊಳ್ಳಬೇಡವೆನ್ನ ದೃಷ್ಟಿಯಿಂದ ನೋಡಿ ಕಂಡೆ ಅಷ್ಟಸಿದ್ಧಿಗಳಿದ್ದರೂ ಒಂದಿಷ್ಟು ಕೊರತೆ ಕೃಷ್ಣನೆಂಬ ಅ.ಪ ಹೇಯಗುಣವಿಲ್ಲ ಮುನಿಗೇಯ ನಿನ್ನೊಳೆಂಬ ಜನರ ಬಾಯ ಮುಚ್ಚಿಸುವೆನೆಂದತ್ಯಾಯಸಪಡುವನೆಂಬ 1 ಸತ್ಯಕಾಮನಹುದು ನೀನು ಸತ್ಯಸಂಕಲ್ಪನು ನಿನಗೆ ಮಿಥ್ಯಾವಚನಿಲ್ಲವೆಂಬೊಂದಿತ್ಯಧಿಕ ಕೊರತೆಯೆಂಬ 2 ಜ್ಷಾನವಂತನೆಯ ಬಹುಮಾನವಂತನಾದರೂ ಅ ಜ್ಞಾನಶೂನ್ಯನೆಂಬ ದೊಡ್ಡ ಹಾನಿಯೊಂದಿರುವುದೆಂಬ3 ಎಲ್ಲ ವಸ್ತುಗಳುಂಟು ನಿನಗೆ ಪುಲ್ಲನಾಭ ನಿನ್ನ ಬಳಿಯೋ ಳಿಲ್ಲವೆಂಬ ಶಬ್ದಮಾತ್ರವಿಲ್ಲವೆಂಬ ಮಾತು ಬಂದಿಹ 4 ಪಾಪವೆಂಬ ಕತ್ತಲೆಗೆ ದೀಪನಾಗಿದ್ದರು ಜನರ ಪಾಪಗಳನಪಹರಿಪ ದೀಪನಾ ಬಿಡದು ಎಂಬ 5 ಜ್ಯೋತಿಗಳಿಗೆಲ್ಲ ಪರಂಜ್ಯೋತಿಯಾಗಿರಿವ ನಿನಗೆ ಆ ಜ್ಯೋತಿಗಳೆತ್ತಿದಾರತೀ ಪ್ರೀತಿಯೆಂದು ಜನರು ಪೇಳ್ವ 6 ಹಾನಿವೃದ್ಧಿ ಶೋಕಮೋಹ ಜ್ಞಾನ ನಿನ್ನೊಳಿಲ್ಲವೆಂಬ ಹೀನವಾಕ್ಯವ ಪೇಳ್ವರೆಲ್ಲ ಮಾನನಿಧಿಗಳೆಂತೆಂಬ 7 ನಿತ್ಯತೃಪ್ತನಾದರೂ ನಿಜ ಭೃತ್ಯರನು ಪಾಲಿಸುವ ನಿತ್ಯ ಕರ್ಮದಲ್ಲಿ ಕೃತಕೃತ್ಯನುನೀನಲ್ಲವೆಂಬ 8 ಕಷ್ಟಪಡಬೇಡವೆನ್ನೊಳೆಷ್ಟು ದುರ್ಗುಣಂಗಳಿಹ ವಷ್ಟನು ಒಪ್ಪಿಸಿ ನಿನಗಿಷ್ಟ ನಾಗಬೇಕೆಂಬ 9 ಕ್ಷೀರದಧಿನವನೀತ ಚೋರನಾಗಿರಲಿ ಗೋಪೀ ಜಾರನಾಗಿರಲಿ ಸಂಸಾರವೈರಿಯು ನೀನೆಂಬ 10 ಕೊರತೆಯೆಂಬಾ ಜನರಿಗೆಲ್ಲಾ ವರವನಿತ್ತು ಪೊರೆವೆನೆಂಬ ಸ್ಥಿರವಾಗಿ ಶ್ರೀ ವ್ಯಾಘ್ರಗಿರಿಯೊಳಿರುವ ವರದ ವಿಠಲನೆಂಬ11
--------------
ವೆಂಕಟವರದಾರ್ಯರು
ಹರೇ ಕೃಷ್ಣ ಲೋಕನಾಯಕ ಪಾಲಿಸೆನ್ನ ದೊರೆ ಸರ್ವ ಸೌಖ್ಯದಾಯಕ ಪ. ಮೂಢ ಚಿಂತೆ ಎಂಬುದೋಡಿಸು ಕರುಣವಿರಿಸು ಸದಾ ನಿನ್ನ ಸ್ಮøತಿಯ ನೀಡಿಸು ಉದಾಸೀನಭಾವದೂಡಿಸು ಭೂಪ ನಿನ್ನ ಪದಾಬ್ಜವನು ಶಿರದೋಳಾಡಿಸು 1 ಪರಮನೋವೃತ್ತಿ ತಿಳಿಯದೆ ನಿತ್ಯದಲ್ಲಿ ಕರಗಿ ಕಲ್ಮಶವನು ತಾಳಿದೆ ಮರುಗಿ ಮುಗ್ಗಿ ಮುಂದುಗಾಣದೆ ತತ್ವ ತಿಳಿಯ- ದಿರುವೆ ನಿಂತು ಕಂಪುಗೊಳ್ಳದೆ 2 ಈಶ ನೀನೊಬ್ಬನಲ್ಲದೆ ದಾಸನನ್ನು ಪೋಷಿಸುವರ ಕಾಣೆ ಲೋಕದಲಿ ಬೇರಿನ್ನು ಬೇಡವೆನ್ನಲಿ ವೆಂಕಟಾದ್ರಿ ಭೂಪ ಬೇಗ ಕಾಯೊ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬೇಡವೆನ್ನೆ ನೀನು ಗೋಪಮ್ಮ ಪಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು