ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕ ಚಿಂತಿಸಲಯ್ಯ ಈ ಜಗದ ಸುಖಕಾಗಿ ಸಾಕು ಇದರೊಳು ಸುಖದ ಲೇಶವನು ಕಾಣೆ ಪ ಒಂದು ಸುಖ ಬಯಸಿದೊಡೆ ಹಿಂದೆ ನೂರೆಂಟಾಗಿ ಸಂದಣಿಪ ದುಃಖಗಳು ಬಂದು ಒದಗುವವಿದಕೆ ಎಂದಿಗೂ ಬಯಸೆನಾ ಈ ತೆರೆದ ಸುಖವನ್ನು ಹಿಂದಿನಾ ಕರ್ಮದಂತಾಗುತಿರುವುದಕೆ 1 ಮೊದಲು ಸವಿಯಾಗಿಹುದು ತುದಿಯಲಿದು ವಿಷವಹುದು ಬದಲಾಗುತಿಹ ಇಂಥ ಸುಖ ಬೇಡವೆನಗೆ ಮೊದಲುಕೊನೆ ಇಲ್ಲದಿಹ ಸದಮಲಾನಂದವಹ ಪದವ ಮರೆಯಿಸುತಿರುವದಿದು ಬೇಡವೆನಗೆ 2 ಅನಿಸಿಕೆಯೆ ಕೂಡಿರುವ ಈ ಸುಖವು ನಿಜವಲ್ಲ ಮನವಾಣಿಗಳಿಗಾಚೆಗಿಹ ಸುಖವು ನಿಜವು ತಾನೆ ಸುಖರೂಪನೆಂದನಿತರೊಳು ನಿಶ್ಚಯಿಸಿ ಜ್ಞಾನಿಶಂಕರನೆ ನಾನಾದ ಮೇಲಿನ್ನು 3
--------------
ಶಂಕರಭಟ್ಟ ಅಗ್ನಿಹೋತ್ರಿ
ನರಕಾಂತಕ ವರದೇವನೆ ಕರುಣಾಕರ ಗೋವಿಂದಾ ಪ ಮರೆವೆಯೇತಕೋ ಲೋಲ ಬಾರೋ ಬಾರೋ ಗಾನಲೋಲ ಅ.ಪ ಪರಿಪರಿಯಾ ಜನುಮಾಂತರ ಸರಣಿಯೊಳಾನು ಜನಿಸಿ ಸೊರಗಿ ಸೊರಗಿ ಮರುಗಿ ತಿರುಗಿದೆ 1 ನೆಲೆಸಲಿಕೆ ಸ್ಥಳವು ಇಲ್ಲವೋ [ಕಲಿ]ಕಾಲಪಾಶ ಬದ್ಧನಾದೆನೊ 2 ಜನುಮಕೋಟಿಯೊಳಾದು ಪೋಪುದು ನಾಮ ಸ್ಮರಣೆಯೊಂದಿರಲೋ 3 ರಾಮದಾಸವಿನುತ ಕೇಶವಾ [ಉದ್ಧರಿಸೋ] ಆವ ಸುಖವು ಬೇಡವೆನಗೆ ಜೀವ ಪೋಗುವಂದು ನಿನ್ನ ಸೇವೆಗೈವ ವರವು ಸಾಕೆಲೈ ಮಾವಿನಕೆರೆಯರಸ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಿರಿಯು ಬೇಡೆನಗೆ ಈ ಬರಿಯ ವೈಭವದ ಪರಿಯು ಬೇಡವೆನಗೆ ಪ ಪರಿಪರಿಯಲಿ ನಿನ್ನ ಚರಣ ಸೇವೆಯಲಿ ಪರತರ ಸುಖಗಳ ಅರಿವು ಬೇಕಲ್ಲದೆ ಅ.ಪ ಮರೆತೆನೊ ನಿನಗಾಗಿ ಚೆಲುವ ಸತಿಸುತರ ತೊರೆದೆನೋ ಬಹು ವಿಧ ಪ್ರೇಮಪಾಶಗಳ ಬೆರಗಾದೆನೋ ದೇವ ಮರುಕದಿಂದೆನಗೆ ನೀ ವರ ಮಾರ್ಗವ ತೋರೋ ಮುರಳೀಧರನೆ 1 ಮಂದಮತಿಗಳೆನ್ನ ನಿಂದಿಸುತಿರುವುದಾ ನಂದವೇನೋ ನಿನಗೆ ಸುಂದರ ಮೂರುತಿ ಕುಂದಿ ಕುಂದಿದ ಮನ ಮಂದಿರದಲಿ ನಿಲ್ಲೋ ಇಂದಿರಾ ರಮಣನೆ 2 ಎನ್ನ ಕುಂದುಗಳನ್ನು ಮನ್ನಣೆ ಮಾಡಿ ಸಂ ಪನ್ನತೆ ಎನಗೀಯೋ ಘನ್ನ ಮಹಿಮ ಸುಪ್ರಸನ್ನವಿಠ್ಠಲನೇ ನಿನ್ನವನೆನಿಸೆಲೋ ಪನ್ನಗಶಯನನೇ 3
--------------
ವಿದ್ಯಾಪ್ರಸನ್ನತೀರ್ಥರು