ಒಟ್ಟು 6 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದುಚೆನ್ನಗಿತ್ತೇರ ಮನೆ ಗೋವಿಂದ ಪ. ಗೋಪೇರ ಮನೆಗಳ ಪೊಕ್ಕು ಬಹುಪರಿ-ತಾಪವ ಮಾಡುವರೇ ಕಂದ ಗೋವಿಂದಕಾಪಟ್ಯಸತಿಯರ ಮಾತ ನೀನಾಲಿಸಿಕೋಪಿಸಬೇಡವಮ್ಮಾ ಗೋಪೆಮ್ಮ 1 ಎನ್ನಪ್ಪ ಕಂದನೆ ಚಿಣ್ಣ ಗೋಪೇರು ಬಂದುನಿನ್ನ ದೂರುತಲೈದಾರೋ ಗೋವಿಂದಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆÀಇನ್ನೇನು ಮಾಡಲಮ್ಮ ಗೋಪೆಮ್ಮ 2 ದಧಿ ದುಗ್ಧ ಭಾಂಡ ಒಡೆದು ಗೋಪಿಯರನ್ನುಸದರ ಮಾಡುವರೇ ಕಂದ ಗೋವಿಂದಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆದÀಧಿಭಾಂಡ ಜಾರಿತಮ್ಮ ಗೋಪೆಮ್ಮ 3 ಬಸವನ ಆಟದಿ ಶಿಶುಗಳೆಲ್ಲರ ಕೂಡಿಮಸಿಮಣ್ಣು ಮೈಯ್ಯಾದವೊ ಗೊವಿಂದಬಿಸಜಾಕ್ಷಿಯರು ತಮ್ಮ ಮನೆಕೆಲಸದ ಕೈಯ್ಯಮಸಿಮಣ್ಣು ಒರೆಸಿದರೆ ಗೋಪೆಮ್ಮ 4 ಒರಗಿದ್ದ ಹಸುಗಳೆಬ್ಬಿಸಿ ಕರುಗಳ ಬಿಟ್ಟುದುರುಳತನವ ಮಾಡೋರೆ ಗೋವಿಂದನೆರೆದಿದ್ದ ಶಿಶುಗಳಾಡುವ ಗುಲ್ಲ ತಾವ್ ಕೇಳಿತುರುಶಿಶು ಬೆದರಿತಮ್ಮಾ ಗೋಪೆಮ್ಮ 5 ಅಣ್ಣ ಬಲರಾಮ ನಿನ್ನ ಬನ್ನಣೆ ಸುದ್ದಿಯಚೆನ್ನಾಗಿ ಪೇಳಿದನೊ ಗೋವಿಂದಉನ್ನಂತ ದಾಯಾದಿಯ ಮಾತುಗಳ ನೀನುಮನ್ನಿಸ ಬೇಡವಮ್ಮ ಗೋಪೆಮ್ಮ 6 ಬಾಯೆನ್ನ ರನ್ನವೆ ಬಾಯೆನ್ನ ಚಿನ್ನವೆಬಾಯೆನ್ನ ಮೋಹದ ಗಿಣಿಯೆ ಗೋವಿಂದಬಾಯೆಂದು ಯಶೋದೆ ಕರೆದಳು ಬಿಗಿದಪ್ಪಿಬಾಯೆನ್ನ ಹಯವದನ ಗೋವಿಂದ7
--------------
ವಾದಿರಾಜ
ಊಟಕ್ಕೆ ಬಂದೆವು ನಾವು ನಿನ್ನ -ಕೋಟಲೆಗಳ ಬಿಟ್ಟು ಅಡಿಗೆ ಮಾಡಮ್ಮ ಪ.ಕತ್ತಲಕ್ಕುತಲಿವೆ ಕಣ್ಣು - ಬಲು -ಬತ್ತಿ ಬರುತಲಿವೆ ಕೈಕಾಲ ಜುಮ್ಮ ||ಹೊತ್ತು ಹೋಗಿಸಬೇಡವಮ್ಮ - ಒಂದು -ತುತ್ತನಾದರು ಮಾಡಿ ಇಕ್ಕುವುದು ಧರ್ಮ 1ಒಡಲೊಳಗುಸಿರಿಲ್ಲವಮ್ಮ - ಗಳಿಗೆ -ತಡವಾದರೀ ಪ್ರಾಣ ಉಳಿವುದಿಲ್ಲಮ್ಮ ||ನುಡಿಯು ಚಿತ್ತಕೆ ಬರಲಮ್ಮ - ಒಂದು -ಪಿಡಿ ಅಕ್ಕಿ ಅನ್ನದಿ ಕೀರ್ತಿ ಪಡೆಯಮ್ಮ........... 2ಹೊನ್ನರಾಶಿಗಳನು ಸುರಿಯೆ - ಕೋಟಿ -ಕನ್ನೆ ಧರಿತಿಯ ಧಾರೆಯನೆರೆಯೆ ||ಅನ್ನದಾನಕೆ ಇನ್ನು ಸರಿಯೆ - ನಮ್ಮ -ಚೆನ್ನ ಪುರಂದರವಿಠಲನೊಳ್ ಬೆರೆಯೆ........... 3
--------------
ಪುರಂದರದಾಸರು
ಕಾಯೆ ಭಾರತೀ ನಿನ್ನ ಆರಾಧಿಸುವೆ ಯನ್ನ |ಮಾಯಾಮಂದಿರನವರ ಕಿಂಕರನು ಯೆನಿಸೇ ಪವ್ಯೋಮಜ ರಮಣಿನಳಿನಭವಜಾತೆಕೃತಿಪುತ್ರೆ |ಸಾಮಜಗಮನೆ ಉರಗವೇಣಿ ಕಾಳೀ ||ಸೋಮಮುಖಿ ಬೇರೊರಸಿ ಯನ್ನ ದುರ್ಮತಿಯಳಿದು |ರಾಮಧ್ಯಾನದಲಿ ಮನ ನಿಲ್ಲಿಸುವದನಿಶ 1ಲೋಕನಾಯಿಕೆ ಶೈಲಜಾಪತಿ ಮುಖ ಪೂಜಿತಳೆ |ನೀ ಕರುಣದಲಿ ನೋಡಿಕರವಪಿಡಿಯೇ ||ಕಾಕುಮನುಜರ ಸಂಗವನು ಕೊಡದೆಯೊಂದಿನಕು |ಲೌಕಿಕವ ಸಂಪಾದಿಸಿಸಬೇಡವಮ್ಮ 2ಕೃಷ್ಣೆ ನಳನಂದಿನಿ ದ್ರುಪದ ತನುಜೆ ಶಿವಕನ್ಯೆ |ದುಷ್ಟ ಜನ ಗಿರಿಕುಲಿಶೆ ಸ್ವರ್ಣಗಾತ್ರೆ ||ಕೊಟ್ಟ ಮಾತಿಗೆ ತಪ್ಪದಲೆ ಕಾಯ್ವ ಪ್ರಾಣೇಶ |ವಿಠಲನ ಚರಣಯುಗ ಸರಸೀರುಹ ಭೃಂಗೆ3
--------------
ಪ್ರಾಣೇಶದಾಸರು
ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||ವಾಸವಾಗಿರೆ ವನದಿಮೃಗತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ 1ಖಳಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ 2ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ 3ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||ಪರಮಾತ್ಮನಿಗೆ ದೂತನಹುದುಶುಭವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ 4ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ 5ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ 6ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜಪಿತನಿಗೆ ಬಿನ್ನೈಸೊ ತಮ್ಮ 7ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ 8ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ 9
--------------
ಪ್ರಾಣೇಶದಾಸರು
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪಚಿನ್ನನ ಸುದ್ದಿನಿತ್ಯಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||ಅನ್ಯಾಯದ ಮಾತುಹುಸಿಹುಟ್ಟಿಸಿಯಾಡಿದರೆ ನಮ್ಮ |ಸಣ್ಣವರಾಣೆ ಗೋಪೆಮ್ಮ 1ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ2ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ 3ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ 4ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ 5ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ6ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||ಮೂಲೇಶ ಹುಡುಗನ ಕೈಯಕಟ್ಟಿಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ 7ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ 8ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ 9ಗಂಡಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ 10ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ 11
--------------
ಪ್ರಾಣೇಶದಾಸರು