ರಂಗಯ್ಯ ನಿನಗಿದು ಸರಿಯೇನು ಹರಿಯೆ ಪ
ಮಂಗಳಮಹಿಮ ಕೃಪಾಂಗ ತವ ಪಾದಾಂತ
ರಂಗದಿ ಭಜಿಪರ್ಗೆ ಭಂಗವೆ ಜಗದೊಳು ಅ.ಪ
ಪರಿಪರಿ ಮೊರೆಯಿಟ್ಟು ಸೆರಗೊಡ್ಡಿ ಚರಣದಿ
ನಿರುತದಿಂ ಬೇಡಲಮರೆ ಕಾಯದಿರುವರೆ 1
ದೀನದಯಾಳುವೆ ನೀನೆ ಗತಿಯೆನ್ನುತ
ಧ್ಯಾನಿಪ ಬಡವರ ಮಾನ ಕಾಯದಿಹ್ಯರೆ 2
ನಿನ್ನ ಬಿಟ್ಟರೆ ಅನ್ಯಯಿನ್ನಿಲ್ಲ ಜಗದಿ
ಭಾರ ನಿನ್ನದೇ ಶ್ರೀರಾಮ 3