ಒಟ್ಟು 21 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಮೂರು ಪದ್ಯ ಭಕ್ತರಭಿಮಾನಿ ಶಿವಶಕ್ತಿ ಎಂಬುವ ಸೂರ್ಯದೈತ್ಯವರ್ಯನು ಎಂಬೊ ಕತ್ತತಿಯ ಸಂಹರಿಸಿ ಮತ್ತು ದಿತನಾಗಿರಲು ಇತ್ತ ಅನುಭೂತಿಯಾಗುತ್ತಾದ ಮುಖಕಮಲ ಮತ್ತಳಿತಾಗೆ|| ಸತ್ಯವಂತಿಯು ದೇವಿ ಸತ್ಯದಿಂದನು ಭೂತಿಗಿತ್ತುತ ಬಾಯಂದು ಮತ್ತೆ ಮುಂದಕೆ ಕರೆದು ಹೆತ್ತ ತಾಯಿಯಂತೆ ಅತ್ಯಂತ ಸ್ನೇಹವ ಸುರಿಸಿ ಒತ್ತಿ ಮಾತಾಡಿದಳು ಮತ್ತೆ ಈ ಪರಿಯ|| 1 ಪದ ರಾಗ :ಶಂಕರಾಭರಣ ಅಟತಾಳ ಸ್ವರ ಷಡ್ಜ ಮತ್ತೇನು ಬೇಕು ನೀಬೇಡಮ್ಮ|| ನಿನ್ನ ಚಿತ್ತದೊಳು ಸಂಶಯ ಬೇಡಮ್ಮ|| ಪ ದೈತ್ಯನ ಸಂಹಾರ ಮಾಡಿದೆ| ನಾ ಮತ್ತೆ ಬಂದು ನಿನ್ನಕೂಡಿದೆ|| ಅಂತಃ ಕರುಣದಿಂದ ನೋಡಿದೆ || ನಿನ್ನೊಳತ್ಯಂತ ಸ್ನೇಹವಮಾಡಿದೆ|| 1 ದಾರು ಧನ್ಯರೆನಿಸಿ ಲೋಕಮಾನ್ಯರು|| 2 ಮಿತ್ರಾನಂತಾದ್ರೀಶಹ್ನಿಡುವವರು||3 ಆರ್ಯಾ ಪರಿ ಪರಿ ಅನುಭೂತಿ ತಿಳಿದಳು ಎಂಬುವರು ಸುಖಸಾರ|| 1 ಸಂಶಯ ಬಿಟ್ಟಾಡಿದಳು ಹೀಗೆಂದೂ||2 ಪದ ರಾಗ:ಕಾಪಿ ತಾಳಬಿಲಂದಿ ಸ್ವರ:ಪಂಚಮ ಇಂದು ತಾಯಿಯೆ|| ಇಂದು ಎಂದೆಂದೂ ದಯಾ ಒಂದೆ ಸಾಕು|| ಪ ದಾವ ಕಾಲಕು ದೇವಿ ನಿನ್ನ ಸೇವೆ ಇರಲಿ|| 1 ನತಿಯು ಮಾಡುವೆ|| ಮತಿಯು ಬೇಡುವೆ|| ಮತಿಯಿಂದಲೆ ಪತಿಯ ಸೇವಿಸಿ ಪತಿಯಿಂದಲೆ ಗತಿಯು ಆಗಲಿ|| 2 ಪ್ರಾತಗಾಣಿ ಸೆ || ಪಂಥಗೆಲ್ಲಿಸೆ || ಸಂತತಾನಂತಾ ಧ್ರೀಶನ ಅಂತರಂಗದಿ ಚಿಂತಿಸುವೆನು||3 ಆರ್ಯಾ ಅನುಭೂತಿಯ ಅನುಸರಿಸಿ || ಅನುಕೂಲ ಸ್ಥಾನ ಅನುದಿನ ಕರದ್ಹೇಳಿದಳು ಹೀಗೆಂದೂ|| ಪದ ರಾಗ:ಕಾನಡಾ ಆದಿತಾಳ ಸ್ವರ ಪಂಚಮ ಬಾರೋ ಬ್ಯಾಗನೆ ಭೈರವಾ|| ನೀ ಪೋಗೀ || ಬ್ಯಾ|| ಯಮುನಾ ತೀರಕೆಪೋಗಿ|| ಪ ದೊಡ್ಡದು|| ಶ್ಯಲವಾಗಿ ಈ ಕಾಲಕ ಅಲ್ಲೊಂದಾಲಯ ನಿರ್ಮಿಸಿಕಾಲಗಳ್ಹಿಯದೆ|| 1 ಬರುವೆನು|| ನಿಂದಿರಲೆ ತ್ವರದಿಂದಲೆ ಪೋಗುತ ಇಂದ ಈ ಕಾರ್ಯವ ಚಂದದಿ ಮಾಡಿ|| 2 ಯಮುನಾದ್ರಿಗೆ ಪೋಗಿ|| 3 ಆರ್ಯಾ ಆ ದೇವಿಯ ಆಜ್ಞಾವನೂ|| ಆದರದಿಂದಲೇ ಧರಿಸಿ ಹೋದಾತನು ಅಲ್ಲೇನಿಂತ ನಿತ್ಯದಲಿ|| 1 ಬರಲಿಲ್ಲಾಕೆಂತೆಂದು|| ತುಳುಜಾ ತಾನಾಗಿ ಅಲ್ಲಿಗೆ ಬಂದು || ಪರಮಾಜ್ಞಾಧಾರಕನಾ || ತ್ವರದಲಿ ನೋಡ್ಯಾಡಿದಳು ಈ ವಚನಾ|| 2 ಪದ ರಾಗ :ಶಂಕರಾಭರಣ ಅಟತಾಳ ಸ್ವರ ಪಂಚಮ ಕಾರ್ಯವಂತಯಂದು ನಿನ್ನ ಉಳಸಿದೆ|| 1 ಇಲ್ಲಿಗೆ ಬಂದ್ಯೋನಿ ಕಾರ್ಯಾರ್ಥಿ|| ಬರದೆ ಇಲ್ಲೇ ನಿಂತಿ ಪಡದಿ ನೀನು ಅಪಕೀರ್ತಿ||2 ಅನಂತಾದ್ರೀಶನ ಆಣೆ ನಿನಗುಂಟು|| 3 ಆರ್ಯಾ ಈ ರೀತಿಯ ನುಡಿ ಕೇಳಿ || ಹೇರಿದ ಅಪರಾಧ ಭಾರವನು ತಾಳಿ|| ಘೋರವು ಬಂತಿದು ಎಂದಾ|| ಭೈರವ ಮಾತಾಡಿದನು ಭಯದಿಂದಾ|| 1 ಪದ ರಾಗ:ಆನಂದ ಭೈರವಿ ಆದಿತಾಳ ಸ್ವರ ಪಂಚಮ ಎನ್ನ ಪರಾಧಾ ಹಿಡಿಬ್ಯಾಡಮ್ಮಾ|| ತಾಯಿಎನ್ನಾ ||ಅಂ|| ಬಹುಕಾಲ ನಿನ್ನವನಾದ ಮ್ಯಾಲೆ|| ಪ ಮದದಿಂದೆ|| ಈಗ ನನ್ನ ಅಪರಾಧದಿಂದ ನಾನೊಂದೆ || ನಿನ್ನ ಹೊರತು ಎನಗಿನ್ಯಾರ್ಹಿತಕರುಂಟು|| 1 ಮಂಗಳಾಂಗನೆ ನಾನು ಮಂಗನಂತಲಿ ನಿಂತೆ|| 2 ಅಚ್ಯುತಾನಂತಾದ್ರೀಶನಿಚೆÀ್ಛಗೆ ಬಂತಿದೆ|| 3 ಪದ್ಯ ಈ ರೀತಿ ನುಡಿಕೇಳಿ ಕಾರುಣ್ಯನಿಧಿ ದೇವಿ ತೋರಿಸ್ನೇಹವು ನಗುತ ಭೈರವನ ಶಿರದಲ್ಲಿ ಚಾರುಹಸ್ನದಿ ಹೊಡೆದಳ್ಹಾರ್ಯ ಭಾವದಲಿ ಆ ಭೈರವನು ಆ ಹಸ್ತಭಾರದಲಿ ವಟುಕಾದ ಉರ್ವಿಯಲಿ ತಾ ಡೋಳ್ಹಭೈರವನು ಎನಿಸಿ || ಪಾರ್ವತಿಯು ಚಾರು ಉರ್ವಿಯಲಿ ಜನರನುದ್ಧಾರ ಮಾಡುತ ಬಿಡದೆ ಸಾರಗಿರಿಯಲಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಆಡುತ್ತಾ ಬಾರಮ್ಮಾ ನಲಿದಾಡತ್ತಾ ಬಾರಂಮಾ ಆಡುತ್ತವರಗಳಾ ನೀಡುತ್ತಾ ಕರುಣಾದಿ ನೋಡುತ್ತಾ ದಯದಿಂದಾ ಲಕ್ಷ್ಮಿ ಆಡುತ್ತಾಬಾರಮ್ಮಾ ಪ. ಬೇಸರವು ಬೇಡಮ್ಮಾ ದಾಸರ ದಾಸಿಯು ನಾನಿಂವÀು ವಾಸನಪೂರಿತೆ ವನರೂಹ ನೇತ್ರೆ ಸಾಸಿರನಾಮದ ವಾಸುದೇವನ ಸತಿ ಆಡುತ್ತಾಬಾರಮ್ಮಾ ನಲಿದಾಡುತ್ತಾ ಬಾರಮ್ಮಾ 1 ಕರದಾರವೊಯೆಂದು ತಾಯೆಯಂನಾ ಮೊರೆಯಲಾಲಿಸೆ ನೀ ಬಂದು ದುರಿತಗಳಾನೆಲ್ಲಾ ಪರಿಹರಿಸುವ ನಿಂಮ ಅನುದಿನ ಆಡÀುತ್ತಾ ಬಾರಮ್ಮಾ2 ಧರಣಿಯೊಳುನ್ನತವಾದ ಹೆಳವನಾಕಟ್ಟೆ ಗಿರಿಯೊಳು ನೆಲಸಿದ ಪರಮ ಪವಿತ್ರಳ ಕರುಣಾ ಸಿಂಧುವೆ ವರವನು ಕೊಡುತ್ತಾ ಬೇಗಾದಿಂದಲಿ ಆಡುತ್ತಾ ಬಾರಮ್ಮಾ3
--------------
ಹೆಳವನಕಟ್ಟೆ ಗಿರಿಯಮ್ಮ
ಎಂಟಚ್ಚಮ್ಮ ಎಂದಿಗು ಬರಬೇಡಮ್ಮ ಪ ತುಂಟ ಪಟಿಂಗರ ಬಳಿಗೆ ಹೋಗಮ್ಮ ಅ.ಪ ನಿನ್ನ ಗಂಡ ಪಾಂಡವರನ್ನು ಬಾಧಿಸಿ ತನ್ನ ಬಾಯೊಳು ಹುಡಿಮಣ್ಣು ಹಾಕಿಕೊಂಡ 1 ಹುರಿದು ತಿಂಬ ಕಲಿಪುರಷ ಅಯ್ಯಯ್ಯೋ 2 ಗುರುರಾಮವಿಠಲಗೆ ಪರಮದ್ವೇಷಿಯು ಹರಿ ಶರಣರ ಬಾಧಿಸಿ ದುರಿತಗಳಿಸುವನು 3
--------------
ಗುರುರಾಮವಿಠಲ
ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ 1 ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ ದುಡಿಯ ಬೇಕಮ್ಮ ಮಗಳೆ ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ 2 ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ 3 ಕ್ಲೇಶ ಕೇಳಮ್ಮ ಮಗಳೆ ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ 4 ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ 5 ಸೊಲ್ಲು ಕೇಳಮ್ಮ ಮಗಳೆ ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ 6 ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ 7 ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ 8 ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ 9 ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ ಕೇಳಮ್ಮಾ ಮಗಳೆ ನಿತ್ಯ ಸುಖಿಸಮ್ಮ 10 ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ ಮೊರೆಯ ಹೋಗಮ್ಮ 11
--------------
ಕೃಷ್ಣವಿಠಲದಾಸರು
ವಿಪರೀತ ಮತಿವಂತೆ ಸರಸ್ವತಿಯೆ ನಿನ್ನ ಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ ಪ ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮ ಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡು ಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡ ಕುಂಭಿನಿಯೊಳ್ಹನುಮನಂಥ ಮತಿ ನೀಡಿ ಸಲಹು 1 ಕೀಲ ಮಾರೀಚಗಿತ್ತ ಕೀಳಮತಿ ನೀಡದಿರು ಪಾಲಿಸು ಜಟಾಯುನಂಥ ಶೀಲಮತಿಯೆನಗೆ ವಾಲಿಗೆ ನೀನಿತ್ತ ಜಾಳುಮತಿ ನೀಡದೆ ಸುಗ್ರೀವಗಿತ್ತ ಮೇಲುಮತಿ ನೀಡು 2 ಮೂಡಣಾಧಿಪನಂತೆ ಕೇಡುಮತಿ ನೀಡದೆ ರೂಢಿಯೊಳ್ಕರಿಯಂಥ ಗಾಢಮತಿ ನೀಡು ನೀಡದಿರು ಶಶಿಯಂಥ ಖೋಡಿ ದುರ್ಮತಿಯನು ನಾಡಿನಲಿ ಧ್ರುವನಂತೆ ಮಾಡುದಯ ಸುಮತಿ 3 ದುರುಳ ಕೌರವನಂತೆ ಕಿರಿಮತಿಯ ಕೊಡಬೇಡ ಪರಮ ಪಾಂಡವರಂಥ ಖರೆಮತಿಯ ನೀಡು ಧರೆಯೊಳ್ಜಯದ್ರಥನಂತೆ ನರಿಮತಿಯ ಕೊಡದಿರು ವರ ವಿದುರನಂತೆ ಬಲು ನಿರುತಮತಿ ನೀಡು 4 ಮರವೆ ಮತಿ ಒಲ್ಲೆನೌ ಹರಿಯ ನಿಜ ದಾಸರಂಥ ಸ್ಥಿರತಿಮತಿಯ ನೀಡು ಹರಣ ಪೋದರು ಬಿಡದೆ ವರದ ಶ್ರೀರಾಮನಡಿ ಅರಿವಿಟ್ಟು ಭಜಿಸುವಪಾರಮತಿ ನೀಡು 5
--------------
ರಾಮದಾಸರು
ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗುಮ್ಮನೆಲ್ಲಿಹ ತೋರಮ್ಮ-ನಮ್ಮಮ್ಮ-|ಸುಮ್ಮನಂಜಿಸಬೇಡಮ್ಮ ಪಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ |ವಂಚನೆಯಿಲ್ಲದೆ ತಿರುಗಿ ಬಂದೆನೆ ನಾನು ||ಹಂಚಿಸಿಕೊಟ್ಟೆನೆ ಅವರವರಿಗೆ ನಾ |ಅಂತು ನೋಡಿದರೂ ಕಾಣೆನೆ ಗುಮ್ಮನ 1ಈರೇಳು ಲೋಕವನುದರದೊಳಗೆ ಇಟ್ಟು |ತೋರಿದೆ ಬ್ರಹ್ಮಾಂಡ ಬಾಯೊಳಗೆ ||ಘೋರರೂಪದಿ ಬಂದ ಗಾಳಿಯ ಸುರನ ಕೊಂದೆ |ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ 2ಕಾಳಿಯ ಮಡು ಧುಮುಕಿ ಕಾಳಿಂಗನ ಹೆಡೆ ತುಳಿದು |ಮೇಲೆ ನಾಟ್ಯಂಗಳ ನಾನಾಡುತಲಿದ್ದೆ ||ಓಲೆಯ ಭಾಗ್ಯವನಿತ್ತೆ ನಾಗಪತ್ನಿಯರಿಗೆ |ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ 3ಅಕ್ರೂರನಿಗೆ ವಿಶ್ವರೂಪವ ತೋರಿದೆ |ಘಕ್ಕನೆ ರಥವೇರಿ ಮಥುರೆಗೆ ಪೋದೆ ||ಸೊಕ್ಕಿದ ರಜಕನ ಕೊಂದು ಮಡಿಯನುಟ್ಟೆ |ಹೊಕ್ಕು ನೋಡಿದರೂ ಕಾಣೆನೆ ಗುಮ್ಮನ 4ಬಿಲ್ಲು ಹಬ್ಬಕೆ ಹೋಗಿ ಮಲ್ಲರ ಮಡುಹಿದೆ |ಅಲ್ಲಿ ಮಾವನ ಕೊಂದು ಮುತ್ತಯ್ಯಗೊಲಿದೆ ||ಚೆಲ್ವಗೋಪಾಲ ಶ್ರೀ ಪುರಂದರವಿಠಲನ |ಸೊಲ್ಲು-ಸೊಲ್ಲಿಗೆ ನೀ ಬೆದರಿಸಬೇಡಮ್ಮ 5
--------------
ಪುರಂದರದಾಸರು
ಗುರುವಿನ ಮರೆಯಾದಿರಮ್ಮ ಪಅಂಕಿತವನೆ ಇತ್ತಸಿರಿ ಗುರುವಿನ ನೀನುಮನದೊಳು ನೆನೆಯಬÉೀಕಮ್ಮ ತಂಗಿ ಅ.ಪಗುರುವಿನ ಮರೆತರೆ ನಿನಗೆ ಥರಥರ ನರಕಥರಥರನರಕವ ಅನುಭವಿಸಬೇಕಮ್ಮ ತಂಗೀ 1ಜ್ಞಾನಾನಂದಾತ್ಮಕನಾದ ಶ್ರೀಹರಿಯನ್ನುಗುರುವಿನದ್ವಾರಾ ನೀ ತಿಳಿ ಮಂಗಳಾಂಗಿ 2ಗುರುವೆ ತಂದೆಯು ಬಂಧು ಬಳಗಾವೆಂದು ಅಕ್ಕರೆಯಿಂದ ನೀ ನೆನೆಯಬೇಕಮ್ಮಾ 3ಗುರುವಿನ ಸೇವೆಯ ಮಾಡುತ್ತ ಗುರುಗಳಕೃಪೆಗೆ ಪಾತ್ರರಾಗಿ ಬಾಳಬೇಕಮ್ಮಾ 4ಮಂಗಳ ಮಹಿಮ ಶ್ರೀ ತಂದೆಮುದ್ದುಮೋಹನ್ನವಿಠಲ ದಾಸರೆನಿನಗೆ ಸದ್ಗುರು ಎಂದು ತಿಳಿಯಮ್ಮ ತಂಗಿಈ ಮಾತು ಪುಸಿಯಲ್ಲ ಮರೆಯಬೇಡಮ್ಮ ತಂಗೀ 5
--------------
ತಂದೆ ಮುದ್ದುಮೋಹನ ವಿಠಲರು