ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೇ ಪ ಪಾದ ಭಜನೆ ಮಾಡುವದೊಂದೆ ಅ.ಪ. ಪುಟ್ಟಿದಾರಾಭ್ಯ ಬಹುದಿಟ್ಟನಾಗಿಯೆ ಬಾಳು ಅಟ್ಟಿಮೆರೆಯುವ ಬಯಕೆ ವಿಟ್ಟು ಮನದಲಿ ಬಹಳ ಕಷ್ಟಪಟ್ಟೆನು ಘಳಿಸೆ ವಿತ್ತರಾಶಿಯ ವಿಪ್ರ ಶ್ರೇಷ್ಟಧರ್ಮವ ಬಿಟ್ಟು ವ್ಯರ್ಥ ವಿದ್ಯೆಯ ನೋದಿನೋದಿ ಅಷ್ಟಕರ್ತನು ಬಯಕೆ ಬಟ್ಟಬಯಲನು ಗೈದು ಕೊಟ್ಟು ಜ್ಞಾನದ ಕಣ್ಣು ನೆಟ್ಟನೆ ನೊಡೆನಲು ಬಟ್ಟು ಸುಖವನೆ ಮೆಲ್ವ ಜಟ್ಟಿ ಜಗದಲಿ ಕಾಣೆ ಭವ ಸುಖಕೆ 1 ಹೆಂಡತಿಯ ಸುಖವೆಂದೆ ಕೆಂಡಬಡತನ ಸೋಕೆ ಗಂಡು ಬಯಕೆಗಳೆಲ್ಲ ಉಂಡುದಣಿಯಲಿಲ್ಲ ಮಂಡೆ ಚಚ್ಚುತ ನಿತ್ಯ ತುಂಡು ಆದಳು ಅವಳು ಬೆಂಡು ಆದೆನುನಾನು ಹಿಂಡು ಬಳಗಗಳೆಲ್ಲ ಉಂಡು ದಣಿದರು ನಗೆಯ ಹಿಂಡಿ ಪರಜನ ಪ್ರಾಣ ಉಂಡು ಬದುಕಿಹೆ ಸ್ವಾಮಿ ಮುಂಡೆ ಗಿಂತಲು ಹೀನ ಷಂಡನಾಗಿಹೆ ಸ್ವಾಮಿ ಪಾಂಡುರಂಗನೆ ನಿನ್ನ ತೊಂಡನಾದರೆ ಧನ್ಯ 2 ವಿತ್ತ ಗಂಟು ಇಲ್ಲದಮೇಲೆ ಗಂಟುಮೋರೆಯ ನೇಮ ಒಂಟಿಗನೆ ಜೀವನಿಹ ನೆಂಟ ಬಿಂಬನೆ ಒಬ್ಬ ಭಂಟನೆಂದರೆ ಪಿಡಿವ ಶುಂಠ ಬಿಟ್ಟವ ಸತ್ಯ ಕಂಟಕವು ವಿಷಯತತಿ ಕಜ್ಜಿತಿನಸಿನ ತೆರದಿ ಎಷ್ಟು ಸೇವಿಸಲಷ್ಟು ತಂಟೆನೀಡುವವೇನೆ ಕುಂಠವಾದರು ಕರುಣ ಅಂಟಿಮನಸಿಗೆ ಭಾಧೆ ಉಂಟುಮಾಡುವವು ವೈಕುಂಠ ನಾಯಕಕಾಯೊ 3 ಬಾಡಿಗೆಯ ಮನೆಯಂತೆ ಗಾತ್ರವಿದು ಜೀವನಿಗೆ ಹೂಡಿಹನು ಭವಯಾತ್ರೆ ಓಡಿಹೊಹುದು ತಾನೆ ಆಗಿ ಮುಗಿಯಲು ಆಟ ಪ್ರೌಡ ಹರಿಪುರ ದಾರಿ ನೋಡಿಕೊಂಡವ ಜಾಣ ಕೇಡು ಮತ್ತಗೆ ಸಿದ್ಧ ಮಾಡುತಲಿ ವಿಧಿಗಳನು ದೂಡುತಲಿನಿಜೀವ ಕೂಡುತಲಿ ಸಜ್ಜನರ ಹಾಡುತಲಿ ಹರಿಗಾನ ಜೋಡಿಸುತ ಹರಿಭಕ್ತಿ ಬೇಡದಲೆ ಏನೊಂದು ಬಾಡದಿರೆ ದುಃಖ ಬರೆ ನೋಡುವನು ನಿಜ ಸುಖವ 4 ಹೆಂಡತಿಯು ಸುಗುಣಿ ಇರೆ ಗಂಡನಿಹ ದುರ್ಮಾರ್ಗ ಗಂಡ ಮೃದು ತರವೆನ್ನೆ ಹೆಂಡತಿಯು ಕರ್ಕಸಿಯು ಕುಂಡಲಿಯ ಸಿರಿಯೆನ್ನೆ ಮಂಡೆಯಲಿ ಮೆದುಳಿಲ್ಲ ಹೆಂಡ ಕುಡುಕರು ಸುತರು ಉಂಡುಸುಖಿಸೆ ರೋಗ ಮುಂಡೆಯರ ಚಲುವಿಕೆಯು ಶಂಡಸಹ ಸಂಸಾರ ಭಂಡ ಮಕ್ಕಳ ಬಾಳು ಪುಂಡಜನ ಸಹವಾಸ ಕಂಡು ಸಹಿಸದ ನೆಂಟ ಉಂಡು ದೂರುವ ಬಳಗ ದಂಡವಲ್ಲವೆ ಮತ್ತೆ ಕೊಂಡು ಮಾಡುವದೇನು 5 ಭವ ನಿಜಗುಣವೆ ಕ್ಲೇಶದಾಯಕ ವಿರಲು ಲೇಸು ದೊರಕುವದುಂಟೇ ಏಸು ಕಾಲವು ಕಳಿಯೆ ಏಸು ಕಡಿಯಲು ನೀರ ಸೂಸುವುದೆ ನವನೀತ ಹೇಸಿಗೆಯ ದುರ್ಗಂಧ ನಾಶವಾಗುವುದುಂಟೇ ಕ್ಲೇಶ ತೊಲಗದು ಎಂದು ದಾಶರಥಿಯ ಮನಮುಟ್ಟಿ ದಾಸ ನಾಗದ ತನಕ ಭಾಸವಾಗದು ಜ್ಞಾನ ಶ್ರೀಶ ಕಾಣಿಸ ತನ್ನ ದೋಷಿಯಾಗದೆ ಹರಿಗೆ ಮೀಸಲೆನ್ನಿರಿ ಎಲ್ಲ 6 ನಂಬಿ ಮತಿಮತ ತತ್ವ ವಿಷಯ ಹಂಬಲವಳಿದು ಡಿಂಬಗತ ಹರಿ ಬಿಂಬ ಧ್ಯಾನ ಮಾರ್ಗವ ಕಂಡು ಅಂಬುಜಾಕ್ಷ ನಮ್ಮ “ಶ್ರೀ ಕೃಷ್ಣವಿಠಲ”ನ್ನ ತುಂಬಿ ಹೃದಯದದಿ ಸತತ ಪರಮ ಸಂಭ್ರಮದಿಂದ ತಂಬೂರಿ ಮೀಟುತ್ತ ಗೆಜ್ಜೆ ಸಹ ಕುಣಿಕುಣಿದು ಅಂಬಕದಿ ಸುಖ ಬಾಷ್ಪ ಸುರಿಸುತ್ತಹರಿನೆನೆದು ಅಂಬುಜಾಸನ ಸುರಕದಂಬ ಕರುಣವ ಗಳಿಸಿ ಅಂಬೆ ಸಿರಿಪತಿ ಚರಣದಿಂಬು ಬೇಡುವದೊಂದೇ 7
--------------
ಕೃಷ್ಣವಿಠಲದಾಸರು
ಕೊಡಬೇಕು ದಾನಗಳ ಸತ್ಕಾರ್ಯಕೆಬಿಡಬೇಕು ಕೈಸಡಿಲು ಮೋಕ್ಷಸಾಧನೆಗೆ ಪಬೇಡದಲೆ ಕೊಡುವವರು ರೂಢಿಯೊಳಗುತ್ತಮರುಬೇಡಿದರೆ ಕೊಡುವ ದಾನಿಯು ಮಧ್ಯಮಬೇಡಿದರು ಕಾಡಿದರು ಕೊಡದವರು ಅಧಮರುಕೊಡೆದೆ ಬಡಬಡಿಸುವವರು ಮೂರ್ಖ ಅಧಮಾಧವುರು 1ದುಡ್ಡು ಇದ್ದರೆ ಮಾತ್ರ ದೊಡ್ಡವರು ಅನಬೇಡದುಡ್ಡಿದ್ದು ದಾನ ಧರ್ಮವು ನಡೆಯಬೇಕುದುಡ್ಡು ಕಾಯುವ ಸರ್ಪಕ್ಕೆ ಇಹ'ಲ್ಲ ಪರ'ಲ್ಲಬಿದ್ದು ಹೋದರೆ ಅವರ ಬಾಯೊಳಗೆ ಮಣ್ಣು 2ಧನಿಕರಿಗೆ ಭೂಷಣವು ದಾನಧರ್ಮವು ಸದಾಧನ'ದ್ದ ಜಿಪುಣತಾ ಜೀವಂತ ಹೆಣವುಧನ'ದ್ದು ದಾನಮಾಡುವ ಪುಣ್ಯವಂತರಿಗೆಘನಮ'ಮ ನಮ್ಮ ಭೂಪತಿ'ಠ್ಠಲನೊಲಿಯುವನು 3ತಾುಯ ಹರಕೆ
--------------
ಭೂಪತಿ ವಿಠಲರು
ಧನಪ್ರದ ಶ್ರೀಕರ ಕಾರುಣ್ಯ ಸ್ತೋತ್ರ ಧನಕೀರ್ತಿಗಳ ಹುಡುಕಿ ತಿರುಗಾಡಲಾರೆ ಧನಕೀರ್ತಿಗಳ ಕೊಡುವಿ ನೀನಾಗಿ ನೀನೆ ಪ ಶ್ರೀಕರನೇ ನೀನಾಗಿ ನೀನೇ ಸುಧಾಮನಿಗೆ ಬೇಕಾದ ಸೌಭಾಗ್ಯ ಧನ ಧಾನ್ಯವಿತ್ತಿ ಸಾಕಿ ಸಲಹುವ ಸ್ವಾಮಿ ನೀನಿರಲಿಕೆ ನಾನು ಏಕೆ ತಿರುಗಾಡುವುದು ಕುಳಿತಲೆ ಕೊಡುವಿ 1 ಪತಿ ಹೃಸ್ಥ ಶ್ರೀ ರಮಾಪತಿ ಸರ್ವ ಪ್ರೇರಕಾಂತರ್ಯಾಮಿ ಆರ್ತಿಹರ ನೀನು ವರಜ್ಞಾನ ಯೋಗಿವರ್ಯನು ರೈಕ್ವ ಕುಳಿತಲೆ ಪೌತ್ರಾಯಣ ದ್ವಾರ ಭಾರಿ ಧನವಿತ್ತೆ 2 ದೇವ ವೃಂದದಿ ಪ್ರವರ ಗುರು ವಾಯು ಪ್ರೇರಿಸಲು ದೇವ ಶರ್ಮನು ಬಂದು ಏನೂ ಬೇಡದಲೆ ನಿವ್ರ್ಯಾಜ ಭಕ್ತಿ ಆನಂದದಲಿ ಸ್ತುತಿಸಿದನು ದ್ರವಿಣಾದಿ ಧನವಿತ್ತಿ ನೀನಾಗಿ ನೀನೇ 3 ಸರ್ವದೊಳು ನೀನಿರುವಿ ಸರ್ವವಶಿ ನಿಸ್ಸಂಗ ಸರ್ವಧಾರಕ ಶ್ರೀಶ ಸರ್ವಗುಣ ಪೂರ್ಣ ಭೂಮಿಯಲಿ ಮಾರ್ಜಾಲ ತನ್ನ ಮರಿಯ ತಾನೇ ಎತ್ತಿ ಕಾಯುವಂತೆ ನೀ ಎನ್ನ ಸರ್ವದಾ ಕಾಯುತಿ ಕೃಪೆಯಿಂದ 4 ಶಂಖ ನಿಧಿ ಪದ್ಮನಿಧಿ ರವಿ ಸೋಮಕೈಗಳಲಿ ಶಂಖಾರಿಧರ ದ್ರವ್ಯ ಕೊಡುವ ಹಸ್ತಗಳು ಸ್ವಾಂಕಸ್ಥ ಲಕ್ಷ್ಮೀ ಸಮೇತ ಗರುಡಾ ರೂಢ ಶ್ರೀಕರನೇ ಅಜಪಿತ ನಮೋ ಪ್ರಸನ್ನ ಶ್ರೀನಿವಾಸ 5
--------------
ಪ್ರಸನ್ನ ಶ್ರೀನಿವಾಸದಾಸರು
ಭಕ್ತರನ ನಂಬದಿರು ಭವದೂರನೆ ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ಪ ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು ಹಸ್ತು ಬಂದವನು ತುತ್ತನ್ನ ಕೇಳೆ ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ1 ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ ಆದರದಲಿ ಸ್ವಲ್ಪ ಸ್ಥಳವ ಕೇಳಿ ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು2 ಆವದೊಲ್ಲೆವೆಂದು ಆಡುವರು ನಿತ್ಯದಲಿ ಕಾವ ಕರುಣಿ ನೀನೆಂದು ತಿಳಿದು ಸಿರಿ ವಿಜಯವಿಠ್ಠಲ ನಿನ್ನ ಇಂದು 3
--------------
ವಿಜಯದಾಸ