ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾ ಬಾ ಬಾರೈಯ್ಯಾ ಶ್ರೀ ಗಿರಿದೊರೆಯೆ ಸಿರಿ ಹರಿಯೆ ಚಿ ಪ ನೀ ಬರುವೆಂದಬುಜಾಭವಾದೀ ಸುರರು ಕಾದೂಕೊಂಡಿಹರು ಶ್ರೀ ಭೂಮಿ ಸಹಿತದಿ ಶ್ರೀ ಗಿರಿಯಿಳಿದು ಈ ಭವನವನು ನೀ ಪಾವನ ಮಾಡಲು ಅ.ಪ ಕರೆದರೆ ಬರೆ ಯಾಕೊ ಬಡವರೊಳೀಪರಿಯ ಪಂಥವು ಸಾಕೊ ಸುಲಭನಾಗಿರಬೇಕೊ ಕೊಡುವ ದೊರೆಯೆಂದು ದೃಢದಿ ತಿಳಿದು ನಿ ನ್ನಡಿ ಬಿಡದೆ ಬಲು ಕಾಡದೆ ಬಿಡುವರೆ 1 ಭವ ಶರಧಿಗೆ ನಾವೆ ಬಡವರಾದರೀಯೂ ನೀನಲ್ಲವೆ ಕೊಡೆನಗೆ ನಿನಸೇವೆ ಒಡೆಯ ನೀನಲ್ಲದೆ ಬಡದೇವತೆಗಳು ಕೊಡಬಲ್ಲವೆ ಪೇಳು ತಡಮಾಡದೆ ನೀ 2 ಹದಿನಾಲ್ಕು ಲೋಕದೊರೆಯು ನೀನು ಎನುತ ತಿಳಿದು ನಾನು ಪದುಳದಿ ನಿನ್ನ ಸೇವಿಸ ಬಂದೆನು ಕೇಳಯ್ಯಾ ಇನ್ನು ಪದುಮನಾಭನೆ ನೀ ಸದಯದಿ ನೋಡಿ ಇದನೆ ಕರುಣಿಸು ನಿನ್ನ ಪದಸೇವೆಯನು 3 ಸಿರಿ ಧರೆ ನಾರಿಯರ ನಾ ಕೇಳಲಿಲ್ಲಾ ಕೊಟ್ಟರು ಬೇಕಿಲ್ಲ ದೊರೆತನ ಬಯಸಿ ನಾ ಬೇಡ ಬಂದಿಲ್ಲ ಕೇಳೆನ್ನೆಯ ಸೊಲ್ಲ ಪರಿ ಬೇಡುವೆ ನಿನ್ನ ಪದಸೇವಕರ ಪರಿಚಾರಕರನೆನಿಸೊ ಪರಮ ದಯಾಳೊ 4 ಮಾತಿದು ಪುಸಿಯಲ್ಲ ನೀರಜ ಭವಾಂಡದಿ ನಿನಗೆದುರ್ಯಾರಿಲ್ಲ ರಂಗೇಶವಿಠಲ ದೂರ ನೋಡುತಲಿ ಘೋರಪಾತಕರೊಳು ಸೇರಿಸದೆನ್ನನು ಪಾರುಮಾಡಲು ಬೇಗ5
--------------
ರಂಗೇಶವಿಠಲದಾಸರು
ಯಾಕೆ ಕರುಣ ಬಾರದ್ಹರಿಯೆ ಲೋಕನಾಯಕ ನಿನಗೆ ಸರಿಯೆ ಪ ವ್ಯಾಕುಲದಲಿ ಮುಳುಗಿ ಬಹಳ ಶೋಕಪಡುವ ಜನರ ಕಂಡು ಅ.ಪ ತಂದೆ ತಾಯಿ ಬಂಧು ಬಳಗ ಇಂದು ಮುಂದು ಗತಿ ನೀನೆಂದು ಪೊಂದಿ ನಿನ್ನ ಭಜಿಸದಿರುವ ಮಂದ ಮತಿಗಳನ್ನೆ ಕಂಡು 1 ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಿ ಮುಳುಗಿ ಮುಳುಗಿ ಕಾಮಜನಕ ನಿನ್ನ ಮರೆತ ತಾಮಸ ಜನರುಗಳ ಕಂಡು 2 ಜ್ಞಾನಿಗಳನೆ ಕಂಡು ಪರಮ ಸಾನುರಾಗದಿಂದ ಪೊರೆವೆ ಜ್ಞಾನ ಶೂನ್ಯರಾದ ಪರಮ ಅ- ಜ್ಞಾನಿ ಜನರುಗಳನೆ ಕಂಡು 3 ಪರಮಪುರಷ ನಿನ್ನ ಮಹಿಮೆ ನಿರುತ ಧ್ಯಾನಿಸುವವರ ಸಂಗ ಕರುಣದಿಂದ ಪಾಲಿಸಯ್ಯ ಪರಮ ಕರುಣಾನಿಧಿಯೆ ದೇವ4 ನೊಂದೆ ಭವದ ಬಂಧನದೊಳು ತಂದೆ ಕಮಲನಾಭ ವಿಠ್ಠಲ ಬಂಧನಗಳ ಬಿಡಿಸಿ ಸಲಹೊ ಮುಂದೆ ಶ್ರಮವ ಹರಿಸೊ ಬೇಗ5
--------------
ನಿಡಗುರುಕಿ ಜೀವೂಬಾಯಿ
ವಾಯುದೇವರು ಬಾರಯ್ಯ ಬಾರೋ ಮಾರುತಿ ಪ ಅಕ್ಷಯಕುವರನ | ಕುಕ್ಷಿಯನೋಡಲು | ಪಕ್ಷಿವಾಹನರಾಮ | ಈಕ್ಷಣ ಕರೆವ ಬಾ 1 ದುರುಳ ದುಶ್ಶಾಸನನ | ಉದರವ ಭಂಗಿಸೆ | ತರಳೆದ್ರೌಪತಿ ದೇವಿ | ಕರೆದಳೊ ಬೇಗ 2 ಮಧ್ವಮುನಿಯೆ ನಿನ್ನ | ಶುದ್ಧತತ್ವದಿ ನಮ್ಮ | ಉದ್ಧರಿಸಲು | ಅನಿರುದ್ಧನು ಕರೆವ ಬಾ 3 ಜಗದಿ ಭ್ರಾಂತೇಶನೆ | ಮೃಗಯಾಪುರದೊಳು | ಮಿಗಿಲು ರಥವನೇರಿ | ಸೊಗಸಿಲಿ ಬೇಗ ಬಾ 4 ಶ್ರೀಶಕೇಶವದೂತ | ಭೂಸುರವಿನುತ | ದಾಸರ ಸಲಹಲಿನ್ | ಈ ಸಮಯದಿ ಬೇಗ5
--------------
ಶ್ರೀಶ ಕೇಶವದಾಸರು