ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಧರಿಸಿರೋ ನೀವು ನಿಮ್ಮ ತಿಳಿಯಬೇಕು ಪರಬೊಮ್ಮ ಪ ಮನುಜ ಜನ್ಮಕೆ ಬಂದು ಮರೆತರೆ ಕಷ್ಟವು ಮುಂದುಇನಿತು ವಿಚಾರವಿಲ್ಲ ಇದುವೆ ವಿವೇಕವದಲ್ಲ 1 ಕೊನಬುಗಳೆಲ್ಲವ ಬಿಡಿರೋ ಕೋಪವನೆಲ್ಲವ ಸುಡಿರೋತನು ಸುಖವಾಗಿಹುದಲ್ಲ ತಪ್ಪಿದರೆ ಬಳಿಕೆಲ್ಲ 2 ಭ್ರಮೆಯೆಲ್ಲವ ಬಿಡಬೇಕು ಬಂಧನ ಹರಿಯಲು ಬೇಕುನಮಗಿದು ನೀತಿಯಿದಲ್ಲ ನಾಚಿಕೆ ಕಿಂಚಿತ್ತು ಇಲ್ಲ 3 ತನ್ನ ತಿಳಿದರೆ ತಾ ಬಂಧು ತನ್ನ ಮರೆತರೆ ಶತ್ರುವಹಸನ್ನುತವಚನವಿದೀಗ ಸಾಧಿಸುವುದು ಬಹುಬೇಗ4 ಚೆನ್ನಾಗಿ ಶ್ರವಣದ ಕೇಳಿ ಚಿತ್ತ ಶುದ್ಧಿಯ ತಾಳಿಚಿನ್ಮಯನನು ನೀವು ಧರಿಸಿ ಚಿದಾನಂದ ತಾವೆಂದು ಸ್ಮರಿಸಿ5
--------------
ಚಿದಾನಂದ ಅವಧೂತರು
ಬಿಡು ಎನ್ನ ಶೆರಗನು ಬಾಲಕೃಷ್ಣಾಉಡುಗಿ ದೇವರ ಮನಿ ಬರುವೆ ಬೇಗ ಪ ಅಂಗಳ ಥಳಿ ಹಾಕಿ ರಂಗವಲ್ಲಿಯ ಹಾಕಿತಂಗಳ ಮೊಸರನ್ನಾ ಕಡೆಯಲ್ಹಾಕಿಬಂಗಾರದ ಬಟ್ಟಲೊಳು ರಂಗ ಬೆಣ್ಣೆಯನೀವೆಕಂಗಳನೆ ತೆಗಿ ಬೀರು ಮಂಗಳವಾ1 ಹಾಸಿಗೆ ಬಿಟ್ಟೇಳು ವಾಸುದೇವನೆ ನಿಮ್ಮಹಾಸಿನ ತೊಟ್ಟಿಲೊಳು ಮಲಗು ಕೂಸಾಏಸು ಹುಡುಗರೆಲ್ಲ ಸೋಸಿಲಿ ಕರೆವರುದೋಸೆ ಕೊಡುವೆ ತಿನ್ನೋ ಏಳು ಬೇಗ 2 ತರುವು ಕಟ್ಟಲಿ ಬೇಕು ಕರುವು ಕಾಯಲುಬೇಕುತೊರೆದು ಮಲಿಯನುಣ್ಣು ಏಳು ಬಾಲಜರದ ಕುಂಚಿಗೆ ಹೊದ್ದು ಹೊರಗೆ ಬಂದಿಹ ರಾಮಕರೆಯುತ್ತಲಿರುವನು ಕಣ್ಣೆತ್ತಿ ನೋಡು 3 ಕೋಳಿ ಕೂಗುತಲಿದೆ ಕಾಳು ಕಡಿವೆ ಹಾಕುಏಳು ಗಿಳಿಯು ನಿನ್ನ ಕೇಳುತಲಿವೆಪಾಲು ಸಕ್ಕರಿನಿತ್ತು ಸಾಲು ಕೋಕಿಲ ಹಿಂಡುಗಾನ ಮಾಡುತಲಿವೆ ಏಳು ಬೇಗ4 ಅಂದ ಮಾತನು ಕೇಳಿ ಆ ಕಂದ ಎತ್ತಿಕೋ ಎನ್ನಒಂದು ಬಟ್ಟಲದೊಳಗೆ ತಂದುಕೊಡು ಆಡುವೆಎಂದು ತಾಯಿ ಚಿನ್ನಾ ಹಿಂದೆ ಸೆರಗಪಿಡಿದು ಇಂದಿರೇಶ 5
--------------
ಇಂದಿರೇಶರು
ಮಂಗಳಂ ಜಯ ಸುಂದರ ಮೂರುತಿಗೆ ಮಾ ಮನೋಹರನಿಗೆ ಪ ಮಂಗಳ ಮಧುಸೂದನನಿಗೆ ಮಂಗಳ ಮುರಮರ್ದನನಿಗೆ ಮಂಗಳಾಂಗ ಶ್ರೀ ಮದನಂತ- ರಂಗನಿಗೆ ಶುಭಾಂಗ ಹರಿಗೆ 1 ರಂತಿದೇವನನ್ನು ಪೊರೆದ ಚಿಂತಿತಾರ್ಥ ಪ್ರದಾತನಿಗೆ ಸಂತತವು ಭಕುತರನು ಸಂತೋಷದಿ ಪೊರೆವ ಹರಿಗೆ2 ಪಾಂಡವರನು ಪೊರೆದÀಗೆ ಪುಂಡರೀಕಗೆ ಒಲಿದಗೆ ತಂಡತಂಡದ ಭಕ್ತರನ್ನು ಕಂಡುಪೊರೆವ ಮಹಮಹಿಮಗೆ3 ನಾರಿ ರುಕ್ಮಿಣಿ ಭಾಮೆ ಸಹಿತದಿ ದ್ವಾರಕಾಪುರ ವಾಸನಿಗೆ ಸೌಳಸಾಸಿರ ಸತಿಯರಾಳ್ದ ಸಾರಸಾಕ್ಷ ಹರಿಗೆ ಬೇಗ4 ಕಡಲೊಡೆಯಗೆ ಮೃಡಸಖನಿಗೆ ಕಡುಹರುಷದಿ ಕಾಮಿನಿಯರು ಸಡಗರದಲಿ ಕಮಲನಾಭ ವಿಠ್ಠಲನಂಘ್ರಿ ಭಜಿಸಿನಲಿದು5
--------------
ನಿಡಗುರುಕಿ ಜೀವೂಬಾಯಿ