ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಸರಸ್ವತೀ ಪ್ರಾರ್ಥನೆ) ಏನೇ ಸರಸ್ವತಿಯಮ್ಮಾ ಬಹು ಮಾನದಿ ಪಾಲಿಸು ನಮ್ಮಾ ಆ ನಳಿನಜ ಚತುರಾನನನೊಲಿಸಿದ ಶ್ರೀನಿವಾಸನ ಪರಮಾನುರಾಗದ ಸೊಸೆ ಪ. ಮೂಢತನವನೆಲ್ಲ ಕಳಿಯೆ ದಯ ಮಾಡಿ ನೀ ಮನಸಿಗೆ ಹೊಳಿಯೆ ಬಾಡದ ಪದ್ಮದ ಕಳೆಯೆ ಮನೋ ರೂಢ ಮಲವ ಬೇಗ ತೊಳಿಯೆ ಆಡುವ ಮಾತುಗಳೆಲ್ಲವು ಕೃಷ್ಣನ ಪಾಡಿ ಪೊಗಳುವಂತೆ ರೂಢಿಗೊಳಿಸು ದೇವಿ 1 ರಾಜಿಕಲೌಕಿಕವಾದ ಬಹು ಸೋಜಿಗಕರಿಪೂರ್ಣಮೋದ ಈ ಜಗದೊಳು ಮುಖ್ಯವಾದ ಸುಗು- ಣೋಜೊಧಾರಣ ಕಲ್ಪಭೂಜ ಮಂದ ವೈರಿಗಳ ಸ- ಮಾಜವ ಗೆಲಿಸುತ ರಾಜಿಸು ಮನದಲಿ 2 ಕರಣಾಭಿಮಾನಿಗಳನ್ನು ಉಪ ಕರಣರ ಮಾಡುವದನ್ನು ಕರುಣೀ ನೀ ಬಲ್ಲಿನ್ನು ಮುನ್ನ ಮನ ವರತು ರಕ್ಷಿಸು ಬೇಗೆನ್ನನು ಸರಸಿಜಾಕ್ಷ ಶೇಷಗಿರಿ ವರಪದಕಂಜ ಸ್ಮರಣೆ ಮಾಡುವಂತೆ ಕರುಣಿಸೆನ್ನನು 3
--------------
ತುಪಾಕಿ ವೆಂಕಟರಮಣಾಚಾರ್ಯ
ತುಳಸಮ್ಮ ಎನಗೊಲಿಯಮ್ಮ ವಿಲಸಿತವಿಮಲೆ ನೀ ಕಲ್ಯಾಣಮಾಡೆನಗೆ ಪ ನಿಲಯನಿಲಯದಲಿ ನಿಂದು ಭಕ್ತ ಕುಲವನುದ್ಧರಿಸಿದಿ ಇಂದುಮುಖಿ ಮಲಿನಹರಣೆ ದಯಸಿಂಧು ಅಹ ಕುಲವನುದ್ಧರಿಸೆನ್ನ ಹೊಲೆಯ ಬವಣೆಯಲಿ ಕಳವಳಪಡಿಸದೆ ಸಲಹು ಬೇಗೆನ್ನಮ್ಮ 1 ಭಯದೂರೆ ಜಯಕಾರೆ ಜಗಕೆ ಲೋಕ ತ್ರಯದ ಜನನಿ ಎನ್ನ ಮನಕೆ ಬೇಗ ಜಯವ ನೀಡಿ ಮಾಡು ಜೋಕೆ ಅಹ ರಮೆ ದಯಯುತೆ ನಿನ್ನ ದಯದಿ ಬೇಡುವೆನವ್ವ ಭವಭವದಲಿ ಎನ್ನ ಜಯವ ಪೊಂದಿಸಿ ತಾಯಿ 2 ಜಲಜನಾಭನ ಮೋಹಮಾಲೆ ನೀನು ಬಲು ದಯಾನ್ವಿತಭಕ್ತ ಶೀಲೆ ಎನ್ನ ಗಳವೆ ಪೊಗಳಲು ನಿನ್ನ ಲೀಲೆ ಆಹ ಚೆಲುವ ಶ್ರೀರಾಮನ ಕೂಡಿಕೊಂಡೆನ್ನೊಳು ನೆಲೆಗೊಳ್ಳು ಬಿಡದೆ ವರ ಫಲ ಪ್ರದಾಯಿನಿ 3
--------------
ರಾಮದಾಸರು
ಪಾಲಿಸು ದಯಾಕರನೆ ನೀಲಮೇಘಶ್ಯಾಮ ಪಾಲಿಸು ದಯಾಕರನೆ ಪ ಪಾಲಿಸು ಎನ್ನ ಕರುಣಾಳು ವ್ಯಾಲಮಾಲ ಬಾಲನ ದಯದಿಂ ಮಾಲತುಲಸೀವನ ಅ.ಪ ಬಂದುಬಿದ್ದೆನಯ್ಯ ಸಂಸಾರ ದಂದುಗ ವೆಂಬ ಮಾಯಬಲೆಯೊಳು ನೊಂದು ಕಾಯ ಬಂಧನಿವಾರಿಸಯ್ಯ ನೊಂದಿಸಿ ಅರ್ಥವ ತಂದು ಸತಿಯು ಸುತ ರೆಂದು ಸಲಹಿ ಯಮ ಬಂಧಕೀಡಾದೆನು ಮುಂದೆ ಇಂಥ ಬವಣಿಂದೆ ತಾರದೆನ್ನ 1 ರಿಣವೆಂಬ ಸೂತಕಿದು ಎನ್ನಗೆ ಘನವಾಗಿ ಕಾಡುವುದು ಇನ್ನಿದು ಜನು ಜನುಮದಿ ಬಿಡದು ಬೆನ್ನತ್ತಿ ಬರ್ಪುದು ಗನ್ನಗತಕನಾಗಿನ್ನು ಭವಭವಂಗ ಬನ್ನ ಬಡಲಿಬೇಕೊ ಮನ್ನಿಸಿ ದಯದಿಂ ನಿನ್ನ ಕೃಪೋದಕ ವನ್ನು ತಳೆದು ಬೇಗೆನ್ನ ಶುದ್ಧಮಾಡು 2 ಆಗಿಹೋದದ್ದ್ಹೋಯ್ತು ಮುಂದಿಹ್ಯ ಭೋಗ ಬೇಡ ಜಗತ್ತು ಪಾಲನೆ ಬಾಗುವೆ ಮನವರಿತು ಚರಣಕೆ ಶಿರವಿತ್ತು ಭೋಗಭಾಗ್ಯದಾಸೆ ನೀಗಿಸಿ ಈ ಭವ ಸಾಗರ ದಾಂಟಿಸು ಯೋಗಿಗಳರಸನೆ ನಾಗಶಯನ ದಯಮಾಡಿ ದಾಸನ ದು ರ್ಭೋಗ ದೂರಮಾಡು ಜಗಮೋಹ ಶ್ರೀರಾಮ 3
--------------
ರಾಮದಾಸರು
ಬಾರಯ್ಯ ದಯೆದೋರಯ್ಯ ನೀರಜನಾಭನೆ ಕರುಣಿಸು ಮಹರಾಯ ಪ ಸಂಸಾರಸರಕಿನೊಳು ಸಿಲುಕಿ ನಾ ಬಳಲುವೆ ಶಿಶುವಿನೊಳು ದಯವಿಟ್ಟು ಸೆರೆ ಬಿಡಿಸೆನ್ನಯ್ಯ 1 ಪುಸಿನುಡಿ ನುಡಿದು ನಾ ದೆಸೆ ಬಾಯ ಬಿಡುವೆನು ಕುಸುಮಾಕ್ಷ ಪಿಡಿದೆನ್ನ ಹಸನ ಮಾಡೆನ್ನಯ್ಯ2 ಜಡಭವತೊಡರನು ಗಡನೆ ಕಡೆಹಾಯ್ಸಿ ನಿ ನ್ನಡಿಭಕ್ತಿ ಕೊಡು ಬೇಗೆನ್ನೊಡೆಯ ಶ್ರೀರಾಮಯ್ಯ 3
--------------
ರಾಮದಾಸರು
ವಾಗ್ದೇವಿ ಪ ವಾಗ್ದೇವಿ ಅ.ಪ. ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ ವ್ರತತಿಜನೇತ್ರೆ ಭಾರತಿ ನೀ ದಯಮಾಡೆ 1 ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಾಶ್ರಿತರ ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ 2 ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ 3
--------------
ಜಗನ್ನಾಥದಾಸರು
ಸೀತಾಪತೇ ರಘುನಾಥ ದಯಾಳೋ ಪ ಆ ತೆರ ಚರನೂಕೈ ಪ್ರೀತಿಯೊಳಿರಿಸೈ ಮಾತಾಪಿತ ಸರ್ವ ಭೂತಾನಿ ಅರಸೈ 1 ಮಾಯಾ ನೀ ನೋಡೈ ಕಾಮಜನಕ ರಂಗಾ ಬೇಗೆನ್ನ ಕೂಡೈ 2 ನೇಷಾ ಪ್ರಸಾದೇ ತದ್ವಾಶೀಯಾಹಮ ಜೀ 3
--------------
ಚನ್ನಪಟ್ಟಣದ ಅಹೋಬಲದಾಸರು