ಒಟ್ಟು 6 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೇನು ಬೇಕಯ್ಯ ಶ್ರೀ ಹರಿಯೆ ನಿನಗೇ ನೀನೆ ಗತಿಯೆಂದು ಸರ್ವಸ್ವವೊಪ್ಪಿಸುವೇ ಪ ತರಳನಾಗಿಹ ಧೃವನು ಘೋರ ತಪವಂಗೈಯ ಹರುಷದಿಂ ಬಾಲಕಗೆ ವರ ಪದವಿಯಿತ್ತೇ ಕರುಣಾಳು ಶ್ರೀ ಹರಿಯೇ ನಿಂನ ಮೆಚ್ಚಿಸಲಿಕ್ಕೆ ಉರುತರದ ತಪವು ಬೇಕೇನೊ ನಾನರಿಯೇ 1 ದೊರೆಯು ರುಕುಮುಂಗದನು ಯೇಕಾದಶೀವ್ರತವ ಸರಸದಿಂದಾಚರಿಸೆ ನಿಜಭಕ್ತಗೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ವ್ರತವು ಬೇಕೇನೊ ನಾನರಿಯೇ 2 ತರಳ ಪ್ರಲ್ಹಾದ ತಾ ಹರಿನಾಮ ಕೀರ್ತಿಸಲು ದುರುಳ ತಾತನ ಕೊಂದು ಕಂದನನು ಪೊರೆದೆ ಕರುಣಾಳು ಶ್ರೀ ಹರಿಯೆ ನಿಂನÀ ಮೆಚ್ಚಿಸಲಿಕ್ಕೆ ಉರುತರದ ಕೀರ್ತನೆಯು ಬೇಕೋ ನಾ ನಾನರಿಯೇ 3 ಭರದಿ ದುಶ್ಯಾಸನನು ಮಾನವಂ ಕಳಯುತಿರೆ ಸರಳೆಗೇ ನೀನೊಲಿದು ಅಕ್ಷಯವನಿತ್ತೇ ಕರುಣಾಳು ಶ್ರೀಹರಿಯೆ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸ್ತೋತ್ರಗಳು ಬೇಕೋ ನಾನರಿಯೇ4 ಧರಣಿಸುತೆ ಜಾನ್ಹಕಿಯೆ ಹುಡುಕಲ್ಕಿ ವಿಕ್ರಮದಿ ಶರಧಿಯನು ದಾಟಿದಗೆ ಭರದಿಂದಲೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ದಾಸ್ಯತ್ವ ಬೇಕೋ ನಾನರಿಯೇ 5 ನಿರುತದಾಸರು ನಿನ್ನ ಸೇವೆಯನು ಮಾಡಲ್ಕೆ ಕರುಣದಿಂ ದಾಸರಿಗೆ ಪ್ರತ್ಯಕ್ಷನಾದೇ ಕರುಣಾಳು ಶ್ರೀ ಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸೇವೆ ಬೇಕೇನೊ ನಾನರಿಯೇ 6 ವರ ದುರ್ವಾಪುರದಲ್ಲಿನಿತ್ತು ಮೆರೆಯುವಿಯೆಂದು ಸಿರಿ ಚನ್ನಕೇಶವನೆ ಪರಮಾತ್ಮನಂದೂ ಕರುಣಾಳು ಶ್ರೀ ಹರಿಯೆ ನಿನ್ನ ನಂಬುತಲಿಂದು ಮರೆಹೊಕ್ಕೆ ಕಾಯೋ ಶ್ರೀ ಈಶ ಸರ್ವೇಶಾ 7
--------------
ಕರ್ಕಿ ಕೇಶವದಾಸ
ಜೋ ಜೋ ರಂಗಯ್ಯ ಜೋ ಜೋ ಕೃಷ್ಣಯ್ಯ ಮಲಗಯ್ಯ ಜೋ ಜೋ ಪ ಕಣ್ಣೇಕೆ ನೀನು ಮುಚ್ಚಲೊಲ್ಲೆಯೊ ರಂಗ ಬೆನ್ನು ಭಾರವಾಗಿರುವುದೇನೋ ದೇವ ಮಣ್ಣಿನೊಳು ನೀನಾಡಿ ಮೈ ನೋಯುವುದೇನೊ ಹೊನ್ನು ಕಶಿಪುವಿನ ಕರುಳ ಕಂಡಂಜಿದೆಯೇನೊ 1 ಚಿಣ್ಣ ನೀ ಧರೆಯನಳೆಯಲೇತಕೆ ಪೋದೆ ಗಣ್ಡುಗೊಡಲಿ ಪಿಡಿದು ಕೈಯಿ ಉಳುಕಿಹುದೇನೊ ಅನ್ನವ ಬಿಟ್ಟು ನೀ ಪರ್ನವೇತಕೆ ತಿಂದೆ ಬೆಣ್ಣೆಯ ಮೆದ್ದು ನಿನ ಹೊಟ್ಟೆ ನೊಯ್ಯುವದೇನೊ 2 ಬತ್ತಲೆ ತಿರುಗಿ ಮೈ ಬಿಸಿಯಾಗಿರುವದೇನೊ ಕತ್ತಿಯ ಪಿಡಿದು ತೇಜಿಯ ಹತ್ತಬೇಕೇನೊ ಹೊತ್ತಾಯ್ತು ಕಂದಯ್ಯ ಮಲಗೆಂದು ಯಶೋದೆ ಮುತ್ತಿಟ್ಟು ತೂಗಿದಳು ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ ವ್ಯಾಳಿಗೆ ಒದಗಿಸೋ ಹರಿಯೆ ಮರಿಯೆ ಪ ಕಾಲನ ದೂತರು ಕಠಿಣರೆ ಸರಿ ವ್ಯಾಳಿಯು ಹೇಳಿ ಕೇಳಿ ಬರುವದಲ್ಲ ಆಲಯದವರ ಶಕುತಿಯಲ್ಲೇನೋ ಲಾಲಿಸಬೇಕೇನೊ ಎನ್ನ ಬಿನ್ನಪ 1 ಕಾಲನ ಸ್ಥಿತಿಯೆಂತು ಮೇಷದ ಗುಂಪಿಗೆ ತೋಳದ ಪರಿಯೆಂದು ನಾ ಕೇಳಿ ಬಲ್ಲೆ ಕಾಳು ಕಪಟೆ ತಿಂಬ ಮೂಷಕಗಳಿನ್ನು ಕಾಲ ಭುಜಂಗದಂತೆ ಕಂಡು ಬಲ್ಲೆನೊ2 ಹೇಸಿ ವಿµಯವೆಂಬಾ ಮಡಿವಿನೊಳಗೆ ವೈದು ಮೋಸಗೊಳಿಸುವ ಸ್ಥಿತಿಯು ಮನಸಿನ ಪರಿ ತಿಳಿದಿನ್ನು ಈ ಸಮಯಕ್ಕೆ ನಾಮ ಒದಗಿಸಯ್ಯ 3
--------------
ವ್ಯಾಸತತ್ವಜ್ಞದಾಸರು
ಬೇಡಿದ್ದು ಕೊಡಬಾರದೇನೊ ಬ್ಯಾಡಾದದ್ದು ಕೊಟ್ಟರೆ ಮಾಡಬೇಕೇನೊ ಪ ಯೆನಗದು ಬೇಕಾಗಿಲ್ಲ ಹಂಸರೂಪವ ಕಾಣಲಿಲ್ಲ 1 ಶ್ರಮ ಪಡಲಾರೆನಿನ್ನು ಅಡಿಗಳಿಗೆರಗುವೆ ಕೊಡು ಮತಿಯನ್ನು2 ಮಾಡಿಕೊಂಡು ಮೆರೆವೆನೆಂಬುವರೊ ನಿನ್ನ ಮುಖವನ್ನು ತೋರೊ 3 ಚಾರು ತೋರದಿರುವರೆ ಮುಕುಂದ ಮುರಾರೆ 4 ಅನುಭವಿಸಿದ್ದು ಸಾಕಿನ್ನು ವಿಠಲನೆ ಕೊಡು ಮುಕ್ತಿಯನ್ನು5
--------------
ಹನುಮೇಶವಿಠಲ