ಒಟ್ಟು 8 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಬೇಕೆಲೋ ರಂಗಾ ಎನ್ನಾ | ನೀ ಕಾಯಬೇಕೆಲೋ ರಂಗಾ | ತೋಯಜಾಕ್ಷ ದಯಾನಿಧಿ ತರಣೋ | ಪಾಯದೋರೋ ಶುಭಾಂಗಾ ಪ ದುರಿತ ಸಮೂಹವ ಬಂದು | ಶಣಸುತ | ಹರಿದಂಜಿಸುತಿವೆಯಿಂದು | ನರಹರಿ ನಿನ್ನ ನಾಮದ ಘನಗರ್ಜನೆಯ |ಕೊಡು | ಮರಳು ಮಾನವನಿವನೆಂದು 1 ಕುಂದನಾರಿಸಿಯೆಲ್ಲಾ ನೋಡಲು | ಒಂದೆರಡೆನಲಿಕ್ಕಿಲ್ಲಾ | ಮಂದಮತಿ ಅವಗುಣ ರಾಶಿ ಪತಿತರ | ವೃಂದದೊಳೆನ್ನಧಿಕಲಾ2 ಕೊಂಬು ನೀಚನವಾದರೆ ಬಿರದಾ | ಡಂಬರ ನೀಚನಲ್ಲಾ | ಇಂಬುದೋರೆಲೆ ನಿನ್ನ ದಾಸರ ದಾಸ | ಎಂಬದೆನ್ನಧಿಕಾರವಿಲ್ಲಾ 3 ಬಿನ್ನಹವೆನ್ನ ಮುರಾರಿ | ಪಾಲಿಸಿ | ನಿನ್ನ ಚರಣವ ದೋರಿ | ಧನ್ಯಗೈಸೆಲೋ ಗುರುವರ ಮಹಿಪತಿ ಚಿನ್ನನೊಡಿಯ ಸಹಕಾರಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾಗ್ಯ ಬೇಕೈ ಗುರುವೇ ಬೋಧವ ಕೇಳೆ ಭಾಗ್ಯ ಬೇಕೈ ಜೀವಿಗೆ ಭಾಗ್ಯದ ಹೊರತಾಗಿ ಬೋಧ ಭೋಗಲಂಪಟ ಭವ ರೋಗಿಗೆ ದೊರಕೀತೆ ಪ ಮಾನವಜನ್ಮವ ತಾಳೆ ಬೇಕೆಲೋ ಭಾಗ್ಯ ಹೀನಬಾಳುವೆ ಬೇಸರಾಗೆ ಬೇಕೆಲೋ ಭಾಗ್ಯ ಜ್ಞಾನಿಯ ದರುಶನವಾಗೆ ಬೇಕೆಲೋ ಭಾಗ್ಯ ತಾನು ತನ್ನಯ ನಿಜವ ತಿಳಿಯೆ ಪರಮ ಭಾಗ್ಯ 1 ಬಾಳಿನ ಸುಖಕಾಗಿ ಆಳಾಗಿ ದುಡಿವಂಗೆ ಕೀಳುತನದಿ ಜ್ಞಾನವಲ್ಲಗಳೆಯುವಗೆ ಮೇಲು ತಾನೆಂದು ತಿಳಿದೋಡಾಡುವವನಿಗೆ ಕಾಲನಂಜಿಕೆ ಕಳೆವ ಬೋಧವು ತಿಳಿವೊಡೆ 2 ಏನಾದೊಡೇನಯ್ಯ ಎನ್ನ ಪೂರ್ವದಭಾಗ್ಯ ನಾನಾದೆ ದೇವನು ಗುರು ನೀನೇ ಯೋಗ್ಯ ಹೀನರ ಕೊಂಡೇನು ನಾನೊಂದು ಪಾರಾದೆ ಜ್ಞಾನಿಶಂಕರನೆ ನಾನಾದೆ ಎನ್ನಯ ಭಾಗ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮಾಡಬೇಕೆಲೋ ಭಜನೆ ಮಾಡಬೇಕೆಲೊ ಪ ಮಾಡಬೇಕು ಭಜನೆ ಮನದಿ ಕೂಡಬೇಕು ಪ್ರಣವ ಘನದೀ ಈಡ ಪಿಂಗಳ ಯಿದರೊಳಗಿರುವ ನಾಡಿ ಭೇದಗಳನು ತಿಳಿದೂ 1 ಆರು ಮೂರುಯೆಂಬೊ ದಾರಿ ಮೀರಿನೋಡುಯಿರುವ ಶಿಖರ ತೋರಿಯಾಡುವಂಥಾ ಘಂಟೆ ಭೇರಿನಾದಗಳನು ತಿಳಿದೂ 2 ವರದ ರಂಗನಿರುವನರಿಯೊ ಧರಣಿ ಕನಕಪುರಿಯ ಕೋಟೆ ಗುರುವು ತುಲಶೀರಾಮದಾಸ ರರಿತುಯಿತ್ತ ಚರಣ ಭಜನೆ 3
--------------
ಚನ್ನಪಟ್ಟಣದ ಅಹೋಬಲದಾಸರು
ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ ಪ ಈಶ ಹೊರತು ಮಿಕ್ಕ ಜನರು ದಾಸರೇ ಸರಿ ಅ.ಪ. ವೇದವ್ಯಾಸದೇವ ದೇವ ಸರ್ವರಿಗೆ ಈಶ ಕಾಣಿರೋ ಮೋದಮುನಿಯು ಆತನಿಗೆ ಮುಖ್ಯದಾಸ ಶಾಸ್ತ್ರಸಿದ್ದವೋ ಎಂದಮೇಲೆ ನೀನು ಯಾರು ಸಾಕ್ಷಿಕೇಳಿ ಬೇಗ ನುಡಿಯಲೋ ಛಂದ ಭಜಿಸಿ ಜ್ಞಾನ ಘಳಿಸಿ ದಾಸನೆಂದು ಹರಿಯ ಭಜಿಸೆಲೋ 1 ಧರ್ಮಶಾಸ್ತ್ರ ಮರ್ಮಬಿಟ್ಟು ಓದಿ ಓದಿ ಏನು ಫಲವೊ ನಿತ್ಯ ತೃಪ್ತ ನಿರ್ಜರೇಶ ನೊಲಿಮೆ ಮುಖ್ಯವೋ ಕಮಲೆಯರಸ ಕಲ್ಪವೃಕ್ಷ ಹೃಸ್ಥದೊರೆಯ ಕಾಣಬೇಕೆಲೋ ಕರ್ಮಬಿಡದೆ ಆಶೆತೊರೆದು ಕರ್ಮಪತಿಯ ಶರಣು ಪೊಗೆಲೋ 2 ವೇದಶಾಸ್ತ್ರ ಸ್ಮøತಿಗಳಲ್ಲಿ ಪೇಳಿರುವ ತತ್ವಗಳನ್ನು ನಡತೆಯಿಂದ ನಡಿಸಿ ನಡಿಸುತ ಇಂದಿರೇಶನ ದಾಸಜನರು ಪದಗಳಿಂದ ಪಾಡಿ ಪಾಡುವ ಖೇದವಳಿದು ಸಾಧು ಜನಕೆ ನಂದ ಸೂರೆಗೈದು ನಲಿವರೋ 3 ವೇಷದಿಂದ ಭಾಷೆಯಿಂದ ಶ್ರೀಶನೊಲಿಮೆ ಕಾಣಲಾಗದೋ ದಾಸನೆಂದು ದೈನ್ಯದಿಂದ ದ್ವೇಷ ತ್ಯಜಿಸಿ ಕೂಗಬೇಕೆಲೋ ಕುಣಿದು ಕುಣಿಯಲೊ 4 ಶಕ್ತಿಜರಿದ್ವಿರಕ್ತಿಬೇಡಿ ಭಕ್ತಿಯಿಂದ ಭಜಿಸಿ ಭಜಿಸೆಲೊ ಶಕ್ತ ವಿಜಯಸೂತ ಶ್ರೀ ವಾಯುಹೃಸ್ಥ “ಕೃಷ್ಣವಿಠಲ” ಯುಕ್ತಿಯಿಂದ ಬಂಧಬಿಡಸಿ ನಿತ್ಯಸುಖವ ನಿತ್ತು ಕಾಯ್ವನೊ ಭಕ್ತಿಯಿಂದ ಶಕ್ಯನಾದ ಜ್ಞಾನ ಘಳಿಸಿ ಕೊಲ್ಲು ಸಂಶಯ 5
--------------
ಕೃಷ್ಣವಿಠಲದಾಸರು