ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
ಟೀಕಾಚಾರ್ಯರ ಸ್ತೋತ್ರ ದಯದಿ ಪಾಲಿಸೋ ಜಯತೀರಥ ರಾಯಾ | ಅಕ್ಷೋಭ್ಯರ ತನಯಾ ಪ ಅತ್ಯಂತ್ಹರುಷದಿ ಎತ್ತಾಗಿರುತಿರಲೂ ಶ್ರೀ |ಆನಂದ ತೀರಥರೂನಿತ್ಯ ಪಠಿಸುವೋ ಪುಸ್ತಕ ಹೊರುತಿರಲೂ |ಗುರುರಾಯರು ಪೇಳಿದತತ್ವ ಗ್ರಂಥವನೆ ಕಿವಿಯಲಿ ಕೇಳುತಲೀ | ತಲೆಯನು ತೂಗುತಲೀಮತ್ತೆ ಪುಟ್ಟಿದ್ಯೋ ಮಂಗಳವೇಡೆಯಲೀ | ಅತಿ ಮತಿವಂತರಲೀ 1 ದೇಶಪಾಂಡೆರಾ ಕೂಸಾಗಿ ಜನಿಸೀ | ಘನ ರಾವುತನೆನಿಸೀದೇಶ ದೇಶದೋಳ್ ಸೈನ್ಯವನೇ ಚರಿಸೀ | ಹಣವನ್ನೇ ಗಳಿಸೀವಾಸುಕಿಯೆಂಬೋ ಗುರುತನೆ ತಪ್ಪಿಸೀ | ನದಿಗೇ ನೀರಡಿಸೀಶ್ರೀಶನಾಜ್ಞೆಯೊಳಿವರನೆ ಕರೆತರಿಸೀ |ಶಿಖೆ ಸೂತ್ರವ ತೆಗೆಸೀ2 ಹಿಂಡು ಜನ ಅಂಡಲಿಯುತ ಬದೂ | ಅಕ್ಷೋಭ್ಯ ತೀರಥರಾಕಂಡು ಭೇಟಿಯಾ ಮಾಡುತಲೇ ನಿಂದೂ | ಧೋಂಡೋ ರಘುನಾಥನಹೆಂಡತಿ ಗಂಡನ ಕೂಡಿಸಬೇಕೆಂದೂ | ಸುಮ್ಮನೆ ಕರೆತಂದೂ - ಪ್ರಚಡ ಸರ್ಪನಾ ರೂಪವ ತಾಳ್ದಂದೂ ಭಯವ ಪಟ್ಟರಂದೂ 3 ಮಧ್ವ ಶಾಸ್ತ್ರಗಳನುದ್ಧರಿಸುತಲದನಾ | ಟೀಕೆಯನೇ ಮಾಡೀವಿದ್ವಜ್ಜನರಿಗೆ ತಿದ್ದಿಯೆ ಪೇಳುತಲೀ |ನಾನಾ ಬಗೆಯಿಂದಲಿಪದ್ಧತಿ ತಿಳಿಸಿದ ಗುರುರಾಯರು ನೀವು | ಯತಿವರ ಸುರಧೇನುಅದ್ವೈತರ ಗುರು ವಿದ್ಯಾರಣ್ಯರ | ಗೆದ್ದ ಸಿಂಹ ನೀನೂ 4 ಆಷಾಢ ಬಹುಳ ಪಂಚಮಿಯೂ ಬರುತಾ ಕಳೆಬರವನೆ ಬಿಡುತಾವ್ಯಾಸ ವಿಠ್ಠಲನ ಪಾದದಲೇ ನಿರುತಾ | ಮಳಖೇಡದೊಳುವಾಸಿಪನೆಂಬೋ ಬಲು ಪ್ರಖ್ಯಾತಾ |ನಿಜಗುಣ ಗಣನೀತಾಬ್ಯಾಸರದಲೆ ಕೊಂಡಾಡಿದರೆ ನಿತ್ಯಾ | ಇಷ್ಟಾರ್ಥವನಿತ್ತಾ 5
--------------
ವ್ಯಾಸವಿಠ್ಠಲರು
ತಂದೆ ಮುದ್ದು ಮೋಹನ್ನ | ನೀ ಕಾಯಬೇಕೆನ್ನವಂದಿಸಿ ಬೇಡುವೆ | ಭಕ್ತ ಪಾವನ್ನ | ಜೋ ಜೋ ಪ ಕರಿಗಿರಿ ಕ್ಷೇತ್ರದಲಿ | ನೀ ಈಗ ನೆಲಿಸೀಗುರವಾರ ಪಂಚಮೀ | ಮಾರುತಿಯ ನಿಲಿಸೀ | ಜೋ ಜೋ1 ಭೂಸುರರ ಉದ್ಧಾರ | ಗೈಯ್ಯ ಬೇಕೆಂದೂದಾಸ ಭಾವವ ತೋರಿ | ನೀಮೆರೆದೆ ಜಗದೀ | ಜೋ ಜೋ 2 ಸೂಸಿ ಬಹ ದಾಸರಿಗೆ | ಅಂಕಿತಗಳಿತ್ತೂದಾಸ ಪಂಥವ ತೋರ್ದಿ | ಸಜ್ಜನರಿಗೆಲ್ಲಾ | ಜೋ ಜೋ 3 ಏಸು ಜನುಮದ ಪುಣ್ಯ | ರಾಶಿ ಒದಗಿತೊ ಎನಗೇಕ್ಲೇಶನಾಶನ ಗುರು | ಪಾದವಾ ಶ್ರೈಸಿದೇ | ಜೋ ಜೋ 4 ಕಂದರ್ಪ ಜನಕ ಗುರು | ಗೋವಿಂದ ವಿಠ್ಠಲನೇತಂದೆ ಮುದ್ದು ಮೋಹನ್ನ | ವಿಠ್ಠಲನೆ ಎಂದೂ ಜೋ ಜೋ 5
--------------
ಗುರುಗೋವಿಂದವಿಠಲರು
ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು ಘೋರತರ ನರಕದತಿಭಯವಾ ಪದೂರ್ವೆ ಮೊದಲಾದ ತೃಣಧಾನ್ಯ ಗರ್ಭವ ಮೆಟ್ಟಿಸರ್ವ ಸ್ಥಾವರ ಜಾತಿಗಳಲಿ ಪುಟ್ಟಿಪಾರ್ವಪಕ್ಷಿಗಳ ಬಸುರೊಳು ಪುಟ್ಟಿ ಬಹಳ ಪಶೂದರ್ವೀಕರಂಗಳಲಿ ಪುಟ್ಟಿ ಕಂಗೆಟ್ಟೂ1ಮನುಜರೊಳು ಪದಿನೆಂಟು ಜಾತಿಗಳೊಳಗೆ ಬಂದುಬಿನುಗುತನದಿಂದಖಿಳ ವಿಷಯಗಳ ತಿಂದೂಅನುವರಿಯದಜ್ಞಾನದೊಳಗೆ ಬಳಿಸಂದು ಪಾರ್ವನ ಜನ್ಮದಲಿ ವಿಹಿತಕರ್ಮದಲಿ ಮನನಿಂದು2ಮೆಲ್ಲ ಮೆಲ್ಲನೆ ಕಾಮ್ಯ ನಿಷ್ಕಾಮ ಕರ್ಮಗಳಬಲ್ಲ ಬಲ್ಲಂತೆ ಮಾಡುತ ಪೂರ್ವದಾಸಲ್ಲಲಿತ ಪುಣ್ಯದೊಳು ಭಕ್ತಿಯೊಳ್ಮನ ಮುಟ್ಟಿಅಲ್ಲಲ್ಲಿ ಹರಿನಾಮ ಕಥೆಯೊಳಳವಟ್ಟೂ 3ಭಾಗವತ ಜನ ಸಂಗದಿಂದ ಹರಿಕಥೆಗಳನುರಾಗದಿಂ ಕೇಳಿ ಗುರುವಿನ ಮಹಿಮೆಯಾಶ್ರೀಗುರುಗಳಿಂದಲೆ ಧನ್ಯತ್ವವಹುದೆಂದುಯೋಗ ಸಂಪದವೆ ತನಗಾಗಬೇಕೆಂದೂ 4ಸದಸದ್ವಿವೇಕ ಶಮೆ ದಮೆ ತಿತಿಕ್ಷೆಗಳಿಂದಲಧಿಕ ಮೋಕ್ಷೇಛ್ಛೆ ಮುಂತಾದ ಸಾಧನವೂಒದವಿರಲು ಬೇಕು ಗೋಪಾಲಾರ್ಯ ಗುರುವರನಪದವೆ ಸತ್ಯಾನಂದ ರೂಪವೆಂತೆಂದೂ 5
--------------
ಗೋಪಾಲಾರ್ಯರು