ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಿಯ ಪೇಳುವೆನು ಚರಿಯ ಪೇಳುವೆವು ಪ. ಕೃಷ್ಣ ಬಂದೆಮ್ಮಾಲಯದೊಳು ಲೂಟಿಗೈದಿಪನೆ ಅ.ಪ. ಗುಲ್ಲು ಮಾಡದೆ ಘುಲ್ಲ ಲೋಚನ ಮೆಲ್ಲಡಿ ಇಡುತ ಬಂದೂ ಗಲ್ಲಕೆ ಮುತ್ತು ಕೊಟ್ಟು ಎಮ್ಮಾ ಗಲ್ಲ ಪಿಡಿಯುವನೆ ಶ್ರೀಕೃಷ್ಣ ಗುಲ್ಲು ಮಾಡುವನೆ ಯಶೋದೆ 1 ನೆಲುವಿಲಿದ್ದ ಬೆಣ್ಣೆ ಕದ್ದ ಚೆಲುವ ಕೃಷ್ಣನೆ ದೇವಾ ಛಲದಿ ಪಿಡಿಯಾಪೋದರೆಮ್ಮಾ ಅಣಕ ಮಾಡುತ್ತಾ ಮುರಾರಿ ಪರಾರಿಯಾದನೇ ಯಶೋದೆ 2 ಹಿರಿಯಕಾಲದ ಸಾಲಿಗ್ರಾಮ ಕರಿಯ ಕಲ್ಲೆಂದು ಶ್ರೀ ಕೃಷ್ಣ ಭರದಿ ಬಾಯೊಳ ನುಂಗಿ ಜಗಕೆ ತಾನ್ಹಿರಿಯನೆಂಬುವನೆ ಯಶೋದೆ ಹಿರಿಯನೆಂಬುವನೆ 3 ಗೊಲ್ಲಸತಿಯೇರೊಡನೆ ಪೋಗಿ ಮೆಲ್ಲ ಮೆಲ್ಲನೆ ಶ್ರೀಕೃಷ್ಣ ಚೆಲ್ಲಿಮೊಸರ ಗಡಿಗೆಯೊಡೆದು ಸಲ್ಲಾಪತೋರೆಂಬುವನೆ ಯಶೋದೆ ಸರಸತೋರೆಂಬುವನೆ 4 ಸಿರಿರಮಣನ ಕರೆದು ನೀನು ಬರೆಯ ಬೇಕಮ್ಮಾ ಬುದ್ಧಿ ಥರವೆಯಮ್ಮಾ ಕೂಡಿ ತರಳಾ ಸರಸವಾಡುವುದು ಶ್ರೀ ಶ್ರೀನಿವಾಸ 5
--------------
ಸರಸ್ವತಿ ಬಾಯಿ
ಸರಸ್ವತಿದೇವಿ ಸ್ತುತಿ ಶುಕ ವಾಣಿ ಪ ಪ್ರೀಯಳೇ ಹರಿಯಾ |ನವ ವಿಧದಿ ಭಜಿಸುವಾ ||ಕವಿಗಳೊಳಿಡಬೇಕು | ನಿನ್ನನೇ ಒಂದರಿಯಬೇಕು1 ವೀಣಾಪಾಣಿಯೆ ಪಿತನಾ |ಧ್ಯಾನಾದೊಳಿರಿಸೆನ್ನ |ಹೀನಾ ವೈಷಿಕಗಳನ |ನಾನೊಲ್ಲೆನನುಗಾಲಾ 2 ಗುರುಪ್ರಾಣೇಶವಿಠ್ಠಲಾ |ತ್ವರಿತಾ ತಾನೊಲಿವಂತೆ ||ವರಮತಿಯನಿತ್ತೆಮ್ಮ |ಪೊರಿಯಲಿ ಬೇಕಮ್ಮಾ3
--------------
ಗುರುಪ್ರಾಣೇಶವಿಠಲರು
ಹಚ್ಚಡವಗೆಯ ಬೇಕಮ್ಮಾ | ಬಹುಕೊಳೆ ಮುಚ್ಚಿ ಕೊಂಡಿಹುದು ನೋಡಮ್ಮಾ ಪ. ಸ್ವಚ್ಛವ ಮಾಡುತ ಅಚ್ಯುತನಂಘ್ರಿಗೆ ಬೆಚ್ಚಗೆ ಹೊದಿಸಲು ಇಚ್ಛೆಯ ಮಾಡುತ ಅ.ಪ. ಏಳು ಪದರವಿಹುದೊ | ಬಹು ಕಾಲದಿಂ ಬಾಳುತ ಬಂದಿಹುದೂ ಕಾಲಕಾಲಕೆ ಬದಲಾವಣೆ ಪೊಂದುತ ಬೀಳುತೇಳುತ ಬೆನ್ನು ಬಿಡದಿರುತಿಹುದೊ 1 ಹೊರಗಡೆ ನವ ದುರ್ಗಂಧಾ | ಒಳಗಡೆ ಇನ್ನು ಅರುಹಲಾರದ ಕಲ್ಮಷಾ ಸುರರೆಲ್ಲ ಇದಕಿನ್ನು ಸರಿ ಇಲ್ಲವೆಂಬೋರು ಮರುತಾಂತರ್ಯಾಮಿಗೆ ಸರಿತೋರುವಂದದಿ 2 ಎಪ್ಪತ್ತೆರಡು ಸಾಸಿರಾ | ನೂಲುಗಳಿಂದ ವಪ್ಪಾಗಿ ಹೊಲಿದ ಪಾರ ಕಪ್ಪು ಕೆಂಪು ಬಿಳಿ ವಪ್ಪೆ ಬಣ್ಣಗಳಿಂದ ಸರ್ಪಶಯನ ಸತತ ಸಲಹಿ ಕೊಡುವಂಥ 3 ನಿರ್ಮಲೋದಕವ್ಯಾವುದೇ | ಇದನೊಗೆಯಲು ಸಮ್ಮತ ಶಿಲೆಯಾವುದೇ ಬೊಮ್ಮನೈಯ್ಯನ ಸುಜ್ಞಾನ ಸುಕೊಳದೊಳು ವಮ್ಮನಸಿನೊಳದ್ದಿ ವದ್ದೆ ಮಾಡುತಲಿನ್ನು 4 ವ್ಯಕ್ತಿ ವೈರಾಗ್ಯ ಶಿಲೇ | ಶ್ರೀ ಹರಿಗುರು ಭಕ್ತಿ ಎರಡು ಕೈಗಳೇ ಎತ್ತಿ ವಗೆದು ಎಲ್ಲಾ ಕಶ್ಮಲ ಕಳೆಯುತ ಮತ್ತೆ ಜಾಲಾಡಿ ಹಿಂಡಿಕೆ ಮಾಡಿ ಶುಭ್ರದಿ 5 ಎತ್ತಿ ತಂದು ಕೊಡುವುತಾ | ಮತ್ತೆ ಕೊಳೆ ಹತ್ತದಂದದಿ ನೋಡುತಾ ಉತ್ತಮವಾದ ಮೈದಾನದೊಳಗೆ ಹರಹಿ ನೆತ್ತಿ ಜ್ಯೋತಿಯ ಘನ ದೀಪ್ತಿಯಲ್ಲೊಣಗಿಸು 6 ಶುದ್ಧ ಸಾತ್ವಿಕವರ್ಣದೀ | ಹೊಳೆವಂಥ ಈ ಶುದ್ಧ ಹೊದ್ದಿಕೆ ಸ್ಥಾನದೀ ಮುದ್ದುಕೃಷ್ಣನು ತನ್ನ ಪರಿವಾರ ಸಹಿತದಿ ಪೊದ್ದಿಕೊಂಡಿಪ್ಪ ಬಲು ಭದ್ರವ ಮಾಡುತ 7 ಹಿಂದೆ ಮುಂದಿನ ಭಯವೆಲ್ಲಾ | ತಪ್ಪುವುದಿನ್ನು ಸಂದೇಹಪಡಲು ಸಲ್ಲಾ ತಂದೆ ಮುದ್ದುಮೋಹನ್ನ ಗುರುಗಳು ಪೇಳಿದ ಒಂದೆ ವಾಕ್ಯವ ಆನಂದದಿ ನಂಬುತ 8 ನೂತನ ಹಚ್ಚಡವೂ | ನೂಲುಗಾರ ಜಾತಿಯರರಿಯರಿವೂ ಪ್ರೀತಿಯೋಳ್ ಗೋಪಾಲಕೃಷ್ಣವಿಠ್ಠಲ ಕೊಟ್ಟ ಖ್ಯಾತಿಯೊಳ್ ಬಾಳಿ ಶ್ರೀನಾಥನ್ನ ಪೊಂದುವೋ 9
--------------
ಅಂಬಾಬಾಯಿ
ಗುರುವಿನ ಮರೆಯಾದಿರಮ್ಮ ಪಅಂಕಿತವನೆ ಇತ್ತಸಿರಿ ಗುರುವಿನ ನೀನುಮನದೊಳು ನೆನೆಯಬÉೀಕಮ್ಮ ತಂಗಿ ಅ.ಪಗುರುವಿನ ಮರೆತರೆ ನಿನಗೆ ಥರಥರ ನರಕಥರಥರನರಕವ ಅನುಭವಿಸಬೇಕಮ್ಮ ತಂಗೀ 1ಜ್ಞಾನಾನಂದಾತ್ಮಕನಾದ ಶ್ರೀಹರಿಯನ್ನುಗುರುವಿನದ್ವಾರಾ ನೀ ತಿಳಿ ಮಂಗಳಾಂಗಿ 2ಗುರುವೆ ತಂದೆಯು ಬಂಧು ಬಳಗಾವೆಂದು ಅಕ್ಕರೆಯಿಂದ ನೀ ನೆನೆಯಬೇಕಮ್ಮಾ 3ಗುರುವಿನ ಸೇವೆಯ ಮಾಡುತ್ತ ಗುರುಗಳಕೃಪೆಗೆ ಪಾತ್ರರಾಗಿ ಬಾಳಬೇಕಮ್ಮಾ 4ಮಂಗಳ ಮಹಿಮ ಶ್ರೀ ತಂದೆಮುದ್ದುಮೋಹನ್ನವಿಠಲ ದಾಸರೆನಿನಗೆ ಸದ್ಗುರು ಎಂದು ತಿಳಿಯಮ್ಮ ತಂಗಿಈ ಮಾತು ಪುಸಿಯಲ್ಲ ಮರೆಯಬೇಡಮ್ಮ ತಂಗೀ 5
--------------
ತಂದೆ ಮುದ್ದುಮೋಹನ ವಿಠಲರು
ತಾಯಿ ಸೌಪರ್ಣೀದೇವೀ ನೀ |ಕಾಯದೆ ಜರಿಯಲನ್ಯರಾ ||ನಾನೆಲ್ಲೀ ಕಾಣೆನೆ ಧರೆಯೊಳು |ಮನಸಿರಲೀ ಶ್ರೀ ಅರಸನಲ್ಲೇವೇ ಕೇಳು ಪಕ್ಷೋಣಿಯೊಳಗೆ ಕ್ರಿಯಸ್ತರ |ಆ ನೆಲ್ಲೀ ನೋಡೆ ನಿನ್ನಂತೆ ||ಆ ನಾಗರಾಜನ ಮಾತೆಯ ಸೇವೆಯೊಳಿದ್ದೆ |ನಾನೆಂತು ಮಾಡಲೆ ಸ್ತುತೀಯಾ1ವಾರುಣೀ ಶ್ರೀ ರೇವತಿ |ಯಾ ರೂಪಿ ನಮಸ್ಕರಿಪೇ ||ನಾರಾಯಣನಾ ತೋರಿಸಮ್ಮಾ ದೋಷಗಳ ನೀ |ವಾರಿಸಿ ರಕ್ಷೀಸಬೇಕಮ್ಮಾ 2ಶ್ರೀಸತಿಪಾರ್ವತೀ ದಕ್ಷ |ಧ್ವಂಸೀ ಶುದ್ಧ ಪತಿವೃತೀ ||ಆ ಷಣ್ಮುಖನ ಜನನೀ | ಕಾಣಿಸು ಶ್ರೀ ಪ್ರಾ-ಣೇಶ ವಿಠ್ಠಲಾನ ಕರೂಣೀ 3
--------------
ಪ್ರಾಣೇಶದಾಸರು