ಒಟ್ಟು 21 ಕಡೆಗಳಲ್ಲಿ , 7 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ ಪ ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ 1 ತತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ 2 ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ 3
--------------
ಕನಕದಾಸ
ಎಷ್ಟು ದಿನದ ಪೂಜೆ ಹಿಡಿದೆಣ್ಣಾ ಸತಿಯೆಂಬ ಮಾರಿದಿ- ನ್ನೆಷ್ಟು ದಿನ ಪೂಜೆ ಮಾಡಬೇಕಣ್ಣಾ ಪ ಎಷ್ಟು ದಿನದ ಪೂಜೆ ಹಿಡಿದಿ ನ್ನೆಷ್ಟುದಿನ ಮುಂದೆ ಬಾಕಿ ಉಳಿದಿದೆ ಕಷ್ಟಕಂಜದೆ ಬಿಡದೆ ಅನುದಿನ ನಿಷ್ಠೆಯಿಂದ ಪೂಜೆ ಮಾಡುವಿ ಅ.ಪ ಒಬ್ಬರ ಮನೆ ಮುರಿದು ತರುವಿ ಅವಳಿಗೇನೆ ಹಬ್ಬಮಾಡಿ ಉಣಿಸುತಿರುವಿ ಮತ್ತು ಇನ್ನು ಒಬ್ಬರೈತರ ಬೊಬ್ಬೆ ಹೊಡೆಯುವಿ ದಬ್ಬಿ ಓಡಿಸುವಿ ಹಬ್ಬ ಹುಣ್ಣಿಮೆ ಬರಲು ವೈಭವದುಬ್ಬಿಉಬ್ಬಿವಸ್ತ್ರ ಒಡವೆ ಅಬ್ಬರದಿಂದುಡಿಸಿ ತೊಡಿಸಿ ಮಬ್ಬಿನಿಂದ ಹಿಗ್ಗುತಿರುವಿ 1 ಧನವ ತಂದು ಅವಳಿಗರ್ಪಿಸಿ ಮತ್ತು ನಿನ್ನಯ ಮನವ ಅವಳ ವಶಕೆ ಸಲ್ಲಿಸಿ ಎಂಟುಗೇಣಿನ ತನುವು ಅವಳಾಧೀನದಲ್ಲಿರಿಸಿ ಕುಣಿವಿ ಪಶುವೆನಿಸಿ ಪಾಲಿಸಿ ದಿನಗಳೆಯುವಿ ನೋಡಿಕೊಳ್ಳದೆ 2 ಬಂದಕಾರ್ಯ ಮರೆದುಬಿಟ್ಟ್ಯಲ್ಲ ಹೆಡತಲೆಮೃತ್ಯು ಹಿಂದೆ ನಿಂತು ನಲಿಯುತಾಳಲ್ಲ ಹೇ ಪಾಪಿ ನೀನು ಒಂದೂ ವಿಚಾರ ಮಾಡಿ ಅರೀಲಿಲ್ಲ ಮಂದನಾದೆಲ್ಲ ತಂದೆ ಶ್ರೀರಾಮನ್ನಂತಂಘ್ರಿಗೊಂದಿ ಭಜಿಸಿ ದಾಸನಾಗಿ ಅಂದಮಾದ ನಿತ್ಯಮುಕ್ತಿ ಪಡೆವ ಸುಸಂಧಿ ನಡುವೆ ಹೋಗುತಾದರ್ಲ3
--------------
ರಾಮದಾಸರು
ಕನಸಿನÀ ಜೀವನ ಕಳವಳವೇತಕೆ ಪ ಕ್ಷಣಿಕದ ಭಾಗ್ಯಕೆ ಪರದಾಟವೇತಕೆ ಅ.ಪ ಮರೆತು ದುರ್ದಿಶೆಯನು ಅರೆಗಣ್ಣಿನಲಿ ದೊರೆಯು ನಾನೆ ಎಂದು ಹರುಷದ ಮಾನಸ ತೆರೆಯಲಿ ಭಾಗ್ಯವ ಅನುಭವಿಸುತಲಿರೆ ಹರಕು ಮನೆಯೇ ನಿನ್ನರಮನೆಯಾಗಿದೆ 1 ಇಲ್ಲವೆಂದೇತಕೆ ಹಲ್ಲನು ಕಡಿಯುವಿ ಬಲ್ಲ ಮಾನವನಿಗೆ ಹಲ್ಲೇ ಆಯುಧ ಮುಳ್ಳಿನ ಹಾಸಿಗೆ ಮಲಗಲು ಸೌಖ್ಯವೆ ತಳ್ಳಿ ನಿಲ್ಲುವಗೆ ಇಲ್ಲೇ ವೈಕುಂಠ 2 ರಕ್ತದ ಕೋಡಿಯು ಹರಿಯುತಲಿರುವುದು ಮೃತ್ಯದೇವತೆ ಸದಾ ಕುಣಿಯುತಲಿರುವಳು ಮತ್ರ್ಯರ ಭಾಗ್ಯವು ಹತ್ತೇ ನಿಮಿಷವು ಇದ್ದರೇನು ಸುಖ ಇಲ್ಲದೇನು ಭಯ 3 ಮನದಲಿ ರಾಜ್ಯವ ಕಟ್ಟಬೇಕಣ್ಣ ಅನುಭವದರಮನೆ ಶೃಂಗರಿಸಣ್ಣ ಪ್ರಣತ ಪ್ರಸನ್ನನ ಆಲಯ ಮುಟ್ಟಲು ಅಣುಬಾಂಬ್ಗಳಿಗೂ ಶಕುತಿಯಿಲ್ಲಣ್ಣ4
--------------
ವಿದ್ಯಾಪ್ರಸನ್ನತೀರ್ಥರು
ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು ತಾನಲ್ಲಣ್ಣ ಕಾಳಕವೀಶ್ವರ ಬಲ್ಲನು ತಾನೇನ ಕಾಳ ಕಿಚ್ಚಿನ ಕುಂಡವಣ್ಣ ಪ ಮಲ ಮೂತ್ರವು ಮಜ್ಜೆಯು ಮೇದಸ್ಸು ಮೇಲೆ ಚರ್ಮ ಹೊದ್ದಿಹೆವಣ್ಣಎಲುಬುಗಳಡಕಲಿ ನರಗಳ ಬಿಗಿವು ಎಡದೆರ ಅಪಿಲ್ಲದೆ ಇಹುದಣ್ಣ ಬಲು ಹೊಲಸಿನ ಮಡುವದು ಮತ್ತೆ ಬಗೆಬಗೆಯ ಕ್ರಿಮಿಗಳು ಮನೆಯೊಳಣ್ಣ ಹೊಲೆಮಯವಿರುವ ಸ್ತ್ರೀಯ ವರ್ಣಿಪೆನು ಹೇವ ಮಾರಿಯು ಕಾಣಣ್ಣ 1 ಕಳಸ ಕುಚವು ಎದೆಎಂಬನ ಬಾಯಲಿ ಕರಿಯ ಮಣ್ಣನೆ ಹಾಕಣ್ಣ ಹೊಳೆವ ಕಂಗಳು ಎಂಬನ ಮೋರೆಗೆ ಹುಡಿಯನೀಗಲೆ ಚೆಲ್ಲಣ್ಣಬಳಕು ನಡೆಯಂತೆಂದು ಬೊಗಳುವನ ನಿಲಿಸದೆ ಅಲ್ಲಿಂದಟ್ಟಣ್ಣಚೆಲುವಿನ ಸುಂದರ ಚೇಷ್ಟೆಗೆ ನಲಿವನ ಚಪ್ಪಲಿಯಿಂದಲಿ ಕುಟ್ಟಣ್ಣ 2 ಬ್ರಹ್ಮಧ್ಯಾನವ ಮಾಡುವುದಕ್ಕೆ ಬ್ರಹ್ಮರಾಕ್ಷಸವು ಇದು ಅಣ್ಣಹಮ್ಮಳಿದು ಯೋಗಾಭ್ಯಾಸದಲಿರೆ ಹೃದಯದಲಿ ಹರಿದಾಡುವುದಣ್ಣಬ್ರಹ್ಮೇತಿಯು ತಾನಿವನ ಸಂಗದಿ ಭವಭವತಿರುಗುವುದ ಬಿಡದಣ್ಣಸಮ್ಮತದಲಿ ಚಿದಾನಂದ ಹೊಂದಿಯೆ ಸೀಮಂತಿನಿಯ ಬಿಡಬೇಕಣ್ಣ 3
--------------
ಚಿದಾನಂದ ಅವಧೂತರು
ಕೇಳಿದಾಗಲೇ ಹೇಳಬಹುದೇನೋ ಬ್ರಹ್ಮಾನುಭವಮಿದು ಪ ಹಾಳುವಾದವಲಾ ವಿಚಾರಿಸಲೇಳು ವ್ಯಸನಕೆ ಸಿಲ್ಕಿ ಕುಣಿಯುವ ಅ.ಪ ಖೂಳ ಕಪಟರಿಗೆಂತು ಅನುಭವಶಾಲಿಗಾಗಿಹ ಪರತರಾನ್ವಯ ಸುಳ್ಳಮಳ್ಳರಿಗಾಗದಹುದಣ್ಣ ವೇದಾಂತಸಾರಸ ಮೂಲ ಪ್ರಣವ ವಿಚಾರಕಹುದಣ್ಣ ಯಾರಾದಡಾಗಲೀ ನೀಲಜ್ಯೋತಿಯ ಕಾಣದೆ ಬರಿ ಶೂಲ ಶೀಲಕೆ ಸಿಲ್ಕಿ ಕುಣಿಯುತ ಆಲಿಸೆಂದು ನಮಸ್ಕರಿಸುತಿಹ ಜಾವಿದ್ಯದ ಪೋಲಿ ಜನಗಳು 1 ಪಂಡಿತರಿಗೇನದು ಕಂಡು ತಿಳಿಯಣ್ಣ ದೂರವಿಲ್ಲವು ಅಂಡದೊಳಗಿಹ ಪಿಂಡವೇ ಬ್ರಹ್ಮಾಂಡ ವೇದಾಂತಾರ್ಥ ಸಮ್ಮತಿ ಭಂಡರಿಗೆ ಬಹುಭಾಷೆಗಹುದೇನ ಕುಂಡಲೀಪುರ ತತ್ಪ್ರಯಾಣವು 2 ಓದಿ ವಿಕ್ರಯವನ್ನು ಮಾಡ್ಯಾರು ಓಂಕಾರ ಬೀಜದ ಹಾದಿಯನು ತಾವು ಕಾಣದೋಡ್ಯಾರೊ ರಾ ಜಾಧಿರಾಜರೂ ಕಾವಿ ಜಗಳವ ಕುಂತು ನೋಡ್ಯಾರು ವೇದಾಂತಿಗಳೂ ನಿಜ ಜ್ಞಾನಪುತ್ಥಳಿಯನ್ನು ಕಂಡ್ಯಾರು ಆದಿಮಧ್ಯಾಂತಗಳರಿಯದ ವಾದಿಗಳಿಗೆಂತಕ್ಕು ತತ್ವದ ಬೋಧೆಯೊಳಗಿಹುದು ಆದಿತತ್ವವು 3 ಕವಿಗಳೆಷ್ಟೋ ಕಷ್ಟಪಟ್ಯಾರು ಅವಸಾನಕರಂ ಭವದ ಬಲೆಯೊಳು ಕಟ್ಟಿಕುಟ್ಯಾರು ಆಗಲ್ಲಿ ಸುಜನರು ಜ್ಞಾ ನವೈರಾಗ್ಯವನು ಕೊಟ್ಯಾರು ಶಿವನು ತಾನೆಂತೆಂಬ ಅದ್ವೈತವನು ಆಡಲ್ಕಡಕಲಹುದೇ ಭುವನದೊಳು ಪಂಚಾಕ್ಷರೋ ನಿಜತ್ರಿಣೆಯಸತಿ ಮೋಕ್ಷೆಚ್ಛೆ ಕವಚಂ4 ನಾಗನಗರಿಪುರೀಶ ಕಾಣಣ್ಣ ಆಧ್ಯಾತ್ಮದನುಭವ ಕಾಗಿ ನಿನ್ನೊಳ ಹುಡುಕಬೇಕಣ್ಣ ಹಂಸಾಶ್ರಯದಿ ನಿನ್ನೊ ಳಗಿದೆಲ್ಲವು ಹುಡುಕಿ ನೋಡಣ್ಣ ಭೋಗಿಶಯನ ಶ್ರೀ ತುಲಸೀರಾಮನ ರಾಗವಿರಹಿತನಾಗಿ ಭಜಿಸಿದಡಾಗ ನಿನ್ನೊಳಗಂಕುರಿಪುದ 5
--------------
ಚನ್ನಪಟ್ಟಣದ ಅಹೋಬಲದಾಸರು
ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ ನರಲೋಕವೇ ನರಕವಣ್ಣ ಪ ಪರಲೋಕವಿಹುದೆಂದು ಗುರುಕರುಣವನು ಪಡೆದ ಕುರುಬನದ ಅರಿತನಣ್ಣ ಅ.ಪ ಈಶ ಜಡ ಜೀವರೆಂಬುವ ಭಿನ್ನ ತತ್ವಗಳು ಈಶನೊಬ್ಬನೆ ಕರ್ತನಣ್ಣ ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು ಮೀಸೆಯನೇತಕೆ ತಿರುವಬೇಕಣ್ಣ 1 ಹರಿಯು ಪರನಲ್ಲದಿದ್ದರೆ ಸರ್ವಭುವನಗಳು ಹರಿಯಧೀನದಲಿರುವುದೇಕೆ ಹರಿಯಧೀನಲಿಲ್ಲದಿದ್ದರೀ ಜಗದೊಳಗೆ ಕೊರತೆಯೇತಕೆ ಮಂದಿಗಳಿಗೆ 2 ದೇವದತ್ತನು ಧನಿಕ ಪ್ರೇತದತ್ತನು ಬಡವ ಯಾವ ಕಾರಣ ವಿಷಮಗತಿಗೆ ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ ಭಾವವಿರುವುದು ನ್ಯಾಯವೇ 3 ಈಶನಿಲ್ಲೆಂಬುವರು ಹೇಸಲಾರರು ಪಾಪ ರಾಶಿ ರಾಶಿಯ ಗಳಿಸಲು ಆಶೆಬಡುಕರ ಜಗವ ನಾಶಮಾಡಲು ರಾಜ ಶಾಸನಕೆ ಬುಡವೆಲ್ಲಿಯಣ್ಣ 4 ಇಂದು ಇದನು ಪಡೆಯುವೆ ಮುಂದೆ ಅಧಿಕ ಧನವನು ಗಳಿಸುವೆ ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ ಬೆದೆಯಲಿರುವನು ನುಡಿವನು 5 ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು ಬಲ್ಲವಗೆ ಮುಕುತಿ ಇಲ್ಲೇ ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ ದೆಲ್ಲವನು ತಿಳಿಯಲಳವಣ್ಣ 6 ಕಾಯವಾಚಾಮನಸದಿ ತಪವಗೈಯುತ ಶುದ್ಧ ಭಾವವನು ಗಳಿಸಿರಣ್ಣ ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ ಭಾವಕೆ ಪ್ರಸನ್ನರಿವರು 7
--------------
ವಿದ್ಯಾಪ್ರಸನ್ನತೀರ್ಥರು
ಯಾಕಣ್ಣಾ ಏನು ಬೇಕಣ್ಣಾ ಬಿಡು ಝೋಕಣ್ಣಾ ಜಗ ಸಾಕಣ್ಣಾ ಪ ಆಕಣ್ಣಿನೊಳಗೇನು ಠೀಕಣ್ಣಾ ಇದು ಪಾರ್ವತಿಗುಸುರಿದ ಮೂಕಣ್ಣಾಅ.ಪ ಅಂತವನುತ್ತು ಎಡೆಯಾಡು ನಿ ಶ್ಚಿಂತೆಯೊಳಿಹ ಸತ್ಯಗುರಿನೋಡು ಪಂಥವು ಮಾಡುವ ಯೆಂಟಾರುಮಂದಿಗ ಳಂತೆ ನೀ ಹೊಗದೆ ಚಿಂತಾಮಣಿಯಾಗೂ 1 ಮಂಗಳಪುರಿವಾಸನಾಗುವೆ ನಿಜ ರಂಗಮಂಟಪಕೆ ನೀಹೋಗುವೆ ಜಂಗಮ ಗುರುಜಾಣಾಲಿಂಗ ತುಲಶೀರಾಮಾ ಮಂಗಳಮೂರುತಿ ಹಿಮಗಿರಿವರನಿಹ 2
--------------
ಚನ್ನಪಟ್ಟಣದ ಅಹೋಬಲದಾಸರು
ಸಾಮಾಜಿಕ ಹಿಂಗಿಲ್ಲದವನಿಗೆ ವನವಾಸ ಪ ಹಂಗುಳ್ಳವನಿಗೆ ಉಪವಾಸ ಅ.ಪ ಕಳ್ಳಿಯ ಬೇಲಿಗೆ ನುಗ್ಗಬೇಡಣ್ಣ ಸುಳ್ಳು ಹೇಳುವುದ ಸುಡಬೇಕಣ್ಣ 1 ನೇಮನಿಷ್ಠೆಗಳ ಸಡಿಲಿಸಬೇಡ ರಾಮಧ್ಯಾನವ ಬಿಡಲೂಬೇಡ 2 ಹಾರುವ ಮನವನು ಹಿಡಿಯಬೇಕಣ್ಣ ಶ್ರೀರಂಗನಾಥನ ಮರೆಯಬೇಡಣ್ಣ3 ಹಂಸ ತಾವರೆಗಳಂತಿರಬೇಕಣ್ಣ ಕಂಸಾರಿಯ ಭಕ್ತನೆಂದೆನಿನಿಣ್ಣ 4 ಮಂಗನ ಚೇಷ್ಟೆಯ ಮಾಡಬೇಡಪ್ಪಾ ಮಾಂಗಿರಿರಂಗನ ಮರೆಯಬೇಡಪ್ಪಾ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆಜೆÕಯಿಂದಾಳಬೇಕಣ್ಣ -ಗಂಡ <?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನಾಜೆÕಯ ಮೀರಿ ನಡೆವ ಲಂಡಹೆಣ್ಣ ಪ.ಅತ್ತೆ - ಮಾವನಿಗಂಜದವಳ - ತನ್ನಉತ್ತಮ ಪುರುಷನಜರಿದು ಝಂಕಿಪಭೃತ್ಯರ ಕಂಡು ಬಾಧಿಪಳ - ನಡುನೆತ್ತಿಯಿಂದಲೆ ಮೂಗ ಕೆತ್ತಬೇಕವಳ 1ಹಟ್ಟಿ - ಹಟ್ಟಿ ತಿರುಗುವಳ - ತನ್ನಗಟ್ಟಿತನದಿ ಮಾಕು ಮಲುಕು ನುಡಿಯುವಳಬಿಟ್ಟಕುಚವ ತೋರಿಸುವಳ - ಇನ್ನುಹುಟ್ಟು ಹುಟ್ಟಿಲಿ ಬಾಯಿ ಕುಟ್ಟಬೇಕವಳ 2ಎಂದೂ ಈ ಪರಿಯಿರುವವಳ - ಇನ್ನುಕೊಂದು ಮಾಡುವುದೇನು ಬಿಡಬೇಕವಳಒಂದಿಷ್ಟು ಗುಣವಿಲ್ಲದವಳ - ಪುಪುರಂದರವಿಠಲರಾಯನಗಲ್ಲದವಳ 3
--------------
ಪುರಂದರದಾಸರು
ತುರುಕರು ಕರೆದರೆ ಉಣಬಹುದಣ್ಣ |ತುರುಕರು ಕರೆದರೆ ಉಣಬಹುದು .......... ಪ.ಕರ ಕರೆ ಚಂಚಲ ಮಾಡದಿರಣ್ಣ |ತುರುಕರು ಕರೆದರೆ ಉಣಬಹುದು ಅಪತುರುಕರುವಿಂದ ಮುಟ್ಟು ಮುಡಚಟ್ಟು ಹೋಹುದು |ತುರುಕರುವಿಂದ ಹೋಹದು ಎಂಜಲವು ||ತುರುಕರು ಕಂಡರೆಸರಕನೆ ಏಳಬೇಕು |ತುರುಕರುವಿನ ಮಂತ್ರ ಜಪಿಸಬೇಕಣ್ಣ.............. 1ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು |ತುರುಕರುವಿಂದ ನರಕ ದೂರಪ್ಪುದು ||ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು |ಗರತಿಯರೆಲ್ಲ ಮುತ್ತೈದೆಯರಣ್ಣ.......... 2ತುರುಕರುವಿನ ನೀರೆರಕೊಂಡ ನಮ್ಮ ದೇವ |ಉರವಕೊಂಡ ನೀರೆಲ್ಲ ಸನಕಾದಿಗೆ ||ಬೆರಕೆಯ ಮಾಡಿದ ಪುರಂದರವಿಠಲ |ಅರಿಕೆಯ ಮಾಡಿದ ಹರಿದಾಸರಿಗೆಲ್ಲ......... 3
--------------
ಪುರಂದರದಾಸರು
ಲಿಂಗವ ಕಟ್ಟಿಕೊಂಬೋದಣ್ಣಇಷ್ಟಲಿಂಗಾದಿ ಸಾಧನಿರಲಿಕ್ಕಣ್ಣಪಭಕ್ತನು ಆಗುವುದಕ್ಕಣ್ಣನಿತ್ಯಭಕ್ತಿಯ ಹುಟ್ಟಿಸುವುದಣ್ಣಮುಕ್ತಿಯ ಪಡೆವುದಕಣ್ಣ ವಿರಕ್ತನಾದರೆ ಸಾಧ್ಯವಣ್ಣ1ಕೆಟ್ಟದು ಸಂಸಾರವಣ್ಣ ಕೊಟ್ಟನು ಕ್ರಿಯದಲಣ್ಣಕಟ್ಟಿದ ಎಳೆಗುದಿಗಣ್ಣನಿತ್ಯಮುಟ್ಟಿ ಪೂಜಿಸಬೇಕಣ್ಣ2ಗುರುಗಳ ಪೂಹಿಸುವುದಕಣ್ಣ ಎಲ್ಲ ನರರಿಗೆ ಅನ್ನವನಿಕ್ಕಲಿಕ್ಕಣ್ಣನಿರುತವು ತಾನಡೆದಣ್ಣ ಮುಂದೆ ಚಿದಾನಂದನ ಕಾಣೋದಣ್ಣ3
--------------
ಚಿದಾನಂದ ಅವಧೂತರು
ಸಂಸಾರ ಕನಸಣ್ಣ ಸಕಲರಿಗೆ ಹೇಳುವೆನಣ್ಣಸಂಸಾರ ಸತ್ಯವೆಂಬುವನ ಬಾಯಲ್ಲಿ ಹೊರೆ ಮಣ್ಣಣ್ಣಪಹೆಂಡತಿಯು ಕನಸಣ್ಣ ಗಂಡನೂ ಕನಸಣ್ಣಗಂಡು ಮಗ ಸೊಸೆ ಸಹೋದರರು ಬಂಧುಗಳು ಕನಸಣ್ಣ1ದನಕರು ಕನಸಣ್ಣ ದವಲತ್ತು ಕನಸಣ್ಣಮನೆ ಮದುವೆ ಮಂಟಪ ಮಹಾಲಕ್ಷ್ಮೀ ಕನಸಣ್ಣ2ವೈಯ್ಯಾರ ಕನಸಣ್ಣ ವಸ್ತುಗಳು ಕನಸಣ್ಣಮೈಯಲ್ಲಿಹ ಬಲವದು ಮತ್ತೆ ಮುರಿ ಮೀಸೆ ಕನಸಣ್ಣ3ನಾನಿಹುದು ಕನಸಣ್ಣ ನೀನಿಹುದು ಕನಸಣ್ಣಶಾಣೆತನ ಮಾನಾಪಮಾನಗಳು ಸೈನ್ಯ ಕನಸಣ್ಣ4ಸಂಸಾರ ಮಾಡಿದರಣ್ಣ ಸಾಕ್ಷಿಯಾಗಿರಬೇಕಣ್ಣಹಂಸ ಚಿದಾನಂದ ಸದ್ಗುರು ಹೊಂದಲು ಸರಿವುದು ಜನನವಣ್ಣ 5
--------------
ಚಿದಾನಂದ ಅವಧೂತರು