ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯರಾಗ ಜನಿಸಲಾರೆನು ಜಗದೊಳಗೆ ಹರಿಯೆ ಪ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1 ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು ಬೆಂದು ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2 ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ- ಬೇನೆಯಿಂದಧಿಕವಾಗೆ ಮೈಗೆ ಮೇಣು ಕೈಕಾಲುಗಳು ಕಾಣಿಕಾ ಕಾಲವಗ- ಲಾನು ಚರಿಸದಾದೆನೊ ಇನ್ನೇನೊ ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ ಆ-ನನ ಮೇಲಡಿಯಾಗಿ ಬಂದೆ-ನೊಂದೆ 3 ಸೂತಿಕಾಮರುತ ಬೀಸಿದಾತುರಕೆ ಬೆಸಸುವ ಯಾತನೆಗೆ ಕಾಣೆ ಲೆಖ್ಖ-ದು:ಖ ಗಾತುರವು ಕಿರಿದಾಗಿ ಪೋತಭಾವವ ವಹಿಸೆ ಭೂತಳಕೆ ಉಗ್ಗಿಬಿದ್ದು-ಎದ್ದು ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ ಮಾತೆಯ ಮೊಲಿಯನುಂಡು-ಉಂಡು ಆ ತರುವಾಯ ಉಪನೀತ ವಿವಹಗಳಲ್ಲಿ ವ್ರಾತ ಕೈಕೊಂಡೆನಯ್ಯ ಜೀಯ 4 ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು ಯುವತಿಯರ ರೂಪಲಾವಣ್ಯ ನೋಡಿ-ಬಾಡಿ ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ ಭವನ ಭವನವÀನು ಪೊಕ್ಕು -ಸೊಕ್ಕು ಅವರಿವರ ಜಾತಿಯೆನ್ನದೆ ಮಾತುಗಳನಾಡಿ ದಿವರಾತ್ರಿಯಲ್ಲಿ ಹೊರಳಿ-ಉರುಳಿ ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ ಕಾಲ ಕಳೆದೆ ಉಳಿದೆ 5 ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು ಕಂಡಕಂಡವರ ಕಾಡಿ-ಬೇಡಿ ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು ಕೊಂಡೆಯಲಿ ನಿಪುಣನಾಗಿ ತೂಗಿ ಮಂಡೆಯನು ಬಲಿತ ಪಶುವಿನಂತೆ ಮದವೇರಿ ಚಂಡ ವೃತ್ತಿಯಲಿ ನಡೆದು-ನುಡಿದು ಹಿಂಡು ಮಾತೇನು ಈ ಜರೆನರೇ ಬಂದೆನ್ನ ಲಂಡತನ ಪೋಗದಕಟ್ಟ-ಉಂಬೆ ವಿಕಟ 6 ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ ನಾನು ಪೇಳುವುದು ಏನೋ-ಇನ್ನೇನೊ ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ ಮಾನಸದೊಳಗೆ ಒಮ್ಮೆ-ಇಮ್ಮೆ ದೀನರಕ್ಷಕ ಬಿರುದು ಅನವರತ ನಿನ್ನದು ಎಣಿಸದಿರು ಎನ್ನ ದೋಷ ಲೇಶ ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
--------------
ವಿಜಯದಾಸ
ಕಂಡೆ ಕಂಡೆನೊ ಕಂಗಳಲಿ ಭೂ | ಮಂಡಲಾಬ್ಧಿಗೆ ಸೋಮನೆನಿಪ ಅ | ಖಂಡ ಮಹಿಮಾ ವಾದೇಂದ್ರ ಗುರುಗಳ ಪ ನಸುನಗಿಯ ಮೊಗ | ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ | ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ ಹಸನಾದ ಎಳೆ ತುಲಸಿ ಶೋಭಿಸಿ | ಬೆಸಸುವ ಒಂದೊಂದು ಮಾತಾ | ಲಿಸಿದರದು ವೇದಾರ್ಥತುಲ್ಯಾ | ಲಸವ ಗೈಯಿಸದೆ ಬರುವ ಗುರುಗಳ1 ಮೊಸಳಿವಾಯಪಲಕ್ಕಿ ಸುತ್ತಾ ಭಾ | ರಿಸುವ ನಾನ ವಾದ್ಯಾದಾ ಘೋಷಾ | ಪುಸಿಕರೆದೆದಲ್ಲಣರು ಎಂಬಾ | ದಶ ದಿಕ್ಕಿನೊಳು ಕೀರ್ತಿ ತುಂಬಿರೆ | ಶಿಶುವು ಮೊದಲಾದವರು ತಮ ತಮ | ಬೆಸನೆ ಪೇಳಲು ಕೇಳಿ ಅವರು | ಋಷಿಕುಲೋತ್ತಮರಾದ ಗುರುಗಳ2 ಶ್ವಶನ ಮತ ವಾರಿಧಿಗೆ ಪೂರ್ಣ | ಶಶಿ ಎನಿಸಿಕೊಂಬ ಧೀರುದಾರರೆ | ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ | ಲೋಕೇಶ ಇವರನ್ನ ವಸುಧಿ ಅಮರರು | ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ | ರಸಭರಿತರಾಗಿ ನೋಡುತ್ತ ಮಾ | ಸನದಿ ಹರಿಪದ ಭಜಿಪ ಗುರುಗಳ3 ಕುಸುವಶರನ ಬಾಣವನು ಖಂಡ್ರಿಸಿ ಬಿಸುಟ ಸಂಪನ್ನ ವಿದ್ಯಾ | ವಸುವಿನಲಿ ಆವಾಗ ತಲೆ ತೂ | ಗಿಸುವರು ಪಂಡಿತರ ಮೆಚ್ಚಿಸಿ | ವಶವೆ ಪೊಗಳಲು ಎನಗೆ ಇವರ ದ | ರುಶನದಿಂದಲಿ ಗತಿಗೆ ಪಥನಿ | ವಿಷದೊಳಗೆ ಇದು ಸಿದ್ಧವೆಂದು ವಂ | ದಿಸಿದಿರೊ ಮರಿಯದೆ ಈ ಗುರುಗಳಾ 4 ಮಿಸುಣಿ ಮಂಟಪದೊಳಗೆ ರಂ | ಜಿಸುವ ರಾಮನÀ ಕುಳ್ಳಿರಿಸಿ ಅ | ರ್ಚಿಸುವ ಚಿತ್ತೇಕಾಗ್ರದಲಿ ವೊ | ಲಿಸುವ ತಂತ್ರ ಸಾರೋಕ್ತ ಬಗೆಯನು | ಕುಶಲರಾದ ಉಪೇಂದ್ರ ಮುನಿಕರ | ಬಿಸಜದಿಂದಲಿ ಜನಿಪ ಭಕುತಿಲಿ | ಸಿರಿ ವಿಜಯವಿಠ್ಠಲನ್ನ | ಪೆಸರುಗಳು ಎಣಿಸುವ ಗುರುಗಳ 5
--------------
ವಿಜಯದಾಸ
ಸಾರ ಪ ಪ್ರಶ್ನೆ:ಯಾತರಿಂದಲಿ ಕೇಳೆನ್ನಯಮನ ಬಹು ಪೂತವಾಗುವದು ಗುರುವರೇಣ್ಯ ಭೂತಳದಲಿ ಪರಮ ಪಾವನ ತೀರ್ಥ ಅನುದಿನ 1 ಉತ್ತರ:ಶ್ರಧ್ದ ಪೂರ್ವಕ ಶ್ರವಣಸಾಧನ ಮನ ಶುದ್ಧಿಗೆ ಇದೆ ಮುಖ್ಯ ಕಾರಣ ಉದ್ಭವಿಸುವದು ಭಕ್ತಿ ಜ್ಞಾನ ಅನಿ ಪ್ರಶ್ನೆ:ವಶವಲ್ಲಭವದಿ ಬಂದೊದಗುವ ನಾನಾ ವ್ಯಸನಗಳನು ಪರಿಹರಿಸುವ ಬೆಸಸುವದೆನ ಗೀ ಉಪಾಯವ ಚರಿಸಲೇನು ಗಿರಿಗುಹದಲಿ ತ¥ವÀ| ಉ.ವಸುದೇವಸುತನ ಸಂಕೀರ್ತನ ನಾನಾ ವ್ಯಸನ ಪರಿಹಾರಕ್ಕೆ ಕಾರಣ ಮುಸುಕಿರ್ದ ಮೇಘಕ್ಕೆ ಪವಮಾನ ಭವ ವ್ಯಸನಾಂಧಕಾರಕ್ಕೆ ರವಿಕಿರಣ 2 ಪ್ರ:ಏನು ಮಾಡಲಿ ಸದುಪಾಸನ ದೈವಾ ಧೀನದಿ ಬರುವ ವಿಘ್ನಗಳನ್ನು ಕಾಣೆನು ಪರಿಹಾರ ಕೃತಿಯನ್ನು ಇದ ಉ:ಬಿಡದಿರೊ ಕೃಷ್ಣನ್ನ ಸ್ಮರಣವ ಬರುವ ಯಡರುಗಳನು ಪರಿಹರಿಸುವ ದೃಢಮನದಲಿ ತಿಳಿವದು ಜವ ಪೋಪ ದ್ಯಡರು ಪ್ರಾಪಕವಾದ ಪಾತಕವ 3 ಪ್ರ:ಮೋಕ್ಷಫಲದ ಕಮಲಾಕ್ಷಣ ಅಪ- ರೋಕ್ಷ ವಾಗುವದಕ್ಕೆ ಸಾಧನ ಶಿಕ್ಷಿಸುವದು ಸದುಪಾಸನ ಆ ಉ:ಆದರದಿ ನೈರಂತರ್ಯದಿ ಯುಕ್ತ ಮಾಧವನಂಘ್ರಿಯ ಸ್ಮರಣದಿ ಸಾಧಿತ ಬಿಂಬಾಪರೋಕ್ಷದಿಸ ನ್ಮೊದ ಭರಿತನಾಗಿರು ಜಗದಿ 4 ಪ್ರ:ಏನು ಮಾಡಲು ಮುಕ್ತಿಸಾಧನವಾದ ಜ್ಞಾನ ವಿಜ್ಞಾನ ಸಂಪದವನ್ನ ಕಾಣುವದೆಂದಿಗೆ ತಿಳಿಸೆನ್ನ ಮುಂದೆ ಸಾನುರಾಗದಲಿ ಬೇಡುವೆ ನಿನ್ನ ಉ:ಭಕ್ತಿ ವೈರಾಗ್ಯದಿ ಕೂಡಿದ ಪುರು ಷೋತ್ತಮನಂಘ್ರಿ ಸಂಸ್ಮøತಿಯಿಂದ ಚಿತ್ತದಿ ಜ್ಞಾನ ವಿಜ್ಞಾನದ ಉತ್ಪ- ಮೋದ 5 ಪ್ರ:ಜಲಜನಾಭನ ಪದಯುಗದಲ್ಲಿ ನಿ- ಶ್ಚಲ ಭಕ್ತಿಯೆನಗೆ ಪುಟ್ಟುವದೆಲ್ಲಿ ಬಲುವಿಧ ಭಕುತಿಯ ಬಗೆ ಉ:ಜ್ಞಾನ ವೈರಾಗ್ಯದಿ ಕೂಡಿದ ನಂದ ಸೂನು ಪಾದಾಂಬುಜ ಸ್ಮøತಿಯಿಂದ ಪ್ರಾ- ಣೇಂದ್ರಿಯಾತ್ಮಾದಿಗಳಿಂದ ಅಧಿಕ ಕಾಣಿಸುವದು ಭಕ್ತಿ ಜವದಿಂದ 6 ಪ್ರ:ದೃಢತರವಾದ ವೈರಾಗ್ಯವ ಪೊಂದಿ ಪಡಿವೆನೆಂದಿಗೆ ಮಾಧವನ ದಯವಾ ಗಡನೆ ಪೇಳಿದಕೇನು ಪಾಯವ ನಿ- ಉ:ಜ್ಞಾನ ಭಕ್ತಿಗಳಿಂದ ಕೂಡಿದ ಶಿರಿ ವೇಣು ಗೋಪಾಲನ ಸ್ಮøತಿಯಿಂದ ಕಾಣುವಿ ಸಧೃಡ ವೈರಾಗ್ಯದ ಭಾಗ್ಯ ಶ್ರೀನಿಧಿ ಚರಣಾನು ಗ್ರಹದಿಂದ7 ಪ್ರಃಘನಲೌಕಿಕದಿ ಕೇಳೆನ್ನಯ ಮನ ನಿ- ಪುಣತರವೆನಿಸುವ ದನುದಿನ ಎನಗೆಂದಾಧ್ಯಾತ್ಮ ತತ್ವದಿ ಮನವೆರಗ ಲೆನಿಸುವದದೆ ಮುಕ್ತಿಸಾಧನ ಉ:ಅನುದಿನ ಶ್ರವಣಾದಿ ಸಾಧನ ದಿಂದ ಜನಿತ ಸದ್ಭಕುತಿಯೆ ಕಾರಣ ಮನದೊಳಾಧ್ಯಾತ್ಮ ತತ್ವಗಳನ್ನ ನೋಡಂ ಜನಯುಕ್ತ ನಯನ ದಂದದಿ ಮುನ್ನ 8 ಪ್ರಃಏನಿರುವುದು ಬಿಂಬಲಕ್ಷಣ ಮತ್ತೇ ನೇನು ಮಾಳ್ಪ ಕರ್ಮಗಳನ್ನು ಸಾನುರಾಗದಿ ಪೇಳುವದುಮುನ್ನ ಮನದಿ ಧ್ಯಾನವ ಮಾಡುವೆ ಪ್ರತಿದಿನ ಉ.ಇಂತಿರುವದು ಬಿಂಬ ಲಕ್ಷಣ ಬಹಿ ರಂತರದಲಿ ತಿಳಿವದು ಮುನ್ನ ಸಂತತ ಸೃಷ್ಟ್ಯಾದಿಗಳನ್ನ ದೇ ಹಾಂತಃ ಸ್ವಪ್ನದಿ ಸಂದರುಶನ 9 ಪ್ರ.ಎಲ್ಲಿರುವನು ಬಿಂಬ ದೇಹದಿ ಸಿರಿ ನಲ್ಲನು ವ್ಯಾಪ್ತವೆಂಬರು ಜಗದಿ ಎಲ್ಲದೇಶ ಗುಣಕಾಲದಿಯನ್ನ ಉ:ನಿಂತಿರುವನು ಸರ್ವಜೀವರ ಹೃದ ಯಾಂತರದಲಿ ವ್ಯಾಪ್ತನು ಪೂರಾ ಸಂತತ ಜೀವನ ವ್ಯಾಪಾರ ತಾನೆ ನಿಂತು ಮಾಡಿಸುವನು ನಿರ್ಧಾರ 10 ಪ್ರ:ಎಂತು ಮಾಡಲಿ ಬಿಂಬೋಪಾಸನ ಮುಕ್ತಿ ಪಂಥಕ್ಕೆ ಮುಟ್ಟಲು ಸೋಪಾನ ಅ- ನಂತ ಗುಣಾತ್ಮಕ ಬಿಂಬನ ಗುಣ ಚಿಂತಿಪರಿಗೆ ಬಂಧ ಮೋಚನ ಉ:ಇದೆ ತಿಳಿಬಿಂಬೋಪಾಸನÀ ಚತು ರ್ವಿಧ ದಿಂದಲಾತ್ಮ ಸಮರ್ಪಣ ಮೊದಲು ಆತ್ಮಾನಮೇವಾರ್ಪಣ ದ್ರವ್ಯ ಸದ್ಗುಣ ಕರ್ಮಸಮರ್ಪಣ 11 ಮಾಡಲಾವ ಧರ್ಮಗಳ ಮಾಡಲಿ ಮುನ್ನ ಜೀವರ ಬಂಧ ವಿಮೋಚನ ಮಾಳ್ಪ ಭಾಗವತ ಧರ್ಮಗಳನ್ನು ತಿಳಿದು ಶ್ರದ್ಧೆಯಿಂದಲ್ಲಿ ಮಾಡೋ ಮುನ್ನ ಹೃದ್ಗತ ಬಿಂಬೋಪಾಸಾನ ಮಾಡಿ ಸಿದ್ಧನಾಗಿ ಬಾಳೆಲೋ ಮುನ್ನಾ 12 ಪ್ರ:ಎಂತಿರುವದು ಗುರುಲಕ್ಷಣ ಮುಕ್ತಿ ಪಂಥವ ತೋರಿಸುವವರನ್ನ ಚಿಂತಿಸುವೆನು ಮನದೊಳುಮುನ್ನ ಭಗ ವಂತನ ಮಹಿಮೆ ಪೇಳುವರನ್ನ ಉ:ಜಲಜನಾಭನÀ ಪದಯುಗಲವ ಬಿಟ್ಟು ಚಲಿಸದಿರು ಲವ ನಿಮಿಷಾರ್ಧವ ಇಳಿಯೊಳಗಿಂಥಾ ಸದ್ವೈಷ್ಣವರನ್ನು ತಿಳಿದು ಸೇವಿಸುತಿರು ಮಾನವಾ 13 ಪ್ರ:ಏನು ಕೊಡಲಿ ಗುರುದಕ್ಷಿಣ ಈ ಕ್ಷೋಣಿಯಿತ್ತರು ಸರಿಗಾಣೆ ನಾ ಧ್ಯಾನವ ಮಾಡುವೆ ಪ್ರತಿದಿನಾ ಬಿಂಬ ಜ್ಞಾನವ ಕೊಟ್ಟು ರಕ್ಷಿಪರನ್ನ ಉ:ಆತ್ಮಾರ್ಪಣ ಮೇವದಕ್ಷಿಣ ಸಿರಿ ನಾಥ ನಿಂದನ್ಯ ವಸ್ತುಗಳನ್ನು ಪ್ರೀತಿಸರೆಂದಿಗೂ ಧನವನ್ನು ಈ ಮ- ಹಾತ್ಮರ ಸ್ಮರಿಸುತಲಿರು ಮುನ್ನ 14 ಕ್ಷೇತ್ರ ಕಾರ್ಪರದೊಳಗಿರುವಂಥ ಲಕ್ಷ್ಮಿ ಯುಕ್ತ ನರಸಿಂಹನೊಲಿಸುವಂಥ ಸ್ತೋತ್ರ ಮಾಲಿಕೆಯನ್ನು ಪಠಿಸುತ್ತ
--------------
ಕಾರ್ಪರ ನರಹರಿದಾಸರು