ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕಂಡೆನೊ ಕಂಗಳಲಿ ಭೂ | ಮಂಡಲಾಬ್ಧಿಗೆ ಸೋಮನೆನಿಪ ಅ | ಖಂಡ ಮಹಿಮಾ ವಾದೇಂದ್ರ ಗುರುಗಳ ಪ ನಸುನಗಿಯ ಮೊಗ | ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ | ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ ಹಸನಾದ ಎಳೆ ತುಲಸಿ ಶೋಭಿಸಿ | ಬೆಸಸುವ ಒಂದೊಂದು ಮಾತಾ | ಲಿಸಿದರದು ವೇದಾರ್ಥತುಲ್ಯಾ | ಲಸವ ಗೈಯಿಸದೆ ಬರುವ ಗುರುಗಳ1 ಮೊಸಳಿವಾಯಪಲಕ್ಕಿ ಸುತ್ತಾ ಭಾ | ರಿಸುವ ನಾನ ವಾದ್ಯಾದಾ ಘೋಷಾ | ಪುಸಿಕರೆದೆದಲ್ಲಣರು ಎಂಬಾ | ದಶ ದಿಕ್ಕಿನೊಳು ಕೀರ್ತಿ ತುಂಬಿರೆ | ಶಿಶುವು ಮೊದಲಾದವರು ತಮ ತಮ | ಬೆಸನೆ ಪೇಳಲು ಕೇಳಿ ಅವರು | ಋಷಿಕುಲೋತ್ತಮರಾದ ಗುರುಗಳ2 ಶ್ವಶನ ಮತ ವಾರಿಧಿಗೆ ಪೂರ್ಣ | ಶಶಿ ಎನಿಸಿಕೊಂಬ ಧೀರುದಾರರೆ | ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ | ಲೋಕೇಶ ಇವರನ್ನ ವಸುಧಿ ಅಮರರು | ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ | ರಸಭರಿತರಾಗಿ ನೋಡುತ್ತ ಮಾ | ಸನದಿ ಹರಿಪದ ಭಜಿಪ ಗುರುಗಳ3 ಕುಸುವಶರನ ಬಾಣವನು ಖಂಡ್ರಿಸಿ ಬಿಸುಟ ಸಂಪನ್ನ ವಿದ್ಯಾ | ವಸುವಿನಲಿ ಆವಾಗ ತಲೆ ತೂ | ಗಿಸುವರು ಪಂಡಿತರ ಮೆಚ್ಚಿಸಿ | ವಶವೆ ಪೊಗಳಲು ಎನಗೆ ಇವರ ದ | ರುಶನದಿಂದಲಿ ಗತಿಗೆ ಪಥನಿ | ವಿಷದೊಳಗೆ ಇದು ಸಿದ್ಧವೆಂದು ವಂ | ದಿಸಿದಿರೊ ಮರಿಯದೆ ಈ ಗುರುಗಳಾ 4 ಮಿಸುಣಿ ಮಂಟಪದೊಳಗೆ ರಂ | ಜಿಸುವ ರಾಮನÀ ಕುಳ್ಳಿರಿಸಿ ಅ | ರ್ಚಿಸುವ ಚಿತ್ತೇಕಾಗ್ರದಲಿ ವೊ | ಲಿಸುವ ತಂತ್ರ ಸಾರೋಕ್ತ ಬಗೆಯನು | ಕುಶಲರಾದ ಉಪೇಂದ್ರ ಮುನಿಕರ | ಬಿಸಜದಿಂದಲಿ ಜನಿಪ ಭಕುತಿಲಿ | ಸಿರಿ ವಿಜಯವಿಠ್ಠಲನ್ನ | ಪೆಸರುಗಳು ಎಣಿಸುವ ಗುರುಗಳ 5
--------------
ವಿಜಯದಾಸ
ಮುಖ್ಯಪ್ರಾಣನೀತಾ | ನಮಗೆ | ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ | ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ ನಿಗಮವೇದ್ಯನೀತಾ ನಂಬಿಕೆಯನೀವ ಚರಣ | ದುರಿತ ರಾಗಗಳ ಕಳೆನೀತಾ | ವಿಗಡ ವಿಷವನುಂಡನೀತಾ | ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ | ಅಗಣಿತಾದವಿದ್ಯನೀತಾ 1 ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ | ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ | ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ | ಮೊಗದವನಾಗಿ ವಾನರ ಬಲವ | ನಗವ ತಂದೆತ್ತಿದವನೀತಾ 2 ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ | ಪರಮ ಮಂಗಳ ಪದದಿ ಭವದ | ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ | ಮರುತಾವತಾರನೀತಾ ತನ್ನ | ಶರಣ ಜನರ ಪೊರೆವನೀತಾ 3 ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ | ನೋಡಿ ಪೊರೆವನೀತಾ | ಅಸುರ ಲಿಂಗಭಂಗವ ಮಾಡಿ | ಬೆಸನೆ ಮತವ ಕಟ್ಟುವನೀತಾ | ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ 4 ಜ್ಞಾನ ಪೂರ್ಣನೀತಾ ಶ್ರೀಮದಾನಂದತೀರಥನೀತಾ | ದಾನ ಧರ್ಮ ಪ್ರೇರಕನೀತಾ | ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ | ನಮಗೇನೇನು ಕೊಡುವನೀತಾ | ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ 5
--------------
ವಿಜಯದಾಸ