ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪನ ನೋಡಿರೊ ವರಗಳ ತಪ್ಪದೆ ಬೇಡಿರೋ ಸರ್ಪನಮೇಲೆ ಉಪ್ಪವಡಿಸಿ ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ ಬಲುವಾ ನಂದಗಡಲ ಸುಖವೊ ತೂಗುವ ಸುಳಿಗುರುಳ ಚುಂಚೊ ಸುಂದರದವತಾರ ಮಂದರಧರನೋ 1 ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ ತಿಲಕಾಂಬರದ ಬಿದಿಗೆ ತಿಂಗಳೊ ಮಕರ ಕುಂಡಲವೊ 2 ಕುಸುಮ ವನದ ಹಬ್ಬೊ ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು 3 ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ ಬಾಲಲೋಲ ಗೋಪಾಲನೊ 4 ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ ಕೌಸ್ತುಭ ಶೃಂಗಾರವೊ ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ ಗೋಪಿ ಮನ್ನಿಸುತಲಿ 5 ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ ವೈಜಯಂತಿ ಸುಳ್ಳುವೊ ಒಲಿಸಿದಳೊ ಮಗನ ಯಶೋದೆ 6 ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು ಬಿಸಲಿನ ಘನ ಹರಿಯು ಭೊಂ ಭೊಂ ಭೊಮೆಂದು ಕೊಂಬಿನ ಊದು ಎಂಬೊ ನುಡಿಯಲಿ ರಂಬಿಸಿ ಕೃಷ್ಣನ 7 ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ ಅಮಮ ಧೊರೆಯು ನಾದದ ಘಂಟ್ಯೊ ಮಣಿಶಿಂಗನ ಮರಿಯು ಜಾನು ಕನ್ನಡಿ ಕ್ರಮವೊ ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ 8 ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ ನಖ ಕೇದಿಗೆ ಮುಳೆಯು ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ 9 ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ ಹರಿಹರಿ ಎಂದು ಹರದಾಡುತಲಿ ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ ತರಕಿಸಿ ಸಂತತ ಉಡಿಯಲಿ ಎತ್ತಿ 10
--------------
ವಿಜಯದಾಸ
ಪೋಗುವೆವಮ್ಮ ಪ ಉದಯವಾಗದ ಮುನ್ನ ಬರುವ ಕಣಮ್ಮ ಕದವ ಬಾರಿಸಿ ಒಳಪೊಕ್ಕ ಕಣಮ್ಮ ಮೊದಲೆನ್ನ ಮಗಳ ತಕ್ಕೈಸಿದನಮ್ಮ ಸದರದಲಿ ಮೊಸರನೆಲ್ಲ ಕುಡಿದ ಕಣಮ್ಮ 1 ಉಟ್ಟ ಸೀರೆಯ ಬೆಲೆ ಏನೆಂದಮ್ಮ ಪಟ್ಟೆ ಕುಪ್ಪಸಕೇನು ಪಣವೆಂದನಮ್ಮ ತೊಟ್ಟು ಕೊಂಡೆನ್ನನು ಬಿಡದೆ ಕಾಣಮ್ಮ 2 ನಸುಗಪ್ಪಿನೊಳು ಸಜ್ಜೆಮನೆಯೊಳಗಮ್ಮ ಮೊಸರು ಪಾಲ್ಬೆಣ್ಣೆಯ ಮೆದ್ದ ಕಾಣಮ್ಮ ಸೊಸೆಯು ಪಿಡಿಯೆ ಬಿಗಿದಪ್ಪಿದನಮ್ಮ ನಸು ಬೆವರಿಡೆ ತನು ಬಿಡದೆ ಕಾಣಮ್ಮ 3 ಜಾರ ಜೋರರ ಶಿಖಾಮಣಿಯಿವನಮ್ಮ ಯಾರೆಂದು ಹೊರಗೊಬ್ಬ ಕರೆಯೆ ಗೋಪಮ್ಮ ಚೋರ ಗಂಡಿಯ ಪೊಕ್ಕು ಓಡಿದನಮ್ಮ 4 ಊಚು ನೀಚುಗಳೇನು ಇವಗಿಲ್ಲವಮ್ಮ ನಾಚಿಕೆನಮಗಾಗುತಿದೆ ಹೇಳಲಮ್ಮ ಕೀಚಕರಿಪು ಕೋಣೆ ಲಕ್ಷ್ಮೀಶಗಮ್ಮ ವಾಚಿಸೆ ನೀನೊಂದ ಮಾತ ನಮ್ಮಮ್ಮ 5
--------------
ಕವಿ ಪರಮದೇವದಾಸರು