ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಮರೆಯಬಹುದು ನಿಮ್ಮ ಹೇಳು ಗುರುರಾಯ | ಅಂತರಂಗದೀ ನೆನೆದು ಪಡೆಯಬೇಕು ಸುಖಾಶ್ರಯಾ ಪ ತಂದೆ ನೀನೇ ತಾಯಿ ನೀನೇ ಬಂಧು ಬಳಗ ನೀನೇ | ಹೊಂದಿ ಹರುಷಬಡುವಗತಿಯ ಗುರು ದೈವ ನೀನೇ 1 ತಂದು ಜಠರದಲ್ಲಿ ಜನುಮ ಉಣಿಸಿ ಉಡಿಸಿ ಬೆಳೆಸೀ | ಛಂದದಿಂದಲಿ ಹೊರೆವೆಯಿನ್ನು ಬೇಡಿದನು ಸಲಿಸಿ 2 ಮರೆಯಲಿಕ್ಕೆ ದೇಶಗ್ರಾಮ ವೃತ್ತಿಗೃಹಗಳಲ್ಲಾ | ಕಾಯ ಸುಖದ ದ್ರವ್ಯ ಧನವಲ್ಲಾ3 ಮರಹು ಮರಸಿ ಅರವ್ಹಿಲಿರಿಸಿ ಇರಹು ಘನವನರಸಿ | ಗುರು ಮಹಿಪತಿ ಸ್ವಾಮಿ ಕಾಯಿದೇ ಕಂದನುದ್ಧರಿಸಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿಗೆ ನಮಿಸುವೆನು | ಸಲಹುವ ಪ ಭಕ್ತಿಯ ಒಲಿಸೀ | ವಿರಕ್ತಿಯ ಬೆಳೆಸೀ | ಮುಕ್ತಿಗೆ ನಲಿಸೀ | ಯುಕಿಗಳನೇ ಕಳಿಸಿ 1 ಅವಿದ್ಯ ಬಿಡಿಸಿ | ಸುವಿದ್ಯೆವಿಡಿಸಿ | ಭವ ಭಯಗಡಿಸಿ | ವಿವೇಕ ವಡಗೂಡಿಸೀ 2 ಗುರು ಮಹಿಪತಿ | ಶರಣರ ಸಾರ್ಥಿ | ತರಳಗ ಸ್ಫೂರ್ತಿ | ಕರುಣಿಸಿ ಘನಮತಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಣ್ಣ ಸವಿಯ ಬಾರದೇ ಪ ಹಣ್ಣನ್ನು ತಿಂದರೆ ಕೇಶವನೊಲಿಯುವಾ ಚನ್ನಕೇಶವ ಸ್ವಾಮಿ ಬಿಡದೆ ಪಾಲಿಸುವಾ ಅ.ಪ. ಪ್ರೀತಿಯೆನ್ನುವಂಥ ಬೀಜವನ್ನೇ ಬಿತ್ತಿ ಭೂತ ದಯೆಯೆಂಬುವ ವೃಕ್ಷವ ಬೆಳೆಸೀ ಆತುರದಲ್ಲಿ ಪರೋಪಕಾರವೆಂಬ ನೀತಿಯ ನೀರನ್ನು ನೇಮದೊಳೆರೆದೂ 1 ಅನುದಿನ ದಾನಧರ್ಮಗಳ ಟೊಂಗೆಗಳೇರಿ ತನುಮನ ಧನದಿಂದ ದೈನ್ಯರ ಸಲಹಿ ಘನತರ ಸ್ವಾರ್ಥ ತ್ಯಾಗವುಯೆಂಬ ಪರ್ಣವ ನೆನೆದು ಕೃತಜ್ಞತೆ ಕುಸುಮವ ಪಡೆದೂ 2 ವರತರ ದೇವಾಂಶ ಗುಣದಿಂದ ಬೆಳೆದಿರ್ಪ ಹರಿಭಕ್ತಿಯೆನ್ನುವ ಫಲವನ್ನೇ ಕೊಯ್ದು ಸರಸದಿ ಕೀರ್ತನೆ ಭಜನೆ ಸೂತ್ರಗಳಿಂದ ಪರಮ ಭಕ್ತೀಯೆಂಬ ಹಣ್ಣನು ತಿಂದೂ 3 ಧರೆಯಲ್ಲಿ ಸಿಗುವಂಥ ಹಣ್ಣನು ಸವಿದರೆ ನಿರುತ ತೃಪ್ತಿಯು ಆಗಲಾರದು ದೇವಾ ಅಮೃತ ಹರುಷದಿ ತಿನ್ನಲು ಘನಮುಕ್ತಿ ದಿಟವು 4
--------------
ಕರ್ಕಿ ಕೇಶವದಾಸ