ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಳಿಯೊಳು ಕುಳಿತು ಹೊಗಳುವಗಿಂತ ಪ ಹುಳಿಯಾಗದೆ ಕಾಯಿಸಿಹಿದಹುದೇ ಮದ ಅಳಿದಲ್ಲದೆ ಹರಿಯೊಲುಮೆಯು ಬಹುದೇ ಅ.ಪ ಹಳಿವು ಮನದೊಳಿಹ ಕೊಳೆಯನು ಕಳೆವುದು ಹಳಿವಿರದಿರೆ ಮದ ಮೊಳೆದೋರುವುದು ಹಳಿವಿನ ಭಯದಿಂದ ಬೆಳೆವುದು ಶುದ್ಧತೆ ಹಳಿವು ಸತ್ಕೀರ್ತಿಯ ಬೆಳಗುವ ದೀಪ 1 ಮನದೊಳಸೂಯೆಯ ಕಳೆದು ನಾಲಗೆಯಲಿ ಇನಿವಾತುಗಳ ಬಿನ್ನಾಣವ ಬೀರಿ ನಿನಗೆ ಸಮಾನರಿನ್ನಿಲ್ಲಾ ಎಂಬ ಕ್ಷುಲ್ಲ ಮನುಜನು ಸ್ವಾರ್ಥದಿ ಕೆಡಿಸುವನಯ್ಯ 2 ಹಳಿವಿಂದಲೆ ಕೃಷ್ಣ ಮೂರು ರತ್ನವ ತಂದ ಹಳಿವಿಂದಲಿ ಸೀತೆ ಕೀರ್ತಿ ಹೊಂದಿದಳು ಹಳಿದಲ್ಲದೆ ಸತ್ಯ ಹೊರಹೊಮ್ಮದು ಯನ್ನ ಹಳಿವರನೊದಗಿಸೋ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಿತ್ತಿರೋ ಬೀಜವ ಗಜನಿಗೆ ಮತ್ತೆ ಬೆಟ್ಟಿಗೆ ಬಿತ್ತ ಬಿತ್ತಿದ ಬೀಜ ಬಾರದು ಪ ಒಳ್ಳೆ ಪಾತ್ರನ ನೋಡಿ ವೇದಾಂತ ವೇದ್ಯಗೆ ಬೆಳ್ಳಿ ಸುವರ್ಣ ಗೋದಾನಂಗಳ ಉಲ್ಲಾಸ ದೊಳ ಗೊಂದು ಬುದ್ದಿಯೊಳಿತ್ತರೆ ಎಳ್ಳಷ್ಟು ಮಹಮೇರು ಪರ್ವತವಹುದು 1 ದುಡ್ಡು ದುಗ್ಗಾಣಿಯಾದರು ತನಗುಳ್ಳದು ದೊಡ್ಡ ಕುಟುಂಬ ಶ್ರೋತ್ರಿಯನ ನೋಡಿ ಅಡ್ಡ ಮನಸಿಲ್ಲದಂದದಲಿ ಕೊಟ್ಟೊಡೆ ದೊಡ್ಡ ಪರ್ವತವಾಗಿ ಬೆಳೆವುದು ಕಂಡ್ಯಾ 2 ಬೆಟ್ಟ ಭೂಮಿಗೆ ಬೀಜ ಬಿತ್ತಲು ಬೀಜವು ಕಷ್ಟದಿಂದಲಿ ಬೆಳೆದು ಬರಬೇಕು ಶಿಷ್ಯರಾಗಿರ್ದ ವಿಪ್ರೋತ್ತಮರಿಗೆ ಒಂದು ಕೊಟ್ಟೊಡೆ ಒಂದು ಲಕ್ಷವಾಗುವುದು 3 ಶ್ರದ್ಧೆಯಿಂದಲಿ ನಾರಿ ಮಕ್ಕಳು ಸಹಿತ ಸದ್ಭುದ್ಧಿಯಿಂದಲಿ ದಾನ ಕೊಡಬೇಕು ಶುದ್ಧ ಪಾತ್ರನ ನೋಡಿ ಕೊಟ್ಟೊಡೆ ಅದು ಒಂದು ಉದ್ದಿನ ಕಾಳಷ್ಟು ಪರ್ವತವಹುದು 4 ಯಾರಿಗಾದರೂ ವಿಪ್ರರಿಗೆ ಕೊಡಬಹುದು ವಿ ಚಾರಿಸೆ ಬೆಟ್ಟುಗಜನಿಯಂತರ ಮಾರುತಾತ್ಮಜನ ಕೋಣೆಯ ಲಕ್ಷ್ಮೀರಮಣನ ಚಾರು ದಾಸರಿಗೆ ಇತ್ತರದು ಕೋಟಿ ಫಲವದು 5
--------------
ಕವಿ ಪರಮದೇವದಾಸರು
ನಮ್ಮ ತಪ್ಪೇನೊ ಪರಬೊಮ್ಮ ನಿನಗೆ ಕೋಟಿಬೊಮ್ಮಾಂಡನಾಯಕಅಚಿಂತ್ಯ ಮಹಿಮನಿಗೆಪ.ಒಂದು ನಾಮೋಚ್ಚರಣೆಯಲಿ ಪರಗತಿ ಪಡೆದರೊಂದುಗುಣಪಿಡಿದು ಕಡೆಗಾಣರ್ಯಾರುಮಂದಮತಿಯಲಿ ಭಜಿಸಿ ಮಹಾಪಾಪ ನೂಕುವರುಇಂದಿರಾರಾಧ್ಯಪದ ಭಕ್ತವತ್ಸಲನೆ 1ನಾರಾಯಣನೆ ನಿನ್ನ ಮಗಳ ಮೈಗಾಳಿಯಲಿಮೂರುಲೋಕದ ಪುಣ್ಯ ಬೆಳೆವುದುಸೂರ್ಯನ ಮಗನವರು ನಿನ್ನ ಬಂಟರಿಗಂಜಿಜಾರುವರೆಲೆ ಶ್ರೀ ಜಾನಕಿರಮಣ ರಾಮ 2ಶಿಶುಗಳಪರಾಧಕ್ಕೆ ನಯನದಂಜಿಕೆ ಶಿಕ್ಷೆಪಶುವಿರಕಳಿಗೆ ಕಂಠಕಾಷ್ಠವೆ ಶಿಕ್ಷೆವಿಷಮ ಹಿಂಸೆಯು ಸಲ್ಲ ಪ್ರಸನ್ನವೆಂಕಟರಮಣವಿಷಯಾಸೆ ಭವಶಿಕ್ಷೆ ಸಾಕೆನಗೆ ತಂದೆ 3
--------------
ಪ್ರಸನ್ನವೆಂಕಟದಾಸರು