ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಟಕಟಾ ಕಂಡೆವಲ್ಲಾ ಕುಟಿಲವರ್ತನ ಕೆಲಕೆಲವು ಈ ಕಲಿಯುಗದೀ ಪ ಮಳೆಯಿಲ್ಲ ಬಂದರಿಳೆ ಬೆಳೆಯದು ಬೆಳೆಯೆ ಧರಣಿ ಹುಲಿಸಿಲ್ಲ ಹುಲಿಸಾದರಿಲ್ಲಾ ಪ್ರಜೆಗೇ ಸಲುವಕೋರಲ್ಪವನು ಬಿಡರು ರಾಜರುಗಳ ಹಾ ವಳಿಯಲುಳುಹಿಲ್ಲ ಇನ್ನೆಂತು ಕೃಷಿಕರಿಗೇ 1 ಧನವಗಳಿಸಿಯೆ ಪಡುವುದನ್ಯಾಯವೇ ಮೊದಲು ಮನವರಿತು ಪಾತಕಂಗಳ ಮಾಡುತಿಹರೂ ಇನಿತು ಗಳಿಸಿದ ಕೃತ್ಯದರ್ಥಕ್ಕೆ ಚೋರರು ಜನಪರೊಡೆಯರು ಬಯಲಮಮತೆಗಳ ಬಿಡರೂ 2 ಕಕ್ಕುಲತೆ ಪರನಿಂದೆ ರಾ ಕ್ಷಸಕೃತ್ಯ ಹಿಂಸೆ ಮತ್ಸರ ಅನಾಚಾರಾ ಕುಹಕ ಕುಟಿಲ ಕುಮದ ಸ್ವಾಮಿದ್ರೋಹ ವಸುಮತಿಯ ಸುರರ ವಧೆ ಘನವಾಯಿತಲ್ಲಾ 3 ತೊಡುವೊಡವೆಗಳ ಬೇಡಲೊಡನೆರಡು ಕಂಗಳಲಿ ಕಿಡಿಸೂಸಿ ಬಾಯಿ ನೊರೆಸುತ್ತಿ ಘರ್ಜಿಸುತಾ ಜಡಿವ ಕೋಪದಿ ಮಧುಪರಂತೆ ಜರೆವೀ ಬಾಯಿ ಬಡುಕರೇ ಮೇದಿನಿಗೆ ಹೊರೆಯಾದರಲ್ಲಾ 4 ರಸನಬಿಡುವರು ಕಸವಪಿಡಿವರೊರೆಯನು ಪಿಡಿದು ಬಿಸುಡುವರಲಗ ಪರುಸವನು ಬಿಟ್ಟು ಕಲ್ಲಾ ಒಸೆದು ಬಿಡುವರು ಶ್ರೀ ವೈಕುಂಠಕೇಶವನಿರಲು ನುಸಿ ದೈವಗಳ ಭಜಿಸಿ ಹಸಗೆಡುತಲಿಹರೂ 5
--------------
ಬೇಲೂರು ವೈಕುಂಠದಾಸರು
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು