ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು
ನಿತ್ಯವಲ್ಲ ನಿತ್ಯವಲ್ಲ ಅನಿತ್ಯ ದೇಹವಿದಣ್ಣ ಪ.ಮತ್ತೆ ಮುರಾರಿ ಶ್ರೀ ಕೃಷ್ಣನ ನೆನೆದರೆ |ಮುಕ್ತಿಸಾಧನವಣ್ಣ ದೇಹ ಅಪಮಾನಿನಿಯರ ಕುಚಕೆ ಮರುಳಾಗದಿರು ಮಾಂಸದ ಗಂಟುಗಳಲ್ಲಿ |ನಾನಾ ಪರಿಯಲಿ ಮೋಹಮಾಡದಿರುಹೀನಮೂತ್ರದ ಕುಳಿಯಲ್ಲಿಜಾನಕಿರಮಣನ ನಾಮವ ನೆನೆದರೆಜಾಣನಾಗುವೆಯಲ್ಲೋ - ಪ್ರಾಣಿ 1ತಂದೆ-ತಾಯಿ ಅಣ್ಣ-ತಮ್ಮಂದಿರು ಮಕ್ಕಳು ಹರಿದು ತಿಂಬರೆಲ್ಲ |ಹೊಂದಿ ಹೊರೆಯುವಾ ನಂಟರಿಷ್ಟರುನಿಂದೆ ಮಾಡುವರೆಲ್ಲ ||ಮುಂದೆ ಯಮನ ದೂತರು ಎಳೆದೊಯ್ಯಲುಹಿಂದೆ ಬರುವರಿಲ್ಲೋ - ಪ್ರಾಣಿ 2ಕತ್ತಲೆ ಬೆಳುದಿಂಗಳು ಸಂಸಾರವು ಕಟ್ಟು ಧರ್ಮದ ಮೊಟ್ಟಿ |ಹೊತ್ತನರಿತು ಹರಿದಾಸರ ಸೇರೆಲೊ ಪೇಳ್ವರು ತತ್ತ್ವವ ಗಟ್ಟಿ |ಚಿತ್ತಜನಯ್ಯ ಪುರಂದರವಿಠಲನಹೊಂದೋ ನೀ ಸುಖಬುಟ್ಟಿ - ಪ್ರಾಣಿ 3
--------------
ಪುರಂದರದಾಸರು
ನೆಚ್ಚಬೆÉೀಡ ಭಾಗ್ಯವನು ಹುಟ್ಟುಗೊಂಡ ಮನುಜಾವೆಚ್ಚವಾಗಿ ಹೋಗುವುದು ಏಸೊಂದು ಬಗೆಯಲಿ ಪ.ಮುತ್ತು - ಮಾಣಿಕ - ನವರತ್ನದ ಗದ್ದುಗೆಯುಎತ್ತ ನೋಡಲು ಸಿರಿಕೋ ಎನುತಲಿಸತ್ಯ ಹರಿಶ್ಚಂದ್ರ ಮತ್ತೆ ಸುಡುಗಾಡಿನಲ್ಲಿಎತ್ತುವ ಹಣೆಯಕ್ಕಿ ಹಾಗದ ಕಾಸ 1ದೇವತೆಗಳ ಕೈಯ ಸೇವೆಯ ಕೊಳುತಿರ್ದರಾವಣನ ಬದುಕು ಮತ್ತೇನಾಯಿತು?ಜೀವದ ಪರಿಯರಿತು ನಾವು ದೊರೆಯೆಂಬುವುದೆಸಾವಿನ ಮನೆಹೊಕ್ಕು ಸಾಹಸ ಪಡಲೇಕೆ 2ಹದಿನೆಂಟುಕೋಟಿ ಧನ ಉದಯಕೆ ಬರುತಿರಲುಒದಗಿತೆ ಆ ರಾಶಿ ದಿನ ಕರ್ಣಗೆ ?ತುದಿ ಮಧ್ಯಾಹ್ನಕ್ಕೆ ದರಿದ್ರನೆನಿಸುವಇದರಿಂದ ಕಡೆಗಂಡರಾರು ಜಗದೊಳಗೆ ? 3ಬೆಳ್ಳಿಯ ಗಿಣಿಲು ಬಂಗಾರದಹರಿವಾಣಕುಳಿತಲ್ಲಿ ಕನಕದ ರಾಶಿಗಳುಗಳಿಗೆಗೆ ಈ ಭಾಗ್ಯ ಕಾಳಬೆಳುದಿಂಗಳುಉಳಿದವು ನಾ ಕಾಣೆ ಚಿರಲಕ್ಷ್ಮಿಯೆನಲು 4ಇಂತು ಈ ಪರಿಯಲನಂತರು ಹೋದರುಎಂತು ಪೇಳಲಿಅವರ ಪೆಸರುಗಳ ?ಚಿಂತಾಯತ ಶ್ರೀ ಪುರಂದರವಿಠಲನಸಂತತ ಪಾದಕಮಲವ ಭಜಿಸೊ ಮನುಜಾ 5
--------------
ಪುರಂದರದಾಸರು