ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂತರಾಜರು ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ ಪ ಭಾವಿರುದ್ರ ಜೈ ಜೈ ಜೈ ಅ.ಪ. ವಿನುತ ಗುರುವಿನಲ್ಲಿ ಮುನಿಗೆ ಜೈ ಜೈ ಜೈ 1 ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ | ಬೊಮ್ಮರಕ್ಕಸ ಜೈ ಜೈ ಜೈ 2 ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ | ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ3 ಜ್ಞಾನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ4 ಶರಧಿ ವಾದಿರಾಜ, ಭರದಿ ಹರಿಸಿ ಕೀಳು ಜನ್ಮ | ಚರಣ ಭಜಿಪ ಭಾಗ್ಯಕೊಡಲು, ಮೆರದೆ ಭೂತರಾಜ ನೆನಿಸಿ |5 ಕ್ಷಮಿಸನೇನು ಸುತನಪಿತನು, ನಮಿಸಿ ನಿಂತ ನಿನಗೆ ನುಡಿದ | ಸುಖದಿ ಬಾಳೆಂದು6 ಗಾತ್ರ ಕೆಂಪು ನೇತ್ರ | ಚಾರು ವಡವೆ ಗಣವ ಧರಿಸಿ, ವೀರ ರೂಪದಿಂದ ಮೆರೆವೆ 7 ಹಾರಿ ಹೋಗಿ ಧನಪನೆಡೆಗೆ, ತೋರಿ ನಿನ್ನಶೌರ್ಯ ಪಡದು | ಭಾರಿ ರತ್ನ ಮಕುಟ ನುತಿಸಿ, ನೇರ ಶಿರದಲಿಟ್ಟೆ ಗುರುವಿಗೆ 8 ಪಥದಿ ಖಳನ ಕೊಂದು ಬೇಗ ರಥ ಸಮೇತ ಬದರಿಯಿಂದ ಪೃಥಿವಿ ಅಳೆದೆ ದೊರೆಯತಂದು, ವಿತತ ಮಹಿಮ ದುಷ್ಠದಮನ 9 ಕ್ಷೇತ್ರಪಾಲ ಶರಣು ಭಾವಿಸೂತ್ರ ವಲಿಯ ಬಿಡಲು ನಿನ್ನ ಗಾತ್ರಕೆಡಹಿ ಬೇಡಿ ಕೊಂಬೆ, ನೇತ್ರ ನೀಡೊ ಹರಿಯ ಕಾಂಬ ಜೈ10 ಕಳೆದು ಬೇಗ ಹೊಲಸು ಮನವ, ಬೆಳಿಸಿ ಹರಿಯ ದೃಢಸುಭಕ್ತಿ ಕಲಿಯ ತುಳಿವ ಶಕ್ತಿ ನೀಡಿ, ಕಲಸೊ ಸಾಧುಸಂಗ ಜೀಯ, ಜೈ11 ಭಂಗ ಗೈದು ನಿಂತೆ ಅಲ್ಲ ಲಿಂಗ ತಂದೆ ಕದರಿಯಿಂದ, ತುಂಗ ಮಹಿಮ ಮಂಗಳಾಂಗ ಜೈ12 ಕುಣಿದು ಮುದದಿ ಭಜಿಪೆ ಗರಳ ಕಂಠ ಭಾವಿ ಶರಣು, ಚರಣ ಪಿಡಿವೆ ಸ್ತೋತ್ರಪ್ರೀಯ ಜೈ13 ವೈರಿ ವೃಂದ ಮೋದ ಕೊಡಿಸು ತಿರ್ಪೆಭೂಪ |ಜೈ14 ರಾಜ ಬಿರುದು ಸಹಿತ ಭಾರಿ | ವಾಜಿ ಏರಿ ನಡೆಯೆ ವಾದಿ ಅಳಿಯೆ ಸಿಗದು ಜೈ 15 ವಂದು ಕಮ್ಮಿ ನಾಲ್ಕು ಹತ್ತು, ತಂದೆ ವಿಧಿಯ ಕಲ್ಪಗಳಲಿ | ಇಂದು ಉಂಬೆ ದಿವ್ಯ ಪದವಿ16 ಭೀತಿ ಕರವು ನಿನ್ನ ರೂಪ, ವ್ರಾತ್ಯಗಣಕೆ ವಾದಿ ರಾಜ | ದೂತ ನಿನಗೆ ಪ್ರತಿಯ ಕಾಣೆ, ಪ್ರೀತಿ ಸುರಿಸು ಭೃತ್ಯರೆಮಗೆ ಜೈ17 ರಾಜ ರೆಡೆಯ ಬಲದಿ ನೆಲಸಿ, ರಾಜ ಮಂತ್ರಿ ಕೆಲಸ ನಡೆಸಿ ಸೂಜಿ ತಪ್ಪಿಗೆಡೆಯ ಕೊಡದೆ, ರಾಜ ಕ್ಷೇತ್ರ ಕಾಯುತಿರ್ಪೆ ಬೈ18 ಕರ್ಣ ಗುಂಪು, ನಿನ್ನ ಸ್ತುತಿ ಸೇವಿಸುವರು | ದೊಣ್ಣಿ ಸೇವೆ ದುಡುಕಿ ದವಗೆ, ಚಿಣ್ಣರೆಂದು ತಪ್ಪ ಕ್ಷಮಿಸು ಜೈ19 ಚಿತ್ರ ವೈಯ ನಿನ್ನ ಚರಿತೆ, ಭಕ್ತರಿಂದ ಕೊಂಡು ಹರಿಕೆ ಕಿತ್ತು ವಗೆದು ವಿವಿಧ ದೋಷ, ಎತ್ತಿ ಕೊಡುವೆ ಕಾಮಿತಾರ್ಥಜೈ20 ಭೂತ ಪ್ರೇತ ಬಾಧೆ ಸಕಲ, ಆರ್ತಿನಾಶ ಪದವ ಪಠಿಸೆ | ನಲಿವ ಜೈ ಜೈ ಜೈ 21
--------------
ಕೃಷ್ಣವಿಠಲದಾಸರು
ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು ಪ ವಿಷಧರನುರಿಯಿಂದ ನಿಸಿದಿನಿ ಕುದಿಯುತಿಹ | ವಿಷಮಡುವನೆ ಪೊಕ್ಕು ಕುಶಲದಿಂದಲಿ ರಂಗ ಬಂದಾ 1 ಉರಗೇಂದ್ರ ಬಂದನದಿ ಶರೀರ ಬೆಳಿಸಿ ತನ್ನ | ಬಿರಿವಂತವನತನು ಹರಿಸಿ ಮದವಾ2 ನೂರೊಂದು ಹೆಡೆಗಳ ಚರಣದಲೊತ್ತಿ ತುಳಿದು | ಸುರರಾ ಗೀತದಿ ನೃತ್ಯ ಚರಿತವ ದೋರಿ 3 ಸತಿಯರ ಮೊರೆಕೇಳಿ ಪತಿದಾನವನೆ ಕೊಟ್ಟು | ಕ್ಷಿತಿಯೊಳು ಗೋಕುಲದುನ್ನತ ಭಾಗ್ಯದಲಿ 4 ತಂದೆ ಮಹಿಪತಿ ನಂದನ ಪ್ರಭು ಸ್ವಾ | ನಂದವ ಸುರನರ ವೃಂದಕ ಬೀರಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತ್ಯಂಬೋಧರ ಸ್ಮರಣೆ ನಿತ್ಯಮಾಡುಅತ್ಯಂತ ಕರುಣಾಳು ಅ'ುತ ಮ'ಮಾವಂತ ಪಸತ್ಯಬೋಧರ ಸ್ಮರಣೆ ನಿತ್ಯದಲಿ ಮಾಡಿದರೆ'ಷ್ಣು ಸರ್ವೋತ್ತಮದ ಜ್ಞಾನ ಪ್ರಾಪ್ತಿಕಷ್ಟಗಳ ಪರಿಹರಿಸಿ ಇಷ್ಟಾರ್ಥಗಳ ಕೊಟ್ಟುಭಕ್ತಿ ವೈರಾಗ್ಯ ಭಾಗ್ಯವನು ಕೊಡುವಾ 1ಸತ್ಯಪ್ರಿಯತೀರ್ಥರ ಕರಕಮಲದಿಂ ಜನಿಸಿಉತ್ತರಾದಿಮಠದ ವೈಭವವ ಬೆಳಿಸಿ'ಷ್ಣು ಸರ್ವೋತ್ತಮತ್ವದ ತತ್ವಜಯಭೇರಿಎತ್ತ ನೋಡಿದರತ್ತ ಸತ್ಯಬೋಧರಕೀರ್ತಿ 2ಪಾಪಿಷ್ಠರಿಂದ ಆಪತ್ತು ಜೀವಕೆಬಂತುಸಂಚಾರ ಕೆಲಕಾಲ ಸಂಕಟಮಯವಾಯ್ತುಶಾಪಾನುಗ್ರಹಶಕ್ತರಾದ ಶ್ರೀಪಾದರುಭೂಪತಿ'ಠ್ಠಲನ ಅಪರೋಕ್ಷ ಪಡೆದವರು 3
--------------
ಭೂಪತಿ ವಿಠಲರು
ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ
ಸ್ಮರಿಸೆಲವೋ ಸ್ಮರಿಸೆಲವೋ ಮನವೇ | ನಿರುತದಿ ಗುರುಮಹೀಪತಿ ಪಾದಾ ಪ ಆದ್ಯಾತ್ಮದಘನ ವಿದ್ಯೆಯ ಸಾಧಿಸಿ | ಸಿದ್ಧರ ನಡುವೆ ಪ್ರಸಿದ್ಧರಾದವರ 1 ನೆಟ್ಟನೆ ಶರಣರ ಪುಟ್ಟಿಸಿರಧಿಕಾ | ಬಿಟ್ಟುಪದೇಶವ ಕೊಟ್ಟು ಸಾಕುವರಾ 2 ಧಾರುಣಿಯೊಳು ಸಂಸಾರ ಮಾಡಿದರ | ಸಾರಸಜಲದಂತೆ ರಚಿಸಿದರಾ 3 ಯೋಗಧಾರುಣದಿ ಸಾಗಿಪದಿನಗಳು | ಭಾಗವತಾಗ್ರಣಿ ಎನಿಪಶ್ರೀಗುರುಪಾದಾ4 ವಿತ್ತಜನರು ತಂದಿತ್ತರೆ ಹಿಡಿಯದೆ | ನಿತ್ಯವ್ಯಯವ ಪವಡಿಸುತಿಹರವರಾ5 ಯುಕ್ತದಿ ವಿಷಯಾಸಕ್ತಿಯತ್ಯಜಿಸಿ | ವಿ ರಕ್ತಿ ಬೆಳಿಸಿ ಸುಮುಕ್ತಿ ಪಡೆದವರಾ 6 ಸ್ವಸ್ಥದಿ ನಾಲ್ಕು ಅವಸ್ಥೆಯ ಮೀರಿ | ಸ ಮಸ್ತರಲಿ ನಿಜ ವಸ್ತು ಕಂಡವರಾ7 ಕಾಖಂಡಕಿ ಸ್ಥಳ ಶ್ರೀಕರವಂದ್ಯೆ | ನಿ ರಾಕರಿಸದೆ ಅಂಗೀಕರಿಸಿದರಾ 8 ಎಂದೆಂದಿಗೂ ಹೊರಗೊಂದಿನ ಹೋಗದೆ | ಮಂದಿರದೊಳಗಾನಂದದಲಿಹರಾ9 ತಾಪತೃಯದಾ ಭವಪರಿಹರಿಸುತ | ತಾಪೋರೆದನು ಗುರು ಶ್ರೀಪತಿಗುರುಪಾದಾ 10 ಅಂಕಿತ-ಗುರುಶ್ರೀಪತಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು